Author: main-admin

ಮಂಗಳೂರು: ಅಪ್ರಾಪ್ತೆಯನ್ನು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕಾರ್ಯಾಚರಣೆ ನಡೆಸಿದ ಪಣಂಬೂರು ಪೊಲೀಸರು ಬಾಲಕಿಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ ಕಸಬಾ ಬೆಂಗ್ರೆ ನಿವಾಸಿ ಮೊಹಮ್ಮದ್ ಸರ್ಫಾಝ್ ( 22) ಬಂಧಿತ ಆರೋಪಿ ಅಪ್ರಾಪ್ತೆಯನ್ನು ಅಪಹರಿಸಿರುವ ಪ್ರಕರಣಕ್ಕೆ ಸಂಬಂದಿಸಿದಂತೆ ಆಗಸ್ಟ್ 10ರಂದು ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಅಪಹರಣಕ್ಕೊಳಗಾದ ಬಾಲಕಿಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಸರ್ಫ್‌ರಾಝ್ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ. ಇದೀಗ ಆರೋಪಿ ಮೇಲೆ ಪೊಕ್ಸೊ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Read More

ಬೆಂಗಳೂರು: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಡುವ ರಾಷ್ಟ್ರಪತಿ ಪದಕ ಈ ಬಾರಿ ಕರ್ನಾಟಕದ 20 ಪೊಲೀಸ್ ಅಧಿಕಾರಿಗಳಿಗೆ ಘೋಷಿಸಿಸಲಾಗಿದೆ. ಕರ್ನಾಟಕ ರಾಜ್ಯದ 20 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದು, ಐಪಿಎಸ್‌ ಅಧಿಕಾರಿಗಳಾದ ಸಿಮಂತ್ ಕುಮಾರ್ ಸಿಂಗ್, ಎಸ್‌. ಮುರುಗನ್, ಸಂದೀಪ್ ಪಾಟೀಲ್‌, ಸಿಐಡಿ ಎಸ್​ಪಿ ರಾಘವೇಂದ್ರ ಕೆ.ಹೆಗ್ಡೆ, ಬಿ. ಎಸ್. ಮೋಹನ್ ಕುಮಾರ್, ಶಿವಶಂಕರ್, ಎಂ.ಬಿ.ಎನ್. ಶ್ರೀನಿವಾಸ್, ಅನಿಲ್ ಕುಮಾರ್. ಪಿ. ಸೇರಿದಂತೆ ಒಟ್ಟು 20 ಮಂದಿ ಅಧಿಕಾರಿಗಳ ಹೆಸರು ಘೋಷಣೆಯಾಗಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಕೂಡ ಸಾಧಕ ಪೊಲೀಸರಿಗೆ ರಾಷ್ಟ್ರಪತಿ ಪದಕ ನೀಡಲಾಗುತ್ತದೆ.

Read More

ಬೆಂಗಳೂರು : ನಟ ಉಪೇಂದ್ರ ವಿರುದ್ಧ ಜಾತಿನಿಂದಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದು, ಮಧ್ಯಂತರ ತಡೆಯಾಜ್ಞೆ ನೀಡಿ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಉಪೇಂದ್ರ ಅವರು ‘ಸಮುದಾಯದ ವಿರುದ್ಧ ನಾನು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಒಳ್ಳೇದನ್ನು ಮಾಡುವಾಗ ಟೀಕಿಸುವರು ಇದ್ದೇ ಇರುತ್ತಾರೆ.ಈ ಮಾತಿಗೆ ಪೂರಕವಾಗಿ ಮಾತ್ರವೇ ಗಾದೆ ಬಳಸಲಾಗಿದೆ ಹೊರತು ಆಕ್ಷೇಪ ವ್ಯಕ್ತವಾದ ಕೂಡಲೇ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದೇನೆ. ಹಳೆಯ ಗಾದೆ ಮಾತನ್ನು ಉಲ್ಲೇಖಿಸಿದ್ದು ಜಾತಿ ನಿಂದನೆ ಅಲ್ಲ. ಪ್ರಚಾರ ಪಡೆಯಲೆಂದು ಉಪೇಂದ್ರ ದೂರು ದಾಖಲಿಸಿದ್ದಾರೆ. ವಾಟ್ಸಪ್ ಮೂಲಕ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಹೀಗಾಗಿ FIR ರದ್ದು ಕೋರಿ ಮನವಿ ಮಾಡಿದ್ದಾರೆ. ಇದಕ್ಕೂ ಮುಂಚೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಿಂದ ದೂರುದಾರರ ಸಮ್ಮುಖದಲ್ಲಿ ಉಪೇಂದ್ರ ಅವರ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರು ನಡೆಸಿದ್ದರು.

Read More

ಮಂಗಳೂರು: ನಿಷೇಧಿತ ಪಿಎಫ್ಐ ಸಂಘಟನೆಗೆ ವಿದೇಶದಿಂದ ಫಂಡಿಗ್ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಮಂಗಳೂರಿನ ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಮೆಲ್ಕಾರ್‌ನಲ್ಲಿ ಎನ್ಐಎ ದಾಳಿ ನಡೆದಿದೆ. ಇಲ್ಲಿನ ಇಬ್ರಾಹಿಂ ಎಂಬವವರ ಮನೆಯಲ್ಲಿ ಎನ್ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳ ರಾಜ್ಯದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಇಬ್ರಾಹಿಂ ಪಿಎಫ್ಐ ನಿಷೆಧದ ಬಳಿಕ ಭೂಗತನಾಗಿದ್ದ. ಇದೀಗ ಇಬ್ರಾಹಿಂ ಮನೆಗೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಈ ದಾಳಿ ವೇಳೆ ಇಬ್ರಾಹಿಂ ಮನೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಈ ಹಿಂದೆ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಅನ್ನು ಎನ್ಐಎ ಭೇದಿಸಿತ್ತು. ಈ ವೇಳೆ ಬಂಧಿತರ ವಿಚಾರಣೆ ಸಂದರ್ಭ ಇಬ್ರಾಹಿಂ ಹೆಸರು ಪ್ರಸ್ತಾಪಗೊಂಡಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್‌ಗೆ ಇಬ್ರಾಹಿಂ ಲಿಂಕ್ ಇದೆ ಎಂಬುದು ತಿಳಿದುಬಂದಿದೆ. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್ವರ್ಕ್ ಅನ್ನು ಬೇಧಿಸಿರುವ…

Read More

ಹುಬ್ಬಳ್ಳಿ: ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಫೋಟೋಗಳನ್ನು ಅಸಭ್ಯವಾಗಿ ಇನ್‌ಸ್ಟ್ರಾಗ್ರಾಂನಲ್ಲಿನ ಫೋಟೊಗಳನ್ನು ಫೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಮೂವರು ಆರೋಪಿಗಳು ಅದೇ ಖಾಸಗಿ ಕಾಲೇಜಿನವರಾಗಿದ್ದು, ಇನ್ನೊಂದು ಯುವಕರು ಹಾಗೂ ಯುವತಿಯ ಗುಂಪಿನ‌ ಮೇಲೆ ರಿವೆಂಜ್ ತೀರಿಸಿಕೊಳ್ಳಲು ಮಾಡಿದ್ದು ಎಂಬ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಕರಣದ ಎ1 ಆರೋಪಿ ಹಾಗೂ ಮತ್ತಿಬ್ಬರನ್ನು ಮತ್ತೊಂದು ಗುಂಪಿನ ಯುವಕರು ಸೇರಿಸಿಕೊಳ್ಳುತ್ತಿರಲಿಲ್ಲ. ಹೀಗಾಗಿ ಅವರ ಕಡೆಯ ವಿದ್ಯಾರ್ಥಿನಿಯರ ಫೋಟೋಗಳನ್ನು ಅಸಭ್ಯವಾಗಿ ವೈರಲ್ ಮಾಡಿದ್ರೆ ಅವರಿಗೆ ನಾಟುತ್ತದೆ ಎಂದು ಭಾವಿಸಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಇದರಲ್ಲಿ ಎ1 ಆರೋಪಿಯೇ ಮಾಸ್ಟರ್ ಮೈಂಡ್ ಆಗಿದ್ದು, ಸೈಬರ್ ಹಾಗೂ ಕಂಪ್ಯೂಟರ್ ಬಗ್ಗೆ ಮಾಹಿತಿ ಇದ್ದದ್ದರಿಂದ ಮೂವರು ಸೇರಿ ಈ ಕೃತ್ಯ ಮಾಡಿದ್ದಾರೆ. ಇನ್ನೂ ತನಿಖೆ ಮುಂದುವರೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್…

Read More

ಬೆಳ್ತಂಗಡಿ:ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಆ 13 ರಂದು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಎಂಬಲ್ಲಿ ನಡೆದಿದೆ. ಇಲ್ಲಿನ ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತ ಯುವತಿ.ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಸುಮಾ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದಳು.ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

Read More

ಉಳ್ಳಾಲ: ಪುಂಜಾಲಕಟ್ಟೆಯಿಂದ ನಾಪತ್ತೆಯಾಗಿದ್ದ ಯುವಕನ ಶವ ಉಳ್ಳಾಲ ಉಳಿಯದ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ‌ ಗ್ರಾಮದ ನಿವಾಸಿಗಳಾದ ತನಿಯ ಮತ್ತು ಚೋಮು ದಂಪತಿ ಪುತ್ರ ರಾಜೇಶ್ (27)ಮೃತ ಯುವಕ. ರಾಜೇಶ್ ಕಳೆದ ಶುಕ್ರವಾರ ಸಂಜೆ 4 ಗಂಟೆಗೆ ಮನೆಯಿಂದ ತೆರಳಿದ್ದು ವಾಪಾಸಾಗಿರಲಿಲ್ಲ. ಈ ಬಗ್ಗೆ ಪೋಷಕರು ಪೂಂಜಾಲಕಟ್ಟೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಿನ್ನೆ ಮಂಗಳೂರಿನ ನೇತ್ರಾವತಿ ಸೇತುವೆಯಲ್ಲಿ ರಾಜೇಶ್ ಅವರ ಬೈಕ್ ದೊರಕಿತ್ತು. ಇಂದು ಬೆಳಿಗ್ಗೆ ಉಳ್ಳಾಲ ಉಳಿಯದ ನೇತ್ರಾವತಿ ನದಿಯಲ್ಲಿ ತೇಲುತ್ತಿದ್ದ ಮೃತದೇಹವನ್ನ ಸ್ಥಳೀಯ ಮೀನುಗಾರರಾದ ಪ್ರೇಮ್ ಪ್ರಕಾಶ್ ಡಿ ಸೋಜಾ ಮತ್ತು ಸ್ನೇಹಿತರು ಎಳೆದು ದಡಕ್ಕೆ ಹಾಕಿದ್ದಾರೆ. ಸ್ಥಳಕ್ಕೆ ತೆರಳಿದ ಉಳ್ಳಾಲ ಪೊಲೀಸರು ಮೃತದೇಹವನ್ನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ರವಾಣಿಸಿದ್ದು ರಾಜೇಶ್ನ ಪೋಷಕರು ಶವದ ಗುರುತು ಪತ್ತೆ ಹಚ್ಚಿದ್ದಾರೆ.

Read More

ಉಡುಪಿ: ನಿಗದಿತ ಅವಧಿ ಮೀರಿ ಪಬ್‌ಗಳು ಕಾರ್ಯಚರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸರು, ಕಾರ್ಯಾಚರಣೆ ನಡೆಸಿ ಪಬ್ ಗಳ ಡಿಜೆಯನ್ನು ಸ್ಥಗಿತಗೊಳಿಸಿ ಎಚ್ಚರಿಕೆ ನೀಡಿದ್ದಾರೆ. ವಾರಾಂತ್ಯವಾದ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮಣಿಪಾಲದಲ್ಲಿ ಅನಧಿಕೃತ ಪಬ್ ಗಳು ಮತ್ತು ಅವಧಿ ಮೀರಿ ಕಾರ್ಯಾಚರಿಸುತ್ತಿರುವ ಪಬ್ ಗಳ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚೆಗೆ ದೂರು ನೀಡಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿನ 6 ಅಕ್ರಮ ಪಬ್‌ನ ಡಿಜೆ ನಿಲ್ಲಿಸಿ ಅವುಗಳ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹಲವು ಪಬ್‌ಗಳಲ್ಲಿ ರಾಜಕೀಯ ನಾಯಕರ ಬೆಂಬಲದಿಂದ ತಡರಾತ್ರಿವರೆಗೂ ಮದ್ಯ, ಗಾಂಜಾ, ಧ್ವನಿವರ್ಧಕ ಬಳಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಜಿಲ್ಲಾ ಭೇಟಿ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಬ್‌ಗಳನ್ನು ನಿಗದಿತ ಅವಧಿ ರಾತ್ರಿ 12 ಗಂಟೆಯ ಒಳಗೆ ಮುಚ್ಚಲು ಪೊಲೀಸರು ತಾಕೀತು ಮಾಡಿದ್ದಾರೆ. ಮದ್ಯ ಹೊರತು ಯಾವುದೇ ಧ್ವನಿವರ್ಧಕ ಬಳಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Read More

ಉಪ್ಪಿನಂಗಡಿ : ಹಿರಿಯ ನಾಗರಿಕರೊಬ್ಬರನ್ನು ಬೈಕ್‌ ನಲ್ಲಿ ಆಗಮಿಸಿದ ಅಪರಿಚಿತ ಯುವಕನೋರ್ವ ಪರಿಚಿತನಂತೆ ಮಾತನಾಡಿಸಿ, ಕೊರೋನ ಸಂದರ್ಭದಲ್ಲಿ ಪ್ರಧಾನಿ ಮೋದಿಯ ಹಣ ಬೇಕಾದಷ್ಟು ಬಂದಿದೆ. ಅದನ್ನು ನಿಮಗೆ ಸಿಗುವ ಹಾಗೆ ಮಾಡುತ್ತೇನೆ ಎಂದು ನಂಬಿಸಿ ಅದಕ್ಕಾಗಿ ಏಳು ಸಾವಿರ ರೂ. ಪಡೆದು ವಂಚಿಸಿ ಪರಾರಿಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಪದ್ಮುಂಜ ಸಮೀಪದ ದೇವಪ್ಪ ಗೌಡ (65)ಎಂಬವರು ಉಪ್ಪಿನಂಗಡಿಯಲ್ಲಿ ಅಡಿಕೆ ಮಾರಾಟ ಮಾಡಿ ಹಿಂದಿರುಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಆಗಮಿಸಿದ ಯುವಕನೋರ್ವ, ನಾನು ನಿಮ್ಮ ಮಗಳ ಶಾಲಾ ಸಹಪಾಠಿ ಮೋಹನ್ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಲ್ಲದೆ, ತಾನೀಗ ಕೆನರಾ ಬ್ಯಾಂಕ್‌ನಲ್ಲಿರೋದು. ಕೊರೋನ ಸಂದರ್ಭದಲ್ಲಿ ಬಂದ ಮೋದಿಯವರ ಹಣ ಬ್ಯಾಂಕ್‌ನಲ್ಲಿ ಹಾಗೆನೇ ಕೊಳೆಯುತ್ತಾ ಇದೆ. ಅದನ್ನು ಯಾರ ಅಕೌಂಟ್‌ಗೂ ಹಾಕಬಹುದು. ನಿಮ್ಮ ಪಾಸ್ ಪುಸ್ತಕ, ಆಧಾರ್ ಕಾರ್ಡ್‌ನ ಜೆರಾಕ್ಸ್‌ ಕಾಪಿ ಕೊಟ್ಟರೆ ಸಾಕು. ಅದಕ್ಕಾಗಿ ನೀವು ನನಗೆ 7 ಸಾವಿರ ರೂ. ನೀಡಿದರೆ ಸಾಕು ಎಂದೆಲ್ಲಾ ಮಾತಿನಲ್ಲಿ ನಂಬಿಸಿದ್ದಾನೆ. ಆತನ ಮಾತನ್ನು ನಂಬಿದ ವೃದ್ಧ ಅಡಿಕೆ…

Read More

ಉಳ್ಳಾಲ: ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ನಲ್ಲಿದ್ದ ಸಹಸವಾರ ಸಾವನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಚೆಂಬುಗುಡ್ಡೆ ಬಳಿ ನಡೆದಿದೆ. ಮೃತ ವ್ಯಕ್ತಿಯನ್ನು ಅಳೇಕಲ ನಿವಾಸಿ ಅಬ್ಬಾಸ್(58) ಎಂದು ಗುರುತಿಸಲಾಗಿದೆ. ಅವರು ಶನಿವಾರ ಬೆಳಗ್ಗೆ ಮಗ ನೌಶಾದ್ ಜತೆ ಬೈಕ್‍ನಲ್ಲಿ ದೇರಳಕಟ್ಟೆಗೆ ತೆರಳಿದ್ದರು. ಈ ಸಂದರ್ಭ ಚೆಂಬುಗುಡ್ಡೆ ಬಳಿ ಕಾರೊಂದು ಬೈಕ್‍ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‍ನಲ್ಲಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದು, ಈ ಪೈಕಿ ತಂದೆ ಅಬ್ಬಾಸ್ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ನೌಶಾದ್‍ನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More