Author: main-admin

ಪುತ್ತೂರು: ಕೊಕ್ಕಡ ಗ್ರಾಮದ ಕೊಪ್ಪಲಕೋಡಿ ನಿವಾಸಿ ಮತ್ತು ಸೌತಡ್ಕದ ಸಮೀಪ ಜ್ಯೂಸ್ ಸೆಂಟರ್ ಹೊಂದಿದ್ದ ಧನಂಜಯ್ (36) ಅವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಸಿಗದ ಕಾರಣ ಅವರು ಮೃತಪಟ್ಟಿರುವುದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಸುಮಾರು 1 ಗಂಟೆ ಸುಮಾರಿಗೆ ಧನಂಜಯ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು.ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ಆಂಬ್ಯುಲೆನ್ಸ್ ಇದ್ದರೂ ಸಹ, ತುರ್ತು ಸಂದರ್ಭದಲ್ಲಿ ಅದು ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಕುಟುಂಬಸ್ಥರು ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು. ದಾರಿ ಮಧ್ಯೆಯೇ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಮೃತ ಧನಂಜಯ್ ಅವರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಕೊಕ್ಕಡದಲ್ಲಿ ಸುಸಜ್ಜಿತ ಆರೋಗ್ಯ ಕೇಂದ್ರವಿದ್ದರೂ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆ…

Read More

ನವದೆಹಲಿ : ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಶನಿವಾರ ಬೀಸಿದ ಹಠಾತ್ ಬಲವಾದ ಗಾಳಿ ಮತ್ತು ಭಾರೀ ಮಳೆಗೆ ಮೂರು ಏರ್ ಇಂಡಿಯಾ ವಿಮಾನಗಳು ಜಖಂಗೊಂಡಿವೆ. ವಿಮಾನ ನಿಲ್ದಾಣದ ರನ್‌ವೇನಲ್ಲಿ ನಿಲ್ಲಿಸಲಾಗಿದ್ದ ಗ್ರೌಂಡ್ ಸಪೋರ್ಟ್ (ನೆಲದ ಬೆಂಬಲ) ಉಪಕರಣಗಳು ಜೋರಾದ ಗಾಳಿಗೆ ಕೊಚ್ಚಿ ಬಂದು ವಿಮಾನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಭಾನುವಾರ ತಿಳಿಸಿದೆ.ಅಪಘಾತದ ತೀವ್ರತೆಯಿಂದಾಗಿ ಸದ್ಯ ಮೂರೂ ವಿಮಾನಗಳನ್ನು ಕಾರ್ಯಾಚರಣೆಯಿಂದ ತಾತ್ಕಾಲಿಕವಾಗಿ ದೂರ ಇಡಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ವಾಹಕರು ಸ್ಪಷ್ಟಪಡಿಸಿದ್ದಾರೆ.ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಏರ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗೆ ಸೇರಿದ ಭಾರೀ ನೆಲದ ಉಪಕರಣಗಳು ತಮ್ಮ ನಿಯಂತ್ರಣ ತಪ್ಪಿ ಚಲಿಸಿವೆ. ಇವು ಟರ್ಮಿನಲ್ 2 ರ ಏಪ್ರನ್ ಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ವಿಮಾನಗಳಿಗೆ ಜೋರಾಗಿ ಅಪ್ಪಳಿಸಿವೆ. ಆದರೆ, ಹವಾಮಾನದಲ್ಲಿ ಇಷ್ಟೊಂದು ಭೀಕರ ಬದಲಾವಣೆಯಾಗುವ ಕುರಿತು ವಾಯು ಸಂಚಾರ ನಿಯಂತ್ರಣ (ATC) ವಿಭಾಗವು…

Read More

ಕಣ್ಣೂರು: ಕೇರಳದ ಪ್ರಸಿದ್ಧ ಕೊಟ್ಟಿಯೂರು ಶಿವ ದೇವಸ್ಥಾನದಲ್ಲಿ ನಡೆಯುತ್ತಿರುವ ವೈಶಾಖ ಮಹೋತ್ಸವದ ವೇಳೆ ಕರ್ನಾಟಕದ ಭಕ್ತರ ಮೇಲೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭದ್ರತಾ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ಹಾಗೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕನ್ನಡಿಗರನ್ನು ಗುರಿಯಾಗಿಸಿಕೊಂಡು ದರ್ಪ ತೋರಲಾಗುತ್ತಿದ್ದು, ಸದ್ಯ ಭಕ್ತರ ಆಕ್ರೋಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.“ದೇವರ ದರ್ಶನಕ್ಕಾಗಿ ನಾವು 8 ರಿಂದ 10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯಬೇಕಾಗಿದೆ. ಇಲ್ಲಿ ₹1,000 ಮುಖಬೆಲೆಯ ವಿಐಪಿ ಟಿಕೆಟ್‌ ಹೆಸರಿನಲ್ಲಿ ದೊಡ್ಡ ಹಗರಣ (ಸ್ಕ್ಯಾಮ್) ನಡೆಯುತ್ತಿದೆ. ಇಷ್ಟು ದೊಡ್ಡ ಮೊತ್ತದ ಟಿಕೆಟ್ ಪಡೆದರೂ ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ. ಬದಲಿಗೆ ಆಡಳಿತ ಮಂಡಳಿಯವರು ರೌಡಿಸಂ ಮಾಡುತ್ತಿದ್ದಾರೆ, ಭಕ್ತರನ್ನು ಹೊಡೆಯಲು ಬರುತ್ತಾರೆ” ಎಂದು ನೊಂದ ಕರ್ನಾಟಕದ ಭಕ್ತರು ಗಂಭೀರವಾಗಿ ಆರೋಪಿಸಿದ್ದಾರೆ.ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಮಿತಿ ಮೀರಿದ್ದು, ಸುಮಾರು 5 ರಿಂದ 6 ಕಿಲೋಮೀಟರ್ ಉದ್ದದವರೆಗೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ. ಗಂಟೆಗಟ್ಟಲೆ ನಿಂತು…

Read More

ಹೆಬ್ರಿ: ಉಡುಪಿ ಜಿಲ್ಲೆಯ ಕಾರ್ಕಳ ಉಪವಿಭಾಗದ ಹೆಬ್ರಿ ತಾಲೂಕಿನ ಹೊಸೂರು ಎಂಬಲ್ಲಿ ವ್ಯವಸ್ಥಿತವಾಗಿ ನೆರವೇರುತ್ತಿದ್ದ ಬೃಹತ್ ಇಸ್ಪೀಟ್ ಜೂಜಾಟದ (ಜುಗಾರಿ) ಅಡ್ಡೆಯ ಮೇಲೆ ಪೊಲೀಸರು ಶನಿವಾರ ರಾತ್ರಿ ಭರ್ಜರಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮೂವರು ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ಇಸ್ಪೀಟ್ ದಂಧೆಯ ಕಿಂಗ್‌ಪಿನ್‌ಗಳು ಸೇರಿದಂತೆ 15ಕ್ಕೂ ಹೆಚ್ಚು ಆರೋಪಿಗಳು ಕತ್ತಲೆಯ ಲಾಭ ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ. ಜೂಜಿನ ಅಡ್ಡೆಯಿಂದ ಕಾರು, ಬೈಕ್ ಹಾಗೂ ನಗದು ಸೇರಿದಂತೆ ಒಟ್ಟು ₹13,07,370 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ವಿಜೇಶ್, ದಸ್ತಗೀರ್ ಮತ್ತು ರೋಹಿತ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನು ದಾಳಿ ವೇಳೆ ಸ್ಥಳದಿಂದ ಓಡಿಹೋದ ಮಂಗಳೂರಿನ ನಿತಿನ್, ಪಡು, ಪಂಪ್‌ವೆಲ್‌ನ ಕಿಶೋರ್, ಮೂಲ್ಕಿಯ ಸಿದ್ದು ಶೆಟ್ಟಿ, ರಂಗನಾಥ್, ರಫೀಕ್, ಇಮ್ರಾನ್, ಬೆಳ್ತಂಗಡಿಯ ನಜೀರ್, ಬರ್ಕೆಯ ಚೇತನ್, ಪಾಂಗಾಳದ ಕಿಶೋರ್, ಕಾರ್ಕಳದ ವಿಜಯ ಶೆಟ್ಟಿ, ಜಾರ್ಕಳದ ಮಹೇಶ್, ಭಟ್ಕಳದ ಮಹಾದೇವ ನಾಯ್ಕ ಹಾಗೂ ಕಾರಿನ ಚಾಲಕ ಸೇರಿದಂತೆ ಇತರ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಹೆಬ್ರಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.ಕಾರ್ಕಳ…

Read More

ಕುಂದಾಪುರ: ಖಾಸಗಿ ಬಸ್ಸೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಅದೃಷ್ಟವಶಾತ್, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿ 52ರ ಹುಲಿಕಲ್ ಘಾಟ್‌ನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.ಹುಲಿಕಲ್ ಘಾಟ್‌ನಲ್ಲಿ ಭೂಕುಸಿತದ ಕಾರಣ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಗರದಿಂದ ಬಂದಿದ್ದ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಶ್ರೀ ಚಂಡಿಕಾಂಬ ದೇವಸ್ಥಾನದ ಬಳಿ ಇಳಿಸಲಾಗಿತ್ತು. ಬಳಿಕ, ಬಾಳೆಬರೆ ಘಾಟ್ ಮೂಲಕ ಉಡುಪಿಗೆ ತೆರಳುತ್ತಿದ್ದ ಮತ್ತೊಂದು ಬಸ್, ತನ್ನ ಪ್ರಯಾಣ ಆರಂಭಿಸಿದ ಕೇವಲ 300 ಮೀಟರ್ ಅಂತರದಲ್ಲಿ ಬೆಂಕಿಗೆ ಆಹುತಿಯಾಗಿದೆ. ಈ ಬಸ್‌ನಲ್ಲಿ 17 ಮಂದಿ ಪ್ರಯಾಣಿಕರಿದ್ದರು.ಬಸ್‌ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ತಕ್ಷಣ ಚಾಲಕ ಮತ್ತು ನಿರ್ವಾಹಕರು ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪ್ರಯಾಣಿಕರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬಸ್‌ನಿಂದ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು, ಬಸ್ ಬೆಂಕಿಗಾಹುತಿಯಾಗಿದೆ.ಈ ಘಟನೆಯಿಂದಾಗಿ ಘಾಟ್ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸ್ಥಳೀಯರ ಸಹಾಯದಿಂದ…

Read More

ಗಂಗಾವತಿ : ಆನ್‌ಲೈನ್ ಗೇಮ್ ಆಡುವುದನ್ನು ವಿರೋಧಿಸಿ ಬುದ್ಧಿವಾದ ಹೇಳಿದ ಒಂದೇ ಕಾರಣಕ್ಕೆ, ಜನ್ಮ ನೀಡಿದ ತಂದೆ ಮತ್ತು ಒಡಹುಟ್ಟಿದ ಅಕ್ಕನನ್ನೇ ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ತಾಯಿಗೂ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿರುವ ಪಾಪಿ ಮಗ, ಬಳಿಕ ತನಗೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಘಟನೆಯಲ್ಲಿ ತಂದೆ ವೆಂಕಟನಾಯ್ಡು (45) ಹಾಗೂ ಅಕ್ಕ ಪ್ರಗತಿ (19) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ತಾಯಿ ಸೌಜನ್ಯ ಅವರ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸದ್ಯ ಆರೋಪಿ ಸಾಯಿವೆಂಕಟ ಮಣಿದೀಪ (18) ಹಾಗೂ ತಾಯಿ ಸೌಜನ್ಯ ಇಬ್ಬರಿಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮೃತ ವೆಂಕಟನಾಯ್ಡು ಅವರು ಹೊಸ ಅಯೋಧ್ಯೆ ಗ್ರಾಮದಲ್ಲಿ ವಾಸವಾಗಿದ್ದು, ಖಾಸಗಿ ಶಾಲೆಯೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಎಂದಿನಂತೆ ವೆಂಕಟನಾಯ್ಡು, ಪತ್ನಿ, ಇಬ್ಬರು ಮಕ್ಕಳು…

Read More

ಬಾಗಲಕೋಟೆ: ಧಾರಾಕಾರ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಬೀಳುವ ಕೆಲವೇ ಕ್ಷಣಗಳ ಮೊದಲು ಸಾಕು ಬೆಕ್ಕಿನ ಕಾರಣದಿಂದ ತಂದೆ ಮತ್ತು ಮಗ ಪ್ರಾಣಾಪಾಯದಿಂದ ಪಾರಾದ ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದ್ದು, ಸಾಕು ಪ್ರಾಣಿಯೇ ಕುಟುಂಬದ ಜೀವ ರಕ್ಷಕನಾದಂತಾಗಿದೆ.ಬಾಗಲಕೋಟೆಯ ವಲ್ಲಭಬಾಯಿ ನಗರ ನಿವಾಸಿಗಳಾದ ಶಬ್ಬೀರ್ ಬಾಗವಾನ್ ಹಾಗೂ ಅವರ ಪುತ್ರ ಆರ್ಬಾಜ್ ಬಾಗವಾನ್ ಮನೆಯಲ್ಲಿ ಇದ್ದ ವೇಳೆ ಭಾರೀ ಮಳೆಯಿಂದ ಮನೆಯ ಮೇಲ್ಛಾವಣಿಯಿಂದ ಮಣ್ಣಿನ ತುಂಡುಗಳು ಉದುರಲು ಆರಂಭವಾಗಿತ್ತು. ಇದೇ ವೇಳೆ ಮನೆಯಲ್ಲಿದ್ದ ಸಾಕು ಬೆಕ್ಕು ಭಯಗೊಂಡು ಹೊರಗೆ ಓಡಿದೆ. ಬೆಕ್ಕು ಹೊರಗೆ ಓಡಿದುದನ್ನು ಗಮನಿಸಿದ ಶಬ್ಬೀರ್, ಅದನ್ನು ಹಿಡಿಯಲು ಮನೆಯ ಹೊರಭಾಗಕ್ಕೆ ತೆರಳಿದ್ದಾರೆ. ತಂದೆಯ ಹಿಂದೆ ಪುತ್ರ ಆರ್ಬಾಜ್ ಕೂಡ ಹೊರಗೆ ಬಂದಿದ್ದಾರೆ. ಇಬ್ಬರೂ ಮನೆಯ ಬಾಗಿಲು ದಾಟಿ ಹೊರಬಂದ ಕೆಲವೇ ಕ್ಷಣಗಳಲ್ಲಿ ಮನೆಯ ಸಂಪೂರ್ಣ ಮೇಲ್ಛಾವಣಿ ಕುಸಿದು ಬಿದ್ದಿದೆ.ಘಟನೆಯ ಬಗ್ಗೆ ಮಾತನಾಡಿದ ಆರ್ಬಾಜ್ ಬಾಗವಾನ್, “ಮನೆಯ ಮೇಲ್ಛಾವಣಿಯಿಂದ ಮಣ್ಣು ಬೀಳುತ್ತಿದ್ದಂತೆ ನಮ್ಮ ಬೆಕ್ಕು…

Read More

ಉಳ್ಳಾಲ: ತೊಕ್ಕೊಟ್ಟು ಸಮೀಪದ ಕೆ.ಸಿ ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 2025ರ ಜನವರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಗುಜರಾತ್ ಸೂರತ್ ನಿವಾಸಿ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಬಂಧಿತ ಆರೋಪಿ. ಈತ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಈ ತಂಡವು ದೊರೆತ ಖಚಿತ ಮಾಹಿತಿಯಂತೆ ತಲೆಮರೆಸಿಕೊಂಡಿದ್ದ ಧರ್ಮ್ ಬೀರ್ ಬೀರೇಂದ್ರ ಸಿಂಗ್ ಯಾನೆ ಧರ್ಮವೀರ್ ಸಿಂಗ್ ಯಾನೆ ಮನೋಜ್ ಜೀತ್ ಲಾಲ್ ವರ್ಮ ಯಾನೆ ಧರ್ಮ್ ಯಾನೆ ಮಾಸ್ಟರ್ ಯಾನೆ ಕಳ್ಳು, (34) ಎಂಬಾತನನ್ನು ಮೇ 11ರಂದು ಮಹಾರಾಷ್ಟ್ರ ರಾಜ್ಯದ ಮುಂಬೈಯ ಪನ್ವೇಲಿ ರೈಲ್ವೆ ಸ್ಟೇಷನ್ ಬಳಿ ವಶಕ್ಕೆ ಪಡೆದಿತ್ತು.ಆತನನ್ನು ಮೇ 12 ರಂದು ಉಳ್ಳಾಲ ಪೊಲಿಸ್ ಠಾಣೆಗೆ ಕರೆದು ಕಂಡು ಬಂದು ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಈ ಆರೋಪಿಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ…

Read More

ಮಂಗಳೂರು: ಜಾಮೀನು ರಹಿತ ವಾರಂಟ್ ಹೊರಡಿಸಿದ್ದರೂ ಪದೇ ಪದೇ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೂರ್ವ ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಿವಂಗತ ರಂಗಸ್ವಾಮಿ ಅವರ ಪುತ್ರ ಶ್ರೀನಿವಾಸ ಸಿರಾಯನ್‌ (56), ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಗಾವನಹಳ್ಳಿ ಗ್ರಾಮದ ಚಂದ್ರೇಗೌಡ ಅವರ ಪುತ್ರ ಉಪೇಂದ್ರ ಡಿಸಿ ಅಲಿಯಾಸ್ ಅಭಿಷೇಕ್ (28) ಎಂದು ಗುರುತಿಸಲಾಗಿದೆ.ಪೊಲೀಸರ ಪ್ರಕಾರ, ಶ್ರೀನಿವಾಸ ಸಿರಾಯನ್ ಮಂಗಳೂರು ಪೂರ್ವ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 152/2017 ರಲ್ಲಿ ಆರೋಪಿಯಾಗಿದ್ದಾನೆ. ಸಂಬಂಧಿತ ಕಾಯ್ದೆಯ ಸೆಕ್ಷನ್ 3(1), 3(22), 4 ಮತ್ತು 9 ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣವು ಪ್ರಸ್ತುತ ಮಂಗಳೂರಿನ 6 ನೇ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಮತ್ತು ಸಿಸಿ ಸಂಖ್ಯೆ 1108/2025 ಎಂದು ಪಟ್ಟಿ ಮಾಡಲಾಗಿದೆ.ವಿಚಾರಣೆಗೆ ಹಾಜರಾಗದೇ, ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡದ್ದ ಆರೋಪಿಗಳ ವಿರುದ್ಧ ನ್ಯಾಯಾಲಯವು ಹಲವಾರು ಬಾರಿ…

Read More

ಉಡುಪಿ : ಕಾಪು ತಾಲೂಕಿನ ಕಟಪಾಡಿ ಏಣಗುಡ್ಡೆ ನಿವಾಸಿ ಸೌಂದರ್ಯ ಹೆಚ್ ಎ, (20) ಎಂಬ ಯುವತಿಯು ಮೇ 30 ರಂದು ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಕೊಡಗು ಪ್ರವಾಸಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋದವರು, ಪ್ರವಾಸಕ್ಕೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿರುತ್ತಾರೆ.ಯುವತಿಯು 4 ಅಡಿ ಎತ್ತರ, ಸಾಧಾರಣ ಶರೀರ, ಗೋಧಿ ಮೈ ಬಣ್ಣ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತಾಡುತ್ತಾರೆ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆ ದೂ.ಸಂ: 0820-2520444, ಉಡುಪಿ ಕಂಟ್ರೋಲ್ ರೂಂ: 0820-2526444, ಪೊಲೀಸ್ ನಿರೀಕ್ಷಕರು ಮೊ.ನಂ: 9480805408 ಹಾಗೂ ಪೊಲೀಸ್ ಉಪ-ನಿರೀಕ್ಷಕರು ಮೊ.ನಂ:9080805445 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Read More