Author: main-admin

ಮಂಗಳೂರು: ಯುವಕನನ್ನು ಹೊಡೆದು ಸಾಯಿಸಿದ ಅಪರಾಧಿಗಳಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮಂಗಳೂರಿನ ಬಡಗ ಎಡಪದವು ನಿವಾಸಿಗಳಾದ ರಮೇಶ್ ಶೆಟ್ಟಿಗಾರ್(41) ಹಾಗೂ ನಿತ್ಯಾನಂದ (41) ಶಿಕ್ಷೆಗೊಳಗಾದ ಅಪರಾಧಿಗಳು. ನ್ಯಾಯಾಧೀಶ ಕಾಂತರಾಜು ಎಸ್.ವಿ.ಯವರು ಜೀವಾವಧಿ ಶಿಕ್ಷೆ ವಿಧಿಸಿದ ತೀರ್ಪು ನೀಡಿದ್ದಾರೆ. ಹಣದ ವ್ಯವಹಾರ ಮತ್ತು ರಮೇಶ ಶೆಟ್ಟಿಗಾರ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾನೆಂಬ ದ್ವೇಷದಿಂದ ಆರೋಪಿಗಳು 2019ರ ಮೇ 17ರ ರಾತ್ರಿ 11.50ಕ್ಕೆ ಬಡಗ ಎಡಪದವು ಗ್ರಾಮದ ದೂಮಚಡವು ದಡ್ಡಿ ಕ್ರಾಸ್ ಎಂಬಲ್ಲಿ ಬಡಗ ಎಡಪದವು ನಿವಾಸಿ ನವೀನ (28)‌ ಎಂಬವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು.ಬಳಿಕ ತಮ್ಮ ಬಟ್ಟೆ ಬರೆಗಳನ್ನು ಕಾಡಿನಲ್ಲಿ ಸುಟ್ಟು ಸಾಕ್ಷ್ಯ ನಾಶ ಮಾಡಿದ್ದರು. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸ್ ನಿರೀಕ್ಷಕ ಕೆ.ಆರ್.ನಾಯ್ಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ಐಪಿಸಿ ಕಲಂ 302ರಡಿ…

Read More

ಮಂಗಳೂರು: ವಸತಿ ಸಂಕೀರ್ಣವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ  ಶುಕ್ರವಾರ ಬಾವುಟಗುಡ್ಡೆಯಲ್ಲಿ ನಡೆದಿದೆ.ಇಲ್ಲಿನ 21 ಅಂತಸ್ತುಗಳ ಈ ವಸತಿ ಸಂಕೀರ್ಣದ ಲಿಫ್ಟ್‌ನ ಡೆಕ್ ವಯರಿಂಗ್ ಸ್ಥಳದಲ್ಲಿ ಸಂಜೆ ಸುಮಾರು 6:30ರ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ದಟ್ಟ ಹೊಗೆ ಆವರಿಸಿದೆ. ಆಗ ಕೆಲವರು ವಸತಿ ಸಂಕೀರ್ಣದಿಂದ ಹೊರಗೆ ಬಂದಿದ್ದಾರೆ. ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿ, ಸಿಬ್ಬಂದಿ ವರ್ಗವು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಉಸಿರಾಟದ ಸಮಸ್ಯೆಯಿಂದ ಕೆಲವರು ಬಳಲಿದ್ದು, ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಎನ್ನಲಾಗಿದೆ.

Read More

ಮಂಗಳೂರು: ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಇಂದು(ಜು.1) ಬೆಳಗ್ಗೆ 10ರಿಂದ 11ರವರೆಗೆ ಫೋನ್ ಇನ್ ಕಾರ್ಯಕ್ರಮ ನಡೆಯಲಿದೆ. ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ಫೋನ್-ಇನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಾರ್ವಜನಿಕರ ಕರೆಗೆ ಪ್ರತಿಕ್ರಿಯಸಲಿದ್ದಾರೆ. ಸಾರ್ವಜನಿಕರು 0824-2220801/2220830 ಸಂಖ್ಯೆಗೆ ಕರೆ ಮಾಡಿ ಸಲಹೆ-ಸೂಚನೆ, ದೂರು ನೀಡಬಹುದಾಗಿದೆ ಎಂದು ಕಮಿಷನರ್ ಕಚೇರಿಯ ಪ್ರಕಟನೆ ತಿಳಿಸಿದೆ.

Read More

ಡಿಶ್ ರಿಪೇರಿ ಮಾಡುತ್ತಿದ್ಧ ವೇಳೆ ವಸತಿ ನಿಲಯದ ಮೂರನೇ ಮಹಡಿ ಮೇಲಿನಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೈಕಂಬ ಎಂಬಲ್ಲಿ ನಡೆದಿದೆ. ಯತೀಶ್, ಮೃತಪಟ್ಟ ದುರ್ದೈವಿ. ಯತೀಶ್ ಅವರು ಕೈಕಂಬದಲ್ಲಿ ವಸತಿ ನಿಲಯದ ಮನೆಯೊಂದರ ಡಿಶ್ ರಿಪೇರಿ ಮಾಡುವ ವೇಳೆ ಆಯತಪ್ಪಿ ಮೇಲಿನಿಂದ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾರೆ. ವಸತಿ ನಿಲಯದ ಕೆಲ ಭಾಗದಲ್ಲಿರುವ ಬಾವಿಯ ಮೇಲೆ ಕಬ್ಬಿಣದ ರಕ್ಷಣಾ ಬೇಲಿಯ ಮೇಲೆ ಬಿದ್ದು ತಲೆಗೆ ಗಾಯವಾಗಿದ್ದು, ಸ್ಥಳದಲ್ಲಿ ಸಾಕಷ್ಟು ರಕ್ತ ಚೆಲ್ಲಿದೆ. ಘಟನೆ ನಡೆದ ತಕ್ಷಣ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ತಲೆಗೆ ಗಂಭೀರವಾದ ಗಾಯವಾಗಿದ್ದರಿಂದ ಸಾವನ್ನಪ್ಪಿದ ಬಗ್ಗೆ ವೈದ್ಯರು ದೃಢಪಡಿಸಿದರು.

Read More

ಕಡಬ; ನಾಪತ್ತೆಯಾದ ಹೋರಿ ಪತ್ತೆ ಹಚ್ಚಿದವರಿಗೆ ಮಾಲೀಕ ಬಹುಮಾನ ಘೋಷಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬದ ಅಡ್ಡಗದ್ದೆಯ ಇಕ್ಬಾಲ್ ಎಂಬವರಿಗೆ ಸೇರಿದ ಹೋರಿ ಇದಾಗಿದ್ದು   ಜೂನ್.15 ರಿಂದ ಅಡ್ದಗದ್ದೆ ಸುತ್ತಮುತ್ತಲಿಂದ ಕಾಣೆಯಾಗಿದೆ.    ಹೋರಿಯ  ಬಲಕಿವಿಯಲ್ಲಿ ಆಧಾರ್ ಟ್ಯಾಗ್ ಇದ್ದು ಹೋರಿಯನ್ನು ಪತ್ತೆ ಹಚ್ಚಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಮಾಲೀಕರು ಘೋಷಿಸಿದ್ದಾರೆ. 2 ಹೋರಿಯ  ಚಿತ್ರವಿರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ವಿಪರ್ಯಾಸವೆಂದರೆ ಇದುವರೆಗೂ ಹೋರಿಯ ಬಗ್ಗೆ ಯಾವುದೇ ಸುಳಿವಿಲ್ಲ. ಇದು ಗೋ ಕಳ್ಳರ ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

Read More

ಮಂಗಳೂರು : ದಕ್ಷಿಣ ಕನ್ನಡ ಜಿಪಂನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ.ಆನಂದ್ ಕೆ ಅಧಿಕಾರ ಸ್ವೀಕರಿಸಿದ್ದಾರೆ. ಈವರೆಗೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರೇ ದ.ಕ‌.ಜಿಪಂ ಮುಖ್ಯ ಕಾರ್ಯ‌ ನಿರ್ವಹಣಾಧಿಕಾರಿಯಾಗಿದ್ದರು. ಇದೀಗ ನೂತನ ಸಿಇಒ ಡಾ.ಆನಂದ್ ಕೆಯವರಿಗೆ ಜಿಲ್ಲಾಧಿಕಾರಿ ಅಧಿಕಾರ ಹಸ್ತಾಂತರಿಸಿ ಶುಭಹಾರೈಸಿದರು.

Read More

ಮಂಗಳೂರು: ಪದವೀಧರರಾಗಿ ರಾಜಕೀಯದಲ್ಲಿ ಆಸಕ್ತರಿರುವವರಿಗೆ ತರಬೇತಿ ನೀಡಲು ತರಬೇತಿ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯದ ಬಗ್ಗೆ ಆಸಕ್ತ ಪದವೀಧರರಿಗೆ ತರಬೇತಿ ಪಡೆಯಲು ರಾಜ್ಯದಲ್ಲಿ ಪೊಲಿಟಿಕಲ್ ಸೆಂಟರ್‌ನ ಕೊರತೆಯಿದೆ. ಆದ್ದರಿಂದ ಈ ಕೊರತೆ ನೀಗಿಸಲು ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸುವ ಚಿಂತನೆಯಿದೆ. ಪದವೀಧರರಿಗೆ ಒಂದು ವರ್ಷದ ಕೋರ್ಸ್ ಇದಾಗಿದ್ದು, ಆರು ತಿಂಗಳು ಪ್ರ್ಯಾಕ್ಟಿಕಲ್ ತರಗತಿಯಿದ್ದರೆ, ಇನ್ನಾರು ತಿಂಗಳು ಇಂಟರ್ ಶಿಪ್ ಇರುತ್ತದೆ. ಅದಕ್ಕೆ ರೂಪುರೇಷೆಗಳನ್ನು ಸಿದ್ಧಪಡಿಸಲು ಚರ್ಚೆ ನಡೆದಿದ್ದು, ಒಂದು ಹಂತಕ್ಕೆ ಬಂದಿದೆ. ಸರಕಾರದೊಂದಿಗೆ, ವಿಧಾನಸಭಾ ಸಭಾಧ್ಯಕ್ಷರೊಂದಿಗೆ ಮಾತನಾಡಿಕೊಂಡು ಈ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ.ದೇಶದ ಪುಣೆಯಲ್ಲಿ ಇಂತಹ ರಾಜಕೀಯ ತರಬೇತಿ ನೀಡುವ ಸಂಸ್ಥೆಯೊಂದು ಇದೆ. ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ಸಿಲೆಬಸ್‌ ಅನ್ನು ಮಾಡಲಾಗುತ್ತದೆ. ತರಬೇತಿ ಪಡೆದವರೆಲ್ಲಾ ರಾಜಕೀಯ ಪ್ರವೇಶಿಸಬೇಕು ಎಂದಲ್ಲ‌. ಅವರು ಎನ್‌ಜಿಒ ಕೂಡಾ ಆರಂಭಿಸಬಹುದು. ಸರಕಾರದ ಸಂಸ್ಥೆಗಳಲ್ಲೂ ಅವರಿಗೆ ಅವಕಾಶ ಇರಲಿದೆ. ತಾಲೂಕು ಪಂಚಾಯಿತಿ, ಗ್ರಾಮ…

Read More

ಮಂಗಳೂರು: ಕರ್ನಾಟಕದ 6 ಜಿಲ್ಲೆಗಳಲ್ಲಿ ಜುಲೈ 4ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

Read More

ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಐದು ಗ್ಯಾರಂಟಿ ಘೋಷಿಸಿದೆ. ಅವುಗಳಲ್ಲಿ ಒಂದು ಈಗಾಗಲೇ ಜಾರಿಗೆ ಬಂದಿದೆ. ಇನ್ನೊಂದು, ಗೃಹಲಕ್ಷ್ಮೀ ಯೋಜನೆಗಳ ಜೊತೆಗೆ ಇನ್ನೊಂದು ಗ್ಯಾರಂಟಿ ನೀಡಿದ್ದಾರೆ. ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಸಿದ್ದರಾಮಯ್ಯನವರು ಮಹಿಳೆಯರ ಶ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಈಗ ಮಹಿಳಾ ಸಂಘಟನೆಗಳು ಈ ವಿಷಯವನ್ನು ಗಟ್ಟಿಯಾಗಿ ಹಿಡಿದುಕೊಂಡಿವೆ. ನಿನ್ನೆ ಕೂಡ ಸಿದ್ದರಾಮಯ್ಯನವರ ನಿವಾಸ ಎದುರು ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮಹಿಳಾ ಸಂಘ ಸಂಸ್ಥೆಗಳು ಸಾಲ ಮನ್ನಾ ಮಾಡುವಂತೆ ಪ್ರತಿಭಟನೆ ನಡೆಸಿದ್ದವು.ಬುಧವಾರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘದ ಸಾಲ ಮನ್ನಾ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಳಗ್ಗೆಯಿಂದಲೇ ಸಿಎಂ ಸಿದ್ದರಾಮಯ್ಯ ಅವರ ಮನೆಯ ಎದುರು ಮಹಿಳೆಯರ ದೊಡ್ಡ ದಂಡೇ ಜಮಾಯಿಸಿತ್ತು. ಚುನಾವಣಾ ಸಂದರ್ಭ ಕೊಟ್ಟ ಮಾತಿನಂತೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು ಎಂದು ಮಹಿಳೆಯರು ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ. ತಮ್ಮ ಸಂಪುಟ ಸಭೆಯ ಮುಗಿಸಿದ ನಂತರ ಸಿದ್ದರಾಮಯ್ಯನವರು ಪ್ರತಿಭಟನೆ ಮಾಡುತ್ತಿದ್ದ…

Read More

ಮಂಗಳೂರು: ವಿದ್ಯಾರ್ಥಿನಿಯೋರ್ವಳನ್ನು ಮದುವೆಯಾಗುವೆನೆಂದು ನಂಬಿಸಿ ಹೊಟೇಲ್ ನಲ್ಲಿರಿಸಿ 20 ದಿನಗಳ ಕಾಲ ನಿರಂತರ ಅತ್ಯಾಚಾರಗೈದ ವಿವಾಹಿತನನ್ನು ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕಡಬ ಮೂಲದ ಅನೀಶ್ ರೆಹಮಾನ್ ಬಂಧಿತ ಕಾಮುಕ. ಇನ್ ಸ್ಟಾಗ್ರಾಂ ಮೂಲಕ ವಿದ್ಯಾರ್ಥಿನಿಗೆ ಅನೀಶ್ ರೆಹಮಾನ್ ಪರಿಚಯವಾಗಿದ್ದಾನೆ. ಆರೋಪಿ ಸಂತ್ರಸ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಮಂಗಳೂರಿನ ಪೂಂಜಾ ಇಂಟರ್ ನ್ಯಾಷನಲ್ ಹೊಟೇಲ್ ಗೆ ಕರೆದೊಯ್ದಿದ್ದಾನೆ. ಅಲ್ಲಿ ರೂಂ ಪಡೆದ ಆತ ಮೇ 28 ರಿಂದ ಸುಮಾರು 20 ದಿನಗಳ ಕಾಲ ನಿರಂತರವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಆ ಬಳಿಕ ಆರೋಪಿ ತಾನು ವಿವಾಹಿತ ಎಂಬ ಸತ್ಯ ಬಿಚ್ಚಿಟ್ಟಿದ್ದಾನೆ. ಇದರಿಂದ ಕಂಗಾಲಾದ ವಿದ್ಯಾರ್ಥಿನಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಮಹಿಳಾ ಠಾಣಾ ಪೊಲೀಸರು ಆರೋಪಿ ಅನೀಶ್ ರೆಹಮಾನ್ ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More