Author: main-admin

ಮೈಸೂರು: ಜಿಲ್ಲೆಯ ಬಳ್ಳೆ ಆನೆ ಶಿಬರದಲ್ಲಿದ್ದಂತ ಸತತ 8 ಬಾರಿ ಮೈಸೂರಿನ ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದಂತ ಅರ್ಜುನ (64) ಆನೆ ಒಂಟಿ ಸಲಗದ ದಾಳಿಯಿಂದ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನ ಕಾಕನಕೋಟೆಯಲ್ಲಿ 1968ರಲ್ಲಿ ಖೆಡ್ಡಾಗೆ ಅರ್ಜುನ(64) ಅರಣ್ಯ ಇಲಾಖೆಯ ಸಿಬ್ಬಂದಿಗಳು ಕೆಡವಿ ಸೆರೆ ಹಿಡಿದಿದ್ದರು. ಅದನ್ನ ಪಳಗಿಸಿದ ನಂತ್ರ, ಬಳ್ಳೆ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಇಂತಹ ಅರ್ಜುನ ಆನೆ ಸತತ 8 ಬಾರಿ ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತು ಬೇಷ್ ಎನಿಸಿಕೊಂಡಿತ್ತು. ಇದೀಗ ಈ ಅರ್ಜುನ ಆನೆ ಒಂಟಿ ಸಲಗದ ದಾಳಿಯಿಂದ ಸಾಕಾನೆ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ. ಒಟ್ಟಾರೆಯಾಗಿ ಸತತ 8 ಬಾರಿ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ತನ್ನ ಗಾಂಭೀರ್ಯವನ್ನು ಮೆರೆದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಂತ ಅರ್ಜು, ಇದೀಗ ಬಳ್ಳೆ ಆನೆ ಶಿಬಿರದಲ್ಲಿ ಒಂಟಿ ಸಲಗದ ದಾಳಿಗೆ ಒಳಗಾಗಿ ಸಾವನ್ನಪ್ಪಿದೆ. ಈ ಮೂಲಕ ಅರ್ಜುನ ಇನ್ನಿಲ್ಲವಾಗಿದ್ದಾನೆ.

Read More

ತೆಲಂಗಾಣದ ಮೇದಕ್ ಜಿಲ್ಲೆಯ ತೂಪ್ರಾನ್ ಪಟ್ಟಣದಲ್ಲಿ ಇಂದು ಬೆಳಗ್ಗೆ ಪಿಲಾಟಸ್ ಟ್ರೈನರ್ ವಿಮಾನ ಪತನಗೊಂಡಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಇಬ್ಬರು ಪೈಲಟ್‌ಗಳು ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ದಿಂಡಿಗಲ್ ಜಿಲ್ಲೆಯ ಬಳಿಯ ಏರ್ ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಸಮಯದಲ್ಲಿ ಬೆಳಿಗ್ಗೆ 8:55 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೈಲಟ್‌ಗಳಲ್ಲಿ ಒಬ್ಬ ಬೋಧಕ ಮತ್ತು ಒಬ್ಬ ಕೆಡೆಟ್ ಸೇರಿದ್ದಾರೆ. ತೂಪ್ರಾನ್ ಬಳಿ ವಿಮಾನ ಪತನಗೊಂಡಿದೆ ಎಂದು ಮೆದಕ್ ಎಸ್ಪಿ ರೋಹಿಣಿ ತಿಳಿಸಿದ್ದಾರೆ. ಇದು ದುಂಡಿಗಲ್ ವಿಮಾನನಿಲ್ದಾಣದಿಂದ ಬಂದ ತರಬೇತಿ ವಿಮಾನವಾಗಿದೆ. ವಿಮಾನದೊಳಗೆ ಇಬ್ಬರು ಜನರಿದ್ದರು, ಒಬ್ಬ ತರಬೇತುದಾರ ಮತ್ತು ಒಬ್ಬ ಟ್ರೇನಿ. ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಸುಳಿವು ತಂಡ ಸ್ಥಳದಲ್ಲಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ” ಎಂದು ಎಸ್ಪಿ ರೋಹಿಣಿ ಹೇಳಿದರು.

Read More

ಉಳ್ಳಾಲ : ದ್ವಿಚಕ್ರ ವಾಹನ ಕಳ್ಳನನ್ನು ಕೊಣಾಜೆ ಪೊಲೀಸರು ಅರೆಸ್ಟ್ ಮಾಡಿದ್ದು, ಆರೋಪಿಯಿಂದ ಮೂರು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಉಳ್ಳಾಲ ತಾಲೂಕಿನ ನಿತ್ಯಾನಂದ ನಗರ ಬೆಳ್ಮ ಕನಕೂರು ಸೈಟ್‌ ನಿವಾಸಿ ಹುಸೈನ್ ಜಾಹೀದ್ (24) ಎಂದು ಗುರುತಿಸಲಾಗಿದೆ. ಆರೋಪಿ ಅಕ್ಟೋಬರ್ 22 ರಂದು ಅಂಬ್ಲಮೊಗರು ಗ್ರಾಮದ ತಿಲಕನಗರ ಎಂಬಲ್ಲಿನ ಐಸಮ್ಮ ಎಂಬವರ ಹೋಂಡಾ ಡೀಯೋ ಮತ್ತು ನವೆಂಬರ್ 16 ರಂದು ದೇರಳಕಟ್ಟೆಯ ಗ್ರೀನ್ ಗ್ರೌಂಡ್ ಬಳಿ ಗುಲಾಮ್ ಹುಸೇನ್ ಎಂಬವರು ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ವಾಹನ ಕಳುವು ಮಾಡಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆಯನ್ನು ಕೈಗೆತ್ತಿಕೊಂಡಿದ್ದ ಕೊಣಾಜೆ ಠಾಣೆಯ ಪಿ.ಎಸ್.ಐ ಅಶೋಕ್‌ ಮತ್ತು ಸಿಬಂದಿ ಈ ಎರಡೂ ಪ್ರಕರಣಗಳ ಆರೋಪಿ ಹುಸೇನ್ ಜಾಹೀದ್ ನನ್ನು ಡಿಸೆಂಬರ್ 1 ರಂದು ಬಂಧಿಸಿ ಅಂಬ್ಲಮೊಗರು ಹಾಗೂ ದೇರಳಕಟ್ಟೆಯಲ್ಲಿ ಕಳ್ಳತನ ಮಾಡಿದ್ದ ಎರಡು ದ್ವಿಚಕ್ರ ವಾಹನಗಳನ್ನು ಹಾಗೂ ನಂಬರ್‌ ಪ್ಲೇಟ್ ಇಲ್ಲದ ಇನ್ನೊಂದು ಕೆಂಪು…

Read More

ಪುತ್ತೂರು : ಪುತ್ತೂರಿನಲ್ಲಿ ಗ್ರಾಮ ಪಂಚಾಯತ್‌ ಸದಸ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಡನ್ನೂರು ಗ್ರಾಮದ ಕಾವು ಬಂಗ್ಲೆಗುಡ್ಡೆ ನಿವಾಸಿ, ಅರಿಯಡ್ಕ ಗ್ರಾಮ ಪಂಚಾಯತ್‌ನ ಕಾಂಗ್ರೆಸ್‌ ಬೆಂಬಲಿತ ಸದಸ್ಯ ಶಂಕರ ಮಾಡನ್ನೂರು ಆತ್ಮಹತ್ಯೆಗೆ ಶರಣಾದವರು. ಶಂಕರ 5 ವರ್ಷಗಳ ಹಿಂದೆ ದೋಳಂತೋಡಿಯಲ್ಲಿ ಜಾಗ ಖರೀದಿಸಲು ಸೊಸೈಟಿ ಹಾಗೂ ಬೇರೆ ಬೇರೆ ಸಂಘಗಳಲ್ಲಿ ಸಾಲ ಮಾಡಿಕೊಂಡಿದ್ದರು. ಈ ಕಾರಣದಿಂದ ಸಾಲಬಾಧೆಯಿಂದ ನೊಂದು, ಮನೆಯಲ್ಲೇ ಡೆತ್‌ ನೋಟ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ವನಿತಾ ಅವರ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Read More

ಚಿಕ್ಕಮಗಳೂರು : ಕರ್ತವ್ಯನಿರತ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಹೆಸಗೊಡ್ ಗ್ರಾಮದ ಬಳಿ ನಡೆದಿದೆ. ಕೊಪ್ಪಳದ ಕೂಕ್ನೂರ್ ಗ್ರಾಮದ ನಿವಾಸಿ, ಚಾಲಕ ರವಿ ಲಮಾಣಿ (46) ಮೃತಪಟ್ಟ ಚಾಲಕ. ಮೂಡಿಗೆರೆ, ಗುತ್ತಿಹಳ್ಳಿ, ಹೆಸ್ಗೋಡ್ ಗ್ರಾಮಕ್ಕೆ ಹೋಗುವ ದಾರಿ ಮಧ್ಯೆ ಈ ಘಟನೆ ನಡೆದಿದ್ದು, ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತೀವ್ರ ಎದೆ ನೋವಿನಿಂದ ಚಾಲಕ ರಸ್ತೆ ಮಧ್ಯೆ ಬಸ್ ನಿಲ್ಲಿಸಿದ. ಈ ವೇಳೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಚಾಲಕ ರವಿ ಲಮಾಣಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಮಂಗಳೂರು: ಚೀನಾದಲ್ಲಿ ನ್ಯೂಮೋನಿಯಾ ವೈರಸ್‌ ಬಾಧೆ ಉಲ್ಭಣಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಆರೋಗ್ಯ ಸಿಬ್ಬಂದಿ ಉಸಿರಾಟ ತೊಂದರೆ ಅನುಭವಿಸುತ್ತಿರುವ ರೋಗಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ತಯಾರಿ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಅದೃಷ್ಟವಶಾತ್‌ ಸರಾಸರಿಗಿಂತ ಹೆಚ್ಚಿನ ಜ್ವರದ ಕೇಸ್‌ ಬರುತ್ತಿಲ್ಲ. ಆದ್ದರಿಂದ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುವ ಅಗತ್ಯ ಸದ್ಯಕ್ಕೆ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಕೊರೊನಕ್ಕೆ ಅನುಸರಿಸಿದ ಪ್ರಾಥಮಿಕ ಜಾಗೃತಿ ಪಾಲಿಸುವಂತೆ ಜನರಿಗೆ ಸೂಚನೆ ನೀಡಲಾಗುತ್ತಿದೆ.

Read More

ಬೆಳ್ತಂಗಡಿ: ನಿಡ್ಲೆ ಗ್ರಾಮದ ಬೂಡುಜಾಲು ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಗೂಡಂಗಡಿಯನ್ನು ಕಿಡಿಗೇಡಿ ಗಳು ರಾತ್ರಿ ವೇಳೆ ಧ್ವಂಸಗೊಳಿಸಿದ ಘಟನೆ ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಕೊಕ್ಕಡ ಗ್ರಾಮದ ಮಲ್ಲಿಗೆ ಮಜಲು ನಿವಾಸಿ ಅಬ್ದುಲ್‌ ಅಜೀಜ್‌ ಅವರು ಕಳೆದ ಮೂರು ವರ್ಷಗಳಿಂದ ರಾಜ್ಯ ಹೆದ್ದಾರಿಯ ಬದಿಯಲ್ಲಿ ಗೂಡಂಗಡಿ ಇರಿಸಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ರಾತ್ರಿಯ ವೇಳೆ ಎಂದಿನಂತೆ ಅಂಗಡಿಯನ್ನು ಮುಚ್ಚಿ ಹೋಗಿದ್ದ ಅಬ್ದುಲ್‌ ಅಜೀಜ್‌ ಶನಿವಾರ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯನ್ನು ಧ್ವಂಸಗೊಳಿಸಿರು ವುದು ಕಂಡು ಬಂದಿದೆ. ಅಂಗಡಿಯಲ್ಲಿದ್ದ ವಸ್ತುಗಳೆಲ್ಲವನ್ನು ಹೊರಗೆಳೆದು ನಾಶಗೊಳಿಸಲಾಗಿದೆ. ತಂಪು ಪಾನೀಯಗಳ ಬಾಟ್ಲಿಗಳನ್ನು ಒಡೆದು ಹಾಕಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.

Read More

ಮಂಗಳೂರು: ಬಾಣಂತಿಯೊಬ್ಬಳು ನಾಲ್ಕುವರೆ ತಿಂಗಳ ಗಂಡು ಶಿಶುವನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಗುಜ್ಜರಕೆರೆ ಲೇಕ್ ವ್ಯೂ ಅಪಾರ್ಟ್ಮೆಂಟ್ ಫ್ಲ್ಯಾಟ್ ನಲ್ಲಿ ನಡೆದಿದೆ. ಫಾತಿಮಾ ರುಕಿಯಾ (23) ಹಾಗೂ ನಾಲ್ಕುವರೆ ತಿಂಗಳ ಶಿಶು ಅಬ್ದುಲ್ಲಾ ಹೂದ್ ಮೃತಪಟ್ಟವರು. ಫಾತಿಮಾ ರುಕಿಯಾರಿಗೆ ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬುವರೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಅಬ್ದುಲ್ಲಾ ಹೂದ್ ಎಂಬ ನಾಲ್ಕುವರೆ ತಿಂಗಳ ಗಂಡು ಶಿಶು ಇದೆ. ಫಾತಿಮಾ ರುಕಿಯಾ ಹೆರಿಗೆಯ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅಲ್ಲದೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದರು. ಆದ್ದರಿಂದ ಫಾತಿಮಾ ರುಕಿಯಾರಿಗೆ ಮಾನಸಿಕ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದರು. ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಫಾತಿಮಾ ರುಕಿಯಾ ಈ ಕೃತ್ಯ ಎಸಗಿದ್ದಾರೆ. ಅವರು ಫ್ಲ್ಯಾಟ್ ನ ಬೆಡ್ ರೂಮ್ ಗ್ಯಾಲರಿಯಲ್ಲಿ ತಮ್ಮ ನಾಲ್ಕುವರೆ ತಿಂಗಳ ಶಿಶುವನ್ನು ಪ್ಲಾಸ್ಟಿಕ್ ಟಬ್ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ…

Read More

ಚೆನ್ನೈನ ಹೋಟೆಲ್‌ ವೊಂದರಲ್ಲಿ 20 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಗೆಳೆಯ ಕೊಂದಿದ್ದಾನೆ. ನಂತರ ಮೃತದೇಹದ ಚಿತ್ರವನ್ನು ತನ್ನ ವಾಟ್ಸಾಪ್ ಕಥೆಯನ್ನಾಗಿ ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆಶಿಕ್ ಎಂದು ಗುರುತಿಸಲಾದ ಆರೋಪಿಯ ವಾಟ್ಸಾಪ್ ಸ್ಟೇಟಸ್ ಅನ್ನು ಸಂತ್ರಸ್ತೆಯ ಸ್ನೇಹಿತರು ಗಮನಿಸಿದ ನಂತರ ಕೊಲೆ ಬೆಳಕಿಗೆ ಬಂದಿದೆ. ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅಧಿಕಾರಿಗಳು ಇಬ್ಬರೂ ತಂಗಿದ್ದ ಹೋಟೆಲ್ ಕೋಣೆಯಲ್ಲಿ ಆಕೆ ಶವವನ್ನು ಕಂಡುಕೊಂಡಿದ್ದಾರೆ. ಯುವತಿ ಎರಡನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದು, ಐದು ವರ್ಷಗಳಿಂದ ಆರೋಪಿಯೊಂದಿಗೆ ಸಂಬಂಧ ಹೊಂದಿದ್ದಳು. ಇತ್ತೀಚೆಗಷ್ಟೇ ನಗರದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ಒಟ್ಟಿಗೆ ವಾಸವಾಗಿದ್ದರು. ಸಂತ್ರಸ್ತೆ ಮೂರು ದಿನ ಕಾಲೇಜ್ ತರಗತಿಗಳನ್ನು ತಪ್ಪಿಸಿಕೊಂಡಾಗ, ಆಕೆಯ ಸ್ನೇಹಿತರು ಆಕೆಯ ಬಗ್ಗೆ ವಿಚಾರಿಸಿದರು. ಆಕೆಯ ಗೆಳೆಯ ಆಶಿಕ್ ಚೆನ್ನೈಗೆ ಬಂದಿದ್ದು, ಹೋಟೆಲ್ ರೂಮ್ ಬುಕ್ ಮಾಡಿ ಅವಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಗೊತ್ತಾಗಿದೆ.. ಆದರೆ, ಆಶಿಕ್‌ ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಮಹಿಳೆಯ ನಿರ್ಜೀವ ದೇಹದ ಚಿತ್ರವನ್ನು…

Read More

ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಎರಡು ದಿನಗಳ ಜಾಮೀನು ದೊರೆತಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಇಬ್ರಾಹಿಂ ಶಾ ನಾವೂರು ನನ್ನು 15ನೇ ಆರೋಪಿಯಾಗಿ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಸುಳ್ಯದಲ್ಲಿ ಈತನ ತಂಗಿಯ ಮದುವೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಜಾಮೀನು ದೊರೆತಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ ಈತ ಮೈಸೂರಿನ ಜೈಲಿನಲ್ಲಿದ್ದು ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲು ಸೇರಬೇಕಿದೆ. 2022 ಜುಲೈ 26ರಂದು ಬೆಳ್ಳಾರೆಯಲ್ಲಿ ತನ್ನ ಚಿಕನ್ ಶಾಪ್ ಎದುರೇ ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರ್ ಮೇಲೆ ಎರಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್ ಐಎ (ರಾಷ್ಟ್ರೀಯ ತನಿಖಾ ದಳ) ಹಲವರನ್ನು ಬಂಧಿಸಿತ್ತು. ಈಗಲೂ ಕೆಲವು ಆರೋಪಿಗಳಿಗಾಗಿ ಎನ್ ಐಎ ಶೋಧ ನಡೆಸುತ್ತಿದೆ.

Read More