Author: main-admin

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರು ಢಿಕ್ಕಿಯಾಗಿ ಕಾರಿನಲ್ಲಿದ್ದ ಹೊಳೆನರಸೀಪುರದ ಸಂಜಯ್‌ (25) ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಉಪ್ಪಿನಂಗಡಿ ಅಡ್ಡಹೊಳೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಸಂಭವಿಸಿದೆ. ಕಾರು ಚಾಲಕ ಅರಕಲಗೂಡು ನಿವಾಸಿ ಸಂದೀಪ್‌, ಕಾರಿನಲ್ಲಿದ್ದ ಶೇಷ, ಮಹೇಶ್‌ ಅವರು ಅಪಾಯದಿಂದ ಪಾರಾಗಿದ್ದಾರೆ. ಸಂಜಯ್‌ ಹಾಗೂ ಇತರರು ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಾರಾಟ ಮಾಡಲು ಉಡುಪಿಗೆ ಬಂದಿದ್ದರು. ಹೂವು ಮಾರಾಟ ಮಾಡಿ ಮತ್ತೆ ಊರಿಗೆ ಮರಳುತ್ತಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ.

Read More

ಪುತ್ತೂರು: ಸಾರ್ವಜನಿಕ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಮಹಿಳಾ ಹೋರಾಟಗಾರ್ತಿ ಈಶ್ವರಿ ಪದ್ಮುಂಜ ಅವರು ಸಂಪ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ.20ರಂದು ಪುತ್ತೂರಿನ ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರನ್ನು ಅವಮಾನಿಸಿ, ಗರ್ಭಿಣಿ ಮಹಿಳೆಯರನ್ನು ನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಲ್ಲಡ್ಕ ಪ್ರಭಾಕರ ಭಟ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ದೂರು ನೀಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ತನ್ನ ಭಾಷಣದಲ್ಲಿ ”ಆಚೆ ಮನೆಯಲ್ಲಿ ಒಬ್ಬಳು ಬ್ಯಾರ್ದಿ ಇದ್ದು, ಅವಳು 6ನೆಯದ್ದು ಆಗಿ 7ನೇ ಗರ್ಭಿಣಿಯಾಗಿದ್ದಳು. ಅವಳಿಗೆ ಯಾರಾದ್ರು ಕೇಳಿದ್ರಾ ? ನೀನು ನಾಯಿ ಮರಿ ಹಾಕಿದ ಹಾಗೆ ಹಾಕ್ತಾ ಇದ್ದೀಯಾ ಅಂತ ಕೇಳಿದ್ರಾ ? ಕೇಳುವ ದೈರ್ಯವೂ ಇಲ್ಲ. ಎರಡನೆಯದಾಗಿ ಅವರು ಹೇಳ್ತಾರೆ. ಅದು ಅಲ್ಲಾಹನಿಗೋಸ್ಕರ. ನಮ್ಮ ಮಕ್ಕಳು ಅಲ್ಲಾಹನಿಗೋಸ್ಕರ ಅನ್ನುತ್ತಾರೆ. ನೀವೇನಾದರೂ ಮಹಾಲಿಂಗೇಶ್ವರನಿಗಾಗಿ ಮಕ್ಕಳು ಮಾಡ್ತೀರಾ ? ನಮ್ಮ ಜನಸಂಖ್ಯೆ ಜಾಸ್ತಿಯಾಗಬೇಕು. ಮಂಗಳೂರು ವಿಧಾನಸಭಾ ಕ್ಷೇತ್ರ ಉಳ್ಳಾಲ ಅಂತ…

Read More

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಾರ್ ಎದುರು ನಡೆದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ರೌಡಿ ಶೀಟರ್ ಗುರುರಾಜ್ ಆಚಾರಿಯನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿದ್ದ ಮತ್ತೊಬ್ಬ ಆರೋಪಿ ಅಶೋಕ್ ಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.ವರದಿಗಳ ಪ್ರಕಾರ, ಬಾರ್‌ನೊಳಗೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯು ತೀವ್ರಗೊಂಡು ಹೊರಗೆ ಚಾಕು ಇರಿತದಲ್ಲಿ ಅಂತ್ಯಗೊಂಡಿತ್ತು.ಈ ಘಟನೆಯಲ್ಲಿ ಗಾಯಗೊಂಡಿರುವ ನಿಝಾಮ್ ಮತ್ತು ಹಸನ್ ಮುಕ್ಷಿತ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಕ್ಟೋಬರ್ 24ರಂದು, ಪೊಲೀಸರು ಆರೋಪಿಗಳಾದ ಸುಶಾಂತ್, ಅಲೆಕ್ಸ್, ನಿತಿನ್ ಮತ್ತು ಆರೋಪಿಗಳಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಅರುಣ್ ಶೆಟ್ಟಿ ಅವರನ್ನು ಬಂಧಿಸಿದ್ದರು.

Read More

ಬಜ್ಪೆ: ಪೆರ್ಮುದೆ ಬಂಡಸಾಲೆಯ ಬಳಿಯ ಮನೆಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಯೆಲ್ಲ ಜಾಲಾಡಿ ಬರಿಗೈಯಲ್ಲಿ ಮರಳಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಶಿಕ್ಷಕಿ ಶೋಭಾ ಬ್ರಿಟೋ ಎಂಬವರ ಮನೆಗೆ ಕಳ್ಳರು ನುಗ್ಗಿದ್ದಾರೆ ಎಂದು ತಿಳಿದು ಬಂದಿದೆ. ಅ.22ರಂದು ಶಿಕ್ಷಕಿ ಶೋಭಾ ಬ್ರಿಟೋ ಅವರು ತಾಯಿಯ ಮನೆಗೆ ತೆರಳಿದ್ದಾಗ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಕಳ್ಳರು ರಾತ್ರಿ 10ರಿಂದ 11ರ ವರೆಗೆ ಮನೆಯಲ್ಲಿದ್ದುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ತಿಳಿದು ಬಂದಿದೆ. ಶಿಕ್ಷಕಿ ಅ.23ರಂದು ಸಂಜೆ ಶಾಲೆಯಿಂದ ಮನೆಗೆ ಬಂದಾಗ ಕಳವು ಬಗ್ಗೆ ಮಾಹಿತಿ ತಿಳಿದು ಬಂದಿದೆ. ಮನೆಯೆಲ್ಲ ಜಾಲಾಡಿದ ಕಳ್ಳರಿಗೆ ಯಾವುದೇ ಆಭರಣ ಸಿಗದಿರುವುದು ಹಾಗೂ ಅಲ್ಲಿದ್ದ ಲ್ಯಾಪ್‌ಟಾಪ್‌ನ್ನು ಕಳವು ಮಾಡದೇ ಇರುವುದು ಕಂಡು ಬಂದಿದೆ. ಕಳ್ಳರು ಅ.23ರಂದು ರಾತ್ರಿ ಅಲ್ಲಿಯೇ ಪಕ್ಕದ ಗುಜರಿ ಅಂಗಡಿಯ ಶಟರ್‌ನ್ನು ಮುರಿಯುವ ವಿಫಲ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.

Read More

ಪುತ್ತೂರು: ಈಶ್ವರಮಂಗಲ ಸಮೀಪದ ಬೆಳ್ಳಿಚಡಾವು ಬಳಿ ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್‌ಗೆ ಚಾರ್ಜ್ ಮೆಮೋ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಘಟನೆಯ ಬಳಿಕ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿದ್ದಾರೆ. ಅನಂತರ ಕಾನ್‌ಸ್ಟೆಬಲ್ ಇನ್‌ಸ್ಪೆಕ್ಟರ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್‌ಪುತ್ತಿಲ ಮೊಬೈಲ್ ಕೇಳಿ ಪಡೆದುಕೊಂಡು ಇನ್‌ಸ್ಪೆಕ್ಟ‌ರ್ ಜತೆ ಮಾತನಾಡಿದ್ದರು ಮತ್ತು ಅದಕ್ಕೆ ಅದಕ್ಕೆ ಒಪ್ಪಿಗೆ ಪಡೆದಿದ್ದರು. ಆದರೆ ಇಲ್ಲಿ ಮುನ್ನೆಚ್ಚರಿಕೆ ವಹಿಸದೆ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಯ ತೆಗೆದುಕೊಂಡಿರುವುದು ಇನ್‌ಸ್ಪೆಕ್ಟ‌ರ್ ತಪ್ಪಾಗಿದ್ದು ಆದ್ದರಿಂದ ಇನ್‌ಸ್ಪೆಕ್ಟರ್‌ಗೆ ಚಾರ್ಜ್‌ ಮೆಮೋ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಈ ಹಿಂದೆ ಕಂಡುಬಂದಿತ್ತು.ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ. ಜೈಲಿನೊಳಗೆ ಫೋನ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ಸಿಗಿ ಬಿದ್ದಿದ್ದಾನೆ. ತಪಾಸಣೆಯ ವೇಳೆ ಸಿಬ್ಬಂದಿ ಅಮರ್ ಪ್ರಾಂಜೆ ಸಿಗಿ ಬಿದ್ದಿದ್ದಾನೆ. ಒಂದು ಸ್ಮಾರ್ಟ್ ಫೋನ್ ಮತ್ತು ಒಂದು ಬ್ಯಾಕ್ ಕವರ್ ಇಟ್ಟುಕೊಂಡಿದ್ದ. ಅಲ್ಲದೆ ಎರಡು ಇಯರ್ ಫೋನ್ ಗಳನ್ನು ಸಹ ತೆಗೆದುಕೊಂಡು ಹೋಗುತ್ತಿದ್ದ. ಖಾಸಗಿ ಸ್ಥಳದಲ್ಲಿ ಜೈಲು ಸಿಬ್ಬಂದಿ ಅಮರ್ ಇಟ್ಟುಕೊಂಡು ಒಳಗಡೆ ತೆರಳುವ ವೇಳೆ ತಪಾಸನೆ ನಡೆಸಿದ್ದಾರೆ. ಜೈಲಾಧಿಕಾರಿಗಳು ಸಿಬ್ಬಂದಿಯನ್ನು ತಪಾಸನೆ ನಡೆಸಿ ವಸ್ತುಗಳು ಪತ್ತೆಯಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪುತ್ತೂರು: ಘಟನೆಯನ್ನು ಎಲ್ಲರೂ ವಿಮರ್ಶೆ ಮಾಡಬಹುದು, ಆದರೆ ಸತ್ಯವನ್ನು ತಿರುಚಿ ಸುಳ್ಳು ನಿರೂಪಣೆ ಸೃಷ್ಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಎಸ್‌ಪಿ ಅರುಣ್‌ ಕುಮಾ‌ರ್ ಪುತ್ತೂರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಎಚ್ಚರಿಸಿದ್ದಾರೆ.ಈಶ್ವರಮಂಗಲದಲ್ಲಿ ಲಾರಿಯೊಂದರಲ್ಲಿ ಅನಧಿಕೃತ ಗೋ ಸಾಗಾಟ ಪ್ರಕರಣದಲ್ಲಿ 12 ಗೋವುಗಳನ್ನು ವಶಕ್ಕೆ ಪಡೆದು, ಓರ್ವ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಪೋಸ್ಟ್‌ಗಳನ್ನು ಹರಿಯಬಿಡುವುದಕ್ಕೆ ಸಂಬಂಧಿಸಿ ಶುಕ್ರವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಕೈಯಲ್ಲಿ ಕತ್ತಿ ಹಿಡಿದುಕೊಂಡು ಲಾರಿಯ ಹಗ್ಗ ಮತ್ತು ಟರ್ಪಾಲ್ ಕೊಯ್ಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಒಳಗೊಂಡಂತೆ ಪುತ್ತೂರಿನಲ್ಲಿ ನಡೆದ ಘಟನೆಯ ಬಗ್ಗೆ ಸಮಗ್ರ ವಿವರಣೆ ನೀಡಿರುವ ಎಸ್‌ಪಿ ಈ ಘಟನೆಯ ನಂತರ ಪೊಲೀಸರ…

Read More

ಸುರತ್ಕಲ್: ಯುವಕರಿಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುರತ್ಕಲ್‌ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ (29), ಕೆ.ವಿ. ಅಲೆಕ್ಸ್ (27), ಸುರತ್ಕಲ್‌ ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ (56) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಗುರುರಾಜ್‌ ಮತ್ತು ಆರೋಪಿ ಗಳಿಗೆ ಆಶ್ರಯ ನೀಡಿದ್ದ ಅಶೋಕ್ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಬಂಧನಕ್ಕಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಸುರತ್ಕಲ್ ಬಳಿಯ ದೀಪಕ್ ಬಾರ್ ಬಳಿ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬವರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್, ಅಲೆಕ್ಸ್ ಸಂತೋಷ್,‌ ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದು, ಈ ಬಗ್ಗೆ ಸುರತ್ಕಲ್‌ ಪೊಲೀಸ್‌…

Read More

ಮಂಗಳೂರು: ಸುರತ್ಕಲ್ ದೀಪಕ್ ಬಾರ್ ಬಳಿಯಲ್ಲಿ ಮಂಗಳವಾರ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ನಡೆದ ಚೂರಿ ಇರಿತ ಘಟನೆಯಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಎರಡು ಗುಂಪಿನವರ ನಡುವೆ ನಡೆದ ವಾಗ್ವಾದ ಹಿಂಸಾಚಾರಕ್ಕೆ ತಿರುಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮುಕ್ಷಿದ್, ನಿಜಾಂ ಹಾಗೂ ಅವರ ಇಬ್ಬರು ಸ್ನೇಹಿತರು ರಾತ್ರಿ ಬಾರ್ಗೆ ತೆರಳಿ ಮದ್ಯಪಾನ ಮಾಡುತ್ತಿದ್ದರು. ಅದೇ ವೇಳೆಗೆ ನಾಲ್ವರು ಅನಪರಿಚಿತರು ಸಹ ಅಲ್ಲೇ ಮದ್ಯಪಾನ ಮಾಡುತ್ತಿದ್ದರು. ಇಬ್ಬರ ನಡುವಿನ ವಾಗ್ವಾದ ಬಾರ್ ಒಳಗೇ ಪ್ರಾರಂಭವಾಗಿ ಹೊರಗೆ ಬಂದು ಮುಂದುವರಿದಿದೆ. ವಾಗ್ವಾದದ ವೇಳೆ ಆ ಗುಂಪಿನಲ್ಲಿದ್ದ ಒಬ್ಬನು ಕೈಯಲ್ಲಿದ್ದ ಚೂರಿಯಿಂದ ಮುಕ್ಷಿದ್ನ ಹೊಟ್ಟೆ ಹಾಗೂ ಕಿವಿಯ ಬಳಿಗೆ ಇರಿದಿದ್ದಾನೆ. ನಿಜಾಂ ಅವರು ಮಧ್ಯೆ ತಡೆಗಟ್ಟಲು ಯತ್ನಿಸಿದ ವೇಳೆ ಅವರ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (BNS) 307ನೇ ವಿಧಿಯಡಿ (ಹತ್ಯೆಗೆ ಯತ್ನ) ಪ್ರಕರಣವನ್ನು ಸೂರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಘಟನೆಯ…

Read More

ಮಂಗಳೂರು: ರೌಡಿ ಶೀಟರ್‌ ಒಬ್ಬ ಮತ್ತೊಬ್ಬನೊಂದಿಗೆ ಸೇರಿಕೊಂಡು ಪಟಾಕಿ ಅಂಗಡಿ ಮಾಲೀಕನಿಗೆ ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿರುವ ಘಟನೆ ಬಜಪೆಯಲ್ಲಿ ವರದಿಯಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಫಾಝಿಲ್ ಕೊಲೆ ಪ್ರಕರಣದ ಆರೋಪಿಯಾಗಿರುವ ರೌಡಿ ಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹಚರ ಅಶ್ವಿತ್ ಎಂಬುವವರ ವಿರುದ್ಧ ಈ ದೂರು ದಾಖಲಾಗಿದೆ. ಬಜಪೆಯಲ್ಲಿ ಪಟಾಕಿ ಅಂಗಡಿ ಹೊಂದಿರುವ ದಾಮೋದರ ಅವರು ಬೆದರಿಕೆಗೆ ಒಳಗಾದವರು.ವರದಿಗಳ ಪ್ರಕಾರ, ಆರೋಪಿಗಳಿಬ್ಬರೂ ಅಕ್ಟೋಬರ್ 22ರಂದು ದಾಮೋದರ್ ಅವರ ಅಂಗಡಿಗೆ ಹೋಗಿ ಅವರಿಗೆ ಬೆದರಿಕೆ ಹಾಕಿದ್ದಾರೆ. ಸುಲಿಗೆ ಮಾಡುವ ಉದ್ದೇಶದಿಂದ ಮಾಲೀಕರಿಗೆ ಜೀವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರೌಡಿ ಶೀಟರ್‌ನ ಬೆದರಿಕೆಗೆ ಹೆದರಿದ ಪಟಾಕಿ ಅಂಗಡಿ ಮಾಲೀಕ ದಾಮೋದರ ಅವರು ಕೂಡಲೇ ದೂರು ನೀಡಲು ಹಿಂಜರಿದ್ದರು. ಪೊಲೀಸರು ಅವರಿಗೆ ಸಮಗ್ರ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ ನಂತರವೇ ಅವರು ಧೈರ್ಯ ಮಾಡಿ ಗುರುವಾರ ಬಜಪೆ ಪೊಲೀಸ್…

Read More