Author: main-admin

ಸುಳ್ಯ: ನಾಪತ್ತೆಯಾಗಿದ್ದ ಬಾಲಕಿಯನ್ನು ಗಂಟೆಯೊಳಗೆ ಪತ್ತೆಹಚ್ಚಲು‌ ಸಹಕರಿಸಿದ ಮಂಗಳೂರಿನ ಮೂವರು ಪತ್ರಕರ್ತರನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಶನಿವಾರ ಸುಬ್ರಹ್ಮಣ್ಯ ಸಮೀಪದ ಕೊಲ್ಲಮೊಗ್ರದಲ್ಲಿ ಜರುಗಿದ ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯದಲ್ಲಿ ಸನ್ಮಾನಿಸಿದರು. ಸುಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಸುಳ್ಯದಲ್ಲಿ ನಡೆದ ಪತ್ರಕರ್ತರ ಐದನೇ ಗ್ರಾಮವಾಸ್ತವ್ಯದಲ್ಲಿ ಭಾಗವಹಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರಾದ ಶಶಿ ಬೆಳ್ಳಾಯರು, ಮೋಹನ್ ಕುತ್ತಾರ್ ಹಾಗೂ ಗಿರೀಶ್ ಮಳಲಿ ಅವರನ್ನು ಸನ್ಮಾನಿಸಿದರು. ಜೋಯಿಡಾಕ್ಕೆ ಚಾರಣಕ್ಕೆ ಹೊರಟಿದ್ದ ಮಂಗಳೂರಿನ ಪತ್ರಕರ್ತರು ಮೂಲ್ಕಿ ಬಸ್‌ ಸ್ಟ್ಯಾಂಡ್‌ ನಲ್ಲಿ ನಿಂತಿದ್ದಾಗ ಮಗಳು ನಾಪತ್ತೆಯಾಗಿದ್ದಾರೆಂದು ಬಾಗಲಕೋಟ ಮೂಲದ ಕೂಲಿ ಕಾರ್ಮಿಕರೊಬ್ಬರು ಸಾರ್ವಜನಿಕರಲ್ಲಿ ಗೋಗರೆದು ಕಣ್ಣೀರು ಹಾಕುತ್ತಿದ್ದರು. ಇದನ್ನು ಗಮನಿಸಿದ ಪತ್ರಕರ್ತರು ಪ್ರಕರಣದ ಗಂಭೀರತೆ ಅರಿತು ಬಾಲಕಿ ಕೆಎಸ್‌ ಆರ್ ಟಿಸಿ ಬಸ್‌ ನಲ್ಲಿ ತೆರಳಿರುವ ಸುಳಿವಿನ ಆಧಾರದಲ್ಲಿ ಉಡುಪಿ ಎಸ್‌ಪಿ ಡಾ.ಅರುಣ್ ಕೆ. ಅವರ ಸಹಕಾರದಲ್ಲಿ ಉಡುಪಿ ಸಮೀಪ ಬಾಲಕಿಯನ್ನು ಗಂಟೆಯೊಳಗೆ ಪತ್ತೆಹಚ್ಚಲು…

Read More

ಉಳ್ಳಾಲ: ಫೆ.14 ರಂದು ಸೌದಿಗೆ ತೆರಳಬೇಕಿದ್ದ ಯುವಕನೋರ್ವ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಂಕೊಳಿಗೆ ರೈಲ್ವೇ ಹಳಿಯಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಉಚ್ಚಿಲ ರೈಲ್ವೇ ಗೇಟ್ ಸಮೀಪದ ಹಸೈನಾರ್ ಎಂಬವರ ಪುತ್ರ ಜಾಫರ್ (23) ಮೃತರು. ನಿನ್ನೆ ಸಂಜೆ ವೇಳೆ ಮನೆ ಕಡೆಗೆ ತೆರಳಲು ರೈಲ್ವೇ ಹಳಿಯನ್ನು ದಾಟುವ ಸಂದರ್ಭ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಿಂದ ಊರಿಗೆ ಬಂದಿದ್ದ ಜಾಫರ್, ಸೌದಿ ವೀಸಾ ಬಂದಿರುವ ಹಿನ್ನೆಲೆಯಲ್ಲಿ ಫೆ.14 ರಂದು ಸೌದಿ ರಾಷ್ಟ್ರಕ್ಕೆ ಉದ್ಯೋಗದ ನಿಮಿತ್ತ ತೆರಳುವವರಿದ್ದರು. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು : ವಾಹನ ಸವಾರರುಫೆಬ್ರವರಿ 17 ರೊಳಗೆ ಹೆಚ್‌ ಎಸ್‌ ಆರ್‌ ಪಿ ನಂಬರ್‌ ಪ್ಲೇಟ್‌ ಅಳವಡಿಸದಿದ್ದರೆ ದಂಡ ಪ್ರಯೋಗಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. 2019 ಏಪ್ರಿಲ್ 1ಕ್ಕಿಂತ ಹಳೆಯದಾದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್-HSRP ಹಾಕಿಸಿಕೊಳ್ಳುವಂತೆ ಸಾರಿಗೆ ಇಲಾಖೆ ನೀಡಿರುವ ಗಡುವು ಫೆ.17ಕ್ಕೆ ಮುಕ್ತಾಯವಾಗಲಿದೆ. ನಂಬರ್ ಪ್ಲೆಟ್ ಬದಲಾವಣೆಗೆ ಹಲವು ವಾಹನ ಮಾಲೀಕರು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿ ಮುಟ್ಟಿಸಲು ಇಲಾಖೆ ಮುಂದಾಗಿದೆ. ವಾಹನಗಳಿಗೆ ಹೆಚ್ ಎಸ್ ಆರ್ ಪಿ ಅಳವಡಿಸದೇ ಮೊದಲ ಬಾರಿ ಸಿಕ್ಕಿಬಿದ್ದರೆ 1000 ರೂಪಾಯಿ ದಂಡ, 2ನೇ ಬಾರಿ ಸಿಕ್ಕಿ ಬಿದ್ದರೆ 2000 ರೂಪಾಯಿ ದಂಡ ಹಾಕಲಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರ್ಯಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ…

Read More

ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ನಾವೂರಿನ ಫರ್ಲಾದಲ್ಲಿ ಕೆಎಸ್ಸಾರ್ಟಿಸಿ ಬಸ್‌ ಹಾಗೂ ಟ್ಯಾಂಕರಿನ ಮಧ್ಯೆ ಢಿಕ್ಕಿ ಸಂಭವಿಸಿ ನಾಲ್ವರು ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡಿದ್ದು ಬಸ್‌ ಹೆದ್ದಾರಿ ಬದಿಯ ಮನೆಗೆ ನುಗ್ಗಿದ ಘಟನೆ ಶನಿವಾರ ನಡೆದಿದೆ. ಢಿಕ್ಕಿಯಾದ ರಭಸಕ್ಕೆ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಫರ್ಲಾ ನಿವಾಸಿ ಭುಜಂಗ ಮೂಲ್ಯ ಅವರ ಮನೆಗೆ ನುಗ್ಗಿ ಮನೆಯ ಗೋಡೆ ಹಾಗೂ ಮೇಲ್ಛಾವಣಿಯ ಹಂಚಿಗೆ ಹಾನಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ವಿಸ್ತರಣೆಯ ಸಂದರ್ಭ ಭುಜಂಗ ಮೂಲ್ಯ ಅವರ ಜಾಗವೂ ಹೆದ್ದಾರಿಗೆ ಹೋಗಿದ್ದು, ಆದರೆ ಅದರ ಪರಿಹಾರ ಮೊತ್ತ ಇನ್ನೂ ಅವರ ಕೈ ಸೇರಿಲ್ಲ ಎಂಬ ಆರೋಪ ಕೇಳಿಬಂದಿದೆ.

Read More

ವಿಟ್ಲ: ಕರ್ಣಾಟಕ ಬ್ಯಾಂಕ್‌ನ ಅಡ್ಯನಡ್ಕ ಶಾಖೆಯಲ್ಲಿ ನಡೆದ ಕೋಟ್ಯಂತರ ನಗ ನಗದು ಕಳ್ಳತನ ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯ ವಿಶೇಷ ತಂಡ ತನಿಖೆ ಕೈಗೆತ್ತಿಕೊಂಡಿದ್ದು, ಬ್ಯಾಂಕ್‌್ ಹಾಗೂ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದೆ. ಇದರ ಆಧಾರದಲ್ಲಿ ಕಳ್ಳತನಕ್ಕೆ ಆಗಮಿಸಿದ್ದ ವಾಹನದ ಸುಳಿವು ಸಿಕ್ಕಿದ್ದು, ಮತ್ತಷ್ಟು ವಾಹನ ನಿಖರತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ದೃಶ್ಯಾವಳಿ ಕಳುಹಿಸಲಾಗಿದೆ. ಇನ್ನು ಕಳ್ಳರು ಮೊದಲೇ ಬ್ಯಾಂಕ್‌ನ ಸಮಗ್ರ ಮಾಹಿತಿ ಪಡೆದುಕೊಂಡಿದ್ದು, ಎಲ್ಲಾ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ಕಿಟಕಿ ಮೂಲಕ ನುಗ್ಗಿದ್ದಾರೆ. ಭಾರೀ ಮೊತ್ತದ ಕಳವು ನಡೆದ ಬಳಿಕ ಬ್ಯಾಂಕ್ ನನ್ನು ಸಂಪೂರ್ಣವಾಗಿ ಭದ್ರತೆಗೊಳಿಸಲಾಗುತ್ತಿದ್ದು, ಕಿಟಕಿಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಹಳೆ ಕಪಾಟುಗಳನ್ನು ಹೊರ ಹಾಕಿ ನವೀಕರಿಸಲಾಗುತ್ತಿದ್ದು, ಸೋಮವಾರವು ಶಾಖೆ ನಿರ್ವಹಿಸುವುದು ಅನುಮಾನವಾಗಿದೆ. ಈಗ ಬ್ಯಾಂಕ್‌ನಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಸಲಾಗಿದ್ದು, ಸೋಮವಾರವೂ ಶಾಖೆ ಕಾರ್ಯ ನಿರ್ವಹಿಸುವುದು ಅನುಮಾನ ಎನ್ನಲಾಗಿದೆ.

Read More

ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಬರುವ ಪೋಷಕರು ಮಕ್ಕಳಿಗೆ ಅಲ್ಲದೇ ತಾವು ಕೂಡ ಹೆಲೈಟ್ ಧರಿಸದೇ ಬರುತ್ತಿದ್ದಾರೆ.ಜೊತೆಗೆ ಶಾಲಾ ಅಟೋ, ಖಾಸಗಿ ಕಾರು. ಟಿಟಿ ವಾಹನಗಳಲ್ಲಿ ನಿಗದಿತ ಮಕ್ಕಳಿಗಿಂತ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸಾಕಷ್ಟು ದೂರುಗಳು ಬಂದಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಬರುವ ಪೋಷಕರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು. 6 ವರ್ಷ ಮೇಲ್ಪಟ್ಟ ಮಕ್ಕಳು ಸಹ ಇನ್ಮುಂದೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಷ್ಟಬಂದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚಿನ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.ಶಾಲಾ ಅಟೋ, ಖಾಸಗಿ ಕಾರು, ಟಿಟಿ ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವವರು ಮತ್ತು ಮೂರಕ್ಕೂ ಹೆಚ್ಚು ಮಕ್ಕಳನ್ನು ಗಾಡಿಯಲ್ಲಿ ಕರೆದುಕೊಂಡು ಹೋಗುವ ಪೋಷಕರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತದೆ. ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಾರ್ವಜನಿಕರು ಕಡ್ಡಾಯವಾಗಿ ಹೆಲೈಟ್ ಧರಿಸುವಂತೆ ಎಚ್ಚರಿಸಿದ್ದು, ಶಾಲೆಗಳ ಬಳಿ ಸ್ಪೆಷಲ್ ಡ್ರೈವ್…

Read More

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 6 ಕೆಜಿ 912 ಗ್ರಾಂ ತೂಕದ ಅಂದಾಜು ಮೌಲ್ಯ ರೂಪಾಯಿ 2,76,000 ಬೆಲೆಯ ಗಾಂಜಾವನ್ನು ಪಡುಬಿದ್ರಿ ಠಾಣಾ ಸರಹದ್ದಿನ ಮೆ. ಆಯುಷ್‌ ಎನ್‌ವಿರೋಟೆಕ್‌ ಪ್ರೈ. ಲಿ., ಪಡುಬಿದ್ರಿ ಎಂಬಲ್ಲಿ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್‌ ಡಿಸ್‌ಪೋಸಲ್‌ ಕಮಿಟಿಯ ಅಧ್ಯಕ್ಷರಾದ ಡಾ. ಅರುಣ್‌ ಕೆ., ಐಪಿಎಸ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ಮತ್ತು ಪಿ.ಎ.ಹೆಗಡೆ, ಜಿಲ್ಲಾ ಡ್ರಗ್‌ ಡಿಸ್‌ಪೋಸಲ್‌ ಕಮಿಟಿ ಸದಸ್ಯರು ಹಾಗೂ ಪೊಲೀಸ್‌ ಉಪಾಧೀಕ್ಷಕರಾದ ಪ್ರಭು ಡಿ.ಟಿ. ಮತ್ತು ಅರವಿಂದ ಕಲಗುಜ್ಜಿ ಹಾಗೂ ಇತರ ಪೊಲೀಸ್‌ ಅಧಿಕಾರಿಯವರು ಉಪಸ್ಥಿತರಿದ್ದರು. ಇನ್ನು ಮಣಿಪಾಲ ಠಾಣೆಯ ಸೆನ್‌ ಠಾಣೆಯ 3 ಪ್ರಕರಣ, ಮಣಿಪಾಲ ಠಾಣೆಯ 4 ಪ್ರಕರಣ ಹಾಗೂ ಕುಂದಾಪುರ, ಕೋಟ, ಮಲ್ಪೆ ಮತ್ತು ಪಡುಬಿದ್ರಿ ಠಾಣೆಯ ತಲಾ 01 ಪ್ರಕರಣ ಸೇರಿ ಒಟ್ಟು 11 ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ಮಾನ್ಯ ನ್ಯಾಯಾಲಯದ ಆದೇಶಾನುಸಾರ…

Read More

ಉಡುಪಿ : ನಮಾಜ್ ಮಾಡುತ್ತಿರುವ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಉಡುಪಿಯ ಅಂಜುಮನ್ ಮಸೀದಿಯಲ್ಲಿ ನಡೆದಿದೆ. ಮೃತರನ್ನು ದೊಡ್ಡಣಗುಡ್ಡೆ ಕರಂಬಳ್ಳಿ ನಿವಾಸಿ ಮುಸ್ತಾಕ್(55) ಎಂದು ಗುರುತಿಸಲಾಗಿದೆ. ಮುಸ್ತಾಕ್ ಅವರು ಮಧ್ಯಾಹ್ನ ಜುಮಾ ನಮಾಝ್‌ಗಾಗಿ ಮಸೀದಿಗೆ ಬಂದಿದ್ದು, ಅಲ್ಲಿ ನಮಾಝ್ ಮಾಡುವ ವೇಳೆ ಹೃದಯಾಘಾತದಿಂದ ಅಲ್ಲೇ ಕುಸಿದು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಘಟನೆ ಮಸೀದಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.

Read More

ಪುತ್ತೂರು: ಹಿಂದು ಜಾಗರಣ ವೇದಿಕೆಯ ಮುಖಂಡರಾದ ದಿನೇಶ್ ಪಂಜಿಗ ಮತ್ತು ಬೆಳ್ತಂಗಡಿಯ ಯಶೋಧರ ಅವರಿಗೆ ಗಡಿಪಾರು ಕುರಿತು ಉಪವಿಭಾಗೀಯ ದಂಡಾಧಿಕಾರಿಯವರ ನೋಟೀಸ್‌ಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆ ನೀಡಿದೆ. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ ಮತ್ತು ವೇಣೂರು ವಲಯದ ಮುಖಂಡರಾಗಿದ್ದ ಬೆಳಾಲು ನಿವಾಸಿ ಯಶೋಧರ ಎಂಬವರಿಗೆ, ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55ರಂತೆ ವಿಜಯಪುರ ಜಿಲ್ಲೆಯ ಸಿಂಧಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಉಪವಿಭಾಗೀಯ ದಂಡಾಧಿಕಾರಿ ನೋಟೀಸ್ ಜಾರಿ ಮಾಡಿದ್ದರು.ನೀವು ಸ್ವತಃ ಯಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ಈ ಕುರಿತು ವಾದಿಸಬಹುದು ಎಂದು ಈ ಮೂಲಕ ನಿಮಗೆ ತಿಳಿಸಲಾಗಿದೆ. ತಪ್ಪಿದಲ್ಲಿ ಸದರಿ ಪ್ರಕರಣದಲ್ಲಿ ನಿಮಗೆ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರುವ ಮಾಹಿತಿಯ ಆಧಾರದಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೋಟೀಸ್‌ನಲ್ಲಿ ತಿಳಿಸಲಾಗಿತ್ತು.ನೊಟೀಸ್ ಜಾರಿ ಮಾಡಿರುವ ಉಪವಿಭಾಗೀಯ ಕಾರ್ಯನಿರ್ವಾಹಕ ದಂಡಾಧಿಕಾರಿಯವರ ಕ್ರಮವನ್ನು…

Read More

ಮಂಗಳೂರು: ನಗರದ ಕಾವೂರಿನ ಬೋಂದೆಲ್ ಬಳಿಯ ಮೈದಾನದಲ್ಲಿ ಬೈಕ್ ನಲ್ಲಿ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು 19 ಗ್ರಾಂ ತೂಕದ 57,000 ಮೌಲ್ಯದ ಮೆಥಪಟೈನ್ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಮಂಗಳೂರು ನಿವಾಸಿ ಹಿಮನೀಶ್ (26), ಕೋಟೆಕಾರು ತಾರಿಪಡ್ಪು ನಿವಾಸಿ ಪವನ್ ರಾಜ್ ಪಿ(28) ಬಂಧಿತ ಆರೋಪಿಗಳು. ಆರೋಪಿಗಳು ಕಾವೂರಿನ ಬೊಂದೆಲ್ ಬಳಿಯ ಮೈದಾನದ ಬಳಿ ಬೈಕ್ ನಲ್ಲಿ ಪ್ಲಾಸ್ಟಿಕ್ ಕವರ್ ಗಳಲ್ಲಿ ಮೆಥಪಟೈನ್ ಮಾದಕದ್ರವ್ಯವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಾದಕದ್ರವ್ಯವನ್ನು ಸೇರಿದಂತೆ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Read More