ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೊಷಿಸಲಾಗಿದೆ ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಾಲೂಕು ನೋಡೆಲ್ ಅಧಿಕಾರಿಗಳು ಸ್ಥಳದಲ್ಲಿರುವಂತೆ ಸೂಚನೆ ನೀಡಲಾಗಿದೆ.
Author: main-admin
ಉಡುಪಿ: ಉಡುಪಿಯ ಖಾಸಗಿ ಕಾಲೇಜಿನ ಟಾಯ್ಲೆಟ್ ನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು, ಹಿಂದೂ ವಿದ್ಯಾರ್ಥಿನಿಯ ವಿಡಿಯೋ ಚಿತ್ರೀಕರಣ ಮಾಡಿರುವ ಬಗ್ಗೆ ಉಡುಪಿ ಶಾಸಕರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ಪ್ರಕರಣ ನಡೆದಾಗ ನಾನು ಅಧಿವೇಶನದಲ್ಲಿದ್ದೆ, ಕೃತ್ಯ ಎಸಗಿದ ವಿದ್ಯಾರ್ಥಿನಿಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಈ ಮೂವರು ಹುಡುಗಿಯರ ವರ್ತನೆಯಿಂದ ತಲೆತಗ್ಗಿಸುವಂತಾಗಿದೆ. ಇದರಿಂದ ಜಿಲ್ಲೆಯ ಜನತೆಗೆ ಅಪಮಾನವಾಗಿದೆ. ಈ ರೀತಿಯ ಹುಡುಗಾಟಿಕೆ ಮಾಡುವುದು ಸರಿಯಲ್ಲ.ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಈ ಘಟನೆಯ ಬಗ್ಗೆ ನನಗೆ ಸಂಶಯ ಇದೆ. ಟಾಯ್ಲೆಟ್ ನಲ್ಲಿ ವಿಡಿಯೋ ಕ್ಯಾಮೆರಾ ಇಟ್ಟಿರುವುದು ಸರಿಯಲ್ಲ. ಇದರಲ್ಲಿ ಬ್ಲಾಕ್ ಮೇಲ್ ಮಾಡುವ ಷಡ್ಯಂತ್ರ ಇರಬಹುದು. ಮೂರು ಯುವತಿಯರ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ. ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳ ಗಮನಕ್ಕೂ ತರುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು : ರಸ್ತೆ ಬದಿ ಬಿದ್ದಿದ್ದ ಯುವಕನನ್ನು ಆರೈಕೆ ಮಾಡಿ ಪಾಂಡೇಶ್ವರ ಪೊಲೀಸರು ಮಾನವೀಯತೆ ಮೆರೆದ ಘಟನೆ ರವಿವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಬಸ್ ಪ್ರಯಾಣಿಕರ ತಂಗುದಾಣದ ಬಳಿ ಮೂಡಿಗೆರೆಯ ರಮೇಶ ಎಂಬಾತ ರವಿವಾರ ರಾತ್ರಿ ಮದ್ಯ ಸೇವಿಸಿ ಬಿದ್ದು ಮೈಮೇಲೆ ಗಾಯಮಾಡಿಕೊಂಡಿದ್ದನು. ಆತನಲ್ಲಿದ್ದ ಬ್ಯಾಗ್‌ನಲ್ಲಿ ಆತನ ಮನೆಯವರ ಚಿನ್ನಾಭರಣ ಮತ್ತು ಹಣವಿತ್ತು. ಅಲ್ಲೇ ಕರ್ತವ್ಯದಲ್ಲಿದ್ದ ಪೊಲೀಸರಾದ ದೇವೇಂದರ್ ಮತ್ತು ಯಶವಂತ್ ರಾಥೋಡ್ ರಸ್ತೆ ಬದಿ ಬಿದ್ದಿದ್ದ ಯುವಕನ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿ ಚಿನ್ನಾಭರಣ ಮತ್ತು ಹಣವನ್ನು ಒಪ್ಪಿಸುವ ವ್ಯವಸ್ಥೆ ಮಾಡಿದರಲ್ಲದೆ ಆತನಿಗೆ ಚಿಕಿತ್ಸೆ ಕೊಡಿಸಿ, ಆಹಾರ ನೀಡಿ ರಾತ್ರಿ ಠಾಣೆಯಲ್ಲಿ ತಂಗಲು ಅವಕಾಶ ಕಲ್ಪಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ( CCB Police ) ಬಂಧಿಸಿದ್ದರು. ಈ ಬೆನ್ನಲ್ಲೇ ಶಂಕಿತ ಉಗ್ರರಿಗೆ ಗನ್ ಸಪ್ಲೈ ಮಾಡುತ್ತಿದ್ದ ಜಾಡನ್ನು ಕೂಡ ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನಲ್ಲಿ ಬಂಧಿಸಿದಂತ ಶಂಕಿತ ಐವರು ಉಗ್ರರನ್ನು ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ, ಜೂನ್ ಲ್ಲಿ ತುಮಕೂರು ರಸ್ತೆಯ ಟಿ.ಬೇಗೂರಿನಲ್ಲಿ ಗನ್ ಇದ್ದ ಬ್ಯಾಗ್ ಅನ್ನು ಶಂಕಿತ ಉಗ್ರ ರಬ್ಬಾನಿ ಪಡೆದಿದ್ದನು. ಆ ಬಗ್ಗೆ ಜೈಲಿನಲ್ಲಿ ಪರಿಚಯವಾಗಿದ್ದ ಪೋಕ್ಸೋ ಕೇಸ್ ಆರೋಪಿ ಬ್ಯಾಗ್ ತರ್ತಾನೆ ಎಂದು ಜುನೈದ್ ಕೂಡ ಹೇಳಿದ್ದ. ಅದರಂತೆ ಆತ ಹೇಳಿದ ವ್ಯಕ್ತಿಯಿಂದ ರಬ್ಬಾನಿ ಗನ್ ಇದ್ದ ಬ್ಯಾಗ್ ಪಡೆದಿದ್ದನು. ಅದನ್ನು ರಬ್ಬಾನಿ ತಬ್ರೇಜ್ ಗೆ ಕೊಟ್ಟಿದ್ದನೆಂಬ ಮಾಹಿತಿ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ ಗನ್ ಯಾರು ಕೊಟ್ಟಿದ್ದು ಎನ್ನುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದಾಗ, ಆರ್ ಟಿ ನಗರ ಹೆಬ್ಬಾಳದ ಕಡೆಯುವರು ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹೆಬ್ಬಾಳದ…
ಬಂಟ್ವಾಳ: ಬಂಟ್ವಾಳ ಪುರಸಭೆಯ ತ್ಯಾಜ್ಯ ಸಾಗಿಸುವ ಘನ ವಾಹನವು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಮುಖ್ಯ ರಸ್ತೆಯಲ್ಲಿ ನಡೆದಿದೆ. ಬಂಟ್ವಾಳ ಪುರಸಭೆಯಿಂದ ಬಂಟ್ವಾಳ ಮುಖ್ಯ ರಸ್ತೆಗೆ ಹೊರಟ ಪುರಸಭೆಯ ತ್ಯಾಜ್ಯ ಸಾಗಾಟ ಘನ ವಾಹನವು ಬಿ ಸಿ ರೋಡ್ ನಿಂದ ಬಂಟ್ವಾಳ ಕಡೆಗೆ ಹೋಗುತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಪ್ರಯಾಣಿಕರಿಗೆ ಕಣ್ಣು, ಮುಖ, ಎದೆಗೆ ಗಂಭೀರ ಗಾಯಗಳಾಗಿವೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುರಸಭೆಯ ವಾಹನವನ್ನು ಪರಿಶೀಲಿಸಿದಾಗ ಈ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅವಧಿ ಮುಗಿದು 2 ವರ್ಷ ಕಳೆದಿದ್ದು, ನವೀಕರಣ ಆಗದಿರುವುದು ಕಂಡು ಬಂದಿದೆ. ಸಾರಿಗೆ ಇಲಾಖೆಯ ನಿಯಾಮಾಳಿ ಪ್ರಕಾರ ಎಫ್.ಸಿ. ಮಾಡದಿರುವ ವಾಹನ ಬಳಕೆಗೆ ಯೋಗ್ಯವಲ್ಲ. ಅದು ಗುಜರಿ ವಾಹನಕ್ಕೆ ಸಮಾನವಾಗಿದೆ. ಎಫ್.ಸಿ. ಆಗದ ಗುಜರಿ ವಾಹನವನ್ನು ರಸ್ತೆಗೆ ಇಳಿಸಿದರೆ ಅಪಘಾತದ ಸಂದರ್ಭದಲ್ಲಿ…
ಮಂಗಳೂರು : ಖಾಸಗಿ ಬಸ್ ಚಾಲಕನೊಬ್ಬ ಕೈಯಲ್ಲಿ ಮೊಬೈಲ್ ನೋಡುತ್ತಾ ಬಸ್ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಇದೀಗ ಈ ಕುರಿತಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಈ ಬಗ್ಗೆ ಪ್ರತಿಕ್ರಿಯಿಸಿ, ತಪ್ಪಿತಸ್ಥ ಬಸ್ ಚಾಲಕನ ವಿರುದ್ಧ ದಕ್ಷಿಣ ಟ್ರಾಫಿಕ್ ಪೊಲೀಸ್ ಠಾಣೆ ಕ್ರಮ ಕೈಗೊಂಡಿದೆ. ಅಲ್ಲದೇ ಚಾಲಕನ ಡಿಎಲ್ ಅನ್ನು ರದ್ದುಗೊಳಿಸುವಂತೆ ಆರ್‌ಟಿಒಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. 42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಮೊಬೈಲ್ ಉಪಯೋಗಿಸುತ್ತ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ ಮೊಬೈಲ್ ಹಿಡಿದುಕೊಂಡು ಬಸ್ ಚಲಾಯಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಸ್ನಲ್ಲಿ ಅಧಿಕ ಪ್ರಯಾಣಿಕರಿದ್ದರು ಎಂಬುದನ್ನು ವಿಡಿಯೋ ಮಾಡಿದ ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲ್ ಅನ್ನೇ ಚಾಲಕ ವೀಕ್ಷಿಸುತ್ತಿರುವುದು ಜನರ ಕಳವಳಕ್ಕೆ ಕಾರಣವಾಗಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ…
ಕಾಸರಗೋಡು: ಜಿಲ್ಲಾ ನೋಂದಾಣಿಧಿಕಾರಿ ವಾಸಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಟಿ .ಇ ಮುಹಮ್ಮದ್ ಅಶ್ರಫ್ (55) ಮೃತಪಟ್ಟವರು.ಕಾಸರಗೋಡು ಜಿಲ್ಲಾ ನೋಂದಣಿ ಅಧಿಕಾರಿಯಾಗಿದ್ದ ಇವರು, ಮೂಲತಃ ಮಲಪ್ಪುರಂ ನಿವಾಸಿ. ನಗರ ಹೊರವಲಯದ ಹೋಟೆಲ್ ವೊಂದರಲ್ಲಿ ರೂಂ ಪಡೆದು ವಾಸ್ತವ್ಯ ಹೂಡಿದ್ದರು.ಇನ್ನು ಬೆಳಿಗ್ಗೆ ಅಶ್ರಫ್ ರವರು ರೂಂ ನಿಂದ ಹೊರಬರದೆ ಇದ್ದುದರಿಂದ ಸಂಶಯಗೊಂಡು ಅವರ ಮೊಬೈಲ್ ಗೆ ಕರೆಮಾಡಿದಾಗ ತೆಗೆಯದೆ ಇದ್ದಾಗ ಬಾಗಿಲು ತೆರೆದು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ಪತ್ರೆಗೆ ತಲಪಿಸಿ ತಪಾಸಣೆ ನಡೆಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ದೃಡೀಕರಿಸಿದರು.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಜುಲೈ 19 ರಂದು ಇವರು ಈ ಹೋಟೆಲ್ ನಲ್ಲಿ ರೂಂ ಪಡೆದಿದ್ದರು.
ಕಾರ್ಕಳ: ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳದ ಜಾರ್ಕಳ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಾರ್ಕಳ ತಾಲೂಕಿನ ಜಾರ್ಕಳ ಎಂಬಲ್ಲಿಯ ಬಸ್ರಿ ಶಾಲೆಯ ಬಳಿ ಈ ಅಪಘಾತ ಸಂಭವಿಸಿದೆ. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಸರಕಾರಿ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಬಸ್ಸಿನ ಮುಂಭಾಗ ತೀವ್ರ ಜಖಂಗೊಂಡಿದ್ದು, ಬಸ್ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನ ಪ್ರಯಾಣಿಕರು ಹಾಗೂ ಟಿಪ್ಪರ್ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಕಾರ್ಕಳ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಜುಲೈ 27ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಹಾಸನ, ಯಾದಗಿರಿ, ಕಲಬರಗಿ, ಧಾರವಾಡ, ಬೆಳಗಾವಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನೈಋತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು, ಕರಾವಳಿಯಲ್ಲಿ ಮತ್ತು ದಕ್ಷಿಣ ಒಳನಾಡಿನಲ್ಲಿ ಚುರುಕಾಗಿತ್ತು. ಕ್ಯಾಸಲ್ರಾಕ್, ಯಲ್ಲಾಪುರ, ಕಾರ್ಕಳ, ಸಿದ್ದಾಪುರ,ಕದ್ರಾ, ಮಂಚಿಕೆರೆ, ಜೋಯಿಡಾ, ಲೋಂಡಾ, ಶೃಂಗೇರಿ, ಕೊಪ್ಪ, ಕೊಲ್ಲೂರು, ಜಯಪುರ, ಲಿಂಗನಮಕ್ಕಿ, ಗೇರುಸೊಪ್ಪ, ಸಿದ್ದಾಪುರ, ಬೆಳ್ತಂಗಡಿ, ತಾಳಗುಪ್ಪ, ಕಮ್ಮರಡಿ, ಕೊಟ್ಟಿಗೆಹಾರ, ಸೋಮವಾರಪೇಟೆ, ಪುತ್ತೂರು, ಧರ್ಮಸ್ಥಳದಲ್ಲಿ ಭಾರೀ ಮಳೆಯಾಗಿದೆ.
ಉಡುಪಿ: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಜಾರಿ ಬಿದ್ದು ಯುವಕ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್(23) ನಾಪತ್ತೆಯಾದ ಯುವಕ. ಜಾರಿ ಬೀಳ್ತಿರೋ ದೃಶ್ಯ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ. ಯುವಕನಿಗಾಗಿ ಅಗ್ನಿಶಾಮಕ ದಳ ಶೋಧ. ಮುಳುಗು ತಜ್ಙರಿಂದ ನಾಪತ್ತೆಯಾದ ಯುವಕನಿಗೆ ಶೋಧ ಕಾರ್ಯ ನಡೆದಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










