ಸುಳ್ಯ: ಬೈಕ್ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕರೊಬ್ಬರು ಸಾವನಪ್ಪಿದ ಘಟನೆ ಪಾಲಡ್ಕ ಎಂಬಲ್ಲಿ ಸಂಭವಿಸಿದೆ. ಮೃತರನ್ನು ಪದ್ಮನಾಭ ಎಂದು ಗುರುತಿಸಲಾಗಿದ್ದು, ಅವರು ಶಿಕ್ಷಕರಾಗಿದ್ದರು. ಪದ್ಮನಾಭ ಅವರು ಚಲಾಯಿಸುತ್ತಿದ್ದ ಬೈಕ್ ಮತ್ತು ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಅವರನ್ನು ಸುಳ್ಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಬೆಳ್ತಂಗಡಿ: ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬೆಳ್ತಂಗಡಿ ಪೊಲೀಸರು ಗೇರುಕಟ್ಟೆಯಲ್ಲಿ ಬಂಧಿಸಿದ್ದಾರೆ ಆರೋಪಿಗಳನ್ನು ಗೇರುಕಟ್ಟೆ ನಿವಾಸಿ ಉಮರ್ ಫಾರೂಕ್ ಹಾಗೂ ಮುಂಡಾಜೆ ಸೋಮಂತಡ್ಕ ನಿವಾಸಿ ಸತೀಶ್ ಯಾನೆ ಸ್ಥಾರ್ಪಿಯೋ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಗೇರುಕಟ್ಟೆ ಸಮೀಪದ ಓಡುರೊಟ್ಟು ಎಂಬಲ್ಲಿ ಸ್ಕೂಟರ್ ನೊಂದಿಗೆ ಅನುಮಾನಾಸ್ಪದವಾಗಿ ನಿಂತಿರುವುದನ್ನು ನೋಡಿದ ಬೆಳ್ತಂಗಡಿ ಪಿಎಸ್ಸೆ ಚಂದ್ರಶೇಖರ್ ಹಾಗೂ ತಂಡ ತಡೆದು ವಿಚಾರಣೆ ನಡೆಸಿ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿಯಿಂದ 2.65 ಕೆ.ಜಿ. ಗಾಂಜಾ ಪತ್ತೆಯಾಗಿದೆ. ವಶಪಡಿಸಿಕೊಂಡಿರುವ ಗಾಂಜಾದ ಒಟ್ಟು ಮೌಲ್ಯ 51,000 ರೂ. ಎಂದು ಅಂದಾಜಿಸಲಾಗಿದೆ. ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು, ಗಾಂಜಾ ಸಾಗಾಟಕ್ಕೆ ಬಳಸಿದ ಸ್ಕೂಟರ್‌ನ್ನು ವಶಕ್ಕೆ ಪಡೆದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ಬಲೆಗೆ ಸಿಕ್ಕಿಕೊಂಡು ಸಾವನ್ನಪಿದ ಘಟನೆ ಕಾಪುವಿನ ಪೊಲಿಪು ಕಡಲ ಕಿನಾರೆಯಲ್ಲಿ ನಡೆದಿದೆ. ಮೃತಪಟ್ಟವರನ್ನು ಕಾಪು ಪೊಲಿಪು ನಿವಾಸಿ ಕಿಶೋರ್ (29) ಎಂದು ಗುರುತಿಸಲಾಗಿದೆ. ಪ್ರತಿದಿನ ಕಯಾಕ್ ಮೂಲಕ ಏಕಾಂಗಿಯಾಗಿ ಮೀನುಗಾರಿಕೆಗೆ ತೆರಳುತ್ತಿದ್ದ ಕಿಶೋರ್ ಶುಕ್ರವಾರ ಮುಂಜಾನೆ ಕೂಡಾ ತೆರಳಿದ್ದು, ಮೀನುಗಾರಿಕಾ ಬಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸಮುದ್ರದಲ್ಲಿ ತೇಲುತ್ತಿದ್ದ ಕಯಾಕ್ ಅನ್ನು ಗಮನಿಸಿದ ಮತ್ತೊಂದು ಬೋಟಿನವರಿಗೆ ಮೃತದೇಹ ಪತ್ತೆಯಾಗಿದೆ. ನಂತರ ದಡಕ್ಕೆ ಕಯಾಕ್ ಹಾಗು ಮೃತದೇಹವನ್ನು ತಂದಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಪುರಸಭಾ ಸದಸ್ಯ ಕಿರಣ್ ಆಳ್ವ, ವಿಜಯ್ ಕರ್ಕೇರ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಸ್ಥಳೀಯರಾದ ಶಿವಾಜಿ ಸುವರ್ಣ, ಬಾಲಕೃಷ್ಣ ಹಾಗೂ ಕಾಪು ಪೊಲೀಸರು ಭೇಟಿ ನೀಡಿದ್ದಾರೆ.
ಉಳ್ಳಾಲ: ಧಾರುಣ ಘಟನೆಯೊಂದರಲ್ಲಿ ಹೃದಯಾಘಾತದಿಂದ ಪತ್ನಿ ನಿಧನರಾದ ಸುದ್ದಿ ತಿಳಿದ ಕೆಲವೇ ನಿಮಿಷಗಳಲ್ಲಿ ಪತಿ ಕೂಡ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆಯ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ.ಮೃತರನ್ನು ಗ್ರಾಮ ಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಮತ್ತು ಅವರ ಪತಿ ಶೇಷಪ್ಪ ಪೂಜಾರಿ(63) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮೀನಾಕ್ಷಿ ಅವರ ಸ್ಥಿತಿ ಗಂಭಿರವಾಗಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಮರುದಿನ ಸಂಜೆ ಶೇಷಪ್ಪ ಆವರು ಮನೆಗೆ ಆಗಮಿಸಿದ್ದ ಸಂದರ್ಭ ಮೀನಾಕ್ಷಿ ಅವರ ಸಾವಿನ ಸುದ್ಧಿಯನ್ನು ಸಂಬಂಧಿಕರೊಬ್ಬರು ತಿಳಿಸಿದ್ದರು. ಸಂಬಂಧಿಕರು ಪಕ್ಕದ ಅಂಗಡಿಗೆ ತೆರಳಿ ವಾಪಾಸಾದಾಗ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದು, ಪಕ್ಕದ ಅಂಗಡಿಯವರು ಮತ್ತು ಸಂಬಂಧಿಕರು ಕೀಟನಾಶಕವನ್ನು ಎಳೆದು ತೆಗೆದರೂ ಅದಾಗಲೇ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.ಮೀನಾಕ್ಷಿ ತನ್ನ…
ಉಳ್ಳಾಲ : ನೇಣು ಬಿಗಿದು ಆಶ್ರಯ ಕಾಲನಿಯಲ್ಲಿ ನೆಲೆಸಿದ್ದ ಧನರಾಜ್ ಕುಟುಂಬವು ಮನೆ ಪುನರ್ ನಿರ್ಮಾಣದ ಹಿನ್ನೆಲೆಯಲ್ಲಿ ಲಕ್ಷ್ಮೀಗುಡ್ಡೆಯಲ್ಲಿ ನೆಲೆಸಿತ್ತು. ಧನರಾಜ್ ತಂದೆ ರಿಕ್ಷಾ ಚಾಲಕ ಲಿಂಗಪ್ಪ ಪೂಜಾರಿ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಮನನೊಂದು ಧನರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹವನ್ನು ಉಳ್ಳಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು , ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಧನರಾಜ್ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಕುಂಪಲ ಲಕ್ಷ್ಮೀಗುಡ್ಡೆಯಲ್ಲಿ ನಡೆದಿದೆ. ಧನರಾಜ್ ಪೂಜಾರಿ(32) ಆತ್ಮಹತ್ಯೆ ಮಾಡಿಕೊಂಡ ಯುವಕ. ಧನರಾಜ್ ಅವಿವಾಹಿತರಾಗಿದ್ದು, ದೇರಳಕಟ್ಟೆಯ ಯೇನಪೋಯ ಪಾರ್ಕ್ ನಲ್ಲಿ ರಿಕ್ಷಾ ಚಲಾಯಿಸುತ್ತಿದ್ದರು. ಗುರುವಾರ ಸಂಜೆ ತಾಯಿ ಕೆಲಸ ಮುಗಿಸಿ ಮನೆಗೆ ಮರಳಿದಾಗ ಧನರಾಜ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮಂಗಳೂರು: ಮೊಬೈಲ್ ಕಳವುಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ಕೋರ್ಟ್ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಐದು ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. 2023ರ ಜೂನ್ 18ರಂದು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಾಜು ಅರಸು ಮೆಟ್ರಿಕ್ ಬಳಿಕದ ಬಾಲಕಿಯರ ವಸತಿ ನಿಲಯದ ಒಳಗೆ ಮಹೇಶ್ ಪೈ ಎಂಬಾತ ಪ್ರವೇಶಿಸಿ ವಿದ್ಯಾರ್ಥಿನಿಯರ 3 ಮೊಬೈಲ್ ಫೋನ್‌ಗಳನ್ನು ಕಳವು ಮಾಡಿದ್ದ. ಈತನನ್ನು ದಸ್ತಗಿರಿ ಮಾಡಿದ ಪೊಲೀಸರು ನ್ಯಾಯಾಲಯಕ್ಕೆ ಹಾಜಪಡಿಸಿ, ದೋಷರೋಪಣಾ ಪಟ್ಟಿ ಸಲ್ಲಿಸಿತ್ತು. ವಾದ ವಿವಾದವನ್ನು ಆಲಿಸಿದ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಸಿಜಿಎಂ ಕೋರ್ಟ್ ಮಂಗಳೂರು ನ್ಯಾಯಾಲಯ ಆರೋಪಿಗೆ ಮೂರು ವರ್ಷ ಶಿಕ್ಷೆ ಮತ್ತು 5000 ರೂ. ದಂಡ ವಿಧಿಸಿ ಆದೇಶಿಸಿದೆ.
ಕಡಬ: ಬಸ್ಸಿನಿಂದ ಇಳಿಯುತ್ತಿದ್ದ ವೇಳೆ ಚಾಲಕ ಬಸ್ಸು ಚಲಾಯಿಸಿದ ಪರಿಣಾಮ ಮಹಿಳೆಯೋರ್ವರು ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸುಬ್ರಹ್ಮಣ್ಯ ಗ್ರಾಮದ ಬಿಲದ್ವಾರದಲ್ಲಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ಗ್ರಾಮದ ಹೂವಪ್ಪ ಗೌಡರವರ ಪತ್ನಿ ವಸಂತಿ ಎಂ.(42ವ.)ಗಾಯಗೊಂಡವರು. ಇವರು ತನ್ನ ಮಗಳೊಂದಿಗೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರು, ಸುಬ್ರಹ್ಮಣ್ಯ ಬಿಲದ್ವಾರದ ಬಳಿ ಅವರು ಇಳಿಯುತ್ತಿದ್ದಾಗ ನಿರ್ವಾಹಕ ಗಮನಿಸದೇ ಬಸ್ ಚಲಾಯಿಸಲು ಸೂಚನೆ ನೀಡಿದ್ದಾರೆ. ಈ ವೇಳೆ ಬಸ್ ಚಾಲಕ ಮಂಜುನಾಥರವರು ಬಸ್ ಚಲಾಯಿಸಿದ ಪರಿಣಾಮ ವಸಂತಿರವರು ಬಸ್‌ನಿಂದ ಕೆಳಗೆ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳು ವಸಂತಿ ಅವರನ್ನು ಚಿಕಿತ್ಸೆಗಾಗಿ ದೇರಳ ಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಹೂವಪ್ಪ ಅವರು ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 12/2024 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಅಕ್ರಮ ಆಸ್ತಿ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಉನ್ನತ ಹುದ್ದೆಗಳಲ್ಲಿ ಇರುವ ಜನರು ಈ ರೀತಿಯ ಆಸ್ತಿ ಖರೀದಿ ಮಾಡುತ್ತಿರುವ ಕಾರಣ ಪೊಲೀಸ್ ಇಲಾಖೆ ಕೆಲವು ನಿಯಮಗಳನ್ನು ಜಾರಿ ಮಾಡಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ ಅಥವಾ ಚರಾಸ್ತಿಯನ್ನು ಖರೀದಿ ಇಲ್ಲವೇ ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಕೆ ಮಾಡಬೇಕಿರುವ ಡಾಕ್ಯುಮೆಂಟ್ಸ್ ಕುರಿತು, ಪೊಲೀಸ್ ಇಲಾಖೆ ಮಹತ್ವದ ಆದೇಶವನ್ನು ಹೊರ ಹಾಕಿದೆ. ಆದೇಶದಲ್ಲಿ ಹೇಳಿರುವಂತೆ ಮಾಡಬೇಕು ಎಂದು ಪೊಲೀಸ್ ಪ್ರಧಾನ ಕಛೇರಿಯ ಸುತ್ತೋಲೆ ಪ್ರತಿಯನ್ನು ಇದರ ಜೊತೆಗೆ ಲಗತ್ತಿಸಿ ಕಳುಹಿಸಿ ಕೊಡಲಾಗಿದೆ. ಸದರಿ ಸುತ್ತೋಲೆಯಲ್ಲಿ ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಸ್ಥಿರ ಅಥವಾ ಚರಾಸ್ತಿಯನ್ನು ಖರೀದಿಸಲು ಇಲ್ಲವೇ ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಸಬೇಕಾದ ಡಾಕ್ಯುಮೆಂಟ್ಸ್ ಕುರಿತು ವಿವರವಾಗಿ ಹೇಳಲಾಗಿದೆ. ಸದರಿ ಸುತ್ತೋಲೆಯ ಪ್ರತಿಯನ್ನು ಠಾಣೆಯ ಅಥವಾ ಕಛೇರಿಯ ನಾಮಫಲಕದಲ್ಲಿ ಆಳವಡಿಸಿ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ. ಪೊಲೀಸ್…
ಮಂಗಳೂರು: ನಗರದ ವಕೀಲ ಕೆಎಸ್‌ಎನ್ ರಾಜೇಶ್ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮಂಗಳೂರಿನ 3ನೇ ಜೆಎಂಎಫ್‌ಸಿ ನ್ಯಾಯಾಲಯವು ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶಿಸಿದೆ. ಕೆಎಸ್‌ಎನ್ ರಾಜೇಶ್ ತನ್ನ ಕಚೇರಿಯಲ್ಲಿದ್ದ ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸಿಪಿಯಾಗಿದ್ದ ರಂಜಿತ್ ಕುಮಾರ್ ಭಂಡಾರು ಅವರು ಕೆಎಸ್‌ಎನ್ ರಾಜೇಶ್, ಆತ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಬೋಂದೆಲ್ ನಿವಾಸಿ ಅನಂತ್ ಭಟ್, ಬೆಂಗಳೂರು ನಿವಾಸಿ ಆದಿತ್ಯ ಕೆ.ಬಿ. ಮತ್ತು ರಾಜೇಶ್ ಪತ್ನಿ ಶಶಿಕಲಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಒಟ್ಟು 110 ಸಾಕ್ಷಿಗಳನ್ನು ವಿಚಾರಿಸಿ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪಣ ಪಟ್ಟಿಯನ್ನು ಎಸಿಪಿ ದಿನಕರ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೆಎಸ್‌ಎನ್ ರಾಜೇಶ್ ತಮ್ಮ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಗೊಳಿಸುವಂತೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ನಾಗಪ್ರಸನ್ನ ಅವರು ರಿಟ್ ಅರ್ಜಿಯನ್ನು…
ಮಂಗಳೂರು: ಕರ್ನಾಟಕ ಜಾನಪದ ಪರಿಷತ್, ದ.ಕ. ಜಿಲ್ಲಾ ಘಟಕ ಹಾಗೂ ಕದಳಿ ಬೀಚ್ ಟೂರಿಸಂ ಇವರ ಸಹಯೋಗದೊಂದಿಗೆ ಜಾನಪದ ಕಡಲೋತ್ಸವ ಕಾರ್ಯಕ್ರಮ ಪಣಂಬೂರು ಬೀಚ್‍ನಲ್ಲಿ ಮಾರ್ಚ್ 1 ರಿಂದ 3ರ ವರೆಗೆ ನಡೆಯಲಿದೆ. ಮಾರ್ಚ್ 1 ರಂದು ಸಂಜೆ 6.30ಕ್ಕೆ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಹೋಟ್ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಸಭೆಯ ಸ್ಪೀಕರ್ ಯು. ಟಿ. ಖಾದರ್ ಪ್ರದರ್ಶನಗಳನ್ನು ಉದ್ಘಾಟಿಸುವರು. ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.










