ಉಡುಪಿ: ನೇಜಾರಿನಲ್ಲಿ ನಡೆದ ತಾಯಿ ಮತ್ತು ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ (39) ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಪರಪ್ಪನ ಆಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪ್ರವೀಣ್ ಚೌಗಲೆ ಪರ ಕೆಎಸ್‌ಎನ್ ರಾಜೇಶ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶ ದಿನೇಶ್ ಹೆಗ್ಡೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದಾರೆ. ಅದರಂತೆ ಡಿಸೆಂಬರ್ 20ರಂದು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿ ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ಅವರಿಗೆ ನೋಟೀಸ್ ನೀಡಲಾಗಿದೆ. ನವೆಂಬರ್ 12ರಂದು ನೇಜಾರು ತೃಪ್ತಿ ಲೇಔಟ್‌ನಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಆರೋಪಿ ಪ್ರವೀಣ್ ಚೌಗಲೆಯನ್ನು ಪೊಲೀಸರು ನವೆಂಬರ್ 14ರಂದು ಬಂಧಿಸಿದ್ದರು.
Author: main-admin
ಸುಳ್ಯ: 2022ರ ಜುಲೈ ತಿಂಗಳಿನಲ್ಲಿ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಜಿಲ್ಲಾ ಪದಾಧಿಕಾರಿ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಐವರು ಆರೋಪಿಗಳು ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಎನ್ ಐಎ ಮನವಿ ಮಾಡಿದೆ. ಆರೋಪಿಗಳಾದ ಎಂ.ಡಿ.ಮುಸ್ತಫ, ಮಸೂದ್ ಅಗ್ನಾಡಿ, ಮಸೂದ್ ಕೆ.ಎ, ಮೊಹಮ್ಮದ್ ಶರೀಫ್ ಕೊಡಾಜೆ, ಉಮ್ಮರ್ ಆರ್. ಉಮ್ಮರ್ ಫಾರೂಕ್, ಅಬೂಬಕ್ಕರ್ ಸಿದ್ದಿಕ್ ಈ ಎಲ್ಲಾ ಆರೋಪಿಗಳು ರಾಷ್ಟ್ರೀಯ ತನಿಖಾ ತಂಡದ ವಾಂಟೆಡ್ ಲಿಸ್ಟ್ ಪಟ್ಟಿಯಲ್ಲಿದ್ದಾರೆ. ಒದಗಿಸಿದ ವಾಟ್ಸಾಪ್ (9497715294) ಸಂಖ್ಯೆಯನ್ನು ಸಂಪರ್ಕಿಸುವ ಮೂಲಕ ಈ ಆರೋಪಿಗಳು ಕಂಡುಬಂದಲ್ಲಿ ಅಥಾವ ಅವರ ಇರುವಿಕೆಯ ಕುರಿತಾಗಿ ಮಾಹಿತಿ ಇದ್ದಲ್ಲಿ ನೀಡುವಂತೆ ಸಾರ್ವಜನಿಕರನ್ನು ಎನ್ ಐಎ ವಿನಂತಿಸಿದೆ. ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. 2022ರ ಜು. 26ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಎನ್ ಐಎ ಹಲವರನ್ನು ಬಂಧಿಸಿದ್ದು, ಇನ್ನೂ ಹಲವಾರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ…
ಫೇಸ್ ಬುಕ್ ನಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನೋರ್ವನಿಗೆ ಸುಮಾರು 6.87 ಲಕ್ಷ ರೂಪಾಯಿಗಳನ್ನು ವಂಚಿಸಿದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂ, ಹಾಗೂ ಫೇಸ್ ಬುಕ್ ನಿಂದ ಅತೀ ಹೆಚ್ಚು ಜನ ಪರಿಚಯವಾಗುತ್ತಾರೆ. ಹೆಚ್ಚು ಆತ್ಮೀಯರಾದರೆ ಕೊನೆಗೆ ಮೂರುನಾಮ ಇಟ್ಟು ಹೋಗುತ್ತಾರೆ. ಹಾಗಾಗಿ ಸೋಷಿಯಲ್ ಮೀಡಿಯಾ ಬಳಸುವ ಮುನ್ನ ಎಚ್ಚರಿಕೆ ವಹಿಸಲೇಬೇಕು. ಯಾಕಂದರೆ ಶಿವಮೊಗ್ಗದಲ್ಲಿ ಸೋಷಿಯಲ್ ಮೀಡಿಯಾದಿಂದ ವಂಚನೆಗೊಳಗಾದ ವ್ಯಕ್ತಿ ಹಣ ಕಳೆದುಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ ನಿವಾಸಿ ಭರತ್‌ಕುಮಾರ್ ಎಂಬಾತನ ಜತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ. ಆರೋಪಿ ಸುಜೇಂದ್ರ ಫೇಸ್‌ಬುಕ್‌ನಲ್ಲಿ ಹುಡುಗಿಯ ಹೆಸರಲ್ಲಿ ನಕಲಿ ಖಾತೆ ರಚಿಸಿ ಅದರಲ್ಲಿ ಹುಡುಗಿಯ ಫೋಟೊ ಹಾಕಿ ಹುಡುಗಿಯಂತೆ ವರ್ತಿಸುತ್ತಿದ್ದ. ಆತ ಶರ್ಮಿಳ ಮತ್ತು ದಿವ್ಯ ಎಂಬ ಎರಡು ಹೆಸರಿನಲ್ಲಿ ಕಾತೆ ಕ್ರೀಯೆಟ್…
ಮಲ್ಪೆ: ಬೀಚ್ ಆಸುಪಾಸಿನಲ್ಲಿ ಮಾರಾಟ ಮಾಡುವ ಮೀನಿನ ಆಹಾರ ಖಾದ್ಯಗಳಿಗೆ ಕೃತಕ ಬಣ್ಣ ಹಾಗೂ ರುಚಿ ಬರುವ ರಾಸಾಯನಿಕ ಸೇರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ಪೌರಾಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಲ್ಪೆ ಬೀಚ್ ಬಳಿ ಇರುವ ಹೊಟೇಲ್ ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಮಲ್ಪೆ ಬೀಚ್ ಸುತ್ತಮುತ್ತಲು ಇಪ್ಪತ್ತಕ್ಕೂ ಅಧಿಕ ಮೀನಿನ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸಿ ಇವುಗಳನ್ನು ತಿನ್ನುತ್ತಾರೆ. ರಸ್ತೆಯಂಚಿನಲ್ಲಿ ಮೀನಿನ ಫ್ರೈ, ಮಸಾಲ ಫ್ರೈ, ಚಿಕನ್ ಕಬಾಬ್, ಚೈನಿಸ್ ಆಹಾರಗಳ ಮಾರಾಟ ಮಾಡುವ ಹೋಟೆಲ್‌ಗಳಿವೆ. ಇಲ್ಲಿನ ಹೆಚ್ಚಿನ ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಅತೀಯಾದ ರುಚಿ ಬರುವ ರಾಸಾಯನಿಕ ಬೆರೆಸಿ ತಯಾರು ಮಾಡುತ್ತಾರೆ ಎಂದು ಬಹಳಷ್ಟು ಪ್ರವಾಸಿಗರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ತಕ್ಷಣ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭಾ ಪೌರಾಯುಕ್ತರಿಗೆ…
ಸೆಪ್ಟೆಂಬರ್ 30 ರಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ 30 ವರ್ಷದ ಮಹಿಳೆಯ ಶವ ತುಂಡು ತುಂಡುಗಳಾಗಿ ಪತ್ತೆಯಾಗಿತ್ತು. ಸದ್ಯ ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್‌ಒಜಿ ತಂಡ ಮತ್ತು ಭಲುವಾನಿ ಪೊಲೀಸರು ಆರೋಪಿ ಮುನ್ನಾ ನಿಷಾದ್ನನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದನು. ಗೋರಖ್ಪುರದಲ್ಲಿ ಬಾಡಿಗೆ ಮನೆಯಲ್ಲಿ ಮಹಿಳೆಯೊಂದಿಗೆ ವಾಸಿಸುತ್ತಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಸಮಯದಲ್ಲಿ ಅವಳು ಗರ್ಭಿಣಿಯಾಗಿದ್ದಳು ಎಂದು ಆರೋಪಿ ಹೇಳಿದ್ದಾನೆ. ಆರೋಪಿಯು ಗರ್ಭಪಾತಕ್ಕೆ ಕೇಳಿದಾಗ, ಅವಳು ನಿರಾಕರಿಸಿದಳು. ಇದರಿಂದ ಕೋಪಗೊಂಡ ಆರೋಪಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಭತ್ತದ ಗದ್ದೆಯಲ್ಲಿ ಎಸೆದಿದ್ದಾನೆ. ಪೊಲೀಸ್ ವಿಚಾರಣೆಯಲ್ಲಿ, ಆರೋಪಿ ಮುನ್ನಾ ನಿಷಾದ್ ತಾನು ಬರ್ಹಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಪೆನಾ ಗ್ರಾಮದ ನಿವಾಸಿ ಎಂದು ಹೇಳಿದ್ದಾನೆ. ಖುಷ್ಬೂ ಸಿಂಗ್ ಅದೇ ಗ್ರಾಮದ ನಿವಾಸಿ. ಅವರು 2016 ರಲ್ಲಿ ವ್ಯಕ್ತಿಯೊಂದಿಗೆ ನ್ಯಾಯಾಲಯದಲ್ಲಿ ವಿವಾಹವಾದರು ಮತ್ತು 2022 ರಲ್ಲಿ ವಿಚ್ಛೇದನ ಪಡೆದಿದ್ದಳು.…
ಮಂಗಳೂರು: ನವಮಂಗಳೂರು ಬಂದರಿನಿಂದ ನೆದರ್ಲೆಂಡ್‌ಗೆ ಬಂದರಿಂದ ಶೆಲ್ ಕಂಪೆನಿಯ ವೈಮಾನಿಕ ಇಂಧನ ವನ್ನು ಹೊತ್ತೊಯ್ಯುತ್ತಿದ್ದತೈಲ ಸಾಗಾಟ ಹಡಗಿನ ಮೇಲೆ ಯೆಮೆನ್ ಸಮೀಪ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಗುರಿ ತಪ್ಪಿದ ಪರಿಣಾಮ ಹಡಗಿಗೆ ಯಾವುದೇ ಅಪಾಯವಾಗಿಲ್ಲ ಮತ್ತು ಹಡಗು-ಸಿಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಎಂಆರ್‌ಪಿಎಲ್‌ನಲ್ಲಿ ಉತ್ಪಾದನೆಯಾದ ವೈಮಾನಿಕ ಇಂಧನವನ್ನು ಶೆಲ್ ಕಂಪೆನಿಯು ಖರೀದಿಸಿ ನೆದರ್ಲೆಂಡ್‌ಗೆ ಸಾಗಾಟ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಡಿ. 11ರಂದು ರಾತ್ರಿ ಯೆಮೆನ್‌ನ ಬಂಡುಕೋರರ ಆಡಳಿತವಿರುವ ಬಾಬ್ ಎಲ್-ಮಂಡೆಬ್ ಕೊಲ್ಲಿಯಲ್ಲಿ ಈ ಕ್ಷಿಪಣಿ ದಾಳಿ ನಡೆದಿದೆ. ಮಂಗಳೂರಿನಿಂದ ವಿವಿಧ ಕಂಪೆನಿಗಳ ಸರಕು ತುಂಬಿದ ಹಡಗುಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ ಬಹುತೇಕ ಹಡಗುಗಳು ತಲುಪಲಿರುವ ಕೊನೆಯ ನಿಲ್ದಾಣದ ಬಗ್ಗೆ ಇಲ್ಲಿ ಮಾಹಿತಿ ಇರುವುದಿಲ್ಲ. ಯಾಕೆಂದರೆ ಆ ಹಡಗುಗಳು ವಯಾ ದೇಶ-ವಿದೇಶದ ಇತರ ಬಂದರಿಗೆ ಹೋಗಿ ಅಲ್ಲಿಂದ ಸರಕು ತುಂಬಿಸಿಕೊಂಡು ಇತರ ಕಡೆಗೆ ಹೋಗುತ್ತವೆ. ಹೀಗಾಗಿ ಯೆಮೆನ್ ಸಮೀಪ ಗುರಿ ತಪ್ಪಿದ ಕ್ಷಿಪಣಿ ದಾಳಿಗೆ…
ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಸದ್ದು ಮಾಡಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೆಳ್ಳಗಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ 17ರಂದು ನಸುಕಿನ ಜಾವ 3ಗಂಟೆ ಸುಮಾರಿಗೆ ಸ್ಯಾಟಲೈಟ್ ಫೋನ್ ನಿಂದ ಕರೆ ಹೋಗಿದೆ. ಶೆಳ್ಳಗಿ ಗ್ರಾಮದಿಂದ ಪಾಕಿಸ್ತಾನಕ್ಕೆ ಕರೆ ಹೋಗಿದೆ ಎಂದು ಶಂಕಿಸಲಾಗಿದೆ. ಜಿಪಿಎಸ್ ಲೊಕೇಷನ್ ಆಧಾರದ ಮೇಲೆ ಸ್ಥಳಕ್ಕೆ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೀನಾ ನಿರ್ಮಿತ ಸ್ಯಾಟಲೈಟ್ ಫೋನ್ ನಿಂದ ಪಾಕಿಸ್ತಾನಕ್ಕೆ ಕರೆ ಹೋಗಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಯಾದಗಿರಿಯ ಹೆಡಗಿಮುದ್ರ ಗ್ರಾಮದಿಂದ ಸ್ಯಾಟಲೈಟ್ ಕರೆ ಹೋಗಿತ್ತು. ಈಗ ಮತ್ತೆ ಪಾಕಿಸ್ತಾನಕ್ಕೆ ಕರೆ ಹೋಗಿರುವ ಅನುಮಾನ ವ್ಯಕ್ತವಾಗಿದೆ.
ಉಡುಪಿ : ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ಮೇಲೆ ಟೂರಿಸ್ಟ್ ಬೋಟ್ ಸಿಬ್ಬಂದಿಗಳು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದೀಗ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ಸಂಜೆ ಮಲ್ಲೆ ಬೀಚ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರವಾಸಿಗರನ್ನು ಬೋಟ್ ಸಿಬ್ಬಂದಿ ಪ್ರವಾಸಿಗರ ತಂಡವೊಂದನ್ನು ಅಟ್ಟಾಡಿಸಿ ಹಲ್ಲೆ ನಡೆಸಿದೆ. ಹಲ್ಲೆಕೋರರಿಂದ ತಪ್ಪಿಸಿಕೊಳ್ಳಲು ಪ್ರವಾರಿಗರು ಹರಸಾಹಸಪಟ್ಟಿದ್ದಾರೆ. ಘಟನೆ ದೃಶ್ಯ ಬೀಚ್ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಲಾಟೆ ಯಾಕಾಗಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಪುತ್ತೂರಿನ ನಿವಾಸಿ ಡಿಆರ್ ಡಿಓ ಹೈದರಾಬಾದ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಮನೆಯಲ್ಲಿ ನೇಣಿ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಪುತ್ತೂರಿನ ಕಲ್ಲರ್ಪೆ ನಿವಾಸಿ ಭರತ್ ಕಲ್ಲರ್ಪೆ(24) ಎಂದು ಗುರುತಿಸಲಾಗಿದೆ. ಈತ ಎರಡು ತಿಂಗಳ ಹಿಂದೆಯಷ್ಟೇ ಹೈದರಾಬಾದ್ ನಲ್ಲಿರುವ DRDO ಸಂಸ್ಥೆಗೆ ತಾತ್ಕಾಲಿಕ ನೆಲೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ನಡುವೆ ಕಳೆದ ಒಂದು ವಾರದ ಹಿಂದೆ ಸಂಸ್ಥೆಗೆ ರಾಜೀನಾಮೆ ನೀಡಿ ಊರಿಗೆ ಬಂದಿದ್ದರು, ಆದರೆ ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ. ಈ ನಡುವೆ ನಿನ್ನೆ ರಾತ್ರಿ DRDO ಕಛೇರಿಯಿಂದ ಫೋನ್ ಬಂದಿತ್ತು ಎಂದು ಹೇಳಲಾಗಿದ್ದು, ಮನೆಯ ಸಮೀಪದ ತಮ್ಮ ತೋಟದ ಮರವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಬೆಂಗಳೂರಿನ 14 ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. 2022ರ ಜು. 26ರಂದು ಈತ ಬೇರೆ ಸಂಖ್ಯೆಯ ಆಧಾರ್ ಕಾರ್ಡ್ ಮೂಲಕ ಜಾಮೀನು ಶ್ಯೂರಿಟಿ ನೀಡಿದ್ದ. ಈತನ ದಾಖಲೆ ಪರಿಶೀಲನೆ ನಡೆಸಿದಾಗ ಈತ ವಿವಿಧೆಡೆ ಇದೇ ರೀತಿ 14 ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಜಾಮೀನು ಶ್ಯೂರಿಟಿ ನೀಡಿರುವುದು ಗೊತ್ತಾಗಿದೆ.ಇಷ್ಟು ಮಾತ್ರವಲ್ಲ ಇತ್ತ ಮಂಗಳೂರಿನ ಕಸಬಾ ಬೆಂಗ್ರೆಯ ಮೊಯಿದ್ದೀನ್ ನಾಸೀರ್ (46) ನ. 6ರಂದು ಜಾಮೀನು ಶ್ಯೂರಿಟಿ ನೀಡಿದ್ದು ಈತನ ದಾಖಲೆಗಳ ಪರಿಶೀಲನೆ ವೇಳೆ ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 5 ಮಂದಿಗೆ ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಆರ್ಟಿಸಿ ಬಳಸಿ ಶ್ಯೂರಿಟಿದಾರನಾಗಿದ್ದಾರೆ ಎಂದು ತಿಳಿದು ಬಂದಿದೆ.










