ಮಂಗಳೂರು: ಮದ್ಯ ಸೇವಿಸಿ ವಾಹನ ಚಲಾಯಿಸಿದ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಒಟ್ಟು 59 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ.ಇದ್ದು ತಪಾಸಣೆಯ ವೇಳೆ ಮೂವರು ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Author: main-admin
ನವದೆಹಲಿ : ಮುಂದಿನ ಕೆಲವು ದಿನಗಳಲ್ಲಿ ವಾಯುವ್ಯ ಪ್ರದೇಶ ಸೇರಿದಂತೆ ಭಾರತದ ಹಲವಾರು ಭಾಗಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಮೇ 31 ರವರೆಗೆ ವಾಯುವ್ಯ ಭಾರತದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ‘ಮೇ 28-31ರ ಅವಧಿಯಲ್ಲಿ ವಾಯುವ್ಯ ಭಾರತದಲ್ಲಿ ಗುಡುಗು, ಮಿಂಚು ಮತ್ತು ಸಾಂದರ್ಭಿಕ ಗಾಳಿ / ಬಿರುಗಾಳಿಯೊಂದಿಗೆ ಹಗುರ / ಮಧ್ಯಮ ಚದುರಿದಂತೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಮೇ 29 ಮತ್ತು 30ರಂದು ಗರಿಷ್ಠ ಚಟುವಟಿಕೆ ನಂತ್ರ ಕಡಿಮೆಯಾಗುತ್ತದೆ’ ಎಂದು ಐಎಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೇ 28-30ರ ಅವಧಿಯಲ್ಲಿ ವಾಯುವ್ಯ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಜಮ್ಮು ವಿಭಾಗ, ಹಿಮಾಚಲ ಪ್ರದೇಶ ಮೇ 29 ಮತ್ತು 30 ಮತ್ತು ಉತ್ತರಾಖಂಡ ಮೇ 29 ರಂದು ಮಳೆಯಾಗಲಿದೆ. ’28 ಮತ್ತು 29ರಂದು ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ…
ಪುತ್ತೂರಿನ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಸೌದಿ ಅರೇಬಿಯಾ:ಪುತ್ತೂರಿನ ವ್ಯಕ್ತಿಯೊಬ್ಬರು ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮೇ 27ರಂದು ನಡೆದಿದೆ. ಪರ್ಲಡ್ಕ ನಿವಾಸಿ ಅಬ್ದಲ್ಲಾ ಹಾಜಿ ಅವರ ಪುತ್ರ ಹಾರಿಸ್ ದರ್ಬೆ( 43) ಮೃತ ದುರ್ದೈವಿಯಾಗಿದ್ದಾರೆ. ಹಾರಿಸ್ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಉದ್ಯಮಿಯಾಗಿದ್ದರು. ಹಲವಾರು ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದ ಹಾರಿಸ್ ಅವರು ಸಮಾಜ ಸೇವಕರಾಗಿ ಕೂಡ ಕೆಲಸ ಮಾಡುತ್ತಿದ್ದರು. ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಅಕಾಡಮಿ ಇದರ ಸೌದಿ ವಿಭಾಗದಲ್ಲಿ ಸಕ್ರಿಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಜುಬೈಲ್ ನಲ್ಲಿ ಮೃತಪಟ್ಟಿದ್ದ ಹಾರಿಸ್ ನ ಸುದ್ದಿ ತಿಳಿದ ಕುಟುಂಬಸ್ಥರಲ್ಲಿ ಅಕ್ರಂದನ ಮುಗಿಲೇರಿದೆ. ಮೃತರು ತಂದೆ- ತಾಯಿ,ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ಬಂಟ್ವಾಳ : ಹುಡುಗಿಯ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಕೊಲೆ ಮಾಡಲು ಯತ್ನಿಸಿ ವಿಫಲವಾಗಿ ಕೈ ಹಸ್ತವನ್ನು ತುಂಡರಿಸಿ ಪರಾರಿಯಾಗಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಮೇ 21ರಂದು ಸಂತೋಷ್ ಎಂಬಾತನ ಅಕ್ಕನ ವಿಚಾರದಲ್ಲಿ ಶಿವರಾಜ್ ಜೊತೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಲು ಹೋಗಿ ಕುತ್ತಿಗೆಗೆ ಕತ್ತಿಯಿಂದ ಕಡಿದಿದ್ದಾನೆ. ಬಳಿಕ ಕೊಲೆ ಮಾಡಿದ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಶಿವರಾಜ್ ಕೈಯನ್ನು ಅಡ್ಡಹಿಡಿದ ಪರಿಣಾಮವಾಗಿ ಕೈ ತುಂಡಾಗಿದೆ. ಕೂಡಲೇ ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಾರಿಯಾಗಿದ್ದ ಸಂತೋಷ್ ಶುಕ್ರವಾರ ಸಂಜೆ ವೇಳೆ ಕಾರ್ಯಚರಣೆಯಲ್ಲಿದ್ದ ನಗರ ಠಾಣಾ ಪೊಲೀಸರ ತಂಡದ ಬಲೆಗೆ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಈ ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನವದೆಹಲಿ: ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾದ ಉದ್ಘಾಟನಾ ಕಾರ್ಯಕ್ರಮ ನಡೆಯಲು ಸಿದ್ದತೆ ಆಗುತ್ತಿದ್ದು, ಇತ್ತ ಸಂಸತ್ ಭವನದ ಉದ್ಘಾಟನೆಯ ಮುನ್ನಾ ದಿನ ರಾಜದಂಡ `ಸೆಂಗೋಲ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಗೆ ಹಸ್ತಾಂತರ ಮಾಡಲಾಗಿದೆ. ಲೋಕಸಭೆ ಸ್ಪೀಕರ್ ಕುರ್ಚಿ ಪಕ್ಕದಲ್ಲಿ ರಾಜದಂಡ ಅಳವಡಿಸಲಾಗಿದ್ದು, ಸುದೀರ್ಘ ಇತಿಹಾಸ ಹೊಂದಿರುವ ಚಿನ್ನದ ರಾಜದಂಡ ಇದಾಗಿದೆ.ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ.ಭಾರತದ ಸ್ವಾತಂತ್ರ‍್ಯವನ್ನು ಗುರುತಿಸುವ ರಾಜದಂಡವನ್ನು ತಯಾರಿಸುವ ಹೊಣೆಯನ್ನು ಭಾರತದ ಕೊನೆಯ ಗವರ್ನರ್ ಜನರಲ್ ಸಿ ರಾಜಗೋಪಾಲಚಾರಿ ವಹಿಸಿದ್ದರು.
ಕೊಯಮತ್ತೂರು (ತಮಿಳುನಾಡು) : ಕೊಯಮತ್ತೂರು ಜಿಲ್ಲೆಯ ತೊಪ್ಪಂಪಟ್ಟಿ ಬಳಿಯ ಕುರುಡಂಪಾಳ್ಯಂನಲ್ಲಿರುವ ಸಿಆರ್‌ಪಿಎಫ್ ಕೇಂದ್ರೀಯ ತರಬೇತಿ ಕಾಲೇಜಿನಲ್ಲಿ ಶನಿವಾರ ಮಧ್ಯಾಹ್ನ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಕಾನ್‌ಸ್ಟೆಬಲ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ತೂತುಕುಡಿ ಜಿಲ್ಲೆಯ ಪೆರುಮಾಳ್ಕುಲಂ ಮೂಲದ ಜಗನ್ (32) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಜಗನ್ 2ನೇ ಬಾರಿಗೆ ಮದುವೆಯಾದ ನಂತರ ಕೌಟುಂಬಿಕ ಸಮಸ್ಯೆ ಪ್ರಾರಂಭವಾಯಿತು. ಆದರೆ, ಅವರ ಮೊದಲ ಹೆಂಡತಿಯೊಂದಿಗೆ ವಿಚ್ಛೇದನದ ಪ್ರಕರಣವು ಮಧ್ಯಂತರವಾಗಿತ್ತು. ಪೊಲೀಸರ ಪ್ರಕಾರ, ಜಗನ್ ಐಎನ್‌ಎಸ್‌ಎಎಸ್ (ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್) ರೈಫಲ್ ಬಳಸಿ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡು ಗುಂಡುಗಳು ಅವನ ಕುತ್ತಿಗೆಯನ್ನು ಹೊಕ್ಕಿದ್ದವು. ಘಟನೆ ನಡೆದ ಕೂಡಲೇ ಪೆರಿಯನಾಯಕನಪಾಳ್ಯಂ ಡಿಎಸ್‌ಪಿ ನಮಚಿವಾಯಂ, ತುಡಿಯಲೂರು ಇನ್ಸ್‌ಪೆಕ್ಟರ್ ರತಿನಕುಮಾರ್ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಅಲ್ಲದೆ, ಪೊಲೀಸರು ರೈಫಲ್ ಅನ್ನು…
ಕಾರ್ಕಳ: ಜೋಕಾಲಿ ಆಟದಲ್ಲಿ ನಿರತರಾಗಿದ್ದಾಗ ಕತ್ತಿಗೆ ಸೀರೆ ಸುತ್ತಿಕೊಂಡ ಪರಿಣಾಮ ಬಾಲಕಿಯೊಬ್ಬಳು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದೆ.ಅಂತೊಟ್ಟು ನಿವಾಸಿ ಪಿರ್ಯಾದಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು ಮಾನ್ವಿ ( 9) ಜೀವ ಕಳೆದುಕೊಂಡವಳು.ಮೇ 26ರ ಸಂಜೆ 4:00 ಗಂಟೆಗೆ ಮನೆ ಪರಿಸರದಲ್ಲಿ ಸಂಬಂಧಿಕ ಚಿಕ್ಕಪ್ಪ ಉದಯ ಪೂಜಾರಿ ಎಂಬವರ ಮನೆಯ ಬಳಿ ನೆರೆಕರೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಆಕೆಯ ಕುತ್ತಿಗೆಗೆ ಸುತ್ತಿಕೊಂಡಿತ್ತು.ತುರ್ತು ಚಿಕಿತ್ಸೆಗೆಂದು ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕಿಯನ್ನು ಕರೆದೊಯ್ಯಲಾಗಿತ್ತು. ವೈದ್ಯಾಧಿಕಾರಿಯವರು ಮಾನ್ವಿಯನ್ನು ಆರೋಗ್ಯ ತಪಾಸಣೆ ನಡೆಸಿದ್ದು ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದರು.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದಂದೆ ಸಿಎಂ ಆಗಿ ಸಿದ್ಧರಾಮಯ್ಯ, ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದರು. ಅವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಬೆನ್ನಲ್ಲೇ ಇಂದು 24 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ಈಗ ಸಚಿವರ ಪ್ರಮಾಣವಚನ ಕಾರ್ಯದ ಬೆನ್ನಲ್ಲೇ ಸಚಿವ ಸಂಪುಟ ಹಂಚಿಕೆಯೂ ಚುರುಕು ಪಡೆದಿದೆ. ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿಯಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಗೆ ಬೆಂಗಳೂರು ಅಭಿವೃದ್ಧಿ ಮತ್ತು ಜಲಸಂಪನ್ಮೂಲ ಖಾತೆ ನೀಡಲಾಗುತ್ತಿದೆ. ಡಾ.ಜಿ ಪರಮೇಶ್ವರ್ ಗೆ ಗೃಹಖಾತೆ, ಎಂ.ಬಿ ಪಾಟೀಲ್ ಗೆ ಬೃಹತ್ ಕೈಗಾರಿಕೆ, ಹಿರಿಯ ಸಚಿವ ಹೆಚ್ ಕೆ ಪಾಟೀಲ್ ಗೆ ಕಾನೂನು ಮತ್ತು ಸಂಸದೀಯ ಖಾತೆ ಹಂಚಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಸಚಿವರಿಗೆ ಖಾತೆ ಹಂಚಿಕೆಯ ಬಗ್ಗೆ ಕಾಂಗ್ರೆಸ್ ಹೈಕಮಾಡ್ ಸಿಎಂ ಸಿದ್ಧರಾಮಯ್ಯ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಸಂಜೆಯೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದಂತ ಪಟ್ಟಿಯನ್ನು ರಾಜ್ಯಪಾಲರಿಗೆ ಸಿಎಂ…
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಯುಎಸ್ ಭೇಟಿಗೆ ಮುಂಚಿತವಾಗಿ, ಯುಎಸ್ ಕಾಂಗ್ರೆಸ್’ನ ಪ್ರಬಲ ಸಮಿತಿಯು ನ್ಯಾಟೋ (North Atlantic Treaty Organization) ಪ್ಲಸ್’ಗೆ ಸೇರಲು ಭಾರತವನ್ನ ಶಿಫಾರಸು ಮಾಡುವ ಮೂಲಕ ಜಗತ್ತನ್ನ ಅಚ್ಚರಿಗೊಳಿಸಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಭಾರತವು ಆಗ್ನೇಯ ಏಷ್ಯಾದಿಂದ ಯುರೋಪ್, ಆಫ್ರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳು ಮತ್ತು ಕೊಲ್ಲಿ ರಾಷ್ಟ್ರಗಳವರೆಗೆ ತನ್ನ ಇಮೇಜ್’ನ್ನ ಬ್ರಾಂಡ್ ಮಾಡಿದೆ. ಈ ರೀತಿಯಾಗಿ, ನವ ಭಾರತದ ಸೂರ್ಯ ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಭರವಸೆಯ ಕಿರಣವಾಗಿ ಹೊಳೆಯುತ್ತಿದ್ದಾನೆ. ಬಹುಶಃ ಇದೇ ಕಾರಣದಿಂದ ಅಮೆರಿಕ ಕೂಡ ಭಾರತವನ್ನ ನ್ಯಾಟೋದ ಭಾಗವಾಗಿಸಲು ಬಯಸಿದೆ. ನ್ಯಾಟೋ ಪ್ಲಸ್ ಎಂದರೇನು?ನ್ಯಾಟೋ ಪ್ಲಸ್ (ಈಗ ನ್ಯಾಟೋ ಪ್ಲಸ್ 5) ಎಂಬುದು ಭದ್ರತಾ ವ್ಯವಸ್ಥೆಯಾಗಿದ್ದು, ಇದು ಜಾಗತಿಕ ರಕ್ಷಣಾ ಸಹಕಾರವನ್ನ ಹೆಚ್ಚಿಸಲು ನ್ಯಾಟೋ ಮತ್ತು ಐದು ಸಮ್ಮಿಶ್ರ ರಾಷ್ಟ್ರಗಳಾದ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಇಸ್ರೇಲ್ ಮತ್ತು ದಕ್ಷಿಣ ಕೊರಿಯಾವನ್ನ ಒಟ್ಟುಗೂಡಿಸುತ್ತದೆ. ಭಾರತದ ಸೇರ್ಪಡೆಯು ಈ ದೇಶಗಳ ನಡುವೆ ಗುಪ್ತಚರ ಮಾಹಿತಿಯನ್ನ…
ಬೆಂಗಳೂರು;ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಶಾಂತಿ ಕದಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು.ಇದರ ಬೆನ್ನಲ್ಲೇ ಬಜರಂಗದಳ ನಿಷೇಧ ಕುರಿತು ಚರ್ಚೆ ನಡೆದಿತ್ತು. ಚುನಾವಣೆ ಬಳಿಕ ಮೊನ್ನೆಯಷ್ಟೇ ಪ್ರಿಯಾಂಕ ಖರ್ಗೆ ಅವರುಶಾಂತಿ ಕದಡಿದರೆ ಆರೆಸ್ಸೆಸ್, ಬಜರಂಗದಳ ಎಂದು ನೋಡುವುದಿಲ್ಲ.ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಭಜರಂಗದಳ, ಆರ್‌ಎಸ್‌ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ, ಸಿದ್ದರಾಮಯ್ಯ ರಾಜಕೀಯ ಮುಗಿಯುತ್ತೆ ಎಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ ಖರ್ಗೆ- ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ ಅಂತಿದಾರೆ. ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲಾ. ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿ ನೋಡಿ, ಆಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಶಕ್ತಿಯನ್ನು ನಾವು ತೋರಿಸುತ್ತೇವೆ ಎಂದು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ ಖರ್ಗೆ,ಬಿಜೆಪಿಗರು, ಪದೇ ಪದೇ, RSS ಬ್ಯಾನ್ ಮಾಡಿ ನೋಡಿ…










