ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ದಿನದಿಂದ ಎಪ್ರಿಲ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41,90,665 ರೂ. ಮೌಲ್ಯದ 12,844 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ 8,69,950 ರೂ. ಮೌಲ್ಯದ 15.5 ಕೆ.ಜಿ ಡ್ರಗ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಒಟ್ಟು 243 ಎಫ್ಐಆರ್ ಕೇಸ್‌ಗಳು ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
Author: main-admin
ಬಂಟ್ವಾಳ : ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಜಕ್ರಿ ಬೆಟ್ಟಿನಲ್ಲಿ ನಡೆದಿದೆ. ಬಂಟ್ವಾಳ ಜಕ್ರಿ ಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್ (15) ಮೃತ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ ಜತೆ ಮಲಗಿದ್ದು, ಮುಂಜಾನೆ ಮೊಬೈಲ್ ಹಿಡಿದುಕೊಂಡು ಹೊರಗೆ ಬಂದಿದ್ದಾನೆ. ಮನೆಮಂದಿ ಬೆಳಗ್ಗೆ ಎದ್ದು ನೋಡುವಾಗ ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಆತ ಮೃತಪಟ್ಟಿದ್ದ ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಕಡಬ : ಅಕ್ರಮ ಸ್ಪೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಯ ಶೀಟುಗಳಿಗೆ ಹಾನಿಯಾಗುತ್ತಿರುವ ಹಾಗೂ ಪರಿಸರ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಮನೆ ಮಾಲಿಕ ಸ್ಫೋಟ ನಡೆಸುವವನ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ನಡೆದಿದೆ. ಕಡಬ ತಾಲೂಕು ಯೇನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ಎಂಬಲ್ಲಿನ ನಿವಾಸಿ ಆನಂದ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಇವರ ಮನೆ ಸಮೀಪದ ನಿವಾಸಿ ದಯಾನಂದ ಎಂಬವರು ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ಅವರ ಜಮೀನಿನಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮವಾಗಿ ಸ್ಪೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆಡು ಸೈಜು ಕಲ್ಲಗಳನ್ನಾಗಿ ತಯಾರಿಸುತ್ತಿದ್ದು, ಇದರಿಂದ ಸ್ಪೋಟಗೊಂಡ ಕಲ್ಲುಗಳು ಆನಂದ ಗೌಡ ಅವರ ಮನೆಯ ಶೀಟುಗಳ ಮೇಲೆ ಸಿಡಿದು ಮನೆ ಶೀಟುಗಳು ಹಾನಿಗೊಂಡಿದೆ ಹಾಗೂ ಕಲ್ಲು ಹುಡಿಯಿಂದಾಗಿ ಪರಿಸರ ಮಾಲಿನ್ಯವೂ ಉಂಟಾಗುತ್ತಿದೆ ಎಂದು ನೀಡಿದ ದೂರಿನಂತೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ : 23 /2024, ಕಲಂ: 427 ಐಪಿಸಿ ಮತ್ತು…
ಉಡುಪಿ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು ಮಧ್ಯಾಹ್ನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಭೀಕರ ಘಟನೆ ನಡೆದಿದೆ. ಮೃತ ಸವಾರನನ್ನು ಗಂಗೊಳ್ಳಿ ಪೋಸ್ಟ್ ಆಫೀಸ್ ಬಳಿ ನಿವಾಸಿ ಅಬ್ದುಲ್ ಖಾದರ್ ಎಂಬುವರ ಮಗ ಮೊಹಮ್ಮದ್ ಕಾಶಿಫ್ (17) ಎಂದು ಗುರುತಿಸಲಾಗಿದೆ. ಗಂಗೊಳ್ಳಿ ಪೋಸ್ಟ್ ಆಫೀಸ್ ಬಳಿ ನಿವಾಸಿ ಮೊಹಮ್ಮದ್ ಫೈಜ್ (14) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನ ಸ್ಥಳಕ್ಕಾಗಮಿಸಿ ರಸ್ತೆ ಸಂಚಾರ ಸುಗಮಗೊಳಿಸಿತು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಅಣ್ಣ ತಮ್ಮನ ಜಗಳ ಕೊಲೆಯಲ್ಲಿ ಅಂತ್ಯ ಕ್ಷುಲ್ಲಕ ಕಾರಣಕ್ಕಾಗಿ ತಮ್ಮ ತನ್ನ ಅಣ್ಣನನ್ನೇ ದೊಣ್ಣೆಯಿಂದ ಹೊಡೆದು ಕೊಲೆಗೈದ ಘಟನೆ ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ನಾಲ್ಕೂರು ಗ್ರಾಮದ ಕಪೆ ಅರಮನೆಜೆಡ್ಡು ನಿವಾಸಿ ಗುಲಾಬಿ ಎಂಬವರ ಮಗ ಮಂಜುನಾಥ (35) ಹಾಗೂ ಕೊಲೆ ಮಾಡಿದ ಆರೋಪಿ ಮೃತರ ತಮ್ಮ ವಿಶ್ವನಾಥ್ (30) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ ಒಂದೇ ಮನೆಯಲ್ಲಿ ವಾಸವಾಗಿದ್ದರು. ಆಗಾಗ ಇವರ ಮಧ್ಯೆ ಗಲಾಟೆ ಆಗುತ್ತಿದ್ದು, ಮಧ್ಯರಾತ್ರಿ ವೇಳೆ ಮಂಜುನಾಥ, ತನ್ನ ತಮ್ಮ ವಿಶ್ವನಾಥನನ್ನು ಉದ್ದೇಶಿಸಿ, ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದನು. ಇದೇ ವಿಚಾರದಲ್ಲಿ ವಿಶ್ವನಾಥ ಕೋಪ ಗೊಂಡು ಛಾವಣಿಯಲ್ಲಿದ್ದ ದೊಣ್ಣೆಯಿಂದ ಮಂಜುನಾಥ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರ ಪರಿಣಾಮ ಮಂಜುನಾಥ್ ಅವರ ತಲೆಯಿಂದ ತೀವ್ರ ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು…
ಉಡುಪಿ : ಎಲೆಕ್ಟ್ರಿಕ್ ಸ್ಕೂಟರ್ ಒಂದು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ. ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್ ಬಳಿಯಲ್ಲಿ ಈ ಘಟನೆ ನಡೆದಿದ್ದು ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.ಘಟನೆಯಿಂದಾಗಿ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ.ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗಾಹುತಿಯಾಗುತ್ತಿರುವ ಪ್ರಕರಣಗಳು ಏರಿಕೆಯಲ್ಲೇ ಇದ್ದು, ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದೇ ಇರುವುದು ವಿಪರ್ಯಾಸವಾಗಿದೆ.
ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರವು ಈ ಸಾಲಿನ 6ನೇ ಹಾಗೂ 2023-24ನೇ ಆರ್ಥಿಕ ವರ್ಷದ ಕೊನೆಯ ಕ್ರೂಝ್ ಪ್ರವಾಸಿ ವಿಲಾಸಿ ಹಡಗು ‘ಸೆವೆನ್ ಸೀಸ್ ಮರೈನರ್’ನ್ನು ರವಿವಾರ(ಮಾ.31) ಸ್ವಾಗತಿಸಿದೆ. ಸೆವೆನ್ ಸೀಸ್ ಮರೈನರ್ ಒಟ್ಟು 610 ಪ್ರಯಾಣಿಕರು ಮತ್ತು 440 ಸಿಬ್ಬಂದಿಯನ್ನು ಹೊತ್ತು ಮಂಗಳೂರಿಗೆ ಆಗಮಿಸಿದ್ದು, ಪ್ರವಾಸಿಗರಿಗೆ ನವ ಮಂಗಳೂರು ಬಂದರಿನ ಹಡಗು ತಂಗುದಾಣದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ವೆಂಕಟರಮಣ ಅಕ್ಕರಾಜು, ಉಪಾಧ್ಯಕ್ಷ ಕೆ ಜಿ ನಾಥ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದು ವಿದೇಶಿಗರನ್ನು ಸ್ವಾಗತಿಸಿದರು. ಪ್ರವಾಸಿಗರ ಆಕರ್ಷಣೆಯಾದ ಸೆಲ್ಫಿ ಸ್ಟ್ಯಾಂಡ್ ಪ್ರವಾಸಿಗರು ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣಗಳು, ದೇವಾಲಯ, ಮಾರುಕಟ್ಟೆ ಮತ್ತು ಅಂಗಡಿಗಳಿಗೆ ತೆರಳಲು ಅನುಕೂಲವಾಗುವಂತೆ ಬಸ್ ಮತ್ತು ಟ್ಯಾಕ್ಸಿಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಆಯುಷ್ ಸಚಿವಾಲಯವು ಸ್ಥಾಪಿಸಿದ ಕೇಂದ್ರದಲ್ಲಿ ಪ್ರಯಾಣಿಕರು ಧ್ಯಾನದ ಅನುಭವ ಪಡೆದುಕೊಂಡರು. ತುಳುನಾಡಿನ ಯಕ್ಷಗಾನ ಕಲಾ ಪ್ರಕಾರವನ್ನು ಪ್ರದರ್ಶಿಸುವ ವಿಶಿಷ್ಟ ಸೆಲ್ಫಿ ಸ್ಟ್ಯಾಂಡ್ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿತ್ತು. ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ…
ಬಂಟ್ವಾಳ: ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಶವ ಮಾರ್ಚ್ 31ರ ಭಾನುವಾರ ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ. ಅಮ್ಟಾಡಿ ಗ್ರಾ.ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಮಾರ್ಚ್ 27ರಂದು ಚುನಾವಣಾ ಕರ್ತವ್ಯದ ವೇಳೆ ನಾಪತ್ತೆಯಾಗಿದ್ದರು. ಅವರು ಕರ್ತವ್ಯಕ್ಕೆ ಹಾಜರಾಗದೇ ನಾಪತ್ತೆಯಾಗಿರುವ ಬಗ್ಗೆ ಸಂಶಯಗೊಂಡು ಅವರ ಕುಟುಂಬವು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.ಮಾರ್ಚ್ 27 ರಂದು ಮಧ್ಯಾಹ್ನ ಲಕ್ಮೀನಾರಾಯಣ ಅವರು ತಮ್ಮ ಕಚೇರಿಯಿಂದ ಹೊರಬಂದ ನಂತರ ಅವರ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡು ಮನೆಯವರಲ್ಲಿ ಆತಂಕವನ್ನು ಹೆಚ್ಚಿಸಿತು. ಹೀಗಾಗಿ ಅವರ ಕಿರಿಯ ಸಹೋದರ ಅವರು ಕಣ್ಮರೆಯಾದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.ಚುನಾವಣೆಗೆ ಎಸ್‌ಎಸ್‌ಟಿ ತಂಡದಲ್ಲಿದ್ದ ಲಕ್ಮಿನಾರಾಯಣ ಅವರು ಈ ಹಿಂದೆ ಕರ್ತವ್ಯಕ್ಕೆ ಗೈರಾಗಿದ್ದರಿಂದ ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು.ಬೆಳ್ತಂಗಡಿಯಲ್ಲಿ ಮೋಟಾರ್ ಸೈಕಲ್ ಪತ್ತೆಯಾದ ನಂತರ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಮಾರ್ಚ್ 30 ರಂದು, ಪೊಲೀಸರು ಪಟ್ರಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತನ ಮೊಬೈಲ್ ಸಿಗ್ನಲ್…
ಕಾಪು: ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಜ್ಯೋತಿ(32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪದಡಿ ಕಾಪು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿ ಕುಮಾರ್(35) ಬಂಧಿತ ಆರೋಪಿ. ಈತ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2017ರಲ್ಲಿ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದನು. ಜ್ಯೋತಿ ಕಾಪು ಸಿಬ್ಬಂದಿಯಾಗಿರುವುದರಿಂದ ಇವರಿಬ್ಬರು ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು. ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ತನ್ನ ಗಂಡನ ಅನುಮಾನವೇ ಕಾರಣ ಎಂದು ಬರೆದಿರುವುದಾಗಿ ಆಕೆಯ ತಾಯಿ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ 306, 498(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಟ್ವಾಳ: ವಂಚನೆ ಆರೋಪ ಎದುರಿಸುತ್ತಿದ್ದ ಯುವಕನೋರ್ವನ ಮೃತದೇಹ ಬಂಟ್ವಾಳದ ವಾಮದಪದವಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕನದ್ದು ಆತ್ಮಹತ್ಯೆ ಎನ್ನಲಾಗುತ್ತಿದ್ದರೂ, ಸಾಮಾಜಿಕ ಜಾಲತಾಣದಲ್ಲಿ ಯುವಕನ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕ ವಾಮದಪದವು ತಿಮರಡ್ಡ ನಿವಾಸಿ ಪದ್ಮನಾಭ ಸಾಮಂತ ಎಂದು ಗುರುತಿಸಲಾಗಿದೆ. ಪದ್ಮನಾಭ ಸಾಮಂತನ ವಿರುದ್ಧ ಕಳೆದರಡು ದಿನಗಳ ಹಿಂದೆ ವಂಚನೆ ಆರೋಪ ಕೇಳಿ ಬಂದಿದೆ. ಯುವಕನೋರ್ವನಿಗೆ ಸರಕಾರಿ ಉದ್ಯೋಗ ದೊರಕಿಸಿಕೊಡುವುದಾಗಿ 1.50 ಲಕ್ಷ ಹಣವನ್ನು ಪಡೆದು ವಂಚಿಸಿರುವ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಮೃತ ಯುವಕ ಪದ್ಮನಾಭ ಸಾಮಂತ ವಿಚಾರಣೆಗೆ ಹಾಜರಾಗುವುದಾಗಿ ಪೋಲೀಸರಿಗೆ ತಿಳಿಸಿದ್ದ. ಆದರೆ ಯುವಕ ಕಳೆದ ಮೂರು ದಿನಗಳಿಂದ ಠಾಣೆಗೆ ಹಾಜರಾಗಿರಲಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿತ್ತು. ಯಾರ ಸಂಪರ್ಕಕ್ಕೂ ಸಿಗದೆ, ನಾಪತ್ತೆಯಾಗಿದ್ದ ಯುವಕನ ಮೃತದೇಹ ಇದೀಗ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮನೆಯ ಪಕ್ಕದ ಗುಡ್ಡವೊಂದರಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೋಲೀಸರು ತೆರಳಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ…










