ಕಡಬ : ಮೂರು ದಿನದ ಹಿಂದೆ ಮಿದುಳು ರಕ್ತಸ್ರಾವ (ಬ್ರೈನ್ ಹ್ಯಾಮರೇಜ್)ಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಡಬ ಆಲಂಕಾರಿನ ಆಟೋ ಚಾಲಕರೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. ಕಡಬ ತಾಲೂಕಿನ ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ, ಆಲಂಕಾರು ಆದರ್ಶ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಕಮಲಾಕ್ಷ ಗೌಡ(44ವ.)ಮೃತಪಟ್ಟವರಾಗಿದ್ದಾರೆ. ಜೂ.20ರಂದು ಬೆಳಿಗ್ಗೆ ಮನೆಯಲ್ಲಿ ಕಮಲಾಕ್ಷರವರು ಬ್ರೈನ್ ಎಮರೇಜ್‌ಗೆ ತುತ್ತಾಗಿ ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದರು. ತಕ್ಷಣ ಅವರ ಸಹೋದರ ಆಲಂಕಾರಿನ ಕ್ಲಿನಿಕ್‌ಗೆ ಕರೆತಂದು ಬಳಿಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಅದೇ ದಿನ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕಮಲಾಕ್ಷ ಗೌಡರವರು ಚಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಕಮಲಾಕ್ಷ ಗೌಡರವರು ಕಳೆದ 5 ವರ್ಷಗಳಿಂದ ಆಲಂಕಾರಿನಲ್ಲಿ ಬಾಡಿಗೆ ರಿಕ್ಷಾ ಓಡಾಟ ನಡೆಸುತ್ತಿದ್ದರು.
Author: main-admin
ನಾಗ್ಪುರ: ನಾಗ್ಪುರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ 36 ವರ್ಷಗಳ ಕಾಲ ಗರ್ಭ ಧರಿಸಿದ್ದು, ಆತನ ಹೊಟ್ಟಯಲ್ಲಿ ಅವಳಿ ಮಕ್ಕಳಿರುವುದು ಕಂಡುಬಂದಿದೆ. ನಾಗ್ಪುರದ ವ್ಯಕ್ತಿಯ ಉಬ್ಬಿದ ಹೊಟ್ಟೆಯನ್ನು ನೋಡಿದ ಜನರು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ, ಆತನ ಹೊಟ್ಟೆಯೊಳಗೆ ನಿಜವಾಗಿಯೂ ಮಕ್ಕಳು ಇದ್ದಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ವರದಿ ಪ್ರಕಾರ, ನಾಗ್ಪುರದ ನಿವಾಸಿ ಸಂಜು ಭಗತ್ ಹೊಟ್ಟೆಯಲ್ಲಿ ಈ ಮಕ್ಕಳು ಕಂಡುಬಂದಿವೆ. ಬಾಲ್ಯದಲ್ಲಿ, ಭಗತ್ ತುಂಬಾ ಆರಾಮದಾಯಕ ಜೀವನವನ್ನು ನಡೆಸಿದ್ದಾನೆ. ಆದರೆ ಅವನ ಹೊಟ್ಟೆಯು ಸಾಮಾನ್ಯ ಮಕ್ಕಳಿಗಿಂತ ಸ್ವಲ್ಪ ಹೆಚ್ಚು ಉಬ್ಬುತ್ತಿತ್ತು. ಈ ಊತದ ಬಗ್ಗೆ ಅವರು ಎಂದಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಕ್ರಮೇಣ ಇದು ಹೆಚ್ಚಾದಾಗ, ಕುಟುಂಬ ಸದಸ್ಯರು ಅದರ ಬಗ್ಗೆ ಚಿಂತಿಸತೊಡಗಿದರು. ಮೊದಮೊದಲು ಭಗತ್‌ಗೆ ಹೊಟ್ಟೆ ಉಬ್ಬರಿಸಿದ್ದನ್ನು ನೋಡಿಯೇ ವಿಚಿತ್ರ ಅನ್ನಿಸುತ್ತಿತ್ತು. ಆದರೆ 1999 ರ ಹೊತ್ತಿಗೆ ಅದು ತುಂಬಾ ಊದಿಕೊಂಡಿತು. ಅವನಿಗೆ ಉಸಿರಾಡಲು ಸಹ ಕಷ್ಟವಾಗತೊಡಗಿತು. ಅಂತಿಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಇಲ್ಲಿ ವೈದ್ಯರಿಗೆ ಗೆಡ್ಡೆಯ…
ನವದೆಹಲಿ: ದೇಶದ ಗಡಿ ನುಸುಳಲು ಯತ್ನಿಸುತ್ತಿದ್ದ 4 ಭಯೋತ್ಪಾದಕರನ್ನು ಗಡಿ ಭದ್ರತಾ ಪಡೆಗಳು ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಈ ಭಯೋತ್ಪಾದಕರ ಯತ್ನವನ್ನು ವಿಫಲಗೊಳಿಸಿದ ಗಡಿ ಭದ್ರತಾ ಪಡೆಗಳು ಈ ನಾಲ್ವರು ಭಯೋತ್ಪಾದಕರನ್ನು ಕುಪ್ವಾರದಲ್ಲಿ ಹತ್ಯೆಗೈದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಿಂದ ಒಳನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಮಚ್ಚಲ್ ಸೆಕ್ಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಈ ಸುದ್ದಿ ಈಗಷ್ಟೇ ಬಂದಿದ್ದು, ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಅಪ್‌ಡೇಟ್ ಮಾಡಲಾಗುವುದು.
ಮಂಜೇಶ್ವರ: ಮನೆಗೆ ನುಗ್ಗಿದ ಕಳ್ಳರು ಸುಮಾರು 60 ಪವನ್ ಚಿನ್ನಾಭರಣ ಮತ್ತು 50 ಸಾವಿರ ರೂ.ನಗದು ಕಳವು ಮಾಡಿರುವುದಾಗಿ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಮಂಜೇಶ್ವರ ರಾಗಂ ಜಂಕ್ಷನ್ ನ ಹಮೀದ್ ತಂಘಲ್ ರವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಕಳ್ಳರು ಕಪಾಟನ್ನು ಮುರಿದು ಈ ಕೃತ್ಯ ನಡೆಸಿದ್ದಾರೆ.ಹಮೀದ್ ರವರ ಕುಟುಂಬ ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಏರ್ವಾಡಿಗೆ ತೆರಳಿದ್ದರು.ಗುರುವಾರ ಸಂಜೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.ಇನ್ನು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಕಡಬ: ಸ್ವಂತ ಜ್ಯುವೆಲ್ಲರಿ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಮೃತದೇಹ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮರ್ಧಾಳದ ಮಸೀದಿಯ ಕಟ್ಟಡ ಸಂಕೀರ್ಣದಲ್ಲಿ ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ತೆರೆಯಲುದ್ದೇಶಿಸಿದ್ದು, ಅದು ಇಂದು ಉದ್ಘಾಟನೆಯಾಗಬೇಕಿತ್ತು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದ ನಾಗಪ್ರಸಾದ್ ಅವರ ಮೃತದೇಹ ಇಂದು ಬೆಳಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.
ಬಂಟ್ವಾಳ: ಅಪರಿಚಿತ ಮಹಿಳೆಯ ಮೃತದೇಹ ಬಂಟ್ವಾಳದ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಬಜ್ಪೆ : ಬೈಕ್ ಮತ್ತು ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ಗುರುಪುರದಲ್ಲಿ ನಡೆದಿದೆ. ಮೃತರನ್ನು ಪೊಳಲಿ ಕರಿಯಂಗಳ ನಿವಾಸಿ ದಿ.ಅಣ್ಣಿ ಪೂಜಾರಿ ಎಂಬವರ ಪುತ್ರ ಸಂತೋಷ್ (38) ಎಂದು ಗುರುತಿಸಲಾಗಿದೆ. ವಾಮಂಜೂರಿನ ಸಹಕಾರಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಸಂತೋಷ್, ಇಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಬೈಕಿನಲ್ಲಿ ಬ್ಯಾಂಕಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗುರುಪುರ ಬ್ಯಾಂಕ್ ಬಳಿ ರಸ್ತೆಯ ಹಂಪ್ಸ್ ಬಳಿ ಬೈಕ್ ವೇಗ ಕಡಿಮೆಗೊಳಿಸಿದಾಗ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಸಂತೋಷ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರೆಂದು ತಿಳಿದುಂಬಂದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಅಪ್ರಾಪ್ತ ಮಲಮಗಳ ಮೇಳೆ ಅತ್ಯಾಚಾರಗೈದ ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೊಕ್ಸೊ ನ್ಯಾಯಾಲಯ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಆರೋಪಿ ಅಶ್ವತ್ಥ್ ಮಲ್ಲಿಕಾ ಎಂಬವರ ಎರಡನೇ ಪತಿಯಾಗಿದ್ದು, ಆಕೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಅಶ್ವತ್ಥ್ ಪತ್ನಿಯ ಮೊದಲನೆಯ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಗೈದಿದ್ದಾನೆ. ಅಲ್ಲದೆ ಯಾರಲ್ಲಾದರೂ ತಿಳಿಸಿದರೆ ಬಾಲಕಿಯನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನಲ್ಲಿ ತಿಳಿಸಿದ್ದಾರೆ. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಎಫ್ಎಸ್ಎಲ್ ವರದಿಯನ್ವಯ ಆರೋಪಿ ಅಶ್ವತ್ಥ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ…
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಶವಪರೀಕ್ಷೆ ವೇಳೆ ಸತ್ತಿದ್ದಾಳೆ ಎನ್ನಲಾದ ಬಾಲಕಿ ಜೀವಂತವಾಗಿ ಎಚ್ಚರಗೊಂಡಿದ್ದಾಳೆ. ಕಾಲುವೆಗೆ ಬಿದ್ದು ಬಾಲಕಿ ಸತ್ತಿದ್ದಾಳೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಇದೇ ವೇಳೆ ಮನೆಯವರು ಮೊದಲು ವೈದ್ಯರಿಗೆ ತೋರಿಸುತ್ತೇವೆ ಎಂದರು. ಈ ಬಗ್ಗೆ, ಪೊಲೀಸರು ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ದರು, ಅಲ್ಲಿ ತನಿಖೆಯ ಸಮಯದಲ್ಲಿ, ಆಕೆಯ ಹೃದಯ ಬಡಿತವು ಓಡುತ್ತಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ಮಾಡಿಸಲು ಹೊರಟಿದ್ದ ಪೋಲೀಸರು ಮಾಹಿತಿ ತಿಳಿದ ಕೂಡಲೇ ಸಂತೆನಗರ ಪೊಲೀಸರು ಆಗಮಿಸಿ ಬಾಲಕಿಯನ್ನು ಹೊರಕ್ಕೆ ತೆಗೆದು ಮನೆಯವರಿಗೆ ಕರೆ ಮಾಡಿದ್ದಾರೆ. ಬಾಲಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಕೆಯನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಮಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದಾಗಿ ಸಂಬಂಧಿಕರು ಹೇಳಿದ್ದಾರೆ. ಸಂಬಂಧಿಕರ ಒತ್ತಾಯದ ಮೇರೆಗೆ ಪೊಲೀಸರು ಪತೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರು ಇಲ್ಲಿ ತನಿಖೆ ಆರಂಭಿಸಿದಾಗ ಹೃದಯ ಬಡಿತ ನಡೆಯುತ್ತಿರುವುದು…
ಮಂಗಳೂರು: ಜೂನ್.13ರಂದು ನರಿಕೊಂಬು ಗ್ರಾ.ಪಂಚಾಯತ್ ಕಚೇರಿಯ ಜಗಲಿಯಲ್ಲಿ ವ್ಯಕ್ತಿಯೋರ್ವ ಬಿದ್ದುಕೊಂಡ ಬಗ್ಗೆ ಗ್ರಾಮ ಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಜೂ.12ರಂದು ರಾತ್ರಿ ಈತ ಪಂಚಾಯತ್ ನ ಜಗುಲಿಗೆ ಪ್ರವೇಶ ಮಾಡಿದ್ದ.ಈ ವೇಳೆ ಈತನ ಕೈಗೆ ಗಾಯವಾಗಿ ರಕ್ತಸ್ರಾವವಾಗಿತ್ತು. ಕುಡಿದ ಮತ್ತಿನಲ್ಲಿ ಕಚೇರಿ ಬಳಿಯೇ ಮಲಗಿದ್ದ.ಶಿವಶಂಕರ ರಕ್ತದ ನಡುವೆ ಬಿದ್ದುಕೊಂಡಿದ್ದರಿಂದ ಜನರು ಹತ್ತಿರ ಹೋಗಲು ಹೆದರುತ್ತಿದ್ದರು. ಘಟನೆ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಕ್ ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು. ಆತ ನಿನ್ನೆ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೂಡಲೇ ಮೊದಲು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಬಂದು ಧನ್ಯವಾದ ಹೇಳಿದ್ದಾನೆ ಎಂದು ವರದಿಯಾಗಿದೆ.










