ಹೈದರಾಬಾದ್: ತೆಲುಗಿನ ಜನಪ್ರಿಯ ನೃತ್ಯ ನಿರ್ದೇಶಕ (ಕೊರಿಯೊಗ್ರಾಫರ್) ಚೈತನ್ಯ ಅವರು ಇನ್ಸ್ಟಾಗ್ರಾಮ್ ಲೈವ್ ಬಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ತೆಲುಗು ನೃತ್ಯ ಕಾರ್ಯಕ್ರಮ ʼಧೀʼ ಯಲ್ಲಿ ಕೊರಿಯೊಗ್ರಾಫರ್ ಆಗಿ ಫೇಮ್ – ನೇಮ್ ಪಡೆದುಕೊಂಡಿದ್ದ ಚೈತನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇನ್ಸ್ಟಾಗ್ರಾಮ್ ಲೈವ್ ನಲ್ಲಿ ತಮ್ಮ ಕಷ್ಟದ ಬಗ್ಗೆ ಮಾತನಾಡಿದ್ದು, ನನ್ನ ಅಪ್ಪ, ಅಮ್ಮ, ಸಹೋದರಿ ನನಗೆ ಯಾವುದೇ ಕಷ್ಟಬಾರದಾಗೆ ನೋಡಿಕೊಂಡಿದ್ದಾರೆ. ನಾನು ನನ್ನೆಲ್ಲ ಸ್ನೇಹಿತರಲ್ಲಿ ಕ್ಷಮೆ ಕೋರುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನೀಗ ನಲ್ಲೂರಿನಲ್ಲಿದ್ದೇನೆ. ಇದು ನನ್ನ ಕೊನೆಯ ದಿನ. ಇನ್ನು ನಾನು ನನ್ನ ಸಾಲಗಳಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ ಎಂದಿದ್ದಾರೆ.
Author: main-admin
ಮಂಗಳೂರು: ಕಾಂಗ್ರೆಸ್, ಜೆಡಿಎಸ್ ನಂತರ ಇದೀಗ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರಜಾಪ್ರಣಾಳಿಕೆ ಎಂದು ಹೆಸರಿಟ್ಟಿದೆ. ಒಟ್ಟು 15 ಭರವಸೆಗಳನ್ನು ಬಿಡುಗಡೆ ಮಾಡಿದೆ. ಏನಿದೆ ಈ ಪ್ರಣಾಳಿಕೆಯಲ್ಲಿ? ಬಿಪಿಎಲ್ ಕುಟುಂಬಕ್ಕೆ ವರ್ಷಕ್ಕೆ ಉಚಿತವಾಗಿ 3 ಗ್ಯಾಸ್ ಸಿಲಿಂಡರ್ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್ ವಿತರಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ ಕಡಿಮೆ ಬೆಲೆಯಲ್ಲಿ ಗುಣಮಟ್ಟಣದ ಆಹಾರ ವಸ್ತುಗಳ ಮಾರಾಟ ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ವಿತರಣೆ ಪ್ರತಿ ತಿಂಗಳು 5 ಕೆಜಿ ಅಕ್ಕಿ, ಸಿರಿಧಾನ್ಯ ಒಳಗೊಂಡ ಪಡಿತರ ಕಿಟ್‘ಪೋಷಣೆ ಯೋಜನೆ’ಯಡಿ ಹಾಲು, ಪಡಿತರ ಕಿಟ್ ವಿತರಣೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ ‘ಸರ್ವರಿಗೂ ಸೂರು ಯೋಜನೆ’ಯಡಿ 10 ಲಕ್ಷ ನಿವೇಶನ ಹಂಚಿಕೆ…
ಹುಬ್ಬಳ್ಳಿ : ಕೆಲವೇ ಹೊತ್ತಿನಲ್ಲೇ ಬಿಜೆಪಿಯ ಜನಪರ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜನಪರ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೆಲವೇ ಹೊತ್ತಲ್ಲೇ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಇಂದು ವರುಣ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಸಿಎಂ ಬೊಮ್ಮಾಯಿ ಅವರ ಪ್ರವಾಸ ರದ್ದಾಗಿದೆ. ನಾಳೆ ವರುಣ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಹ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ವರುಣ ಪ್ರವಾಸ ರದ್ದಾಗಿದೆ.
ಗಡ್‌ಚಿರೋಲಿ (ಮಹಾರಾಷ್ಟ್ರ): ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಭಾನುವಾರ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಮಾವೋವಾದಿ ದಳದ ಕಮಾಂಡರ್ ಸೇರಿದಂತೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜಿಲ್ಲೆಯ ಕೆದ್ಮಾರಾ ಅರಣ್ಯದಲ್ಲಿ ಸಂಜೆ 7 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಗಡ್‌ಚಿರೋಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ನೀಲೋತ್‌ಪಾಲ್, “ಮನೆ ರಾಜಾರಾಂ ಮತ್ತು ಪೆರಿಮಿಲಿ ಸಶಸ್ತ್ರ ಚೌಕಟ್ಟಿನ ನಡುವಿನ ಅರಣ್ಯ ಪ್ರದೇಶದಲ್ಲಿ ನಕ್ಸಲೀಯರ ಪೆರಿಮಿಲಿ ಮತ್ತು ಅಹೇರಿ ದಳದ ಸದಸ್ಯರು ಮೊಕ್ಕಾಂ ಹೂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಜಂಗಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಸಿ-60 ಪೋಲೀಸರ ತುಕಡಿಗಳನ್ನು ಕಳುಹಿಸಲಾಗಿದೆ. ಶೋಧ ಕಾರ್ಯಾಚರಣೆಯ ವೇಳೆ ಮಾವೋವಾದಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದರು. ನಂತರ ಪೊಲೀಸರು ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿ ನಂತ್ರ ಮೂವರು ಪುರುಷ ಮಾವೋವಾದಿಗಳ ಶವಗಳನ್ನು ಶಸ್ತ್ರಾಸ್ತ್ರಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ನವದೆಹಲಿ : ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1856.50 ರೂ. ಇದೆ. ಮೇ. 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,856.50 ರೂ.ಇದೆ ಆದಾಗ್ಯೂ, ದರಗಳ ಕಡಿತವು ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ. ದೇಶೀಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ಗಳ ದರಗಳು ಕಳೆದ ತಿಂಗಳಂತೆಯೇ ಉಳಿದಿವೆ. ಎಲ್ಪಿಜಿ ಬೆಲೆ, ಹೆಚ್ಚಾಗಿ ಅಂತರರಾಷ್ಟ್ರೀಯ ಕಚ್ಚಾ ಬೆಲೆಗಳ ಮೇಲೆ ಅವಲಂಬಿತವಾಗಿದೆ. ಇವುಗಳು ಹೆಚ್ಚಾದಾಗ, ಎಲ್ಪಿಜಿ ಸಿಲಿಂಡರ್ ದರಗಳು ಸಹ ಹೆಚ್ಚಾಗುತ್ತವೆ. ಬಡ ವರ್ಗಗಳಿಗೆ, ಸರ್ಕಾರವು ಈ ಬೆಲೆಗಳಿಗೆ ಸಬ್ಸಿಡಿ ನೀಡಿದೆ. ನವದೆಹಲಿಯಲ್ಲಿ ಇಂದು ಸಬ್ಸಿಡಿ ರಹಿತ…
ಪುತ್ತೂರು: ಪುತ್ತೂರಿನ ಮಂಜಲ್ಪಡ್ಪು ಬೈಪಾಸ್ ಜಂಕ್ಷನ್ ಬಳಿ ಡಿಯೋ ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆಯಿತು. ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಎದುರಿನಿಂದ ಬಂದ ಡಿಯೋ ದ್ವಿಚಕ್ರ ವಾಹನ ಮುಖಾಮುಖಿ ಢಿಕ್ಕಿ ಹೊಡೆದಿದೆ.ಸವಾರನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ. ಸವಾರ ಪವಾಡಸದೃಶವಾಗಿ ಪಾರಾಗಿದ್ದಾನೆ.
ಮುಡಿಪು : ಮುಡಿಪು ಜನ ಶಿಕ್ಷಣ ಟ್ರಸ್ಟ್ ನಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ಮತ್ತು ಮತದಾರರ ಸ್ವಯಂ ಜಾಗೃತಿ, ಸಂಪೂರ್ಣ ಮತದಾನ ಸಂವಾದ ಸಂಕಲ್ಪ ಕಾರ್ಯಕ್ರಮ ಮೇ1 ರಂದು ಆಯೋಜಿಸಲಾಗಿದೆ. ಬೆಳಿಗ್ಗೆ 10.30 ರಿಂದ 11.30 ರ ತನಕ ಕಾರ್ಯಕ್ರಮ ನಡೆಯಲಿದೆ. ಕಾಯಕ ಯೋಗಿಗಳ ಬದುಕಿಗೆ ಬೆಳಕು ಚೆಲ್ಲುವ,, ಪ್ರಜಾಪ್ರಭುತ್ವದಲ್ಲಿ ಮತದಾರನ ಪಾತ್ರ, ಸ್ವಚ್ಛ-ಸಂಪೂರ್ಣ ಮತದಾನದ ಮಹತ್ವದ ಸಂದೇಶ ಸಾರುವ ಈ ಕಾರ್ಯಕ್ರಮದಲ್ಲಿ ನುಡಿ ಮತ್ತುಗಳು, ಶಕ್ತಿವಾಣಿಗಳು,ಕವನ,ನೃತ್ಯ ಪ್ರಸ್ತುತಿಯಿದೆ. ಜಾಗೃತ ಮತದಾರರು, ಮತದಾರರ ಜಾಗೃತಿ ವೇದಿಕೆ ಸದಸ್ಯರು, ಕೌಶಲ್ಯ ತರಭೇತಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರು, ಕುಲಪತಿಗಳ ವಿಶೇಷಾಧಿಕಾರಿಗಳು ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳನ್ನು ಅಹ್ವಾನಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪಂಜಾಬ್: ಲುಧಿಯಾನದ ಗಿಯಾಸ್ಪುರ ಪ್ರದೇಶದಲ್ಲಿ ಅನಿಲ ಸೋರಿಕೆ ಘಟನೆಯಿಂದಾಗಿ 9 ಜನರು ಸಾವನ್ನಪ್ಪಿದ್ದು, ಇತರ 10 ಜನರು ಅಸ್ವಸ್ಥರಾಗಿರುವ ಘಟನೆ ವರದಿಯಾಗಿದೆ. ಎನ್‌ಡಿಆರ್‌ಎಫ್ ತಂಡಗಳು ಕಾರ್ಖಾನೆಗೆ ಧಾವಿಸಿದ್ದು, ವೈದ್ಯರ ತಂಡ ಮತ್ತು ಅಗ್ನಿಶಾಮಕ ದಳವೂ ಸ್ಥಳಕ್ಕೆ ತಲುಪಿದೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಗತಿಯಲ್ಲಿದೆ.ಪೊಲೀಸ್ ಅಧಿಕಾರಿಗಳು ಗಸ್ತು ತಿರುಗುತ್ತಿದ್ದು, ಮುಖವಾಡಗಳನ್ನು ಧರಿಸಿ ಮತ್ತು ಸುತ್ತುವರಿದ ಪ್ರದೇಶದಿಂದ ಸ್ಥಳೀಯರನ್ನು ಹೊರಗುಳಿಯುವಂತೆ ತಿಳಿಸಿದ್ದಾರೆ.
ಮಂಗಳೂರು: ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಟಾಸ್ಕ್ ನೀಡಿ 1.45 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ. 20ರಂದು ಫೇಸ್‌ಬುಕ್‌ನಲ್ಲಿ “ವರ್ಕ್ ಫ್ರಂ ಹೋಮ್ ವಿದ್ ಅಮೆಜಾನ್’ ಎಂಬ ಜಾಹೀರಾತು ಕಂಡ ವ್ಯಕ್ತಿಯೊಬ್ಬರು ಅದನ್ನು ಕ್ಲಿಕ್ ಮಾಡಿದಾಗ ವಾಟ್ಸ್‌ಆ್ಯಪ್ ಪೇಜ್ ತೆರೆದುಕೊಂಡಿತ್ತು. ಅದರಲ್ಲಿ ಲಿಂಕ್‌ವೊಂದನ್ನು ಕಳುಹಿಸಲಾಗಿತ್ತು. ಫೆ.21ರಂದು ಲಿಂಕ್‌ನ್ನು ಕ್ಲಿಕ್ ಮಾಡಿ ಅದರಲ್ಲಿ ತಿಳಿಸಿದಂತೆ ನೋಂದಣಿ ಮೊತ್ತವಾಗಿ 200 ರೂ. ಪಾವತಿಸಿದ್ದರು. ಇನ್ನು ಟೆಲಿಗ್ರಾಂನಲ್ಲಿ ದೂರುದಾರ ವ್ಯಕ್ತಿಯನ್ನು ಸಂಪರ್ಕಿಸಿದ ಅಪರಿಚಿತ ವ್ಯಕ್ತಿ ಹಲವು ಟಾಸ್ಕ್‌ಗಳನ್ನು ಪೂರೈಸಿ ಕಮಿಷನ್ ಪಡೆದುಕೊಳ್ಳುವಂತೆ ತಿಳಿಸಿ 500 ರೂ. ವರ್ಗಾಯಿಸಿಕೊಂಡಿದ್ದಾರೆ.ಫೆ.23ರಂದು ಟಾಸ್ಕ್ ನೆಪದಲ್ಲಿ ಆದಾಯ ತೆರಿಗೆ, ಕಮಿಷನ್ ಮೊದಲಾದ ಹಲವು ಕಾರಣಗಳನ್ನು ತಿಳಿಸಿ ಹಂತ ಹಂತವಾಗಿ ಒಟ್ಟು 1,45,225 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದು, ಈ ಬಗ್ಗೆ ದೂರು ದಾಖಲಾಗಿದೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಪ್ರಸಿದ್ಧ ‘ಮನ್ ಕೀ ಬಾತ್’ನ 100ನೇ ಕಂತಿನ ವಿಶೇಷ ಭಾಷಣ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ. 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಆರಂಭಿಸಿದ ಈ ರೇಡಿಯೋ ಭಾಷಣದ ಶತಕದ ಸಂಭ್ರಮವನ್ನು ಭರ್ಜರಿ ಯಶಸ್ವಿಗೊಳಿಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಶಾದ್ಯಂತ 4 ಲಕ್ಷ ಸ್ಥಳಗಳಲ್ಲಿ ಜನರಿಗೆ ಭಾಷಣ ಕೇಳಿಸಲು ಸನ್ನದ್ಧವಾಗಿದೆ. ಜೊತೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲೂ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ತಿಂಗಳ ಕೊನೆಯ ಭಾನುವಾರ ಪ್ರಧಾನಿ ಮೋದಿ ‘ಮನ್ ಕೀ ಬಾತ್’ ಹೆಸರಿನಲ್ಲಿ ರೇಡಿಯೋ ಭಾಷಣ ಮಾಡುತ್ತಾ ಬಂದಿದ್ದಾರೆ. ಪ್ರತಿ ಭಾಷಣದಲ್ಲೂ ಒಂದೊಂದು ವಿಷಯವನ್ನು ಅವರು ಆಯ್ದುಕೊಳ್ಳುತ್ತಾರೆ. ಜೊತೆಗೆ ದೇಶದ ಮೂಲೆಮೂಲೆಯಿಂದ ಅಪರೂಪದ ಸಾಧಕರನ್ನು ಹುಡುಕಿ ಅವರ ಜೊತೆ ಭಾಷಣದ ನಡುವೆ ಮಾತನಾಡುತ್ತಾರೆ. ಇದು ಇಂದು ಅತ್ಯಂತ ಜನಪ್ರಿಯ ರೇಡಿಯೋ ಭಾಷಣವಾಗಿ ಹೊರಹೊಮ್ಮಿದ್ದು, ಇದೀಗ 100ನೇ ಭಾಷಣದ ಮೈಲುಗಲ್ಲನ್ನು ‘ಐತಿಹಾಸಿಕ’ ರೀತಿಯಲ್ಲಿ ಯಶಸ್ವಿಯಾಗಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.…










