ಬೆಳ್ತಂಗಡಿ :ಬೆಳ್ತಂಗಡಿ ತಾಲ್ಲೂಕಿನಾದ್ಯಂತ ಚಾರಣ ತಾಣಗಳು ಮತ್ತು ಪ್ರಮುಖ ಜಲಪಾತಗಳು ಜೂನ್ 1 ರಿಂದ ಪ್ರವಾಸಿಗರಿಗೆ ಮತ್ತೆ ವೀಕ್ಷಣೆಗೆ ತೆರೆದುಕೊಳ್ಳಲಿದೆ. ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಈ ಹಿಂದೆ ಜನವರಿಯಲ್ಲಿ ನೇತ್ರಾವತಿ ಶಿಖರ, ಬಂಡಾಜೆ ಜಲಪಾತ ಮತ್ತು ಗಡಾಯಿಕಲ್ಲು ಮುಂತಾದ ಜನಪ್ರಿಯ ತಾಣಗಳಿಗೆ ಭೇಟಿ ನೀಡುವುದನ್ನು ನಿಷೇಧ ಹೇರಲಾಗಿತ್ತು.ಬೇಸಿಗೆಯ ತಿಂಗಳುಗಳಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಮತ್ತು ಹುಲಿ ಗಣತಿಗೆ ಅನುಕೂಲವಾಗುವಂತೆ ಈ ನಿರ್ಬಂಧವನ್ನು ಪ್ರಾಥಮಿಕವಾಗಿ ಜಾರಿಗೆ ತರಲಾಯಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುವ ತಾಲ್ಲೂಕಿನ ಮಲವಂತಿಗೆ ಗ್ರಾಮವು ಹಲವಾರು ಪ್ರವಾಸಿ ಆಕರ್ಷಣೆಗಳಿಗೆ ನೆಲೆಯಾಗಿದೆ. ಇದು ಚಾರಣಿಗರು ಮತ್ತು ಪ್ರಕೃತಿ ಪ್ರಿಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದರೂ, ಬೇಸಿಗೆಯಲ್ಲಿ ಈ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಸಂಭವಿಸುವ ಅಪಾಯ ಹೆಚ್ಚಾಗಿರುತ್ತದೆ. ಪ್ರವಾಸಿಗರು ಸುರಕ್ಷತಾ ಎಚ್ಚರಿಕೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸುವುದರಿಂದ, ಅರಣ್ಯ ಇಲಾಖೆಯು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧವನ್ನು ವಿಧಿಸಿತ್ತು.ಇತ್ತೀಚಿನ ಬೇಸಿಗೆಯ ಮಳೆಯಿಂದಾಗಿ, ಅರಣ್ಯ ಪ್ರದೇಶಗಳು ಈಗ ತೇವದಿಂದ ಕೂಡಿದ್ದು, ಹಚ್ಚ ಹಸಿರಿನಿಂದ ಕೂಡಿದ್ದು, ಹೊಳೆಗಳು ಸಾಮಾನ್ಯವಾಗಿ…
Author: main-admin
ಕಾಸರಗೋಡು: ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನೊಳಗೊಂಡ ವಾಟ್ಸಾಪ್ ಗುಂಪಿನಲ್ಲಿ ರಾಜಕೀಯ ಪ್ರೇರಿತ ಹಾಗೂ ವಿವಾದಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ವೆಳ್ಳರಿಕುಂಡು ಪೊಲೀಸ್ ಠಾಣೆಯ ಸಿವಿಲ್ ಪೊಲೀಸ್ ಅಧಿಕಾರಿ (CPO) ಸುಜಿತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ರಾಜಕೀಯ ಪ್ರೇರಿತ ಸಂದೇಶದ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ, ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ (SP) ಬಿ.ವಿ. ವಿಜಯ ಭರತ್ ರೆಡ್ಡಿ ಅವರು ವಿಚಾರಣೆ ಬಾಕಿ ಇರುವವರೆಗೂ ಅಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಕಾಸರಗೋಡು ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ‘ಪೊಲೀಸ್ ಫ್ರೆಂಡ್ಸ್’ ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಸಿಪಿಒ ಸುಜಿತ್ ಅವರು ವಿವಾದಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು ಎಂದು ಆರೋಪಿಸಲಾಗಿದೆ. ಹೊಸ ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಉಲ್ಲೇಖಿಸಿ ಪ್ರಾರಂಭವಾಗುವ ಈ ಪೋಸ್ಟ್‌ನಲ್ಲಿ, ಸ್ಥಳೀಯ ಸ್ವ-ಸರ್ಕಾರಿ ಸಚಿವ ಮತ್ತು ಮುಸ್ಲಿಂ ಲೀಗ್ ನಾಯಕ ಕೆ.ಎಂ. ಶಾಜಿ ಅವರನ್ನು ಗುರಿಯಾಗಿಸಿಕೊಂಡು ಹರಿಹಾಯಲಾಗಿತ್ತು. ಅಲ್ಲದೆ, ಶಾಜಿ ಅವರನ್ನು ‘ಕಮ್ಯುನಲಿಸ್ಟ್…
ಉಡುಪಿ: ವಿದೇಶದಲ್ಲಿ ಆಕರ್ಷಕ ಕೆಲಸ ಕೊಡಿಸುವುದಾಗಿ ನಂಬಿಸಿ ನಿಟ್ಟೂರು ನಿವಾಸಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಹಾಗೂ ಪಾಸ್‌ಪೋರ್ಟ್ ಪಡೆದು ವಂಚಿಸಿರುವ ಜಾಲದ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯದ ಖಾಸಗಿ ದೂರಿನ ಅನ್ವಯ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನಿಟ್ಟೂರು ನಿವಾಸಿ ಎನ್. ಆರ್. ಪದ್ಮನಾಭ ಉಪಾಧ್ಯ ವಂಚನೆಗೊಳಗಾದ ಪಿರ್ಯಾದಿದಾರರು. ಇವರಿಂದ ಹಣ ಪಡೆದು ವಂಚಿಸಿದ ಆರೋಪಿಗಳಾದ ಆಶ್ಲೆ ಕರ್ನೇಲಿಯೋ, ಸವಿತಾ, ಪ್ರಕೃತಿ ಮತ್ತು ಪ್ರಶಾಂತ್ ಎಂಬ ನಾಲ್ವರ ವಿರುದ್ಧ ಪೊಲೀಸರು ಕೇಸ್ ಬುಕ್ ಮಾಡಿದ್ದಾರೆ.ಉದ್ಯೋಗ ಹುಡುಕುತ್ತಿದ್ದ ಪದ್ಮನಾಭ ಉಪಾಧ್ಯ ಅವರನ್ನು 2025ರ ಫೆಬ್ರವರಿ 12ರಂದು ಸಂಪರ್ಕಿಸಿದ್ದ 1ನೇ ಆರೋಪಿ ಆಶ್ಲೆ ಕರ್ನೇಲಿಯೋ, ಯುನೈಟೆಡ್ ಕಿಂಗ್‌ಡಮ್ (UK) ದೇಶದಲ್ಲಿ ‘ಹೌಸ್ ಕೀಪಿಂಗ್ ಸೂಪರ್‌ವೈಸರ್’ ಉದ್ಯೋಗವಿದ್ದು, ತಾನು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು. ಬಳಿಕ ತನ್ನ ಸಹಾಯಕಿ, 2ನೇ ಆರೋಪಿ ಸವಿತಾಳ ಮೊಬೈಲ್ ಸಂಖ್ಯೆಯನ್ನು ನೀಡಿದ್ದನು. ಪಿರ್ಯಾದಿದಾರರು ಸವಿತಾಳನ್ನು ಸಂಪರ್ಕಿಸಿದಾಗ, ಯು.ಕೆ. ವೀಸಾ ಪ್ರಕ್ರಿಯೆಗಾಗಿ ₹2,00,000 ಪ್ರೊಸೆಸಿಂಗ್ ಶುಲ್ಕ ಪಾವತಿಸುವಂತೆ…
ಮಂಗಳೂರು: ತಡರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್‌ಸ್ಟೆಬಲ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆಮಂಗಳೂರಿನ ಕೋಡಿಕಲ್‌ನಲ್ಲಿ ಭಾನುವಾರ ನಡೆದಿದೆ. ಪೊಲೀಸ್ ಕಾನ್‌ಸ್ಟೆಬಲ್ ಹನುಮಂತ್ ಕಾಂತಿ ಅವರ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಹೊಡೆದು ಪರಾರಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಾರಾಯಣ ಗುರು ಸಹಕಾರಿ ಸಂಘದ ಕಟ್ಟಡದ ಬಳಿ ಕಾನ್‌ಸ್ಟೆಬಲ್ ಹನುಮಂತ್ ಮತ್ತು ಗೃಹರಕ್ಷಕ ಸಿಬ್ಬಂದಿ ಬಸವರಾಜ್ ಕರ್ತವ್ಯದಲ್ಲಿದ್ದರು.ಈ ವೇಳೆ ವೇಗವಾಗಿ ಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಸವಾರರು ನಿಲ್ಲಿಸದೆ ತಲೆ ತಪ್ಪಿಸಿಕೊಂಡಿದ್ದಾರೆ. ಆದರೆ, ಕೆಲವು ನಿಮಿಷಗಳ ನಂತರ ಮತ್ತೆ ಸ್ಥಳಕ್ಕೆ ಹಿಂತಿರುಗಿದ ಬೈಕ್ ಸವಾರ, ಕಾನ್‌ಸ್ಟೆಬಲ್ ಹನುಮಂತ್ ಅವರ ತಲೆಗೆ ಬಲವಾಗಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ಸಿಬ್ಬಂದಿ ಹಲ್ಲೆಕೋರರನ್ನು ಹಿಡಿಯಲು ಪ್ರಯತ್ನಿಸಿದರಾದರೂ ಅವರು ಸಿಗಲಿಲ್ಲ.ಸದ್ಯ ತಲೆಗೆ ಸಣ್ಣಪುಟ್ಟ ಗಾಯಗಳಾಗಿರುವ ಹನುಮಂತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಇಡೀ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉರ್ವಾ ಪೊಲೀಸರು ಆರೋಪಿಗಳ…
ಬೈಂದೂರು: ಭೀಕರ ರಸ್ತೆ ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡ ಮಹಿಳೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಖದೀಮರು ಲಪಟಾಯಿಸಿರುವ ಅಮಾನವೀಯ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೇ 17ರಂದು ಕೊಲ್ಲೂರಿನ ದಳಿ ಎಂಬ ಸ್ಥಳದಲ್ಲಿ ಕೇರಳ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟದ ಇನ್ಸುಲೇಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಈ ಘೋರ ದುರಂತದಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಫ್ ಎಂಬುವವರು ಮೃತಪಟ್ಟು, ಇತರ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿ ಸೃಷ್ಟಿಯಾಗಿದ್ದ ಗಂಭೀರ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಶಂಕಿಸಲಾಗಿದೆ.
ಕಾರವಾರ: ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 11 ಜನರ ಪೈಕಿ ಒಂದೇ ಕುಟುಂಬದ 8 ಮಂದಿ ಜಲಸಮಾಧಿಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆ ಹಕ್ಕಲು ನದಿಯಲ್ಲಿ ನಡೆದಿದೆ.ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದುಬಂದಿದೆ. ಒಟ್ಟು 11 ಮಂದಿ ಕಪ್ಪೆಚಿಪ್ಪು ತೆಗೆಲು ಹೋಗಿದ್ದರು. ಈ ಪೈಕಿ ಒಂದೇ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.ಇನ್ನೂ ಮೃತಪಟ್ಟ 8 ಮಂದಿಯ ಮೃತದೇಹಗಳನ್ನ ಭಟ್ಕಳ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸುನೀಲ್ ನಾಯ್ಕ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಕೃಷ್ಣಮೂರ್ತಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಉಡುಪಿ: ಮೂಡನಿಡಂಬೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಬೇಕರಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿದಿಯೂರು ಗ್ರಾಮದ ಮುರಳಿಧರ್ (35) ಎಂಬುವರು ನೀಡಿದ ದೂರಿನ ಪ್ರಕಾರ, ಅವರು ಕಳೆದ 20 ವರ್ಷಗಳಿಂದ ಕರಾವಳಿ ಬೈಪಾಸ್ ಬಳಿಯ ಸಾಗರ್ ಗಂಗಾ ಕಟ್ಟಡದ ನೆಲಮಹಡಿಯಲ್ಲಿ ‘ಪೂಜಾ ಬೇಕರಿ’ ನಡೆಸುತ್ತಿದ್ದಾರೆ. ಇವರ ಅಂಗಡಿಯ ಪಕ್ಕದಲ್ಲೇ ಅಶೋಕ್ ಎಂಬಾತ ಕಳೆದ ಒಂದು ವರ್ಷದಿಂದ ‘ಕೃಷ್ಣ ಬೇಕರಿ’ ನಡೆಸುತ್ತಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ವಿವರಮೇ 23ರಂದು ಮಧ್ಯಾಹ್ನ ಸುಮಾರು 12:30ರ ವೇಳೆಗೆ ಮುರಳಿಧರ್ ಅವರು ತಮ್ಮ ಬೇಕರಿಯಲ್ಲಿ ಗ್ರಾಹಕರಿಗೆ ವ್ಯಾಪಾರ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಆರೋಪಿ ಅಶೋಕ್ ಇದ್ದಕ್ಕಿದ್ದಂತೆ ಅಂಗಡಿಯ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಕ್ರಮವಾಗಿ ಒಳಗೆ ನುಗ್ಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮುರಳಿಧರ್ ಅವರ ಕಾಲರ್ ಪಟ್ಟಿ ಹಿಡಿದು, ಕೆನ್ನೆಗೆ ಹಾಗೂ ಕುತ್ತಿಗೆಗೆ ಹೊಡೆದು, ಕಾಲಿನಿಂದ ಒದ್ದು ನೆಲಕ್ಕೆ ತಳ್ಳಿದ್ದಾನೆ ಎಂದು…
ಹೆಬ್ರಿ: ಕರಾವಳಿ ಮತ್ತು ಮಲೆನಾಡು ಭಾಗವನ್ನು ಸಂಪರ್ಕಿಸುವ ಆಗುಂಬೆ ಘಾಟಿಯ ಉಡುಪಿ ಜಿಲ್ಲಾ ವ್ಯಾಪ್ತಿಯ ಎರಡನೇ ತಿರುವಿನ ಬಳಿ ಶನಿವಾರ ಸಂಜೆ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಈ ಘಟನೆಯಿಂದಾಗಿ ಈಗಾಗಲೇ ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿದ್ದ ಘಾಟಿ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತಷ್ಟು ತೀವ್ರಗೊಂಡಿತು. ಇತ್ತೀಚಿನ ದಿನಗಳಲ್ಲಿ ಈ ಭಾಗಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ವಾಹನಗಳ ದಟ್ಟಣೆಯಿಂದಾಗಿ ಪ್ರತಿದಿನ ಇಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.ಇದರ ಬೆನ್ನಲ್ಲೇ, ಘಾಟಿಯ ವಿವಿಧ ತಿರುವುಗಳಲ್ಲಿ ಹಲವು ಅಪಾಯಕಾರಿ ಮರಗಳು ರಸ್ತೆಯ ಕಡೆಗೆ ವಾಲಿ ನಿಂತಿರುವುದು ವಾಹನ ಸವಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮುಂಬರುವ ದಿನಗಳಲ್ಲಿ ಭಾರಿ ಗಾಳಿ-ಮಳೆಗೆ ಈ ಮರಗಳು ರಸ್ತೆಗೆ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಇದಲ್ಲದೆ, ಘಾಟಿ ರಸ್ತೆಯುದ್ದಕ್ಕೂ ಬಿದ್ದಿರುವ ತಡೆಗೋಡೆಗಳ ದುರಸ್ತಿ ಕಾರ್ಯವೂ ಇನ್ನೂ ನಡೆದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಗಾರು ಮಳೆ…
ಬೆಂಗಳೂರು: ತಂದೆ-ತಾಯಿಗೆ ಮರ್ಯಾದೆ ಕೊಡುವುದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪತಿಯೊಂದಿಗೆ ಉಂಟಾದ ಜಗಳದಿಂದ ಮನನೊಂದ ಪೊಲೀಸ್ ಕಾನ್ಸ್‌ಟೇಬಲ್ ಪತ್ನಿ (wife) ಪೊಲೀಸ್ ಕ್ವಾಟ್ರಸ್ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಕೆ.ಆರ್.ಪುರಂನಲ್ಲಿ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಪತ್ನಿ ಲಕ್ಷ್ಮೀಪ್ರಿಯಾ (27) ಆತ್ಮಹತ್ಯೆಗೆ ಶರಣಾದ ದುರ್ದೈವಿ. ನಡೆದಿದ್ದೇನು?ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ. ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ನೈಟ್ ಡ್ಯೂಟಿಗೆ ತೆರಳಿದ್ದಾಗ ಇತ್ತ ಕ್ವಾಟ್ರಸ್ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.…
ಉಪ್ಪಿನಂಗಡಿ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಸುಮಾರು ೭ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.ಉಪ್ಪಿನಂಗಡಿ ಠಾಣಾ ಅಕ್ರ:158/2015 ಕಲಂ: 457, 380 ಐಪಿಸಿ ಪ್ರಕರಣದ ಆರೋಪಿಯಾಗಿರುವ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಕ್ರಂ ಯಾನೆ ಬೋಜ ಅಕ್ರ ಬಂಧಿತ ಆರೋಪಿ.ಪೊಲೀಸರು ಆರೋಪಿಯನ್ನು ಮಂಗಳೂರಿನ ಪಣಂಬೂರಿನಲ್ಲಿ ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸೈ ರವರಾದ ಕೌಶೀಕ್ ಬಿಸಿ, ಸಿಬ್ಬಂದಿಯವರಾದ ಹೆಡ್ ಕಾನ್ಸ್ಟೇಬಲ್ ಶಿವರಾಮ್ ರೈ, ಪೊಲೀಸ್ ಕಾನ್ಸ್ಟೇಬಲ್ ಮಹದೇವರವರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.ಆರೊಪಿಯ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿರುತ್ತದೆ.







