ಉಡುಪಿ: ಸಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನಿರ್ದೇಶನದಂತೆ ಮಾಸಿಕ ಪಿಂಚಣಿ ಯೋಜನೆಗಳಾದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾಸುರಕ್ಷಾ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಸಿಕ ಪಿಂಚಣಿ ವಿತರಣೆಯನ್ನು ಆಧಾರ್ ಆಧಾರಿತ ನೇರ ಹಣ ಸಂದಾಯ ವ್ಯವಸ್ಥೆಯಡಿ ಫಲಾನುಭವಿಗಳ ಬ್ಯಾಂಕ್/ಅಂಚೆ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಎಲ್ಲಾ ಪಿಂಚಣಿದಾರರು ಪಿಂಚಣಿ ಪಾವತಿ ಖಾತೆಗೆ ಕಡ್ಡಾಯವಾಗಿ ಆಧಾರ್ ಜೋಡಣೆ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು ಎಂದರು. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಹಾಗೂ ಮ್ಯಾಪಿಂಗ್ ಮಾಡಿಸಿಕೊಳ್ಳದಿದ್ದರೆ ಮುಂದಿನ ನವೆಂಬರ್ ತಿಂಗಳನಿಂದ ಅವರ ಖಾತೆಗೆ ಪಿಂಚಣಿ ದುಡ್ಡು ಜಮೆಯಾಗುವುದಿಲ್ಲ.ಪಿಂಚಣಿ ಪಾವತಿ ಸ್ಥಗಿತಗೊಳ್ಳುವುದು. ಹೀಗಾಗಿ ಎಲ್ಲಾ ಫಲಾನುಭವಿ ಪಿಂಚಣಿದಾರರು ಆಧಾರ್ ಜೋಡಣೆ, ಮ್ಯಾಪಿಂಗ್ ಮಾಡುವಂತೆ ಡಾ.ವಿದ್ಯಾಕುಮಾರಿ ಮನವಿ ಮಾಡಿದರು. ಎನ್‌ಪಿಸಿಐ…
Author: main-admin
ಬೆಂಗಳೂರು: ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಬಿಪಿಎಲ್ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಹೊಂದಿಸಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ಹಾಗೂ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ನೀಡುವುದನ್ನು ಮುಂದುವರಿಸಲಾಗುತ್ತದೆ. ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು. ಆಹಾರ ಇಲಾಖೆ ಸಚಿವ ಕೆಎಸ್ ಮುನಿಯಪ್ಪ ಇತ್ತೀಚೆಗೆ ಅಕ್ಟೋಬರ್ ನಿಂದ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿದ್ದರು. ಸದ್ಯಕ್ಕೆ 10 ಕೆಜಿ ಅಕ್ಕಿ ಇಲ್ಲ. 5 ಕೆಜಿ ಅಕ್ಕಿ ಹಣ ಖಾತೆಗೆ ಜಮಾ ಮಾಡಲಾಗುವುದು.
ಮಂಗಳೂರು: ನಗರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ 11 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ವಿಮಾನದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ, ಇವರು ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ವಿಮಾನದಲ್ಲಿದ್ದ ಮುಖ ಗವಸು ಧರಿಸಿದ್ದ ಪುರುಷ ಪ್ರಯಾಣಿಕನೊಬ್ಬನ ಕೆನ್ನೆಯ ಭಾಗ ಅಸಹಜವಾಗಿ ಕಂಡು ಬರುತ್ತಿತ್ತು. ಅದರಂತೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಾಯಲ್ಲಿ ಎರಡು ಚಿನ್ನದ ತುಂಡುಗಳು ಪತ್ತೆಯಾಗಿದೆ. ಈತ ಚಿನ್ನವನ್ನು ಅಡಗಿಸಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನು. ಅದೇ ರೀತಿ ಮಹಿಳಾ ಪ್ರಯಾಣಿಕೆಯೊಬ್ಬಳು ತನ್ನ ಕೂದಲನ್ನು ಕಟ್ಟಿರುವ ಹ್ಯಾರ್ ಬ್ಯಾಂಡ್‌ನೊಳಗಡೆ ಚಿನ್ನವನ್ನು ಮರೆಮಾಡಿ ಸಾಗಾಟ ಮಾಡುತ್ತಿದ್ದಳು. ಎರಡು ಪ್ರಕರಣಗಳಲ್ಲಿ, ಒಟ್ಟು 191 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 11,44,090 ರೂ. ಎಂದು ಅಂದಾಜಿಸಲಾಗಿದೆ. ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ…
ಮಂಗಳೂರು: ಅತಿವೇಗದಿಂದ ಚಾಲನೆ ಮಾಡಿಕೊಂಡು ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಹೊಂಡಕ್ಕಿಳಿದ ಘಟನೆ ನಗರದ ಹೊರವಲಯದ ಗುರುಪುರದ ಬಳಿ ನಡೆದಿದೆ. ಬಂಟ್ವಾಳ ಕೈಕಂಬ ಜೋಡುಮಾರ್ಗ ನಿವಾಸಿ ಪಿ.ಎಸ್.ಮೊಹಮ್ಮದ್ ಎಂಬವರು ಅತಿವೇಗದಿಂದ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಗುರುಪುರ ತಲುಪುತ್ತಿದ್ದಂತೆ ಕಾರು ರಸ್ತೆ ತೊರೆದು ಅತಿ ವೇಗದಿಂದ ರಸ್ತೆ ಬದಿಯ ಹೊಂಡಕ್ಕಿಳಿದಿದೆ. ಆದರೆ ಕಾರಿನಲ್ಲಿದ್ದವರಿಗೆ ಏನೂ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎದೆ ಝಲ್ಲೆನಿಸುವ ಈ ಸಂಪೂರ್ಣ ಘಟನೆಯು 8ಸೆಕೆಂಡ್ ನ ವೀಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆ ಅಕ್ಟೋಬರ್ 15ರಂದು ನಡೆದಿದ್ದು, ಇಂದು ವೀಡಿಯೋ ವೈರಲ್ ಆಗಿದೆ. ಇದೀಗ ಈ ಬಗ್ಗೆ ಪ್ರಕರಣ ದಾಖಲಿಸಿರುವ ಬಜ್ಪೆ ಠಾಣಾ ಪೊಲೀಸರು ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿ ವಾಹನ ಚಾಲಕನಿಗೆ 3 ಸಾವಿರ ರೂ. ದಂಡ ವಿಧಿಸಿದ್ದಾರೆ.
ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಗ್ಯಾಸ್ ಸಿಲಿಂಡರ್ಗಳ ಬೆಲೆಗಳು ಗಣನೀಯ ಏರಿಕೆಯನ್ನು ಕಾಣುತ್ತಿವೆ, ಇದರಿಂದಾಗಿ ಮಧ್ಯಮ ವರ್ಗದ ಜನರು ಮತ್ತು ಬಡ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆಯಿಂದಾಗಿ, ಮಾಸಿಕ ವೆಚ್ಚಗಳು ಗಮನಾರ್ಹವಾಗಿ ಹೆಚ್ಚಾಗುತ್ತವೆ, ಇದು ಸಾಮಾನ್ಯ ಜನರಿಗೆ ಸಾಕಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಮಾಧ್ಯಮ ಮೂಲಗಳ ಪ್ರಕಾರ, ಈಗ ದೇಶದ ಮಹಿಳೆಯರು ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆಯಿಂದ ಸ್ವಾತಂತ್ರ್ಯ ಪಡೆಯಬಹುದು ಎನ್ನಲಾಗಿದೆ. ಹೌದು, ಗ್ಯಾಸ್ ಸಿಲಿಂಡರ್ಗಳ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡ ಜನರು ಹೆಚ್ಚು ತೊಂದರೆಗೀಡಾಗಿದ್ದಾರೆ. ಅವರಿಗೆ, ಸರ್ಕಾರವು ಅನಿಲ ಬೆಲೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ, ಇದರಿಂದ ಆರ್ಥೀಕವಾಗಿ ಸಹಾಯವಾಗಲಿದೆ. ಈಗ ನೀವು ಕೇವಲ 500 ರೂ.ಗೆ ದೇಶೀಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಪಡೆಯುತ್ತೀರಿ. ಈಗ ಕೇಂದ್ರ ಸರ್ಕಾರವು ನಿಮಗೆ ₹ 500 ಕ್ಕೆ ಗ್ಯಾಸ್ ಸಿಲಿಂಡರ್ ಅನ್ನು ಒದಗಿಸಲಿದೆ . ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ(3ನೇ ಹಂತ)ಯಡಿ ಬಡ ಕುಟುಂಬಗಳ…
ಪುಣೆ : ಆನ್ ಲೈನ್ ಗೇಮಿಂಗ್ ಆ್ಯಪ್ ಡ್ರಿಮ್ 11 ನಲ್ಲಿ 1.5 ಕೋಟಿ ಹಣ ಗೆದ್ದ ಸಬ್ ಇನ್ಸ್‌ಪೆಕ್ಟರ್ ಸಸ್ಪೆಂಡ್ ಆದ ಘಟನೆ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಅವರು ಆನ್ ಲೈನ್ ಕ್ರಿಕೆಟ್ ಗೇಮಿಂಗ್ ಆ್ಯಪ್ ನಲ್ಲಿ 1.5 ಕೋಟಿ ಹಣ ಗೆದ್ದಿದ್ದರು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆದ ಬಳಿಕ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. ಈ ವಿಚಾರ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋಮನಾಥ್ ಅವರು ಅನುಮತಿಯಿಲ್ಲದೆ ಆನ್‌ಲೈನ್ ಆಟವನ್ನು ಆಡಿದ್ದರು ಮತ್ತು ಪೊಲೀಸ್ ಸಮವಸ್ತ್ರವನ್ನು ಧರಿಸಿ ಮಾಧ್ಯಮ ಸಂದರ್ಶನಗಳನ್ನು ನೀಡಿದ್ದಾರೆ. ಅವರು ಕರ್ತವ್ಯ ಲೋಪದ ನಿಯಮವನ್ನು ಉಲ್ಲಂಘಿಸಿದ ಪರಿಣಾಮ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ತನಿಖೆ ನಡೆಸಿದ ಉಪ ಪೊಲೀಸ್ ಆಯುಕ್ತ, ಸ್ವಪ್ನಾ ಗೋರ್ ಅವರು ಹೇಳಿದ್ದಾರೆ. ಪಿಂಪ್ರಿ ಚಿಂಚ್‌ವಾಡ್ ಪೊಲೀಸ್ ಮುಖ್ಯಸ್ಥರು ಪೊಲೀಸ್ ದರ್ಜೆಯ ಅಧಿಕಾರಿಯ ಉಪ ಆಯುಕ್ತರಿಗೆ…
ಬೆಳ್ತಂಗಡಿ: 2012ರಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯಳ 28ನೇ ವರ್ಷದ ಹುಟ್ಟುಹಬ್ಬದಂದು ಆಕೆಯ ಸಮಾಧಿ ಬಳಿಯೇ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಸೌಜನ್ಯ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಳು. ಬುಧವಾರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ ನಿರ್ಮಿಸಿದ ಅಂದಾಜು ಒಂದುವರೆ ಅಡಿ ಎತ್ತರದ ಕೂತಿರುವ ಶೈಲಿಯ ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಪ್ರಯುಕ್ತ 9 ತಂಡದ ಭಜನೋತ್ಸವ ನಡೆಯಿತು. ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಆ ಸಂದರ್ಭ ಹಲವು ಸುಳ್ಯ ಭಾಗದ ಒಕ್ಕಲಿಗ ನಾಯಕರು ಪಾಲ್ಗೊಂಡಿದ್ದರು. ಪ್ರಾರ್ಥನೆ ನೆರವೇರಿಸಿದ ಒಕ್ಕಲಿಗ ಹಾಗೂ ಬಿಜೆಪಿ ಮುಖಂಡರಾದ ದಕ್ಷಿಣ ಕನ್ನಡ ಜೇನು ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರು, ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡುವ ಕೆಲಸವಾಗಲಿ ಎಂದು ಪ್ರಾರ್ಥಿಸಿದರು.
ಮಂಗಳೂರು : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಬದಿಯ ವಿದ್ಯುತ್ ಕಂಬ ತಲೆಗೆ ಬಡಿದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಬುಧವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಕಾಸರಗೋಡು ನಗರ ಹೊರವಲಯದ ಕರಂದಕ್ಕಾಡ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಮನ್ನಿಪ್ಪಾಡಿಯ ಮನ್ವಿತ್ (15) ಎಂದು ಗುರುತಿಸಲಾಗಿದೆ. ಈತ ಚೆಮ್ನಾಡ್ ಜಮಾಅತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ಶಾಲೆ ಬಿಟ್ಟು ಮನೆಗೆ ತೆರಳಲು ಮಧೂರಿಗೆ ತೆರಳುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕರಂದಕ್ಕಾಡ್ ಬಳಿ ರಸ್ತೆ ಬದಿಯ ಕಂಬಕ್ಕೆ ತಲೆ ಬಡಿದಿದ್ದು, ಕುಸಿದು ಬಿದ್ದ ಮನ್ವಿತ್ ನನ್ನು ಕೂಡಲೇ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟನು ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಟ್ವಾಳ: ಸ್ಟಾರ್ , ಚಲನಚಿತ್ರ ನಟಿ ರಾಧಿಕಾ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಲತಃ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲುಕಿನ ಮಾದನಗಿರಿ ನಿವಾಸಿ ಮಹಾದೇವ ಮಾರಿಪಟಗಾರ್ ಅವರ ಪತ್ನಿ ನಾಗರತ್ನ (33) ಕಾಣೆಯಾದ ಮಹಿಳೆ.ತಾಲೂಕಿನ ಅಮ್ಟೂರು ಗ್ರಾಮದ ರಾಯಪ್ಪನಕೋಡಿ ಎಂಬಲ್ಲಿ ಚಲನ ಚಿತ್ರ ನಟಿ ರಾಧಿಕ ಅವರ ಎಸ್ಟೇಟ್ ನಲ್ಲಿ ಕಳೆದ ಆರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ ನಾಗರತ್ನ ಇದೀಗ ಕಾಣೆಯಾಗಿರುವುದು. ನಾಗರತ್ನ ಅವರ ಪತಿ ಮಹಾದೇವ ಮಾರಿಪಟಗಾರ್ ಅವರ ಜೊತೆಯಲ್ಲಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅ.13 ರಂದು ಗಂಡ ಹೆಂಡತಿ ಇಬ್ಬರು ಎಸ್ಟೇಟ್ ನಲ್ಲಿ ಕೆಲಸಕ್ಕೆಹೋಗಿದ್ದು, ಅ ದಿನ ಬೆಳಿಗ್ಗೆ 10.30 ರ ವೇಳೆಗೆ ಎಸ್ಟೇಟ್ ನಲ್ಲಿರುವ ಮನೆಗೆ ಚಾ ಕುಡಿಯಲು ಹೋಗಿ ಬರುತ್ತೇನೆ ಎಂದು ಹೋದವಳು ಮತ್ತೆ ಕೆಲಸದ ಕಡೆ ಬಂದಿಲ್ಲ. ಚಹಾ ಕುಡಿಯಲು ಹೋದವಳು ಯಾಕೆ ಬಂದಿಲ್ಲ ಎಂದು ಮನೆ ಕಡೆ…
ಮಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಕಾರು ಹರಿದು ಯುವತಿಯೊಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಲೇಡಿಹಿಲ್ ನಲ್ಲಿ ನಡೆದಿದೆ. ಕುದ್ರೋಳಿ ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದವರ ಕಾರು ಎರಗಿದ್ದು ಸ್ಥಳದಲ್ಲಿಯೇ ಓರ್ವ ಯುವತಿ ಮೃತಪಟ್ಟಿದ್ದಾಳೆ. ಸಂಜೆ 4 ಗಂಟೆ ವೇಳೆಗೆ ಘಟನೆ ನಡೆದಿದ್ದು, ಐವರು ಯುವತಿಯರು ಮಣ್ಣಗುಡ್ಡ ಮಹಾನಗರ ಪಾಲಿಕೆ ಸ್ವಿಮಿಂಗ್ ಪೂಲ್ ಬಳಿ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಣ್ಣಗುಡ್ಡದ ಕಮ್ಲೇಶ್ ಬಲ್ ದೇವ್ ಎಂಬಾತ ಮಣ್ಣಗುಡ್ಡ ಜಂಕ್ಷನ್ ನಿಂದ ಲೇಡಿಹಿಲ್ ಕಡೆಗೆ ಹುಂಡೈ ಇಯೋನ್ ಕಾರನ್ನು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯುವತಿಯರ ಗುಂಪಿಗೆ ಡಿಕ್ಕಿಯಾಗಿ ಸ್ಥಳದಿಂದ ಅದೇ ವೇಗದಲ್ಲಿ ಪರಾರಿಯಾಗಿದ್ದಾನೆ. ನಂತರ ಆತ ಕಾರನ್ನು ಹೊಂಡ ಶೋರೂಂ ಎದುರು ಪಾರ್ಕ್ ಮಾಡಿ ಮನೆಗೆ ತೆರಳಿದ್ದಾನೆ. ಬಳಿಕ ಟ್ರಾಫಿಕ್ ಠಾಣೆಗೆ ತಂದೆ ಬಲದೇವ್ ಅವರೊಂದಿಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವತಿ ಸುರತ್ಕಲ್ ಕಾನ ನಿವಾಸಿ ರೂಪಶ್ರೀ…










