ಬೆಂಗಳೂರು : ಬಾಲ್ಯ ವಿವಾಹ ತಡೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಹತ್ವದ ಕ್ರಮ ಕೈಗೊಂಡಿದ್ದು, ಮದುವೆಯ ಕಡ್ಡಾಯ ನೋಂದಣಿ ಅಧಿಕಾರ ಗ್ರಾಮಪಂಚಾಯಿತಿಗಳಿಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಳವಾಗುತ್ತಿದ್ದು, ಬಾಲ್ಯ ವಿವಾಹ ತಡೆಯಲು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮದುವೆಯ ನೋಂದಣಿಯನ್ನು ಗ್ರಾಮ ಪಂಚಾಯಿತಿ ಅಧಿಕಾರ ವ್ಯಾಪ್ತಿಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯಿತಿಗಳಿಗೆ ವಿವಾಹ ನೋಂದಣಿ ಅಧಿಕಾರ ನೀಡಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಂದಣಿ ಜವಾಬ್ದಾರಿ ವಹಿಸಿ 250 ರೂ. ಒಳಗೆ ಶುಲ್ಕ ನಿಗದಿ ಮಾಡಿ ನೋಂದಣಿ ಕಡ್ಡಾಯಗೊಳಿಸಬೇಕು ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ ಎನ್ನಲಾಗಿದೆ.
Author: main-admin
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ನಾಲ್ಕಕ್ಕೇರಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕೆಲವರನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿದೆ. ಮೃತರನ್ನು ದೀಪಕ್ ಕುಮಾರ್, ಸತೀಶ್ ಕುಮಾರ್ ಮತ್ತು ಪ್ರೀತಮ್ ಲಾಲ್ ಮತ್ತು ಶಿವಪಾಲ್‌ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಡಾಂಗ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರು ಮೂರು ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಪತ್ತೆಗೆ ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರೆದಿದೆ. ನಿನ್ನೆ(ಭಾನುವಾರ) ಸಂಜೆ ಡಾಂಗ್ರಿ ಗ್ರಾಮದಲ್ಲಿ ಇಬ್ಬರು ಶಸ್ತ್ರಸಜ್ಜಿತ ಉಗ್ರರು ಮೂರು ಮನೆಗಳಿಗೆ ನುಗ್ಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಿಂದ…
ಕಾರ್ಕಳ: ವೇಗವಾಗಿ ಸಾಗುತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಪಲ್ಟಿಯಾದ ಘಟನೆ ಹೆಬ್ರಿ ತಾಲೂಕಿನ ಅಂಡಾರು ಕರಿಯಾಲು ಕ್ರಾಸ್ ಬಳಿ ನಡೆದೆ. ಜನವರಿ 1 ರಂದು ಭಾನುವಾರ ಮುಂಜಾನೆ ಈ ಅಪಘಾತ ನಡೆದಿದ್ದು, ಅಜೆಕಾರಿನ ವ್ಯಕ್ತಿಯೊಬ್ಬರಿಗೆ ಸೇರಿದ ಕಾರು ಇದಾಗಿದೆ. ಬೆಂಗಳೂರಿನಿಂದ ಕೆರ್ವಾಶೆಯ ಮೂಲಕ ಅಜೆಕಾರಿಗೆ ಬರುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರಿಗೆ ಗಾಯಗಳಾಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಈ ಅಪಘಾತದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮ್ಯಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಮ್ಯಾಗಿ ಜೊತೆ ತರಕಾರಿ, ಕಾರ್ನ್ ಹಾಕಿದ್ರೆ ಅದ್ರ ರುಚಿ ದುಪ್ಪಟ್ಟಾಗುತ್ತದೆ. ತರಕಾರಿ, ಕಾರ್ನ್ ಹಾಕಿ ಮ್ಯಾಗಿ ಮಾಡೋದು ಹೇಗೆ ಅಂತಾ ನಾವು ಹೇಳ್ತೇವೆ ನೋಡಿ. ಕಾರ್ನ್ ಮ್ಯಾಗಿಗೆ ಬೇಕಾಗುವ ಪದಾರ್ಥ ಎರಡು ಪ್ಯಾಕೆಟ್ ಮ್ಯಾಗಿ ಒಂದು ಈರುಳ್ಳಿ (ಸಣ್ಣಗೆ ಕತ್ತರಿಸಿದ) ಕಾರ್ನ್ ಒಂದು ಸಣ್ಣ ಬೌಲ್ ಕ್ಯಾರೆಟ್ (ತೆಳುವಾದ ಉದ್ದಗೆ ಕಟ್ ಮಾಡಿದ್ದು) ಕ್ಯಾಪ್ಸಿಕಮ್ (ಸಣ್ಣಗೆ ಕತ್ತರಿಸಿದ್ದು) ಒಂದು ಟೊಮೆಟೊ (ಸಣ್ಣದಾಗಿ ಕತ್ತರಿಸಿದ) ಎರಡು ಹಸಿರು ಮೆಣಸಿನಕಾಯಿಗಳು (ಸಣ್ಣಗೆ ಕತ್ತರಿಸಿದ) ಉಪ್ಪು ರುಚಿಗೆ ತಕ್ಕಷ್ಟು ನೀರು ಅಗತ್ಯಕ್ಕೆ ತಕ್ಕಷ್ಟು ಕಾರ್ನ್ ಮ್ಯಾಗಿ ಮಾಡುವ ವಿಧಾನ ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಸಿ. ನೀರು ಕುದಿಯಲು ಶುರುವಾದಾಗ ಈರುಳ್ಳಿ, ಕ್ಯಾರೆಟ್, ಕಾರ್ನ್, ಟೊಮೆಟೊ, ಕ್ಯಾಪ್ಸಿಕಂ, ಹಸಿರು ಮೆಣಸಿನಕಾಯಿ ಮತ್ತು ಸ್ವಲ್ಪ ಉಪ್ಪು ಸೇರಿಸಿ. ಸ್ವಲ್ಪ ಮ್ಯಾಗಿ ಮಸಾಲೆಯನ್ನು ಹಾಕಿ. ತರಕಾರಿ ಬೇಯುತ್ತಿದ್ದಂತೆ ಮ್ಯಾಗಿ ಹಾಗೂ ಮ್ಯಾಗಿ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಬೇಯಿಸಿ. ಸೂಪ್ ನಂತೆ ಮ್ಯಾಗಿ…
ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಬಾಳ್ತಿಲ ಗ್ರಾಮದ ಕಸೆಕೋಡಿ ಮನೆ ನಿವಾಸಿ ಮಂಜುನಾಥ ಭೋವಿ(50) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 105 ಕೆ.ಜಿ. ಅಡಿಕೆ, ಕಳವು ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೋಳಂಗಡಿ ನಿವಾಸಿ ಐವನ್ ಥೋರಸ್ ಎಂಬವರು ತನ್ನ ಅಡಿಕೆ ತೋಟದ ಮಧ್ಯೆದಲ್ಲಿರುವ ಅಂಗಳದಲ್ಲಿ ಅಡಿಕೆ ಒಣಗಲು ಹಾಕಿದ್ದರು. ಡಿ.24 ಮತ್ತು ಡಿ.29ರ ಮಧ್ಯದ ಅವಧಿಯಲ್ಲಿ ಇದರಿಂದ 100-120 ಕೆ.ಜಿ ಅಡಿಕೆಯನ್ನು ಯಾರೋ ಕಳವುಗೈದಿದ್ದಾರೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಡಿ.30ರಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಂಜುನಾಥ ಭೋವಿ ವಿರುದ್ಧ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣೆಗಳಲ್ಲಿ ಅಲ್ಲದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಹೊನ್ನಾವರ ಠಾಣಾ ವ್ಯಾಪ್ತಿಯಲ್ಲಿ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ ಪ್ರಕರಣಗಳು…
ಹೊಸ ವರ್ಷದ ಮೊದಲ ದಿನವೇ ಶ್ರೀಸಾಮಾನ್ಯನಿಗೆ ದೊಡ್ಡ ಶಾಕ್ ಕಾದಿದೆ. ಜನವರಿ 1, 2023 ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ಇಂದಿನಿಂದ ಸಿಲಿಂಡರ್ ಖರೀದಿ ದುಬಾರಿಯಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಸಂಕಷ್ಟ ಎದುರಾಗುವಂತೆ ಮಾಡಿದೆ. ಇನ್ನು ದೆಹಲಿ, ಮುಂಬೈನಿಂದ ಪಾಟ್ನಾವರೆಗಿನ ಎಲ್ಲಾ ನಗರಗಳಲ್ಲಿ ಗ್ಯಾಸ್ ಸಿಲಿಂಡರ್ ಖರೀದಿ ದುಬಾರಿಯಾಗಿದೆ. ಯಾವ ನಗರದಲ್ಲಿ ಸಿಲಿಂಡರ್ ದರ ಎಷ್ಟಿದೆ ಎಂದು ತಿಳಿಯೋಣ. ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಗಳು ಹೆಚ್ಚಾಗಿದೆ. ದೇಶೀಯ ಗ್ಯಾಸ್ ಸಿಲಿಂಡರ್ಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದರೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಬರೋಬ್ಬರಿ 25 ರೂ. ಹೆಚ್ಚಳವಾಗಿದೆ. ವಾಣಿಜ್ಯ ಸಿಲಿಂಡರ್ ದರಗಳು: (ರೂ.ಗಳಲ್ಲಿ) ದೆಹಲಿ – 1769 ರೂ. ಮುಂಬೈ – 1721 ರೂ. ಕೊಲ್ಕತ್ತಾ – 1870 ರೂ. ಚೆನ್ನೈ – 1917 ರೂ. ದೇಶೀಯ ಸಿಲಿಂಡರ್ ದರಗಳು- (ರೂ.ಗಳಲ್ಲಿ) ದೆಹಲಿ – 1053 ರೂ. ಮುಂಬೈ – 1052.5 ರೂ.…
ಬೆಂಗಳೂರು : ಕಲರ್ಸ್ ಕನ್ನಡದ ಈ ಬಾರಿಯ ಬಿಗ್ ಬಾಸ್ 9 ರ ವಿಜೇತರಾಗಿ ಕರಾವಳಿಯ ಪ್ರತಿಭಾನ್ವಿತ ನಟ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಗಿರಿಗಿಟ್ ಚಿತ್ರದ ತುಳುನಾಡಿನ ಪ್ರೇಕ್ಷಕರ ಮನಗೆದ್ದ ನಟ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಒಟಿಟಿ ಮೂಲಕ ಕಾಲಿಟ್ಟ ರೂಪೇಶ್ ಶೆಟ್ಟಿ, ಟಿವಿ ಬಿಗ್ ಬಾಸ್‌ನಲ್ಲಿಯೂ ಸ್ಪರ್ಧಿಯಾಗಿ ಪೈಪೋಟಿ ನೀಡಿದ್ದರು. ಒಟಿಟಿ ಟಾಪರ್ ಆಗಿದ್ದ ರೂಪೇಶ್ ಶೆಟ್ಟಿ ಈಗ ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ. ರಾಕೇಶ್ ಅಡಿಗಗೆ ಟಫ್ ಫೈಟ್ ಕೊಟ್ಟು, ಬಿಗ್ ಬಾಸ್ ವಿನ್ನರ್ ಟೈಟಲ್ ಅನ್ನ ತಮ್ಮದಾಗಿಸಿಕೊಂಡಿದ್ದಾರೆ. ರಾಕೇಶ್ ಅಡಿಗ ರನ್ನರ್ ಅಪ್ ಆಗಿದ್ದಾರೆ. 2ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಒಟ್ನಲ್ಲಿ ರೂಪೇಶ್ ಶೆಟ್ಟಿ ಗೆಲವು ಕನ್ನಡಿಗರಿಗೆ, ತುಳುನಾಡಿನ ಸಮಸ್ತ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
ಆಡುಗಳಿಗೆ ಹೊಂಚು ಹಾಕಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಸಾಲೆತ್ತೂರು ನಿವಾಸಿಗಳಾದ ಅಜೀಮ್ (19), ಅನಸ್ (19) ಪೊಲೀಸ್ ವಶವಾದವರು. ಪೆರುವಾಯಿ, ಅಡ್ಯನಡ್ಕ, ಕೇಪು, ಮರಕ್ಕಿಣಿ, ಅಳಿಕೆ ಮುಂತಾದ ಪ್ರದೇಶಗಳಿಂದ ಗುಡ್ಡಕ್ಕೆ ಮೇಯಲೆಂದು ಬಿಡುತ್ತಿದ್ದ ಆಡುಗಳು ನಾಪತ್ತೆಯಾಗುತ್ತಿದ್ದವು. ಆಡುಗಳ ನಾಪತ್ತೆ ಹಿಂದೆ ಖದೀಮರ ಕೈಚಳಕವನ್ನು ಪತ್ತೆ ಹಚ್ಚುವ ಸಲುವಾಗಿ ಆಡು ಮಾಲಕರು ಕಾಯುತ್ತಿದ್ದರು. ಶುಕ್ರವಾರ ಮುಂಜಾನೆ ಕಳ್ಳರ ಪತ್ತೆಗಾಗಿ ಮಾಲಕರು ಕಾಯುತ್ತಿದ್ದ ವೇಳೆ ಕೇಪು ಕಲ್ಲಂಗಳ ದ್ವಾರದ ಸಮೀಪ ಆಡು ಕಳ್ಳರಿಬ್ಬರು ಸಾರ್ವಜನಿಕರಿಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.ಕೂಡಲೇ ಇಬ್ಬರನ್ನು ಹಿಡಿದುಕೊಂಡು ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಆದರೆ ಠಾಣೆಯಲ್ಲಿ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಳ್ಯ : ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ ಘಟನೆ ನೆಟ್ಟಣ ರೈಲ್ವೆ ನಿಲ್ದಾಣದಲ್ಲಿ ಇಂದು ನಸುಕಿನ ಜಾವ ನಡೆದಿದೆ. ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕದಳ ಮತ್ತು ರೈಲ್ವೆ ಇಲಾಖೆಯ ಸಹಕಾರದೊಂದಿಗೆ ಅನಿಲ ಸೋರಿಕೆ ತಡೆಯುವ ಕಾರ್ಯಾಚರಣೆ ನಡೆದಿದೆ. ಸುಳ್ಯ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಅಗ್ನಿಶಾಮಕ ದಳದ ನಾಲ್ಕು ಅಗ್ನಿ ಶಮನ ಯಂತ್ರಗಳು ಹಾಗೂ ರೈಲ್ವೆ ಇಲಾಖೆಯ ಸಹಕಾರದೊಂದಿಗೆ ಅನಿಲ ಸೋರಿಕೆ ತಡೆಯುವ ಕಾರ್ಯಾಚರಣೆ ನಡೆದಿದೆ. ಮಂಗಳೂರಿನಿಂದ ಮಹರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲನ್ನು ಸುಬ್ರಮಣ್ಯ ರೋಡ್ ರೈಲ್ವೆ ನಿಲ್ದಾಣದಲ್ಲಿ ರಾತ್ರಿ ಗಂಟೆ 2.30 ರ ಸುಮಾರಿಗೆ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಲೋಕೊ ಪೈಲಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್‌ಗಳ ಪೈಕಿ ನಾಲ್ಕನೇ ಟ್ಯಾಂಕ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದು ತಿಳಿದು ಬಂದಿದೆ. ತಕ್ಷಣವೇ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರೈಲ್ವೆ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕ ದಳಕ್ಕೆ ಕರೆ ಮಾಹಿತಿ ನೀಡಲಾಯಿತು.…
ಮಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷಾಚರಣೆಯ ಸಂಧರ್ಭದಲ್ಲಿ ಮಂಗಳೂರು ನಗರದಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಕಾನೂನು ಮೀರಿ ತಿರುಗಾಡುವವರನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾಧಿಕಾರಿಗಳ ಸಭೆಯಂತೆ ನಿಯಮಾವಳಿ ರೂಪಿಸಲಾಗಿದೆ. 12.30ಕ್ಕೆ ಕಾರ್ಯಕ್ರಮ ಮುಗಿಸಿ 10 ಗಂಟೆಗೆ ಧ್ವನಿ ವರ್ಧಕ ಬಂದ್ ಮಾಡಬೇಕು. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 32 ಚೆಕ್ ಪೋಸ್ಟ್ ಹಾಕಲಾಗಿದೆ. ಯಾವುದೇ ತೊಂದರೆ ಇಲ್ಲದೇ ಸಂಭ್ರಮಾಚರಣೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ. ಬೀಚ್ ಅಥವಾ ಯಾವುದೇ ಜಾಗದಲ್ಲಿ ಸಂಭ್ರಮಾಚರಣೆ ಮಾಡಲು ಅನುಮತಿ ಪಡೆದು ಮಾಡಬೇಕು. ಅನುಮತಿ ಇಲ್ಲದೇ ಯಾವುದೇ ಆಚರಣೆಗೆ ಅವಕಾಶ ಇಲ್ಲ. ರಾತ್ರಿ 12.30ಗೆ ಎಲ್ಲವೂ ಕ್ಲೋಸ್ ಆಗುವಾಗ ಆ ಬಳಿಕ ಯಾರೂ ರಸ್ತೆಯಲ್ಲಿ ಇರಬಾರದು. ತ್ರಿಬಲ್ ರೈಡ್ ಅಥವಾ ಕುಡಿದು ವಾಹನ ಚಾಲನೆಗೆ ಅವಕಾಶ ಇಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಕಮಿಷನರ್…










