ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಧರೆಗೆ ಗುದ್ದಿ ಪಲ್ಟಿಯಾಗಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಾಮಲ್ ಕಟ್ಟೆ ಎಂಬಲ್ಲಿ ನಡೆದಿದೆ. ಪುತ್ತೂರು ಕೂರ್ನಡ್ಕ ನಿವಾಸಿ ಇಬ್ರಾಹಿಂ ರವರ ಪುತ್ರಿ ಖತೀಜಹನ (20 ವ.) ಮೃತಪಟ್ಟ ವಿದ್ಯಾರ್ಥಿನಿ. ಕಾರಿನಲ್ಲಿದ್ದ ಖತೀಜಹನರ ತಾಯಿ ಸಮೀಮ ಮತ್ತು ಚಾಲಕ ಶಾನ್ ಯಾವುದೇ ಅಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಖತೀಜಹನ ಅವರು ತಾಯಿ ಸಮೀಮಾ ಅವರ ಜೊತೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಅಲರ್ಜಿ ರೋಗಕ್ಕೆ ಚಿಕಿತ್ಸೆ ಪಡೆಯುವ ಹಿನ್ನೆಲೆಯಲ್ಲಿ ವೈದ್ಯರನ್ನು ಬೇಟಿ ಮಾಡಲು ಕಾರಿನಲ್ಲಿ ಪುತ್ತೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುವ ಸಂದರ್ಭದಲ್ಲಿ ರಾಮಲ್ ಕಟ್ಟೆ ತಲುಪಿದಾಗ ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ದ ಕಾರು ರಸ್ತೆ ಬದಿಯ ಗುಡ್ಡಕ್ಕೆ ಗುದ್ದಿ ರಸ್ತೆಗೆ ಪಲ್ಟಿಯಾಗಿದೆ. ಅಪಘಾತದ ತೀವ್ರತೆ ಗೆ ಕಾರಿನ ಬಾಗಿಲು ಕಿತ್ತುಹೋಗಿ ಕಾರಿನ ಒಳಗಿದ್ದ ಖತೀಜಹನ ಹೊರೆಕ್ಕೆಸೆಯಲ್ಟಿಟ್ಟಿದ್ದಾರೆ. ಗಂಭೀರ ಗಾಯಗೊಂಡ…
Author: main-admin
ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದೆ.. ನದಿಗಳು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶ ಗಳು ಜಲಾವೃತ ಗೊಂಡಿದೆ. ಕಡಲ್ಕೊರೆತ ತೀವ್ರ ಗೊಂಡಿದ್ದು, ಉಪ್ಪಳ ಮುಸೋಡಿ, ಕುಂಬಳೆ ಕೊಯಿಪ್ಪಾಡಿ ಮೊದಲಾದೆಡೆ ಹಲವು ಮನೆಗಳು ಅಪಾಯದಲ್ಲಿದ್ದು, ಹತ್ತಕ್ಕೂ ಅಧಿಕ ಮನೆಗಳು ಕುಸಿದಿವೆ. ಪೈವಳಿಕೆ ಸಮೀಪದ ಚಿಪ್ಪಾರ್ ನ ಖಾಸಗಿ ಶಾಲೆಯೊಂದರ ಆವರಣ ಗೋಡೆ ಕುಸಿದು ಬಿದ್ದಿದೆ. ಗುಡ್ಡ ಜರಿದು ಬಿದ್ದಿದೆ. ಯಾವುದೇ ಅಪಾಯ ಉಂಟಾಗಿಲ್ಲ. ಉಪ್ಪಳ ಹೊಳೆಯ ಜೋಡುಕಲ್ಲು ಮಡಂದೂರು – ದೇರಂಬಳ ಸಂಪರ್ಕದ ಕಾಲ್ಸೇತುವೆ ಕುಸಿದು ಬಿದ್ದಿವೆ. ಇದರಿಂದ ಸಂಪರ್ಕ ಕಡಿದಿದೆ. ಮಧು ವಾಹಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ಮಧೂರು ದೇವಸ್ಥಾನದ ಆವರಣ ದೊಳಗೆ ನೀರು ನುಗ್ಗಿದೆ. ಜಿಲ್ಲೆಯ ಎಲ್ಲಾ ನದಿ ಗಳು ಉಕ್ಕಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ . ಹಲವಾರು ಕಂಬಗಳು ಧರಶಾಯಿ ಯಾಗಿದೆ. ಹಲವೆಡೆ ಗುಡ್ಡಗಳು ಜರಿದು ಬಿದ್ದಿರುವುದ ರಿಂದ ರಸ್ತೆ…
ಕಾನ್ಪುರ: ಕಾನ್ಪುರ ದೆಹತ್ ಜಿಲ್ಲೆಯ ಅಕ್ಬರ್‌ಪುರ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ 26 ವರ್ಷದ ಕಾನ್‌ಸ್ಟೆಬಲ್ ಸಾವನ್ನಪ್ಪಿದ್ದು, ಮೂವರು ಪೊಲೀಸರು ಗಾಯಗೊಂಡಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಬಿದ್ದಿದ್ದ ಕುಡುಕನಿಗೆ ಪೊಲೀಸರು ಸಹಾಯ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ. ಈ ಅಪಘಾತದಲ್ಲಿ ಕುಡುಕನ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ ಮೂವರು ಪೊಲೀಸರಲ್ಲಿ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಬ್ ಇನ್ಸ್‌ಪೆಕ್ಟರ್ ಮಥುರಾ ಪ್ರಸಾದ್, ಹೆಡ್ ಕಾನ್ಸ್‌ಟೇಬಲ್ ಅರವಿಂದ್ ಕುಮಾರ್ ಮತ್ತು ಕಾನ್‌ಸ್ಟೆಬಲ್‌ಗಳಾದ ಸೌರಭ್ ಕುಮಾರ್ ಮತ್ತು ವಿವೇಕ್ ಕುಮಾರ್ ಅವರೊಂದಿಗೆ ಗಸ್ತು ತಿರುಗುತ್ತಿದ್ದಾಗ ಮಾದಾಪುರ ಸೇತುವೆಯ ಹೆದ್ದಾರಿಯಲ್ಲಿ ಒಬ್ಬ ಕುಡುಕನನ್ನು ಕಂಡಿದ್ದಾರೆ. ಈ ವೇಳೆ, ಪೊಲೀಸರು ಕಾನ್‌ಸ್ಟೆಬಲ್ ವಿವೇಕ್ ಕುಮಾರ್ ಕುಡುಕನನ್ನು ರಸ್ತೆ ಬದಿಗೆ ಎಳೆಯಲು ಯತ್ನಿಸಿದಾಗ, ವೇಗವಾಗಿ ಬಂದ ಲೋಡರ್-ಟೆಂಪೋ ಅವರಿಗೆ ಡಿಕ್ಕಿ ಹೊಡೆದು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಪುತ್ತೂರು: ಭಾರೀ ಮಳೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಜು.6ರಂದು ಮುಂಜಾನೆ ಮುಳುಗಡೆಯಾಗಿದೆ.ಚೆಲ್ಯಡ್ಕ ಸೇತುವೆ ಮುಳುಗಡೆಗೊಂಡ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ಇನ್ನು ಮುಳುಗು ಸೇತುವೆ ಎಂದು ಪ್ರಖ್ಯಾತಿ ಪಡೆದಿರುವ ಚೆಲ್ಯಡ್ಕ ಸೇತುವೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರಥಮ ಬಾರಿಗೆ ಮುಳುಗಡೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕು ಸುರತ್ಕಲ್ ಹೋಬಳಿ ಕುಳಾಯಿ ಗ್ರಾಮದ ಸಂತೋಷ್ (34 ವರ್ಷ) ಜು.5ರ ಬುಧವಾರ ಬೆಳಿಗ್ಗೆ ಬೈಕಂಪಾಡಿಯಲ್ಲಿರುವ ಸೋಲಾರ್ ಕಂಪೆನಿಗೆ ಮನೆಯಿಂದ ಕೆಲಸಕ್ಕೆ ತೆರಳುವಾಗ ಮರ ಬಿದ್ದು ದಾರಿ ಬಂದ್ ಆದ ಕಾರಣ ಕಂಪೌಂಡ್ ಹಾರಲು ಯತ್ನಿಸಿದಾಗ ಮರದೊಂದಿಗೆ ಬಿದ್ದ ವಿದ್ಯುತ್ ದೀಪದ ತಂತಿ ತಗುಲಿ ಮರಣ ಹೊಂದಿರುತ್ತಾರೆ.ಈ ಬಗ್ಗೆ ಮಂಗಳೂರು ತಹಶೀಲ್ದಾರರು ವರದಿ ಸಲ್ಲಿಸಿರುತ್ತಾರೆ. ಮೃತರ ವಾರಸುದಾರರಿಗೆ ಮೆಸ್ಕಾಂ ಇಲಾಖಾ ವತಿಯಿಂದ 5 ಲಕ್ಷ ರೂ.ಗಳ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನೊಂದು ಘಟನೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದ್ದ ತನ್ನ ಮನೆ ಸಂಪರ್ಕದ ಮೋರಿಯನ್ನು ದಾಟುವ ವೇಳೆ ಆಯತಪ್ಪಿ ಮೋರಿಯೊಳಗೆ ಬಿದ್ದು ಮೃತಪಟ್ಟಿದ್ದ ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಸುರೇಶ್ ಗಟ್ಟಿ (53 ವರ್ಷ) ಅವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಜು.5ರ ಬುಧವಾರ 5 ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ. ಜು.4 ರಂದು…
ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ಪಾವತಿಸಲು ಸರ್ಕಾರ ಮತ್ತೆ ಶೇ.50 ರಿಯಾಯಿತಿ ಘೋಷಿಸಿದೆ. ಸೆಪ್ಟೆಂಬರ್ 9ರವರೆಗೆ ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶವಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಈ ಹಿಂದೆ ರಿಯಾಯಿತಿ ನೀಡಿದ್ದಾಗ ಭಾರೀ ಮೊತ್ತದ ದಂಡ ಸಂಗ್ರಹವಾಗಿತ್ತು. ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಶೇ 50ರ ರಿಯಾಯಿತಿಯೊಂದಿಗೆ ದಂಡ ಪಾವತಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2023ರ ಫೆಬ್ರವರಿ 11ರ ಒಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಂಡದ ಮೊತ್ತದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡಲು ಈಗಿನ ಸರ್ಕಾರವೂ ಮುಂದಾಗಿದೆ.
ಕಾಸರಗೋಡು: ದಾಖಲೆಗಳಿಲ್ಲದೆ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 41,78,000 ರೂ. ವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿ ಕೊಂಡಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾವರದ ಪ್ರಕಾಶ್ ವಿನಾಯಕ ಶೆಟ್ಟಿ (45) ಎಂಬಾತನನ್ನು ವಶಕ್ಕೆ ತೆಗೆದು ಕೊಳ್ಳಲಾಗಿದೆ. ಈತನ ಬಳಿ ಇದ್ದ ಬ್ಯಾಗ್ ನಲ್ಲಿ ಹಣವನ್ನು ಸಾಗಿಸುತ್ತಿದ್ದನು. ಹೆಚ್ಚಿನ ವಿಚಾರಣೆಗಾಗಿ ನಗದು ಹಾಗೂ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ
ಮೀರತ್ : ಟೀಂ ಇಂಡಿಯಾ ಕ್ರಿಕೆಟರ್ ರಿಷಭ್ ಪಂತ್ ಕಾರು ಅಪಘಾತದ ಬಳಿಕ ಮತ್ತೊಬ್ಬ ಟೀಂ ಇಂಡಿಯಾದ ಮಾಜಿ ಆಟಗಾರ ಪ್ರವೀಣ್ ಕುಮಾರ್ ಅವರ ಕಾರು ಅಪಘಾತವಾಗಿದೆ. ಮಂಗಳವಾರ ರಾತ್ರಿ ಭಾರತದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಕೂಡ ಮೀರತ್ ನಲ್ಲಿ ಅಪಘಾತಕ್ಕೀಡಾಗಿದ್ದರು. ಮೀರತ್ನ ಕಮಿಷನರ್ ನಿವಾಸದ ಬಳಿ ವೇಗವಾಗಿ ಬಂದ ಕ್ಯಾಂಟರ್ ಮಾಜಿ ವೇಗಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿ ಕ್ಯಾಂಟರ್ ಚಾಲಕನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಪಾಂಡವ ನಗರದಿಂದ ಲ್ಯಾಂಡ್ ರೋವರ್ ಡಿಫೆಂಡರ್ ವಾಹನದಲ್ಲಿ ಹಿಂದಿರುಗುತ್ತಿದ್ದಾಗ ಕಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಈ ವೇಳೆ ಆರೋಪಿ ಚಾಲಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕ್ಯಾಂಟರ್ ಚಾಲಕನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ನಗರ ಎಸ್ಪಿ ಪಿಯೂಷ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ: ಕಾರು ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರು ನಿವಾಸಿಯೋರ್ವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಹೆದ್ದಾರಿಯ ಸಕ್ರೆಬೈಲು ಸಮೀಪ ನಡೆದಿದೆ ಮಂಗಳೂರು ಕುಪ್ಪೆಪದವು ಕಲ್ಲಾಡಿ ನಿವಾಸಿ ಅಶ್ರಫ್ ಮೃತರು. ಗಾಯಾಳುಗಳು ಕೂಡ ಅದೇ ಗ್ರಾಮದವರು ಎಂದು ಹೇಳಲಾಗಿದೆ. ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದಾಗ ತೀರ್ಥಹಳ್ಳಿಯಿಂದ ಬಂದ ಬಸ್ ಅಪಘಾತ ನಡೆದಿದೆ. ಮೃತ ಅಶ್ರಫ್ ಜಮಾಅತೆ ಇಸ್ಲಾಮಿ ಹಿಂದ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.
ಕಾರ್ಕಳ : ಈ ವರ್ಷ ಪ್ರತಿಭಾ ಕಾರಂಜಿ ದೊಡ್ಡ ಮಟ್ಟದಲ್ಲಿ ನಡೆಸಲು ಸಿದ್ಧತೆಗಳಾಗುತ್ತಿದ್ದು, ಶಿಕ್ಷಣ ಇಲಾಖೆಯು ಜೂ. 19ರಂದು ಸುತ್ತೋಲೆ ಹೊರಡಿಸಿ ಈ ವರ್ಷದ ಪ್ರತಿಭಾ ಕಾರಂಜಿಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಸುತ್ತೋಲೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಭೂತದ ಕೋಲಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಜುಲೈ ತಿಂಗಳಲ್ಲಿ ಶಾಲಾ ಮಟ್ಟ, ಆಗಸ್ಟ್ ತಿಂಗಳಲ್ಲಿ ಕ್ಲಸ್ಟರ್ ಮಟ್ಟ, ಮುಂದೆ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿಯೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಜಾನಪದ ನೃತ್ಯವು ಸಮೂಹ ವಿಭಾಗವಾಗಿದ್ದು ಅದರಲ್ಲಿ ಬುಡಕಟ್ಟು, ಜಾನಪದ, ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಹೇಳಿ ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ ಅದೇ ಸುತ್ತೋಲೆಯಲ್ಲಿ ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿ ಉದಾಹರಣೆಗಳನ್ನು ನೀಡಲಾಗಿದೆ. ಕೊನೆಯಲ್ಲಿ ಭೂತದ ಕೋಲ (ಭೂತದ ಕೋಲು ಎಂದು ಆದೇಶದಲ್ಲಿದೆ ?) ಕ್ಕೆ…










