ಬೆಳ್ತಂಗಡಿ : ಪುದುವೆಟ್ಟು ಸಮೀಪದ ಪಲ್ಲದಪಲ್ಕೆ ಎಂಬಲ್ಲಿ ಒಂದೇ ಕುಟುಂಬದ ಇಬ್ಬರ ಮೃತದೇಹ ಮನೆ ಅಂಗಳದಲ್ಲಿ ಪತ್ತೆಯಾಗಿದ್ದು ಕಾಡಿನ ವಿಷ ಪೂರಿತ ಅಣಬೆಯ ಸೇವನೆಯೇ ಸಾವಿಗೆ ಕಾರಣ ಎಂದು ಸಂಶಯಿಸಲಾಗಿದೆ. ಮೃತರನ್ನು ಪಲ್ಲದಪಲ್ಕೆ ಮೀಯಾರುಪಾದೆ ಕೇರಿಮಾರು ನಿವಾಸಿಗಳಾದ ಗುರುವ(75) ಹಾಗು ಇವರ ಪುತ್ರ ಓಡಿ(45) ಮೃತಪಟ್ಟವರು. ಬಡ ಕುಟುಂಬದ ಮನೆಯಲ್ಲಿ ಮನೆ ಯಾಜಮಾನ ಗುರುವ ಸಹಿತ ಇಬ್ಬರು ಪುತ್ರರು ವಾಸವಾಗಿದ್ದರು. ಮಂಗಳವಾರ ಇವರ ಇಬ್ಬರ ಮೃತದೇಹ ಮನೆ ಮುಂಭಾಗ ಬಿದ್ದಿರುವುದನ್ನು ಸ್ಥಳೀಯರು ಕಂಡು ಆತಂಕಕ್ಕೀಡಾಗಿದ್ದರು. ಪರಿಶೀಲಿಸಿದಾಗ ಸೋಮವಾರ ರಾತ್ರಿ ಕಾಡಿನ ಯಾವುದೋ ವಿಷಪೂರಿತ ಅಣಬೆಯನ್ನು ಅಡುಗೆ ಮಾಡಿ ಸೇವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಅಣಬೆ ಸೇವನೆಯ ಪದಾರ್ಥ ಸೇವನೆಯೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಮತ್ತೋರ್ವ ಮಗ ಮನೆಯಲ್ಲಿ ಇಲ್ಲದ್ದರಿಂದ ಅವಘಡ ತಪ್ಪಿದೆ. ಘಟನೆ ವಿಚಾರ ತಿಳಿದು ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು ಜಮಾಯಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾಧಿಕಾರಿಗಳು ಭೇಟಿ ನೀಡಿದ್ದು. ತನಿಖೆ ಬಳಿಕ ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.
Author: main-admin
ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಶವ ಮನೆ ಅಂಗಳದಲ್ಲಿ ಬಿದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು ಇದು ಕೊಲೆಯೋ ಅಥವಾ ಇನ್ನೇನಾರೂ ಬೇರೆ ಘಟನೆಗಳು ನಡೆದಿದೆಯಾ ಎಂಬ ಅನುಮಾನ ಸೃಷ್ಟಿಯಾಗಿದೆ. ಇಲ್ಲಿಯವರೆಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಇನ್ನಷ್ಟೇ ಪೊಲೀಸರು ತೆರಳಿ ತನಿಖೆ ನಡೆಸಬೇಕಿದೆ.
ಮಂಗಳೂರು: ತಾಲೂಕಿನ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67ರ 16.20 ಕಿ.ಮೀ. ನಿಂದ 19 ಕಿ.ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ ಆದೇಶ ಹಾಗೂ ಸಾರ್ವಜನಿಕರ ಓಡಾಟಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಅಪರ ದಂಡಾಧಿಕಾರಿಗಳೂ ಆಗಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಬದಲಿ ರಸ್ತೆ ವ್ಯವಸ್ಥೆ: ಕಟೀಲು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಬಜಪೆ ಚರ್ಚ್ ಜಂಕ್ಷನ್ ನಲ್ಲಿ ಎಡಕ್ಕೆ ತಿರುಗಿ ಬಜಪೆ ಠಾಣೆಯ ಎದುರಿನ ಹಳೆ ವಿಮಾನ ನಿಲ್ದಾಣ ರಸ್ತೆ ಮಾರ್ಗವಾಗಿ ಮುರ ಜಂಕ್ಷನ್, ಕಿನ್ನಿಪದವು ರಸ್ತೆ ಮೂಲಕ ಮಂಗಳೂರಿಗೆ ತಲುಪುವುದು.ಮಂಗಳೂರಿನಿಂದ ಕಟೀಲು ಕಡೆಗೆ ಸಂಚರಿಸುವ ವಾಹನಗಳು ಮಂಗಳೂರಿನಿಂದ ಮರವೂರು ಸೇತುವೆ, ಕೆಂಜಾರು ಮಾರ್ಗವಾಗಿ ಕಿನ್ನಿಪದವು ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ಮುರ ಜಂಕ್ಷನ್, ಬಜಪೆ ಪೊಲೀಸ್ ಸ್ಟೇಷನ್ ಎದುರುಗಡೆಯಿಂದ ಬಜಪೆ ಚರ್ಚ್ ಜಂಕ್ಷನ್ ರಸ್ತೆಯ ಮೂಲಕ ಕಟೀಲು ಕಡೆಗೆ ಸಂಚರಿಸಬೇಕು…
ಮಂಗಳೂರು: ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಬೆನ್ನಲ್ಲೇ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಮಂಗಳೂರಿನ ಬಸ್ ನಿಲ್ದಾಣದಲ್ಲಿ ಇಂದು ಮಧ್ಯಾಹ್ನದ ವೇಳೆಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ನ.19 ರಂದು ನಗರದ ಗರೋಡಿಯಲ್ಲಿ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿರುವುದರಿಂದ ಆತಂಕ ಸೃಷ್ಟಿಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಯ ಗುರುತು ಇಂದಷ್ಟೇ ಪತ್ತೆಯಾಗಿತ್ತು. ಇದಾದ ಕೆಲಹೊತ್ತಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ ಕಂಡು ಬಂದಿತ್ತು. ಬಾಂಬ್ ನಿಗ್ರಹ ದಳ, ಶ್ವಾನದಳ ತಕ್ಷಣವೇ ಬಸ್ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿತು. ಆ ಬಳಿಕ ಬ್ಯಾಗ್ ವಾರಸುದಾರ ಪತ್ತೆಯಾಗಿದ್ದು, ಇದು ಪ್ರಯಾಣಿಕನ ಬ್ಯಾಗ್ ಎಂದು ಗೊತ್ತಾದಾಗ ಆತಂಕ ನಿವಾರಣೆಯಾಗಿದೆ.
ಮಂಗಳೂರು: ಮಂಗಳೂರಿನಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಪೋಟ ದಿನದಿಂದ ದಿನಕ್ಕೆ ತಿರುವುಪಡೆದುಕೊಳ್ಳುತ್ತಿದ್ದು, ಈ ನಡುವೆ ಪ್ರಕರಣ ಸಂಬಂಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾನೂನು ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ಘಟನೆ ಸಂಬಂಧ ಸದ್ಯ ಮೈಸೂರಿನಲ್ಲಿ ಉಗ್ರ ತಾರಿಖ್ ವಾಸವಿದ್ದ ಮನೆಯಲ್ಲಿ ಹಲವು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಅಂತ ತಿಳಿಸಿದ್ದಾರೆ. ಇನ್ನೂ ಈ ನಡುವೆ ಮಂಗಳೂರಿಗೆ ತೆರಳುವ ಮುನ್ನ ಕುಕ್ಕರ್ ಬಾಂಬ್ ಕೈಯಲ್ಲಿಡಿದು ಫೋಟೋಗೆ ಪೋಸ್ ನೀಡಿದ್ದ ಎನ್ನಲಾಗಿದೆ ಅದರ ಫೋಟೋಗಳು ವೈರಲ್ ಆಗಿದ್ದಾವೆ. ಶಂಕಿತ ಉಗ್ರನ ಮನೆಯಲ್ಲಿ ಹಲವು ಸ್ಪೋಟಕ ಪತ್ತೆಯಾಗಿದೆ ಅಂಥ ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಅವರು ಇದೇ ವೇಳೇ ಘಟನೆಯಲ್ಲಿ ಚಾಲಕನಿಗೆ ಹಾಗೂ ಪ್ರಯಾಣಕನಿಗೆ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಪೋಲಿಸರು ತನಿಖೆ ಮಾಡಿದ ವೇಳೆಯಲ್ಲಿ ಘಟನೆಯಲ್ಲಿ ಪ್ರಯಾಣಿಕರ ಮುಖ…
ಮಂಗಳೂರು: ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಸ್ಪೋಟಕ್ಕೆ ಮಾಹಿತಿ ಬರುತ್ತಿದೆ. ಈ ನಡುವೆ ಶಂಕಿತ ಉಗ್ರ ತಾರೀಖ್, ಕುಕ್ಕರ್ ಬಾಂಬ್ ಅನ್ನು ಮೈಸೂರಿನಲ್ಲಿ ತಯಾರಿಸಿ, ಅದನ್ನು ಮಡಿಕೇರಿ ಮೂಲಕ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಂದಿದ್ದಾನೆ ಎನ್ನಲಾಗಿದೆ. ಒಂದು ವೇಳೆ ಬಸ್‌ನಲ್ಲಿ ಬಾಂಬ್ ಸ್ಪೋಟವಾಗಿದ್ದರೇ ದೊಡ್ಡ ಪ್ರಮಾಣದಲ್ಲಿ ಅನಾಹುತಾ ಆಗುತಿತ್ತು ಎನ್ನಲಾಗಿದೆ. ಇದಲ್ಲದೇ ಶಂಕಿತ ಉಗ್ರ ತಾರೀಖ್ ಇತ್ತೀಚಿಗೆ ಕೊಯತ್ತಮತ್ತೂರಿನಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಕೂಡ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ಕದ್ರಿಯಲ್ಲಿ ಗೋಡೆ ಮೇಲೆ ಬರೆದಿದ್ದ ಪ್ರಚೋದನಕಾರಿ ಬರಹದ ಪ್ರಕರಣದಲ್ಲಿ ಈತ ಜಾಮೀನು ಪಡೆದುಕೊಂಡಿದ್ದ ಎನ್ನಲಾಗಿದೆ. ಇದಲ್ಲದೇ ರಾಜ್ಯದ ನಾನಾ ಕಡೆ ಬಾಂಬ್ ಸ್ಪೋಟಕ್ಕೆ ಮುಂದಾಗಿದ್ದ ಶಂಕಿತ ಉಗ್ರ ಮುಂದಾಗಿದ್ದ ಎನ್ನಲಾಗಿದ್ದು, ಇದರ ಪ್ರಾರಂಭ ಭಾಗವಾಗಿ ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ತಾರೀಕ್ ನಡೆಸಿರುವ ಕುಕ್ಕರ್ ಬಾಂಬ್ ಸ್ಪೋಟ ಮೊದಲ ಭಾಗ ಎನ್ನಲಾಗಿದೆ. ಈ ನಡುವೆ ಶಿವಮೊಗ್ಗದ ತುಂಗ ತೀರದಲ್ಲಿ ಕೂಡ ಬಾಂಬ್ ಸ್ಪೋಟದ ಟ್ರಯಲ್…
ಬಂಟ್ವಾಳ: ಬೈಕ್ ಡಿಕ್ಕಿಹೊಡೆದ ಪರಿಣಾಮ ರಸ್ತೆದಾಟುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬೊಳ್ಳಿಕಲ್ಲು ಎಂಬಲ್ಲಿ ನಡೆದಬಗ್ಗೆ ವರದಿಯಾಗಿದೆ.ಮಾಣಿ ಪಾರ್ತಾಜೆ ನಿವಾಸಿ ಶುಭಕರರವರು ಮೃತದುರ್ದೈವಿ ಎಂದು ತಿಳಿದುಬಂದಿದೆ. ಶುಬಕರರವರು ತನ್ನ ಮನೆಯಿಂದ ವಿಟ್ಲಕಡೆಗೆ ತೆರಳಲು ರಸ್ತೆ ದಾಟುತ್ತಿದ್ದ ವೇಳೆ ಅವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಅವರನ್ನು ಸೋಶಿಯಲ್ ಇಕ್ವಾ ಮಾಣಿ ಆಂಬುಲೆನ್ಸ್ ಮೂಲಕ ಆಸ್ಪತ್ರೆ ಕೊಂಡೊಯ್ಯಲಾಗಿತ್ತಾದರೂ ಆ. ವೇಳೆಗಾಗಲೆ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.
ಬೆಂಗಳೂರು : ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಹಿನ್ನೆಲೆಯಲ್ಲಿ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಕಾಮಿಡಿ ಕಿಲಾಡಿಗಳು ಗ್ಯಾಂಗ್ಸ್ ನಲ್ಲಿ ನಟಿಸಿದ್ದ ಸೋಮಶೇಖರ್ ಎಂಬುವರು ನಯನಾ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಖಾಸಗಿ ಚಾನಲ್ ನಲ್ಲಿ ಕಾಮಿಡಿ ಕಿಲಾಡಿ ಗ್ಯಾಂಗ್ಸ್ ನಲ್ಲಿ ದ್ವಿತೀಯ ಬಹುಮಾನ ಗೆದ್ದ ಪಿಯುಸಿ ತಂಡಕ್ಕೆ 3 ಲಕ್ಷ ರೂ. ಬಂದಿತ್ತು. ಅದರಲ್ಲಿ ಶೇ. 30 ರಷ್ಟು ಕಟ್ ಆಗಿ ಪ್ರತಿಯೊಬ್ಬರಿಗೆ 70 ಸಾವಿರ ರೂ. ನೀಡಲಾಗಿತ್ತು. ಆದರೆ ಇಬ್ಬರು ಸೀನಿಯರ್ ಗಳಿಗೆ ಹಣ ನೀಡಲು ನಯನಾ ಅವಾಜ್ ಹಾಕಿದ್ದಾರೆ ಎಂದು ಸೋಮಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಂಗಳೂರು : ಮಂಗಳೂರಿನಲ್ಲಿ ನಡೆದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ತನಿಖೆ ಚುರುಕಿನಿಂದ ನಡೆಯುತ್ತಿದೆ ಎಂದು ಹೇಳಿದರು. ದೇವನಹಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಶಂಕಿತ ಉಗ್ರನಿಂದ ‘ಬೇರೆ ಕಡೆ ಬಾಂಬ್ ಸ್ಪೋಟಿಸುವ ಪ್ಲ್ಯಾನ್’ ಇತ್ತು, ತಪ್ಪಿ ಆಟೋದಲ್ಲಿ ಸ್ಪೋಟವಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ನಗರದಲ್ಲಿ ನಡೆದಿದ್ದಂತ ಆಟೋದಲ್ಲಿನ ಸ್ಪೋಟಕ ಪ್ರಕರಣಕ್ಕೆ ಕ್ಷಣಕ್ಕೊಂದು ತಿರುಪು ಪಡೆಯುತ್ತಿದೆ. ಇದೀಗ ಈ ಬ್ಲಾಸ್ಟ್ ಕೇಸ್ ಸಂಬಂಧ ಶಂಕಿತ ಉಗ್ರನ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಉನ್ನತ ಮೂಲಗಳಿಂಗ ಮಾಹಿತಿ ತಿಳಿದು ಬಂದಿದ್ದು, ಮಂಗಳೂರು ಸ್ಪೋಟಕ ಕೇಸ್ ನ ಶಂಕಿತ ವ್ಯಕ್ತಿ ಯೂನಸ್ ಖಾನ್ ಎಂದು ಹೇಳಲಾಗುತ್ತಿದೆ. ಈ ಮೊದಲು ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್ ದೊರೆತಿದ್ದ ಆತನ ಮತ್ತೊಂದು ಹೆಸರು ಯೂನಸ್…
ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು ಕಪ್, ಸ್ವಲ್ಪ ಶುಂಠಿ, ಸಾಸಿವೆ ಅರ್ಧ ಚಮಚ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು. ಮಾಡುವ ವಿಧಾನ: ಚಿಕನ್ ಅನ್ನು ತುಂಡು ತುಂಡಾಗಿ ಕತ್ತರಿಸಿ ತೊಳೆಯಿರಿ. ತೆಂಗಿನ ತುರಿ, ಖಾರದಪುಡಿ, ಅರಿಶಿನ ಪುಡಿ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ರುಬ್ಬಿ ಆ ನಂತರ ರುಬ್ಬಿದ ಮಸಾಲೆಯನ್ನು ಹಾಕಿ ಮಿಶ್ರಣ ಮಾಡಿ 1 ಗಂಟೆ ಕಾಲ ಇರಿಸಿ. ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆಯನ್ನು ಸುರಿದು ಆ ಎಣ್ಣೆಯು ಬಿಸಿಯಾದಾಗ ಸಾಸಿವೆ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ. ಈರುಳ್ಳಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ಆ ನಂತರ ಮಸಾಲೆಯಲ್ಲಿ ಮಿಶ್ರಣ ಮಾಡಿರುವ ಚಿಕನ್ ಹಾಕಿ ಮೂರ್ನಾಲ್ಕು ನಿಮಿಷ ಸೌಟ್ ನಿಂದ ಆಡಿಸಿ, ಬಳಿಕ ಮೊಸರು ಹಾಕಿ ಗರಂ ಮಸಾಲ ಬೆರೆಸಿ ರುಚಿಗೆ ತಕ್ಕಷ್ಟು…