ನವದೆಹಲಿ : ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಜನರಿಗೆ ಹವಾಮಾನ ಇಲಾಖೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದು. ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಸೋಮಾ ಸೇನ್ ತಿಳಿಸಿದ್ದಾರೆ. ಆದರೆ ಮೇ 10 ರಂದು ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ಮಾತ್ರ ಬಿಸಿಗಾಳಿ ಇರಲಿದೆ. ಹೀಗಾಗಿ ಅಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳಕೊಲ್ಲಿಯಿಂದ ದೇಶದೊಳಗೆ ತೇವಾಂಶಭರಿತ ಗಾಳಿ ಬೀಸಲಿದ್ದು, ದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಸಿಗಾಳಿ ಇರುವ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಿಸಿಗಾಳಿ ಎನ್ನುವುದು ಗಾಳಿಯ ಉಷ್ಣತೆಯ ಸ್ಥಿತಿಯಾಗಿದ್ದು ಅದು ಉಂಟಾದಾಗ ಮಾನವನ ದೇಹಕ್ಕೆ ಮಾರಕವಾಗುತ್ತದೆ ಎಂದು ಐಎಂಡಿ ಹೇಳಿದೆ. ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಬಿಸಿಗಾಳಿ, ತಾಪಮಾನದ ಏರಿಕೆಯಿಂದಾಗಿ ಜನರು ತತ್ತರಿಸಿದ್ದರು.ಹಲವು ರಾಜ್ಯಗಳಲ್ಲಿ ಬರ ಜನರನ್ನು ಹೈರಾಣಗೊಳಿಸಿತ್ತು.
Author: main-admin
ಮಂಗಳೂರು: ರಿಕ್ಷಾ ಚಾಲಕನಿಗೆ ಮಾರಕಾಸ್ತ್ರದಿಂದ ಇರಿದಿರುವ ಘಟನೆ ಪಣಂಬೂರು ಬೀಚ್ ರಸ್ತೆಯಲ್ಲಿ ಗುರುವಾರ ನಡೆದಿದೆ. ಮಾರಕಾಸ್ತ್ರದಿಂದ ಇರಿತಕ್ಕೆ ಒಳಗಾದವರನ್ನು ಮಂಗಳೂರು ಬಂದರ್ ನಿವಾಸಿ ಅರಾಫತ್ (30) ಎಂದು ಗುರುತಿಸಲಾಗಿದೆ. ಅರಾಫತ್ ಮಂಗಳೂರು ನಗರ ವಲಯದ ರಿಕ್ಷಾ ಚಾಲಕರಾಗಿದ್ದು, ನಗರದಿಂದ ಪಣಂಬೂರಿಗೆ ಬಾಡಿಗೆ ಹೋಗಿ ಪ್ರಯಾಣಿಕರನ್ನು ಬಿಟ್ಟು ಪಣಂಬೂರು ಬೀಚ್ ಬಳಿಯ ಪಾರ್ಕ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅದೇ ರಿಕ್ಷಾ ಪಾರ್ಕ್‌ನಲ್ಲಿ ಬಾಡಿಗೆ ಮಾಡುತ್ತಿದ್ದ ನಾಲ್ವರು ರಿಕ್ಷಾ ಚಾಲಕರು “ಮಂಗಳೂರು ನಗರದ ರಿಕ್ಷಾ ಚಾಲಕರು ಇಲ್ಲಿ ಬಾಡಿಗೆ ಮಾಡಬಾರದೆಂದು ಆಕ್ಷೇಪಿಸಿ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೇರಳ : ಲಂಡನ್ ನಲ್ಲಿ ನರ್ಸಿಂಗ್ ಕೆಲಸಕ್ಕೆ ಹೊರಡಲು ತಯಾರಾಗಿದ್ದ ಯುವತಿಯೊಬ್ಬಳು ಧಾರುಣವಾಗಿ ಸಾವನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಸೂರ್ಯ ಸುರೇಂದ್ರನ್ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯವಾಗಿ ಮಲೆಯಾಳಂ ಭಾಷೆಯಲ್ಲಿ ಅರಳಿ ಹೂವು ಕನ್ನಡದಲ್ಲಿ ಕಣಗಿಲೆ ಎಂದು ಕರೆಯಲ್ಪಡುವ ಓಲಿಯಾಂಡರ್ ಪ್ಲವರ್ ನ್ನು ತಿಂದಿದ್ದು, ಇದರಿಂದಾಗಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ವೃತ್ತಿಯಲ್ಲಿ ನರ್ಸ ಆಗಿರುವ ಸೂರ್ಯ ಸುರೇಂದ್ರನ ಲಂಡನ್ ಗೆ ತೆರಳಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಸಂದರ್ಭ ಹಠಾತ್ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆತಂದರೂ ಆಕೆಯ ಜೀವ ಉಳಿಸಲಾಗಲಿಲ್ಲ. ಪ್ರಾಥಮಿಕ ಹಂತದಲ್ಲಿ ಆಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಆಕೆಗೆ ಚಿಕಿತ್ಸೆ ನೀಡುವ ಸಂದರ್ಭ ಆಸ್ಪತ್ರೆಯ ವೈದ್ಯರಿಗೆ ತಾನು ಪೋನ್ ನಲ್ಲಿ ಮಾತನಾಡುವ ವೇಳೆ ಅರಿವಿಲ್ಲದೆ ಅರಳಿ ಹೂ ಅನ್ನು ತಿಂದಿದ್ದೆನೆ ಎಂದಿದ್ದಾಳೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಹೋಗುವ ವೇಳೆ ನನಗೆ ನಿರಂತರ ವಾಂತಿಯಾಗಿದೆ ಎಂದು ಮಾಹಿತಿ ನೀಡಿದ್ದಾಳೆ ಎಂದು ವರದಿಯಾಗಿದೆ. ಅಲಪ್ಪುಳ ವೈದ್ಯಕೀಯ…
ಮಂಜೇಶ್ವರ: ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಉದ್ಯಾವರ ಹತ್ತನೇ ಮೈಲಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಉದ್ಯಾವರ ದ ಹಮೀದ್ ( 54) ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದ ವೇಳೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ವಿದ್ಯಾರ್ಥಿಗಳು ಬಹು ದಿನಗಳಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟವಾಗಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಫಲಿತಾಂಶವನ್ನು ಪ್ರಕಟಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀಯವರು ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಇವರ ಜೊತೆಗೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಕುಮಾರ್ ಸಿಂಗ್ ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸಿ ರಿಸಲ್ಟ್ ಅನೌನ್ಸ್ ಮಾಡಿದ್ದಾರೆ.ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-1ನ್ನು ದಿನಾಂಕ 25.03.2024 ರಿಂದ 06.04.2024 ರವರೆಗೆ ಬರೆದಿದ್ದಾರೆ. 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಹೊರಬಿದ್ದ ಫಲಿತಾಂಶದಂತೆ ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. ಫಲಿತಾಂಶವನ್ನು ನೋಡೋದು ಹೇಗೆ? sslc.karnataka.gov.in kseab.karnataka.gov.in ಮೇಲಿನ ವೆಬ್ಸೈಟ್ನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪರಿಶೀಲಿಸಬಹುದಾಗಿದೆ. ಇವು…
ಪುತ್ತೂರು ಸಮೀಪ ಕರೆಯೋಲೆ ಇಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಫೋಟೋ ಕ್ಲಿಕ್ಕಿಸಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಅಲ್ಲಿದ್ದವರಿಂದ ಧರ್ಮದೇಟು ತಿಂದ ಘಟನೆ ತಡವಾಗಿ ತಿಳಿದು ಬಂದಿದೆ. ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯೊಬ್ಬರ ಫೇಸ್‌ಬುಕ್ ಪೋಸ್ಟ್ ವೈರಲ್ ಆಗಿದೆ ಎಂದು ತಿಳಿಯಲಾಗಿದೆ. ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿ ಗಳಿಬ್ಬರು ಬಂದು ಹುಡುಗಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಮೊಬೈಲ್ ಕಸಿದುಕೊಂಡಿದ್ದಾರೆ. ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೋಟೋ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ನೆರೆದಿದ್ದವರು ವಿಚಾರಿಸಿದಾಗ ಸಂಪ್ರ ದಾಯಸ್ಥರೊಬ್ಬರ ಪುತ್ರ ಹೇಳಿದ್ದಕ್ಕಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಏಟು ತಿಂದವರು ತಪ್ಪೊಪ್ಪಿಕೊಂಡು ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಸುಳ್ಯ: ಕಾಲೇಜು ವಿದ್ಯಾರ್ಥಿಯೋರ್ವಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಸಂಪಾಜೆ ಗ್ರಾಮದ ದೊಡ್ಡಡ್ಕ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಸುಳ್ಯ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿನಿ, ಸಂಪಾಜೆ ಗ್ರಾಮದ ದೊಡ್ಡಡ್ಕ ಗೋಪಾಲ ಹಾಗೂ ಬಾಬಿ ದಂಪತಿಯ ಪುತ್ರಿ ರಶ್ಮಿತಾ ಅವರು ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಶ್ಮಿತಾ ಅವರಿಗೆ 16 ವರ್ಷ ವಯಸ್ಸಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ, ಕೆ. ವಸಂತ ಬಂಗೇರ (79ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಮೇ 8 ರಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕುವೆಟ್ಟು ಗ್ರಾಮದವರು. ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಬಂಗೇರರು 15 ಜನವರಿ 1946ರಂದು ಜನಿಸಿದ್ದರು. ವಸಂತ ಬಂಗೇರ ಅವರು ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್. ಎಸ್. ಎಲ್. ಸಿ. ಯನ್ನು ಮಾಡಿದರು. ಮುಲ್ಕಿ ಮತ್ತು ಉಜಿರೆಯ ಎಸ್. ಡಿ.ಎಂ. ಕಾಲೇಜುಗಳಲ್ಲಿ ವ್ಯಾಸಂಗವನ್ನು ಮಾಡಿ 1962 ರಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿದರು. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1983 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. 1985ರಲ್ಲಿ ಮತ್ತೆ ಭಾಜಪ ಬೆಂಬಲದಿಂದ ಸ್ಪರ್ಧಿಸಿ…
ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರ ನಡುವೆ ಗಲಾಟೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ನಿಲ್ದಾಣದ ಹೊರಗೆ ನಡೆದ ಗಲಾಟೆಯಲ್ಲಿ ಮಹಿಳೆಯರು ಎಂಬುದನ್ನೂ ನೋಡದೆ ಅಸಭ್ಯವಾಗಿ ವರ್ತಿಸಿ ರಿಕ್ಷಾ ಚಾಲಕರು ಹೊಡೆದಾಟಕ್ಕಿಳಿದಿರುವುದು ಕಂಡು ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಚೆನ್ನೈನಿಂದ ದಂಪತಿಗಳು ಬಂದಿದ್ದು ಅವರನ್ನು ಕರೆದುಕೊಂಡು ಇಬ್ಬರು ಬೈಕ್ ನಲ್ಲಿ ಬಂದಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಗದಿತ ಸ್ಥಳದಲ್ಲಿ ಮಾಡಬೇಕಾಗಿರುವ ಹಿನ್ನಲೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಚಂದನ್ ಎನ್ನುವ ವ್ಯಕ್ತಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಅಲ್ಲೆ ಇದ್ದ ರಿಕ್ಷಾ ಚಾಲಕರು ಚಂದನ್ ಗೆ ಬೆಂಬಲವಾಗಿಲ ಬಂದು ಗಲಾಟೆ ಮಾಡಿದ್ದಾರೆ. ವಾಗ್ವಾದ ತಾರಕಕ್ಕೇರಿದ್ದು, ತಳ್ಳಾಟ ನೂಕಾಟ ನಡೆದಿದೆ. ಆಟೋ ಚಾಲಕರ ಗುರುತನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರ ಗುರುತನ್ನೂ ಪರಿಶೀಲಿಸಲಾಗುತ್ತಿದೆ.ಈ ವಿಷಯದಲ್ಲಿ ಲಭ್ಯವಿರುವ ಎಲ್ಲಾ…
ಮಂಗಳೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಮೇ 7 ರಂದು ನಡೆದಿದೆ. ಎಲಿಜಬೆತ್ ದೀಪಿಕಾ ಪೊನ್ನುರಾಜ್ ನಾಪತ್ತೆಯಾದ ಯುವತಿ. ಈಕೆಗೆ 21 ವರ್ಷ ವಯಸ್ಸಾಗಿದ್ದು, 5 ಅಡಿ 7 ಇಂಚು ಎತ್ತರವಿದ್ದಾರೆ. ಈಕೆ ಕಾಣೆಯಾಗುವಾಗ ಕಪ್ಪು ಪ್ಯಾಂಟ್, ನೀಲಿ ಮತ್ತು ಬಿಳಿ ಪಟ್ಟಿಗಳಿರುವ ಸಮವಸ್ತ್ರ ಧರಿಸಿದ್ದರು. ಜೊತೆಗೆ ನಾಪತ್ತೆಯಾದವರಿಗೆ ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಬರುತ್ತದೆ. ಇನ್ನು ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣ 9074649267 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ










