Author: main-admin

ಹಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ.? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ. ಬೇಕಾಗುವ ಸಾಮಗ್ರಿಗಳು: 1 ¼ ಕಪ್ – ತೆಂಗಿನಕಾಯಿ ಹಾಲು, 2/3 ಕಪ್ – ಹಾಲು, 2/3 ಕಪ್ – ಸಕ್ಕರೆ, ¼ ಕಪ್ – ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಟೇಬಲ್ ಸ್ಪೂನ್ – ಬಾದಾಮಿ, 2 ಟೇಬಲ್ ಸ್ಪೂನ್ – ಪಿಸ್ತಾ. ಮಾಡುವ ವಿಧಾನ: ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಹದ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಗೂ ತೆಂಗಿನಕಾಯಿ ತುರಿ ಸೇರಿಸಿ ಈ ಮಿಶ್ರಣ ದಪ್ಪಗಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಒಂದು ಪ್ಲೇಟ್ ಗೆ ತುಸು ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಇದರ ಮೇಲೆ ಬಾದಾಮಿ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ನೂತನವಾಗಿ 50 ತಾಲೂಕುಗಳನ್ನು ರಚಿಸಿ ಆದೇಶಿಸಿತ್ತು. ಈ ಬೆನ್ನಲ್ಲೇ 8 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಾಧಿಕಾರಿ ಕಚೇರಿ ಪ್ರಾರಂಭಿಸಲು ಆದೇಶಿಸಿದೆ. ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ನೂತನವಾಗಿ ರಚಿಸಲಾಗಿರುವ 50 ತಾಲೂಕುಗಳ ಪೈಕಿ 34 ತಾಲೂಕುಗಳಲ್ಲಿ ಹೊಸದಾಗಿ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಪ್ರಸ್ತಾಪಿಸಲಾಗಿರುತ್ತದೆ ಎಂದಿದ್ದಾರೆ. ಪ್ರಸ್ತುತ ಇರುವ ಮಾನದಂಡಗಳನ್ನು ಪೂರೈಸದಿದ್ದರೂ ಸಹ, ಹೊಸದಾಗಿ ರಚನೆಯಾಗಿರುವ ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಹಾಗೂ ಪ್ರತಿ ಉಪ ನೋಂದಣಿ ಕಚೇರಿಗೆ ಹುದ್ದೆಗಳನ್ನು ಮಂಜೂರು ಮಾಡುವಂತೆ ನೋಂದಣಿ ಮಹಾಪರಿ ವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ಕೋರಿರುತ್ತಾರೆ ಎಂದು ಹೇಳಿದ್ದಾರೆ. ಈ ಎಲ್ಲಾ ಪ್ರಸ್ತಾವನೆ ಹಿನ್ನಲೆಯಲ್ಲಿ ಹೊಸದಾಗಿ ರಚಿಸಲಾಗಿರುವ ತಾಲೂಕುಗಳ ಪೈಕಿ 8 ತಾಲೂಕುಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹೊಸ ಉಪ ನೋಂದಣಾಧಿಕಾರಿಗಳ ಕಚೇರಿಗಳನ್ನು ಹೊಸದಾಗಿ ಪ್ರಾರಂಭಿಸಲು ಅನುಮೋದನೆ ನೀಡಿ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡ,…

Read More

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಯಾಣಿಕನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನವೆಂಬರ್ 26ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಶಂಕರ್ ಮಿಶ್ರಾ, ಸಹ ಪ್ರಯಾಣಿಕ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆರೋಪಿ ಶಂಕರ್ ಮಿಶ್ರಾನನ್ನು ದೆಹಲಿ ಪೊಲೀಸರು ನಿನ್ನೆ ಬೆಂಗಳೂರಿನಲ್ಲಿ ಬಂಧಿಸಿದ್ದರು. ಇಂದು ಶಂಕರ್ ಮಿಶ್ರಾನನ್ನು ಪೊಲೀಸರು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ಆರೋಪಿ ಮಿಶ್ರಾಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Read More

ಕಾಸರಗೋಡು: ಮೈಸೂರುನಿಂದ ಕೇರಳಕ್ಕೆ ಪ್ರವಾಸಕ್ಕೆಂದು ಹೊರಟಿದ್ದ ಬಸ್ಸೊಂದು ಪನತ್ತಡಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮಗುಚಿ ಬಿದ್ದ ಪರಿಣಾಮ 40 ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಕಾಸರಗೊಂಡಿನಲ್ಲಿ ವರದಿಯಾಗಿದೆ. ಘಟನೆಯಿಂದ ಗಾಯಗೊಂಡವರನ್ನು ಪೂಡಂಕಲ್ಲು ತಾಲೂಕಿನ ಆಸ್ಪತ್ರೆ ಹಾಗೂ ಕಞಂಗಾಡ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ ನ ಸಿಬ್ಬಂದಿಗಳು ಕೇರಳದ ರಾಣಿಪುರಕ್ಕೆ ತೆರಳುತ್ತಿದ್ದಾಗ ಈ ಅಪಘಡ ಸಂಭವಿಸಿದೆ ಎನ್ನಲಾಗಿದೆ. ಬಸ್ಸಿನಲ್ಲಿ 49 ಮಂದಿ ಪ್ರಯಾಣಿಕರಿದ್ದರೆನ್ನಲಾಗಿದೆ. ಬಸ್ಸಿನಲ್ಲಿ ಸಿಲುಕಿದವರನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಯಿತು.

Read More

ಮಂಗಳೂರು : ಹೊಸ ವರ್ಷದ ಹಿಂದಿನ ದಿನ ಆನ್ಲೈನ್ ಮೂಲಕ ತರಿಸಿದ ಊಟ ತಿಂದು 19 ವರ್ಷ ವಯಸ್ಸಿನ ವಿಧ್ಯಾರ್ಥಿನಿ ಸಾವನಪ್ಪಿರುವ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ. ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ ( 19) ಮೃತಪಟ್ಟ ವಿದ್ಯಾರ್ಥಿನಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ .ಕಾಂ ವಿದ್ಯಾರ್ಥಿನಿಯಾಗಿದ್ದಳು . ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥ ಗೊಂಡಿದ್ದರು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ. ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು . ಆದರೆ ಅಂಜುಶ್ರಿ ತೀವ್ರ ಅಸ್ವಸ್ಥತೆ ಗೊಂಡ ಹಿನ್ನಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು . ಆದರೆ ಸ್ಥಿತಿ…

Read More

ಮಂಗಳೂರು: ಕಬಕ ಪುತ್ತೂರು ರೈಲ್ವೇ ಯಾರ್ಡ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ಸೇತುವೆ ಸ್ತಂಭದಲ್ಲಿ ಎರಡು ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸುವ ಕಾಮಗಾರಿಯಿಂದ ಕೆಲವು ರೈಲು ಸೇವೆ ವ್ಯತ್ಯಯವಾಗಲಿದೆ. ನಂ. 06489 ಮಂಗಳೂರು ಸೆಂಟ್ರಲ್‌ -ಸುಬ್ರಹ್ಮಣ್ಯ ರೋಡ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ನಂ.06488 ಸುಬ್ರಹ್ಮಣ್ಯ ರೋಡ್‌-ಮಂಗಳೂರು ಸೆಂಟ್ರಲ್‌ ರೈಲು ಜ. 7ರಂದು ರದ್ದಾಗಲಿವೆ. ನಂ. 06485 ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಎಕ್ಸ್‌ಪ್ರೆಸ್‌ ನೇರಳಕಟ್ಟೆ ಹಾಗೂ ಕಬಕ ಪುತ್ತೂರು ಮಧ್ಯೆ ಜ. 7ರಂದು ರದ್ದು. ನಂ. 06484 ಕಬಕ ಪುತ್ತೂರು -ಮಂಗಳೂರು ಸೆಂಟ್ರಲ್‌ ರೈಲು ಜ.7ರಂದು ನೇರಳಕಟ್ಟೆಯಿಂದ ಬೆಳಗ್ಗೆ 8.10ಕ್ಕೆ ಪ್ರಯಾಣ ಆರಂಭಿಸಲಿದೆ. ನಂ. 10107 ಮಡಗಾಂವ್‌ ಜಂಕ್ಷನ್‌ -ಮಂಗಳೂರು ಸೆಂಟ್ರಲ್‌ ಡೆಮು ಎಕ್ಸ್‌ ಪ್ರಸ್‌ ರೈಲನ್ನು ಜ. 7ರಂದು ತೋಕೂರು ಹಾಗೂ ಮಂಗಳೂರು ಸೆಂಟ್ರಲ್‌ ಮಧ್ಯೆ ರದ್ದುಗೊಳಿಸಲಾಗಿದೆ. ನಂ. 10108 ಮಂಗಳೂರು ಸೆಂಟ್ರಲ್‌ -ಮಡಗಾಂವ್‌ ಜಂಕ್ಷನ್‌ ಮೆಮು ರೈಲು ಮಂಗಳೂರು ಸೆಂಟ್ರಲ್‌-ತೋಕೂರು ಮಧ್ಯೆ 7ರಂದು ರದ್ದಾಗಲಿದ್ದು, ರೈಲು ತೋಕೂರಿನಿಂದ ಅಪರಾಹ್ನ 3.40ಕ್ಕೆ ಹೊರಡಲಿದೆ. ನಂ. 07377…

Read More

ಮಂಗಳೂರು : ಮಂಗಳೂರು ನಗರದ ಪಚ್ಚನಾಡಿಯಲ್ಲಿರುವ ಮಹಾನಗರ ಪಾಲಿಕೆ ತಾಜ್ಯ ವಿಲೇವಾರಿ ಘಟಕ (ಡಂಪಿಂಗ್ ಯಾರ್ಡ್) ಸಮೀಪ ಇಂದು ಅಪರಾಹ್ನ 2 ಗಂಟೆ ಸುಮಾರಿಗೆ ಅಗ್ನಿ ಅವಘಡ ಕಾಣಿಸಿಕೊಂಡ ಹಿನ್ನಲೆ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ಸದ್ಯ ಬೆಂಕಿ ಆರಿಸಲು ಅಗ್ನಿಶಾಮಕ ದಳ ಎನ್ ಎಮ್ ಪಿಟಿ, ಕದ್ರಿ ಹಾಗು ಪಾಂಡೇಶ್ವರದ ಏಳೆಂಟು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಿಸಿ ಬೆಂಕಿ ನಂದಿಸುತ್ತಿದ್ದಾರೆ. ಸುತ್ತಮುತ್ತಲಿನ ಪ್ರದೇಶ ಸಂಪೂರ್ಣವಾಗಿ ಹೊಗೆಯಿಂದ ಆವೃತ್ತವಾಗಿದ್ದು ಕಣ್ಣು ಉರಿ, ಉಸಿರಾಟದ ಸಮಸ್ಯೆ ಕೂಡಾ ಪ್ರಾರಂಭವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಹತ್ತಿರದಲ್ಲೇ ಶಿಕ್ಷಣ ಸಂಸ್ಥೆಗಳು ಕೂಡಾ ಇದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಕುವ ರಾಸಾಯಿನಿಕಗಳಿಂದ ಕೂಡಾ ಅನೇಕ ರೀತಿಯ ತೊಂದರೆ ಎದುರಾಗುತ್ತಿದೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ, ಮೇಯರ್ ಜಯಾನಂದ ಅಂಚನ್, ಆಯುಕ್ತ ಶ್ರೀಧರ್ ಭೇಟಿ ನೀಡಿದ್ದಾರೆ. ಬೆಂಕಿ ದುರಂತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಬೇಟಿ ಮಾಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ…

Read More

ದಾವಣಗೆರೆ: ನಿನ್ನೆಯಿಂದ ಶಿವಮೊಗ್ಗ ತುಂಗಾ ತೀರದ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ ಸಂಬಂಧದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಿನ್ನ ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ತಲಾ ಒಬ್ಬರನ್ನು ವಶಕ್ಕೆ ಪಡೆದಿದ್ದಂತ ಎನ್‌ಐಎ ಅಧಿಕಾರಿಗಳು, ಇಂದು ಹೊನ್ನಾಳಿಯಲ್ಲಿ ಯುವಕನೋರ್ವನನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಂತ ಟ್ರಯಲ್ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಿನ್ನೆ ರಾಜ್ಯಾಧ್ಯಂತ 6 ಕಡೆಯಲ್ಲಿ ದಾಳಿ ನಡೆಸಿ, ಮಹತ್ವದ ಮಾಹಿತಿ, ದಾಖಲೆಗಳನ್ನು ಪತ್ತೆ ಹಚ್ಚಿದ್ದರು. ಇಂದು ತನಿಖೆ ಮುಂದುವರೆಸಿರುವಂತ ಎನ್‌ಐಎ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಯುವಕ ನದೀಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಮೂಲಕ ಶಂಕಿತ ಆರೋಪಿಯ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಎನ್‌ಐಎ ನದೀಮ್ ನನ್ನು ಹೊನ್ನಾಳಿಯಲ್ಲಿ ವಶಕ್ಕೆ ಪಡೆದಿದೆ. ಈ ಬಳಿಕ ಅಜ್ಞಾನತ ಸ್ಥಳಕ್ಕೆ ಕರೆದೊಯ್ದು ಆತನನ್ನು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.

Read More

ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನೊಬ್ಬ ಸುಬ್ರಹ್ಮಣ್ಯದ ಹಿಂದೂ ಹುಡುಗಿ ಜತೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ  ಭೇಟಿಯಾಗಿರುವ ಘಟನೆ ನಡೆದಿದೆ.ಗುಂಪಿನಿಂದ ಹಲ್ಲೆಯಾಗಿದ್ದು ಅನ್ಯಕೋಮಿನ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ. ಆತ ಗಂಭೀರ ಗಾಯಗೊಂಡು ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.   ಇನ್ ಸ್ಟಾಗ್ರಾಂ ಮೂಲಕ ಇಬ್ಬರಿಗೂ ಪರಿಚಯವಾಗಿದ್ದು, ಇವರಿಬ್ಬರೂ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ನಲ್ಲಿ ಭೇಟಿಯಾಗಿದ್ದಾರೆ.ಈ ಸಂದರ್ಭ ಕುಮಾರಧಾರ ಹತ್ತಿರ ಗುಂಪಿನಿಂದ ಹಲ್ಲೆ ನಡೆದಿದ್ದು, ಯುವಕನ ತಲೆಗೆ ಏಟು ಬಿದ್ದು, ಆತ ಗಂಭೀರ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Read More

ಬೆಂಗಳೂರು : ವಿಧಾನಸಭೆ ಚುನಾವಣೆ ಹೊತ್ತಲ್ಲೇ 1.9 ಕೋಟಿ ನಕಲಿ ಹಣ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಂಬಂಧ ಪಿಚ್ಚಿ ಮುತ್ತು ಎಂಬಾತನನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಡಿಸೆಂಬರ್ 28 ರಂದು ಈತ ಬ್ಯಾಗ್ ನಲ್ಲಿ ನಕಲಿ ನೋಟುಗಳನ್ನು ತುಂಬಿಸಿಕೊಂಡು ಬರುತ್ತಿರುವ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಈತನನ್ನು ಬಲೆಗೆ ಬೀಳಿಸಿದ್ದಾರೆ. 2000 ಮುಖ ಬೆಲೆಯ 623 ನಕಲಿ ನೋಟು ಹಾಗೂ 500 ಮುಖ ಬೆಲೆಗೆ 174 ನಕಲಿ ನೋಟುಗಳು ಪತ್ತೆಯಾಗಿದೆ. ಆರೋಪಿಯು ತಮಿಳುನಾಡಿನ ತೂತ್ತುಕುಡಿಯಿಂದ ನಕಲಿ ನೋಟುಗಳನ್ನು ತರುತ್ತಿದ್ದನು ಎನ್ನಲಾಗಿದೆ. ಈ ಕುರಿತು ಸಿದ್ದಾಪುರ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಆರೋಪಿ ಬಾಯ್ಬಿಟ್ಟಿಲ್ಲ ಎಂಬುದಾಗಿ ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ.

Read More