ಮಂಗಳೂರು : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದು ಬರೋಬ್ಬರಿ ವರ್ಷ ತುಂಬುತ್ತಾ ಬಂದರೂ ಪ್ರಮುಖ ಆರೋಪಿಗಳು ಪತ್ತೆಯಾಗಲೇ ಇಲ್ಲ, ಇದೀಗ ಪ್ರಮುಖ ಆರೋಪಿಗಳ ಪತ್ತೆಗೆ ಮತ್ತೊಮ್ಮೆ NIA ಕಾರ್ಯಾಚರಣೆ ಆರಂಭಿಸಿದೆ. 2022ರ ಜುಲೈ 26 ರಂದು ಬೆಳ್ಳಾರೆಯ ಪ್ರವೀಣ್ ಮಾಲೀಕತ್ವದ ಕೋಳಿ ಫಾರಂ ಮುಂಭಾಗ ತಲವಾರು ದಾಳಿ ನಡೆದು ಭೀಕರ ಹತ್ಯೆ ನಡೆಸಿದ್ದಾರೆ. ಮತ್ತೊಮ್ಮೆ ಆರೋಪಿಗಳ ಪತ್ತೆಗಾಗಿ ಬಹುಮಾನ ಘೋಷಿಸಿರುವ ಪೋಸ್ಟರ್ ಅಂಟಿಸುತ್ತಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಗಳ ಮನೆಗೆ ಭೇಟಿ ನೀಡಿ NIA ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿಂದತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ NIA ತಲಾಶ್ ನಡೆಸುತ್ತಿದೆ. ಬೆಳ್ಳಾರೆ, ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಭಾವ ಚಿತ್ರವಿರುವ ನೋಟಿಸನ್ನು NIA ಅಂಟಿಸಿದೆ.
Author: main-admin
ಸುಳ್ಯ : ಯುವಕನೋರ್ವ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಉಬರಡ್ಕದಲ್ಲಿ ನಿನ್ನೆ ರಾತ್ರಿ ವರದಿಯಾಗಿದೆ. ಮೃತ ಯುವಕನನ್ನು ಅರಂತೋಡು ಗ್ರಾಮದ ರವಿ ಎಂದು ಗುರುತಿಸಲಾಗಿದೆ. ಈತ ಉಬರಡ್ಕ ಗ್ರಾಮದ ಬೆಳ್ರಂಪಾಡಿ ಎಂಬಲ್ಲಿನ ಗುಡ್ಡದಲ್ಲಿ ಕೋವಿಯಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಹೇಳಲಾಗಿದೆ. ಬೆಳ್ರಂಪಾಡಿಯ ಮನೆಯೊಂದರಲ್ಲಿ ರವಿ ಕೆಲಸಮಯದಿಂದ ಕೆಲಸಕ್ಕಿದ್ದರೆನ್ನಲಾಗಿದ್ದು, ಕಳೆದ ರಾತ್ರಿ ಕೋವಿ ಹಿಡಿದು ಗುಡ್ಡಕ್ಕೆ ಹೋಗಿದ್ದ ರವಿ ಅಲ್ಲಿ ತಲೆಗೆ ಗುಂಡು ಹೊಡೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳಕ್ಕೆ ರಾತ್ರಿಯೇ ಪೋಲೀಸರು ಬಂದು ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲುನೋಟಕ್ಕೆ ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
ವಿಟ್ಲ: ಬೈಕ್ ನಲ್ಲಿ ಬಂದ ನಾಲ್ವರು ಯುವಕರು ಆಟೋ ರಿಕ್ಷಾ ಅಡ್ಡಗಟ್ಟಿ ಆಟೋದಲ್ಲಿದ್ದವರ ಜತೆ ಜಗಳವಾಡಿ, ಮಹಿಳೆಯ ಮೈ ಮೇಲೆ ಕೈ ಹಾಕಿದ್ದಲ್ಲದೆ, ಅದನ್ನು ತಡೆದ ಆಕೆಯ ಪತಿಯನ್ನು ರಿಕ್ಷಾದಿಂದ ಎಳೆದು ರಸ್ತೆಗೆ ದೂಡಿ ಹಾಕಿ ಮರದ ರೀಪಿನ ತುಂಡಿನಿಂದ ಮುಖಕ್ಕೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮುನ್ನ ಯಾನೆ ಸುದರ್ಶನ, ಶರತ್, ಧನರಾಜ್, ಉದಯ ಆರೋಪಿಗಳಾಗಿದ್ದು, ಈ ಪೈಕಿ ಸುದರ್ಶನ್‌ಮತ್ತು ಧನರಾಜ್ ನನ್ನು ಬಂಧಿಸಲಾಗಿದೆ. ಸಾಲೆತ್ತೂರಿನ ಪಾಲ್ತಾಜೆ ನಿವಾಸಿ ಜಯಂತ (32) ಅವರು ಜೂ. 25ರಂದು ಮಗುವಿನ ಚಿಕಿತ್ಸೆಗೆಂದು ಕ್ಲಿನಿಕ್ ಗೆ ಪತ್ನಿ ಮಧುಶ್ರೀ ಅವರೊಂದಿಗೆ ಶಿವರಾಮ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಸದಾಶಿವ ದೇವಸ್ಥಾನಕ್ಕೆ ಹೋಗುವ ದಾರಿ ಬಳಿ ಸಾಲೆತ್ತೂರು ವೈನ್ ಶಾಪ್ ಕಡೆಯಿಂದ ಎರಡು ಬೈಕ್‌ಗಳಲ್ಲಿ ಮುನ್ನ ಯಾನೆ ಸುದರ್ಶನ್, ಶರತ್, ಧನು ಮತ್ತು ಉದಯ ಬಂದು ಆಟೋ…
ರಾಮನಗರ: ಹೆದ್ದಾರಿಯಲ್ಲಿ ಪೊಲೀಸರು ಸಮವಸ್ತ್ರದಲ್ಲಿ ಕಾಣಿಸುತ್ತಿಲ್ಲ. ನಮ್ಮ ಸಿಬ್ಬಂದಿ ಕಂಡರೆ, ವಾಹನ ಸವಾರರಿಗೆ ಒಂದು ಭಯ ಇರುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಬೆಂಗಳೂರು- ಮೈಸೂರು ದಶಪಥ ಎಕ್ಸ್‌ಪ್ರೆಸ್ ಹೆದ್ದಾರಿ ಅಪಘಾತದ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದರು. ಬೆಂಗಳೂರಿನಿಂದ ಬೆಳಗಾವಿವರೆಗೆ ಹೋದರೂ ಒಬ್ಬ ಸಿಬ್ಬಂದಿ ಸಹ ಸಮವಸ್ತ್ರದಲ್ಲಿ ಕಾಣುವುದಿಲ್ಲ. ಸಿಬ್ಬಂದಿ ಕೇವಲ ರಿಫ್ಲೆಕ್ಟ್ ಜಾಕೆಟ್ ಹಾಕಿಕೊಂಡು ಇದ್ದರೆ ಸಾಕು. ಜನ ಭಯದಿಂದ ವಾಹನದ ವೇಗ ತಗ್ಗಿಸುತ್ತಾರೆ ಎಂದರು. ದಾವಣಗೆರೆಯಲ್ಲಿ ನಾನು ಎಸ್ ಪಿ ಇದ್ದಾಗ ಹೆದ್ದಾರಿಯಲ್ಲಿ ಪಹರೆ ಮಾಡಿಯೇ, ಶೇ 40ರಷ್ಟು ಅಪಘಾತ ತಗ್ಗಿಸಿದ್ದೆವು. ಎಲ್ಲಾ ಹೆದ್ದಾರಿಗಳಲ್ಲಿ ಗಸ್ತು ಆರಂಭಿಸಬೇಕು ಎಂದು ಸೂಚಿಸಿದರು. ಹೆದ್ದಾರಿ ಪಹರೆಗೆ ನಿಯೋಜಿಸಿರುವ ಗಸ್ತು ವಾಹನಗಳನ್ನು ಪರಿಶೀಲಿಸಿದ ಅವರು, ಅಪಘಾತ ತಡೆಗೆ ಹೆದ್ದಾರಿ ವ್ಯಾಪ್ತಿಯ ಪೊಲೀಸ್ ಠಾಣೆಗಳ ಸಿಬ್ಬಂದಿ ಕೈಗೊಂಡಿರುವ ಕ್ರಮಗಳನ್ನು ವಿಚಾರಿಸಿದರು. ಅಪಘಾತದ ಮಾಹಿತಿ ಪುಸ್ತಕವನ್ನು ಪರಿಶೀಲಿಸಿದರು. ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ,…
ಲಖನೌ : ಎರಡು ಡಜನ್‌ಗೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಹತ್ಯೆ ಮಾಡಲಾಗಿದೆ. ಕೊಲೆ ಹಾಗೂ ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಗುಫ್ರಾನ್ ಎಂಬ ಕ್ರಿಮಿನಲ್, ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕೌಶಂಬಿ ಜಿಲ್ಲೆಯಲ್ಲಿ ವಿಶೇಷ ಕಾರ್ಯ ಪಡೆಯು ಜಿಲ್ಲೆಯ ಮಾಂಝನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮ್ದಾ ಶುಗರ್ ಮಿಲ್ ರಸ್ತೆ ಸಮೀಪ ಬೆಳಗಿನ ಜಾವ 5.30ರ ಸುಮಾರಿಗೆ ರೇಡ್ ನಡೆಸುತ್ತಿತ್ತು. ಆಗ ಪೊಲೀಸ್ ತಂಡಕ್ಕೆ ಮುಖಾಮುಖಿಯಾದ ಗುಫ್ರಾನ್, ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ದಾಳಿಯ ಉತ್ತರ ನೀಡಿದ್ದಾರೆ. ಪರಸ್ಪರ ಗುಂಡಿನ ಚಕಮಕಿಯಲ್ಲಿ ಆತನಿಗೆ ಬುಲೆಟ್ ತಗುಲಿ ಗಾಯಗಳಾಗಿವೆ. ಗುಫ್ರಾನ್‌ನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ. ಉತ್ತರ ಪ್ರದೇಶದ ಪ್ರತಾಪಗಡ ಹಾಗೂ ಇತರೆ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ…
ಬರೇಲಿ: ಬರೇಲಿಯ ಆಸ್ಪತ್ರೆಯೊಂದರಲ್ಲಿ 3 ವರ್ಷದ ಬಾಲಕನಿಗೆ ಸುನ್ನತಿ ಮಾಡಿದ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸೂಚನೆ ಮೇರೆಗೆ ಎಂ ಖಾನ್ ಆಸ್ಪತ್ರೆಯ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಶನಿವಾರ ಈ ಬಗ್ಗೆ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, “ದೂರು ಸರಿಯಾಗಿದ್ದರೆ, ತಪ್ಪಿತಸ್ಥ ವೈದ್ಯರು ಮತ್ತು ಆಸ್ಪತ್ರೆಯ ಆಡಳಿತದ ವಿರುದ್ಧ ಎಫ್‌ಐಆರ್ ದಾಖಲಿಸಲು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆಸ್ಪತ್ರೆಯ ನೋಂದಣಿಯನ್ನು ರದ್ದುಗೊಳಿಸಲು ಮತ್ತು ಸಂಪೂರ್ಣ ವರದಿಯನ್ನು ನೀಡಲು ಬರೇಲಿಯ ಸಿಎಂಒಗೆ ಆದೇಶ ನೀಡಲಾಗಿದೆ” ಎಂದು ಪಾಠಕ್ ಹೇಳಿದ್ದಾರೆ. ಜೂನ್ 23ರಂದು ಸ್ಟೇಡಿಯಂ ರಸ್ತೆಯ ಎಂ ಖಾನ್ ಆಸ್ಪತ್ರೆಯಲ್ಲಿ ಮೂರು ವರ್ಷದ ಬಾಲಕನಿಗೆ ನಾಲಿಗೆ ಶಸ್ತ್ರಚಿಕಿತ್ಸೆ ಮಾಡುವ ಬದಲು ಸುನ್ನತಿ ಮಾಡಲಾಗಿತ್ತು. ಘಟನೆ ಬಳಿಕ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಾರ್ವಜನಿಕವಾಗಿ ತಿಳಿಯುತ್ತಿದ್ದಂತೆಯೇ ಹಲವು ಹಿಂದೂ ಸಂಘಟನೆಗಳು ಸ್ಥಳಕ್ಕೆ ಆಗಮಿಸಿ ಸುನ್ನತಿ ವಿರೋಧಿಸಿ ಪ್ರತಿಭಟನೆ ನಡೆಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಈ ಬಗ್ಗೆ ತನಿಖೆ…
ಬೆಂಗಳೂರು: ಬೆಂಗಳೂರು-ಧಾರವಾಡ , ರಾಣಿ ಕಮಲಾಪತಿ-ಜಬಲ್ಪುರ್ ಸೇರಿದಂತೆ ಒಟ್ಟು ಐದು ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ.ಖಜುರಾಹೊ-ಭೋಪಾಲ್-ಇಂದೋರ್ , ಮಡಗಾಂವ್-ಮುಂಬೈ ಮತ್ತು ಹಟಿಯಾ-ಪಾಟ್ನಾ ಉಳಿದ ನಾಲ್ಕು ವಂದೇ ಭಾರತ್ ಸಂಚರಿಸುವ ಮಾರ್ಗಗಳು. ಈ ಪೈಕಿ ರಾಣಿ ಕಮಲಾಪತಿ-ಜಬಲ್ಪುರ್ ಹೊರತುಪಡಿಸಿ ಉಳಿದ ರೂಟ್‌ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.ಇದರೊಂದಿಗೆ ಗೋವಾ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳು ಮೊದಲ ವಂದೇ ಭಾರತ್ ರೈಲು ಸೇವೆ ಪಡೆಯಲಿವೆ.ಇನ್ನು ಬೆಂಗಳೂರು-ಧಾರವಾಡ ಪ್ರತಿ ಮಂಗಳವಾರ ಹೊರತುಪಡಿಸಿ ಎಲ್ಲ ದಿನಗಳಲ್ಲಿ ರೈಲು ಕಾರ್ಯನಿರ್ವಹಿಸಲಿದೆ. ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರೈಲು ಸೇವೆ ಆರಂಭವಾಗಿ ಮಧ್ಯೆ ದಾವಣಗೆರೆಯಲ್ಲಿ ಮಾತ್ರ ನಿಲ್ಲುತ್ತದೆ. ವಂದೇ ಭಾರತ್ ರೈಲು ಬೆಂಗಳೂರು-ಧಾರವಾಡ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡಲಿದ್ದು, ಸುಮಾರು ಏಳು ಗಂಟೆಗಳಲ್ಲಿ ಗುರಿ ತಲುಪುತ್ತದೆ.
ಮಂಗಳೂರು: ಟ್ರಾಫಿಕ್ ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯ ಜಂಕ್ಷನ್, ವಾಹನ ದಟ್ಟಣೆ ಪ್ರದೇಶದಲ್ಲಿ ಬೆಳಗ್ಗೆ, ಸಂಜೆ ಹೊತ್ತು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಈಗಾಗಲೇ ಈ ಕುರಿತು ಸೂಚನೆ ನೀಡಲಾಗಿದ್ದು, ಶೇ.95ರಷ್ಟು ಮಂದಿ ಠಾಣೆಯಿಂದ ಹೊರಗಿರಬೇಕು ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ. ರವಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರಗಿದ ಪ.ಜಾ./ಪ.ಪಂಗಡದವರ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ. ಮರದಡಿಯಲ್ಲಿ ನಿಂತು ಮೊಬೈಲ್ ನೋಡಿಕೊಂಡು ಇರುತ್ತಾರೆ ಎನ್ನುವ ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಿದರು. ಇದರಿಂದ ಅಪಘಾತಗಳು ಉಂಟಾಗುವುದನ್ನು ತಡೆಯಲು ಸಾಧ್ಯವಿದೆ. ಪೊಲೀಸರು ಇರುವುದನ್ನು ನೋಡಿದರೆ ವಾಹನ ಸವಾರರಲ್ಲಿ ಶಿಸ್ತು ಇರುತ್ತದೆ ಎಂದರು.
ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಸೋಮವಾರ ಪತ್ತೆಯಾಗಿದೆ. ಸುಮಾರು 40 ರಿಂದ 50 ವರ್ಷ ಪ್ರಾಯದ ಶವ ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಧರ್ಮಸ್ಥಳ ಠಾಣಾ ಸಬ್ ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಡಿ., ಸಿಬ್ಬಂದಿ್ಗಳು ಪರಿಶೀಲನೆ ನಡೆಸಿದ್ದು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವ ಪರೀಕ್ಷೆಗಾಗಿ ಸಾಗಿಸಲಾಗಿದೆ. ಈ ಕುರಿತು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಯಕ್ಷಗಾನ ಭಾಗವತ ತೋನ್ಸೆ ಜಯಂತ್ ಕುಮಾರ್(78) ಅವರು ನಿಧನರಾಗಿದ್ದಾರೆ. ಇವರು ರಾಷ್ಟ್ರ ಪ್ರಶಸ್ತಿ ವಿಜೇತ, ಸಂಚಾರಿ ಯಕ್ಷಗಾನ ಭಂಡಾರ ತೋನ್ಸೆ ಕಾಂತಪ್ಪ ಮಾಸ್ಟರ್ ರವರ ಸುಪುತ್ರರಾಗಿದ್ದಾರೆ. ಯಕ್ಷಗಾನ ಭಾಗವತರಾಗಿ, ಮದ್ದಳೆ, ಚೆಂಡೆಯ ಜೊತೆಗೆ ವೇಷಧಾರಿಯಾಗಿ ಕೂಡಾ ಪಾತ್ರ ಮಾಡಿರುವ ಕೆಲವು ಸಂಘ ಸಂಸ್ಥೆಗಳನ್ನು ಕಟ್ಟಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿ ರಾಜ್ಯಮಟ್ಟಕ್ಕೆ ಬೆಳೆಸಿದ್ದಾರೆ. ಯಕ್ಷಗಾನ ಸವ್ಯಸಾಚಿ, ಯಕ್ಷವಾರಿಧಿ, ಕಾಳಿಂಗ ನಾವಡ, ಯಕ್ಷಸುಮ,ಜಾನಪದ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ ಗಳನ್ನು ಪಡೆದಿರುವ ಇವರು ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ ಸನ್ಮಾನಿತರಾಗಿದ್ದಾರೆ. ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದ ಪ್ರತಿಭಾನ್ವಿತ ಕಲಾವಿದರಾಗಿ ಸಾಕಷ್ಟು ಸಾಧನೆಗಳೊಂದಿಗೆ ಪ್ರಸಿದ್ದರಾಗಿದ್ದ ತೋನ್ಸೆ ಯಕ್ಷಗಾನದ ಸಾಂಪ್ರದಾಯಿಕ ಮೌಲ್ಯಗಳ ಉಳಿಯುವಿಕೆಗೆ ಸಮಗ್ರವಾಗಿ ಶ್ರಮಿಸಿದ್ದರು. ಭಾಗವತರೂ ,ಯಕ್ಷಗುರುಗಳೂ ಆದ ತೋನ್ಸೆ ಜಯಂತ ಕುಮಾರ್ ಅವರು 3 ಗಂಡು ಮಕ್ಕಳು ಮತ್ತು ಪತ್ನಿ ವಿನೋದಾ ಅವರನ್ನು ಅಗಲಿದ್ದಾರೆ. ನಾಳೆ ಸಂತೆಕಟ್ಟೆ ಗೋಪಾಲಪುರದಲ್ಲಿರುವ ಮನೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅಂತಿಮ ವಿಧಿವಿಧಾನಗಳನ್ನು ಪೂರೈಸಿ…










