ಬೆಂಗಳೂರು: ಬೆಂಗಳೂರು-ಧಾರವಾಡ , ರಾಣಿ ಕಮಲಾಪತಿ-ಜಬಲ್ಪುರ್ ಸೇರಿದಂತೆ ಒಟ್ಟು ಐದು ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ.ಖಜುರಾಹೊ-ಭೋಪಾಲ್-ಇಂದೋರ್ , ಮಡಗಾಂವ್-ಮುಂಬೈ ಮತ್ತು ಹಟಿಯಾ-ಪಾಟ್ನಾ ಉಳಿದ ನಾಲ್ಕು ವಂದೇ ಭಾರತ್ ಸಂಚರಿಸುವ ಮಾರ್ಗಗಳು. ಈ ಪೈಕಿ ರಾಣಿ ಕಮಲಾಪತಿ-ಜಬಲ್ಪುರ್ ಹೊರತುಪಡಿಸಿ ಉಳಿದ ರೂಟ್‌ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.ಇದರೊಂದಿಗೆ ಗೋವಾ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಮೊದಲ ವಂದೇ ಭಾರತ್ ರೈಲು ಸೇವೆ ಪಡೆಯಲಿವೆ.ಇನ್ನು ಬೆಂಗಳೂರು-ಧಾರವಾಡ ಪ್ರತಿ ಮಂಗಳವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿ ರೈಲು ಕಾರ್ಯನಿರ್ವಹಿಸಲಿದೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರೈಲು ಸೇವೆ ಆರಂಭವಾಗಿ ಮಧ್ಯೆ ದಾವಣಗೆರೆಯಲ್ಲಿ ಮಾತ್ರ ನಿಲ್ಲುತ್ತದೆ. ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದ್ದು, ಸುಮಾರು ಏಳು ಗಂಟೆಗಳಲ್ಲಿ ಗುರಿ ತಲುಪುತ್ತದೆ.
Author: main-admin
ಮಂಗಳೂರು: ಟ್ರಾಫಿಕ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಜಂಕ್ಷನ್, ವಾಹನ ದಟ್ಟಣೆ ಪ್ರದೇಶದಲ್ಲಿ ಬೆಳಗ್ಗೆ, ಸಂಜೆ ಹೊತ್ತು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದ್ದು, ಶೇ.95ರಷ್ಟು ಮಂದಿ ಠಾಣೆಯಿಂದ ಹೊರಗಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ. ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಪ.ಜಾ./ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಮರದಡಿಯಲ್ಲಿ ನಿಂತು ಮೊಬೈಲ್ ನೋಡಿಕೊಂಡು ಇರುತ್ತಾರೆ ಎನ್ನುವ ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದರು. ಇದರಿಂದ ಅಪಘಾತಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ. ಪೊಲೀಸರು ಇರುವುದನ್ನು ನೋಡಿದರೆ ವಾಹನ ಸವಾರರಲ್ಲಿ ಶಿಸ್ತು ಇರುತ್ತದೆ ಎಂದರು.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ಶವ ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧರ್ಮಸ್ಥಳ ಠಾಣಾ ಸಬ್ ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಡಿ., ಸಿಬ್ಬಂದಿ್ಗಳು ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಸಾಗಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಯಕ್ಷಗಾನ ಭಾಗವತ ತೋನ್ಸೆ ಜಯಂತ್ ಕುಮಾರ್(78) ಅವರು ನಿಧನರಾಗಿದ್ದಾರೆ. ಇವರು ರಾಷ್ಟ್ರ ಪ್ರಶಸ್ತಿ ವಿಜೇತ, ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ಪ ಮಾಸ್ಟರ್ ರವರ ಸುಪುತ್ರರಾಗಿದ್ದಾರೆ. ಯಕ್ಷಗಾನ ಭಾಗವತರಾಗಿ, ಮದ್ದಳೆ, ಚೆಂಡೆಯ ಜೊತೆಗೆ ವೇಷಧಾರಿಯಾಗಿ ಕೂಡಾ ಪಾತ್ರ ಮಾಡಿರುವ ಕೆಲವು ಸಂಘ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ ರಾಜ್ಯಮಟ್ಟಕ್ಕೆ ಬೆಳೆಸಿದ್ದಾರೆ. ಯಕ್ಷಗಾನ ಸವ್ಯಸಾಚಿ, ಯಕ್ಷವಾರಿಧಿ, ಕಾಳಿಂಗ ನಾವಡ, ಯಕ್ಷಸುಮ,ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಗಳನ್ನು ಪಡೆದಿರುವ ಇವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ ಸನ್ಮಾನಿತರಾಗಿದ್ದಾರೆ. ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ ತೋನ್ಸೆ ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದರು. ಭಾಗವತರೂ ,ಯಕ್ಷಗುರುಗಳೂ ಆದ ತೋನ್ಸೆ ಜಯಂತ ಕುಮಾರ್ ಅವರು 3 ಗಂಡು ಮಕ್ಕಳು ಮತ್ತು ಪತ್ನಿ ವಿನೋದಾ ಅವರನ್ನು ಅಗಲಿದ್ದಾರೆ. ನಾಳೆ ಸಂತೆಕಟ್ಟೆ ಗೋಪಾಲಪುರದಲ್ಲಿರುವ ಮನೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅಂತಿಮ ವಿಧಿವಿಧಾನಗಳನ್ನು ಪೂರೈಸಿ…
ತನ್ನ ಜೀವನಕ್ಕೆ ದಾರಿದೀಪವಾದ ಗಂಡನನ್ನೇ ಹೆಂಡತಿ ಜೈಲಿಗೆ ಕಳಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹೌದು, ಅಲೋಕ್ ಮೌರ್ಯ ಎಂಬಾತ ತನ್ನ ಎಸ್‌ಡಿಎಂ (ಉಪವಿಭಾಗೀಯ ಮ್ಯಾಜಿಸ್ಟ್ರೇಟ್) ಪತ್ನಿ ಜ್ಯೋತಿ ಮೌರ್ಯ ವಿರುದ್ಧ ಈ ಆರೋಪ ಮಾಡಿದ್ದಾರೆ. ಅಲೋಕ್ ಹೇಳುವಂತೆ , ಮದುವೆ (Marriage) ಬಳಿಕ ಇಬ್ಬರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು. ಆದ್ರೆ ಅಲೋಕ್ ಬಿಡುವಿಲ್ಲದೆ, ತುಂಬಾ ಶ್ರಮವಹಿಸಿ ದುಡಿದು ಪತ್ನಿಗೆ ಶಿಕ್ಷಣ (Education) ಕೊಡಿಸಿದರು. ಪ್ರಯಾಗ್ರಾಜ್ನಲ್ಲಿರುವ ಒಳ್ಳೆಯ ಕೋಚಿಂಗ್ ಕೇಂದ್ರಕ್ಕೆ ದಾಖಲಿಸಿದರು. ಅವರ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದಾಗಿ ಪತ್ನಿ ಜ್ಯೋತಿ 2016ರಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಆಗಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡರು. ಇದಾದ ಬಳಿಕ ಜ್ಯೋತಿ ಸಂಪೂರ್ಣವಾಗಿ ಬದಲಾದರು. ಯಶಸ್ಸು ಆಕೆಯ ತಲೆಗೆ ಹತ್ತಿತ್ತು. ಮತ್ತೊಬ್ಬ ಅಧಿಕಾರಿಯೊಂದಿಗೆ ಸೇರಿ ನನಗೆ ಮೋಸ ಮಾಡಿದಳು ಎಂದು ಅಲೋಕ್ ಆರೋಪಿಸಿದ್ದಾರೆ. ಜ್ಯೋತಿ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಂದಿಗೆ ಅಕ್ರಮ ಸಂಬಂಧ (Extra marital affair) ಹೊಂದಿದ್ದಳು ಎನ್ನಲಾಗಿದೆ. ಆಕೆಯ ಸಂಬಂಧದ ಬಗ್ಗೆ ತಿಳಿದ…
ಮಂಡಿ (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಬಗಿಪುಲ್ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಶಾರ್ ಸರೋವರದ ಬಳಿಯ ಮಂಡಿ ಜಿಲ್ಲೆಯ ಬಗಿಪುಲ್ ಪ್ರದೇಶಕ್ಕೆ ದಿಢೀರ್ ಪ್ರವಾಹ ಉಂಟಾಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಮಂಡಿ ಪ್ರಶಾರ್ ರಸ್ತೆಯ ಬಗ್ಗಿ ಸೇತುವೆಯ ಬಳಿ ಸಿಲುಕಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಡಿಎಸ್ಪಿ ಸೂದ್ ತಿಳಿಸಿದ್ದಾರೆ. ಮಂಡಿಯ ಬಾಘಿ ಸೇತುವೆಯ ಸುತ್ತ ಮೇಘಸ್ಫೋಟದ ನಂತರ ಪ್ರವಾಹದಿಂದಾಗಿ ಕಮಂದ್‌ನ ಮುಂದೆ ಪರಾಶರಗೆ ಹೋಗುವ ರಸ್ತೆಯನ್ನು ಮುಚ್ಚಲಾಗಿದೆ ಎಂದು ಮಂಡಿ ಪೊಲೀಸರು ಮಾಹಿತಿ ನೀಡಿದ್ದಾರೆ. ಚಂಬಾದಿಂದ ಬಂದ ವಿದ್ಯಾರ್ಥಿಗಳ ಬಸ್ ಮತ್ತು ಪರಾಶರದಿಂದ ಹಿಂತಿರುಗುತ್ತಿದ್ದ ಹಲವು ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ. “ ಏತನ್ಮಧ್ಯೆ, ರಾಜ್ಯದ ಪಾಂಡೋ-ಮಂಡಿ ಎನ್‌ಎಚ್‌ನಲ್ಲಿ ಚಾರ್ಮಿಲೆ ಮತ್ತು ಸತ್ಮೈಲ್ ನಡುವೆ ಅನೇಕ…
ಮುಂಬೈ: ಮುಂಬೈನ ಜುಹು ಬೀಚ್ ಪಾಲಾಗುತ್ತಿದ್ದ ಇಬ್ಬರು ಮಕ್ಕಳನ್ನು ಪೊಲೀಸ್ ಪೇದೆಯೊಬ್ಬರು ರಕ್ಸಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶುಕ್ರವಾರ ಸಂಜೆ ಜುಹು ಕೋಳಿವಾಡ ಬೀಚ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ವಿಷ್ಣು ಭೌರಾವ್ ಬೆಲೆ ಎಂದು ಗುರುತಿಸಲಾದ ಸಾಂತಾಕ್ರೂಜ್ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ತನ್ನ ಜೀವವನ್ನೇ ಒತ್ತೆಯಿಟ್ಟು 7 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳನ್ನು ಸಮುದ್ರದ ದಡಕ್ಕೆ ಕರೆತಂದು ಅವರ ಜೀವ ಉಳಿಸುವುದನ್ನು ನೋಡಬಹುದು. ಇದೀಗ ಮಕ್ಕಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ. ಎಂದು ತಿಳಿದುಬಂದಿದೆ. ಈ ವೀಡಿಯೊವನ್ನು ANI ಸಂಸ್ಥೆ ಶನಿವಾರ ಸಂಜೆ ಹಂಚಿಕೊಂಡಿದೆ ಮತ್ತು ಅಂದಿನಿಂದ ಇದು 25,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 200 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಕಾಮೆಂಟ್ ವಿಭಾಗದಲ್ಲಿ, ಬಳಕೆದಾರರು ಪೊಲೀಸ್ ಪೇದೆಯನ್ನು ಶ್ಲಾಘಿಸಿದ್ದಾರೆ.
ಇಂಫಾಲ್: ಮಣಿಪುರದ ಇಥಾಮ್ ಗ್ರಾಮದಲ್ಲಿ 1,200 ಕ್ಕೂ ಹೆಚ್ಚು ಜನರಿದ್ದ ಮಹಿಳೆಯರ ನೇತೃತ್ವದ ಗುಂಪು ಸುತ್ತುವರಿದ ನಂತರ ಭಾರತೀಯ ಸೇನೆ 12 ಮಣಿಪುರ ಉಗ್ರರನ್ನು ಬಿಡುಗಡೆ ಮಾಡಿದೆ. ಮಣಿಪುರದಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ಕೊನೆಗೊಳಿಸಲು, ನಾಗರಿಕರ ಪ್ರಾಣಕ್ಕೆ ಅಪಾಯವನ್ನುಂಟು ಮಾಡದಿರಲು ಮತ್ತು ಉಗ್ರರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಮಹಿಳೆಯರ ನೇತೃತ್ವದ ದೊಡ್ಡ ಕ್ರೋಧದ ಗುಂಪಿನ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಅಂತಹ ಕ್ರಮದಿಂದ ಸಂಭವನೀಯ ಸಾವುನೋವುಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ 12 ಕೆಡರ್‌ಗಳನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸೇನೆ ಹೇಳಿದೆ. ಸೇನೆಯು ಮೈತೆಯ್ ಉಗ್ರಗಾಮಿ ಸಂಘಟನೆಯ 12 ಉಗ್ರಗಾಮಿಗಳನ್ನು ಕಂಗ್ಲೀ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಬಂಧಿಸಿತ್ತು. ಈ ಗುಂಪು 2015 ರಲ್ಲಿ 6 ಡೋಗ್ರಾ ಘಟಕದ ಹೊಂಚುದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ ಭಾಗಿಯಾಗಿತ್ತು ಎಂದು ಸೇನೆ ತಿಳಿಸಿದೆ.
ಸುಳ್ಯ: ತಾಲೂಕಿನ ಅರಂತೋಡು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ಮತ್ತು ಟಿಟಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿಗೆ ಗಂಭೀರ ಗಾಯಗೊಂಡಿದ್ದಾರೆ. ಟಿಟಿ ವಾಹನವು ಮಂಗಳೂರಿನಿಂದ ಮಡಿಕೇರಿಗೆ ಹಾಗೂ ಪಿಕಪ್ ಸುಳ್ಯ ಕಡೆಗೆ ಹೋಗುತ್ತಿದ್ದು, ತೆಕ್ಕಿಲ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ.ಗಾಯಾಳು ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಸಂಬಂಧ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಈ ಕುರಿತು ಟ್ವೀಟ್ ಮಾಡಿರುವ ಅವರು, ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ ಎಂದಿದ್ದಾರೆ.ಇನ್ನು ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ ಎಂದು ಹೇಳಿದ್ದಾರೆ.









