ಮಂಗಳೂರು : ಮಂಗಳೂರು ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಹಿಂದೂ ಧರ್ಮಕ್ಕೆ ಅವಹೇಳನ ಆರೋಪದ ಪ್ರಕರಣದಲ್ಲಿ ಎರಡನೇ ದಿನವು ಡಿಡಿಪಿಐ ಕಛೇರಿಯಲ್ಲಿ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿಚಾರಣೆ ಮುಂದುವರೆಸಿದರು. ಈ ಪ್ರಕ್ರಿಯೆಯಲ್ಲಿ ಕೆಲವೊಂದು ಮಾಹಿತಿ, ದಾಖಲೆ, ಪುರಾವೆಗಳನ್ನು ಪಡೆದುಕೊಂಡು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈಗಾಗಲೇ ವಿಚಾರಣಾಧಿಕಾರಿ ಆಕಾಶ್ ಶಂಕರ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪೋಷಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಎಲ್ಲಾರಿಗೂ ಮುಕ್ತವಾದ ಅವಕಾಶ ನೀಡಲಾಗಿದೆ.ಎಲ್ಲರು ಬಂದಿದ್ದಾರೆ ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿದ್ದೇನೆ ಎಂದು ತನಿಖೆ ಬಳಿಕ ಮಾಧ್ಯಮಗಳಿಗೆ ಆಕಾಶ್ ಶಂಕರ್ ಹೇಳಿಕೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಪ್ರಾಥಮಿಕ ವರದಿ, ಪ್ರಾಥಮಿಕ ತನಿಖೆ ನಡೆದಿದೆ. ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮಾಹಿತಿ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಿ ತನಿಖೆ ನಡೆಸಲಾಗಿದೆ.ಇನ್ನೂ ಕೆಲವೊಂದು ಮಾಹಿತಿ ಕಲೆ ಹಾಕಬೇಕಿದ್ದು, ವಿಚಾರಣೆಯನ್ನು ಎರಡು ದಿನದಲ್ಲಿ ಮುಗಿಸಬಹುದು ಎಂದು ಅನಿಸಿದ್ದೇನೆ. ಆದ್ರೆ ಇನ್ನೂ ಕೆಲವು ಮಾಹಿತಿ ಕಲೆ ಹಾಕಬೇಕಿದೆ. ಆ ಬಳಿಕ ಸರ್ಕಾರಕ್ಕೆ…
Author: main-admin
ಕರ್ತವ್ಯನಿರತ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ತಾನು ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಯ ಕ್ಯಾಬಿನ್ ನಲ್ಲೇ ಸರ್ವೀಸ್ ರಿವಾಲ್ವರ್ನಿಂದ ತನ್ನ ತಲೆಗೆ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಶಿಕ್ ನಗರದಲ್ಲಿ ಇಂದು ಬೆಳಗ್ಗೆ ನಡೆದಿದೆ.ಮೃತ ಪೊಲೀಸ್ ಇನ್ಸ್ಪೆಕ್ಟರ್ರನ್ನು ಅಶೋಕ್ ನಾಜನ್ ಎಂದು ಗುರುತಿಸಲಾಗಿದೆ. ಅವರು ನಾಶಿಕ್ ನಗರದ ಅಂಬಾದ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಬಳಿಕ ಕೆಲವೇ ಕ್ಷಣಗಳಲ್ಲಿ ತಲೆಯಲ್ಲಿ ಬುಲೆಟ್ ಗಾಯದೊಂದಿಗೆ ಅವರ ಟೇಬಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಠಾಣೆಯ ಎಲ್ಲಾ ಸಿಬಂದಿ ಕರ್ತವ್ಯಕ್ಕೆ ಹಾಜರಾದ ಕೆಲವೇ ಕ್ಷಣದಲ್ಲಿ ಕ್ಯಾಬಿನ್ ನಿಂದ ಗುಂಡಿನ ಶಬ್ದ ಕೇಳಿಸಿತ್ತು. ಸಿಬಂದಿ ಕ್ಯಾಬಿನ್ ಒಳಗೆ ಹೋಗಿ ನೋಡಿದಾಗ ಇನ್ಸ್ಪೆಕ್ಟರ್ ಅಶೋಕ್ ನಾಜನ್ ಶವವಾಗಿ ಬಿದ್ದಿರುವುದು ಕಂಡು ಬಂತು. ಈ ಘಟನೆ ನಾಶಿಕ್ ನಗರದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಅಪ್ರಾಪ್ತ ಬಾಲಕನೋರ್ವ ಚಲಾಯಿಸುತ್ತಿದ್ದ ಕಾರು ಮಹಿಳೆಯೋರ್ವರಿಗೆ ಢಿಕ್ಕಿ ಹೊಡೆದು, ಮಹಿಳೆ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು ನಗರ ಹೊರವಲಯದ ಮೂಡುಶೆಡ್ಡೆಯಲ್ಲಿ ಈ ಘಟನೆ ನಡೆದಿದೆ. ಮೂಡುಶೆಡ್ಡೆ ನಿವಾಸಿ ಮಮತಾ ಗಾಯಗೊಂಡ ಮಹಿಳೆ ಎಂದು ಗುರುತಿಸಲಾಗಿದೆ.ಮಮತಾ ಅವರು ಪ್ರತಿನಿತ್ಯದಂತೆ ಕೆಲಸಕ್ಕೆ ತೆರಳಲೆಂದು ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ಕಾರು ಅವರಿಗೆ ಢಿಕ್ಕಿ ಹೊಡೆದಿದೆನ್ನಲಾಗಿದೆ. ಅಪಘಾತಕ್ಕೀಡಾದ ಕಾರನ್ನು 9ನೇ ತರಗತಿಯ ಬಾಲಕ ಚಾಲನೆ ಮಾಡುತ್ತಿದ್ದುದಾಗಿ ಮಾಹಿತಿ ಲಭ್ಯವಾಗಿದ್ದು, ನಿರ್ಲಕ್ಷ್ಯತನದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಇನ್ನು ಮಹಿಳೆಗೆ ಢಿಕ್ಕಿಯಾದ ಕಾರು ಸ್ವಲ್ಪ ದೂರ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಉಡುಪಿ: ಉಡುಪಿ ಸಿಟಿ ಆಸ್ಪತ್ರೆಯ ಹತ್ತಿರ ಮತ್ತು ಕಾಡುಬೆಟ್ಟು ಪರಿಸರದಲ್ಲಿ ರಾತ್ರಿ ಹೊತ್ತಿನಲ್ಲಿ ವಿನಾಕಾರಣ ದಾಂಧಲೆ ನಡೆಸುತ್ತ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ, ನಗರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಿಯಾಝ್ ಮತ್ತು 112 ಪೋಲಿಸ್ ತುರ್ತು ಸಾಹಯವಾಣಿಯ ಸಿಬ್ಬಂದಿ ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ. ದಾಂಧಲೇ ಸೃಷ್ಟಿಸಿದ ವ್ಯಕ್ಯಿಯನ್ನು ಒಡಿಶಾ ಮೂಲದ ಸುಶೀಲ್ ಕೂಜೂರ್(35) ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಂತೆ ಕಂಡುಬಂದಿದ್ದು, ದಾಂಧಲೇ ನಡೆಸುವ ಸಂದರ್ಭ ಗಾಯಗೊಂಡಿದ್ದಾನೆ. ಜಿಲ್ಲಾಸ್ಪತ್ರೆಯ ಚಿಕಿತ್ಸೆ ಪಡೆದ ಬಳಿಕ ಆತನನ್ನು ಮಾನಸಿಕ ಚಿಕಿತ್ಸೆಗೆ ಒಳಪಡಿಸಬೇಕಾಗಿದೆ. ರೋಗಿಯ ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಸುಳ್ಯ: ಮನೆಯ ಹಿಂಬದಿ ಗ್ಯಾಸ್ ಒಲೆಗೆ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರನ್ನು ಕಳವುಗೈದು ತಾನು ತಂದ ಖಾಲಿ ಜಾಡಿಯನ್ನು ಅಲ್ಲಿರಿಸಿ ಹೋಗಿರುವ ಘಟನೆ ಸುಳ್ಯದ ಜಯನಗರದಲ್ಲಿ ಫೆ. 18ರ ರಾತ್ರಿ ಬೆಳಕಿಗೆ ಬಂದಿದೆ. ಜಯನಗರ ನಿವಾಸಿ ದಿ| ನೌಶಾದ್ ಅವರ ಮನೆಯ ಹಿಂಬದಿಯಲ್ಲಿ ಗ್ಯಾಸ್ ಒಲೆಗೆ ಅಳವಡಿಸಲಾಗಿದ್ದ ಗ್ಯಾಸ್ ತುಂಬಿದ್ದ ಸಿಲಿಂಡರ್ ಕಳ್ಳತನವಾಗಿದೆ. ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಇದ್ದು ಅವರು ಮನೆಯ ಒಳಗೆ ಇದ್ದಾಗಲೇ ಕಳ್ಳ ಇಂಡೇನ್ ಕಂಪೆನಿಯ ಸಿಲಿಂಡರನ್ನು ಇರಿಸಿ ನೂತನ ಎಚ್‌ಪಿ ಕಂಪೆನಿಯ ಸಿಲಿಂಡರನ್ನು ಹೊತ್ತು ಪರಾರಿಯಾಗಿದ್ದಾನೆ. ರಾತ್ರಿ ಮನೆಯವರು ಗ್ಯಾಸ್ ಸ್ಟವ್ ಉರಿಸುವ ಸಂದರ್ಭ ಒಲೆ ಉರಿಯದ ಕಾರಣ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ
ಮೂಡುಬಿದಿರೆ: ಕೋಲ್ಡ್ ಸ್ಟೋರೇಜ್ ನಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಸಿದ್ಧಕಟ್ಟೆಯ ಸಂಘಬೆಟ್ಟು ನಿವಾಸಿ ಇಸ್ಮಾಯಿಲ್ ಬಂಧಿತ. ಈತ ಮೂಡುಬಿದಿರೆಯ ತಾಜ್ ಕೋಲ್ಡ್ ಸ್ಟೋರೇಜ್ ನಲ್ಲಿ ದನದ ಮಾಂಸವನ್ನು ಶೇಖರಿಸಿಟ್ಟು ಮಾರಾಟ ಮಾಡುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ದಾಳಿ ವೇಳೆ ಕೋಲ್ಡ್ ಸ್ಟೋರೆಜ್ ನಲ್ಲಿ 10 ಕೆ.ಜಿಯಷ್ಟು ದನದ ಮಾಂಸ ದೊರೆತಿದೆ. ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಈ ಹಿಂದೆಯೂ ಇಸ್ಮಾಯಿಲ್ ಮೇಲೆ ಪ್ರಕರಣಗಳು ದಾಖಲಾಗಿವೆ.
ಮಂಗಳೂರು: ನಗರದ ಸೇಂಟ್ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಸೋಮವಾರ ವಿಚಾರಣೆ ಆರಂಭಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ಬೆಳವಣಿಗೆ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಅವರು ಸೋಮವಾರ ಪ್ರಾಥಮಿಕ ಮಾಹಿತಿ ಕಲೆಹಾಕಿದರು. ಇಲಾಖೆಯ ಒಬ್ಬೊಬ್ಬ ಅಧಿಕಾರಿಯನ್ನು ಪ್ರತ್ಯೇಕವಾಗಿ ಕರೆಯಿಸಿಕೊಂಡು ವಿಚಾರಣೆ ನಡೆಸಿದರು. ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಕರಣದ ಸತ್ಯಶೋಧನೆ ಪ್ರಕ್ರಿಯೆಯನ್ನು ಆರಂಭಿಸಿದ್ದೇನೆ. ಬೆಳಿಗ್ಗೆ 10ರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದೇನೆ. ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ. ಈ ಹಂತದಲ್ಲಿ ವಿಚಾರಣೆ ಕುರಿತು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ತನಿಖೆಗೆ ಎಲ್ಲರೂ ಸಂಪೂರ್ಣ ಸಹಕಾರ ಕೊಡಬೇಕು’ ಎಂದರು. ‘ಎರಡು ದಿನಗಳು ಇಲ್ಲೇ ಇದ್ದು, ವಿಚಾರಣೆ ಪೂರ್ಣಗೊಳಿಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿ ವಸ್ತುನಿಷ್ಠ ವರದಿ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.
ಉಡುಪಿ: ಮಲ್ಪೆ ಸಮೀಪದ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನೀರಿಗೆ ಇಳಿದು ಈಜಾಡುತ್ತಿದ್ದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಮೀನುಗಾರಿಕಾ ದೋಣಿಯ ಸಿಬಂದಿ ರಕ್ಷಿಸಿರುವ ಘಟನೆ ನಡೆದಿದೆ.ಬೆಂಗಳೂರು ಮೂಲದವರೆನ್ನಲಾದ ಇಬ್ಬರು ಯುವಕರು ಮತ್ತು ಮೂವರು ಯುವತಿಯರು ಸೇರಿದಂತೆ ಒಟ್ಟು 5 ಮಂದಿ ನೀರಿಗೆ ಇಳಿದಿದ್ದು, ಇಬ್ಬರು ಯುವಕರು ನೀರಿನಲ್ಲಿ ಈಜಲು ಮುಂದಾಗಿದ್ದರು. ಈಜುತ್ತಾ ಮುಂದೆ ಹೋದ ಅವರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು.ಇನ್ನು ಈ ಸಂದರ್ಭದಲ್ಲಿ ಅವರ ಬೊಬ್ಬೆ ಕೇಳಿ ಸ್ಥಳೀಯ ಸೀಬರ್ಡ್ ಮತ್ತು ಡೆಲ್ಟಾ ಬೋಟ್ ಹಾಗೂ ವಾಟರ್ ಸ್ಪೋರ್ಟ್ಸ್ ಬೋಟುಗಳ ಸಿಬಂದಿ ವಿವೇಕ್ ಪುತ್ರನ್, ರಮೇಶ್ ಬಂಗೇರ, ಕೃಷ್ಣ ಅವರು ತಕ್ಷಣ ಧಾವಿಸಿ ಬಂದರು ಬೋಟಿನ ಸಹಾಯದಿಂದ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ.
ಮಾದಕ ಪದಾರ್ಥಗಳ ಸಾಗಾಟಕ್ಕೆ ಆ್ಯಂಬುಲೆನ್ಸ್‌ಗಳ ಬಳಕೆಯಾಗುತ್ತಿರುವ ಅಘಾತಕಾರಿ ಸುದ್ದಿ ಕೇರಳದಲ್ಲಿ ಬಯಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ 4 ಕೆಜಿ ಗಾಂಜಾ ಸಹಿತ ಇಬ್ಬರನ್ನು ಕೊಲ್ಲಂನ ಪತ್ತನಪುರಂ ಪಿಟವೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಾರವೂರು ಮೂಲದ ವಿಷ್ಣು ಹಾಗೂ ಪುನಲೂರಿನ ನಾಸೀರ್ ಬಂಧಿತ ಆರೋಪಿಗಳಾಗಿದ್ದಾರೆ. ಪುನಲೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಇವರು ಸಿಕ್ಕಿಬಿದ್ದಿದ್ದಾರೆ. ಪುನಲೂರು ತಾಲೂಕು ಆಸ್ಪತ್ರೆ ಬಳಿ ಆಂಬ್ಯುಲೆನ್ಸ್ ಓಡುತ್ತಿತ್ತು ಸಮಶಯವಾಗಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿದೆ. ಪಠಾಣಪುರಂ ಪ್ರದೇಶಕ್ಕೆ ಗಾಂಜಾ ವ್ಯಾಪಕವಾಗಿ ಸಾಗಾಟವಾಗುತ್ತಿದೆ ಎಂದು ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಈ ಅಕ್ರಮ ಜಾಲ ಬಯಲಾಗಿದೆ. ತಲಾ 2 ಕೆಜಿಯ ಎರಡು ಪೊಟ್ಟಣಗಳಲ್ಲಿ 4 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಪ್ರಕರಣ ದಾಖಲಾಗಿದೆ.
ಮಂಗಳೂರು: ಅಕ್ರಮವಾಗಿ ಮೀನುಗಾರಿಕೆಯಲ್ಲಿ ನಿರತವಾಗಿದ್ದ ಆರೋಪದಲ್ಲಿ ಕರ್ನಾಟಕಕ್ಕೆ ಸೇರಿದ ಮೂರು ಬೋಟ್‌ಗಳನ್ನು ಕೇರಳ ಕರಾವಳಿ ಪೊಲೀಸರು ವಶಕ್ಕೆ ಪಡೆದು 7.5 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕೇರಳ ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ರಾತ್ರಿ ಸಮಯದಲ್ಲಿ ಅಕ್ರಮವಾಗಿ ಈ ಬೋಟ್‌ಗಳು ಟ್ರಾಲಿಂಗ್ ನಡೆಸಿದ್ದವು. ಕೇರಳ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆಯಂತೆ ಕ್ರಮ ತೆಗೆದು ಕೊಳ್ಳಲಾಗಿದೆ. ಬೋಟ್ ಮಾಲಕರಾದ ಗಣೇಶ್ ಪ್ರಸನ್ನ, ಶ್ರೀರಂಗ ಹಾಗೂ ಏಷ್ಯನ್ ಬ್ಲೂ ಬೋಟ್ ಗಳನ್ನು ಕುಂಬಳೆ ತೀರದಿಂದ 12 ನಾಟಿಕಲ್ ಮೈಲ್ ದೂರದಿಂದ ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಎಂದು ಮೀನುಗಾರಿಕಾ ಇಲಾಖಾ ನಿರ್ದೇಶಕ ಕೆ.ಎ.ಲಬೀಬ್ ತಿಳಿಸಿದ್ದಾರೆ.










