Author: main-admin

ಮಂಗಳೂರು: ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಅಪರಾಧ ಪತ್ತೆ, ನಿಯಂತ್ರಣ ಮತ್ತು ತ್ವರಿತ ತನಿಖೆಗೆ ಮುಂದಾಗಿರುವ ಪೊಲೀಸ್‌ ಇಲಾಖೆ ರಾಜ್ಯಾದ್ಯಂತ ಲಕ್ಷಾಂತರ ಸಿಸಿ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ ಮಾಡಿಕೊಳ್ಳುತ್ತಿದೆ. ಸಾರ್ವಜನಿಕ ಸುರಕ್ಷೆ ಕಾಯಿದೆ ಯಡಿ ದಿನಕ್ಕೆ 500ಕ್ಕಿಂತ ಹೆಚ್ಚು ಬಾರಿ ಜನರ ಓಡಾಟವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಸಿಸಿ ಕೆಮರಾ ಕಡ್ಡಾಯಗೊಳಿಸಲಾಗಿದ್ದು ಈ ರೀತಿ ಅಳವಡಿಕೆಯಾಗಿರುವ, ಸಾರ್ವಜನಿಕ ಸ್ಥಳದ ಪಕ್ಕ ಇರುವ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸಲಾಗುತ್ತಿದೆ. ಏನಿದು ಜಿಯೋ ಟ್ಯಾಗಿಂಗ್‌?ಜಿಯೋ ಟ್ಯಾಗಿಂಗ್‌ ಎಂಬುದು ಪೊಲೀಸ್‌ ಇಲಾಖೆಯ ಆಯಪ್‌ವೊಂದರಡಿ ಕಾರ್ಯಾಚರಿಸುತ್ತದೆ. ಇದು ಜಿಐಎಸ್‌ (ಜಿಯೋಗ್ರಾಫಿಕ್‌ ಇನ್‌ಫಾರ್ಮೇಷನ್‌ ಸಿಸ್ಟಂ) ಆಗಿದ್ದು ಸಿಸಿ ಕೆಮರಾಗಳು ನಿರ್ದಿಷ್ಟವಾಗಿ ಯಾವ ಕಟ್ಟಡದ, ಯಾವ ಭಾಗದಲ್ಲಿವೆ, ಯಾವ ಕಡೆ ಮುಖ ಮಾಡಿವೆ, ಅವುಗಳ ಸ್ಟೋರೇಜ್‌ ಸಾಮರ್ಥ್ಯ ಎಷ್ಟು ಎಂಬಿತ್ಯಾದಿ ಸ್ಪಷ್ಟ ಮಾಹಿತಿಗಳು ಆಯಪ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಯಾವುದೇ ಸ್ಥಳದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಅಲ್ಲಿರುವ ಕೆಮರಾಗಳ ಮಾಹಿತಿ ಕ್ಷಣಾರ್ಧದಲ್ಲಿ ಪೊಲೀಸರಿಗೆ ಲಭ್ಯವಾಗುತ್ತದೆ. ಅಲ್ಲದೆ…

Read More

ಮಂಗಳೂರು: ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೋನ ರೂಪಾಂತರಿ ತಳಿಯ ಹಾವಳಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೋವಿಡ್ ಲಕ್ಷಣ ಕಂಡು ಬಂದಲ್ಲಿ ಅವರನ್ನು ಪ್ರತ್ಯೇಕಿಸುವ ನಿಟ್ಟಿನಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಹಾಸಿಗೆಯ ಐಸೊಲೇಶನ್‌ ವಾರ್ಡ್‌ ಸಿದ್ದಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸಿದೆಯಲ್ಲದೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸುವ ವಿದೇಶಿ ಪ್ರಯಾಣಿಕರನ್ನು ಕೋವಿಡ್‌ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಈ ವೇಳೆ ಕೋವಿಡ್‌ ದೃಢಪಟ್ಟರೆ ಆ ಮಾದರಿಯನ್ನು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗೆ ಕಳುಹಿಸಲಾಗುತ್ತದೆ. ಕೋವಿಡ್‌ ದೃಢಪಟ್ಟ ವ್ಯಕ್ತಿಗಳಿಗೆ ಐಸೊಲೇಶನ್‌ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ. ಕೋವಿಡ್‌ ಸೋಂಕನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆರೋಗ್ಯ ಅಣಕು ಪ್ರದರ್ಶನವು ಮಂಗಳವಾರ ವೆನ್ಲಾಕ್ ಸಹಿತ ತಾಲೂಕು ಸರಕಾರಿ ಆಸ್ಪತ್ರೆಗಳಲ್ಲಿ ನಡೆಸಲಾಗಿದೆ.

Read More

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ವಿಚಾರವಾಗಿ ಸಿ.ಟಿ.ರವಿ ಅವರು ಎತ್ತಿದ ಪ್ರಶ್ನೆ, ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಯ್ತು. ಈ ವೇಳೆ ಮಾತನಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಬೈಬಲ್, ಕುರಾನ್, ಭಗವದ್ಗೀತೆಯಲ್ಲಿ ಇನ್ನೊಬ್ಬರಿಗೆ ಅನ್ಯಾಯ ಮಾಡಬೇಕು ಎಂದು ಬರೆದಿಲ್ಲ. ತಾನು ವಾಸಿಸುವ ನೆಲದ ಕಾನೂನಿಗೆ ಗೌರವ ಕೊಡಬೇಕು ಎಂದು ಬರೆಯಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು. ಭಯೋತ್ಪಾದಕರು, ಅಪರಾಧಿಗಳು, ಕ್ರೈಮ್ ಮಾಡುವವರು ಎಲ್ಲ ಸಮುದಾಯದಲ್ಲಿಯೂ ಇದ್ದಾರೆ. ಅವರನ್ನು ಧರ್ಮದ ಆಧಾರದಲ್ಲಿ ಗುರುತಿಸುವುದು ದೊಡ್ಡ ತಪ್ಪು ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಗೆ ಬಂದಾತ ದೇವರ ದಯದಲ್ಲಿ ರಿಕ್ಷಾದಲ್ಲಿಯೇ ಬಾಂಬ್ ಸ್ಫೋಟವಾದ ಕಾರಣ ಸಿಕ್ಕಿ ಬಿದ್ದ ಎಂದು ಯು.ಟಿ.ಖಾದರ್ ಹೇಳಿದರು.

Read More

ಧಾರವಾಡ : ಕೋವಿಡ್ ರೂಪಾಂತರಿ ಬಿ.ಎಫ್.7 ಸೋಂಕು ಬಂದರೂ ಅದನ್ನು ಸಮರ್ಪಕವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, : ಕೋವಿಡ್ ರೂಪಾಂತರಿ ಬಿ.ಎಫ್.7 ಸೋಂಕು ಬಂದರೂ ಅದನ್ನು ಸಮರ್ಪಕವಾಗಿ ನಿರ್ವಹಿಸಲು ರಾಜ್ಯ ಸರ್ಕಾರ ಅಗತ್ಯ ಸಿದ್ದತೆ ಮಾಡಿಕೊಂಡಿದೆ. ಕೋವಿಡ್‍ದೊಂದಿಗೆ ಜೀವನ ಸಾಗಿಸುವ ಅನಿವಾರ್ಯತೆ ಇದೆ. ಅದು ಜೀವನದ ಒಂದು ಭಾಗವಾಗುತ್ತಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ಬದುಕಬೇಕಿದೆ ಎಂದು ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳನ್ನು ನಿರ್ಭಂಧಿಸಲಾಗಿತ್ತು. ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಆರ್ಥಿಕ, ವಾಣಿಜ್ಯ, ಚುಟವಟಿಕೆಗಳು ಪುನರಾರಂಭಗೊಂಡು, ಚೈತನ್ಯ ಪಡೆದಿವೆ. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಅಥವಾ ತಡೆಯುವ ಯೋಚನೆ ಸರ್ಕಾರದ ಮುಂದೆ ಇಲ್ಲಾ ಎಂದು ತೀಳಿಸಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮೂರು ಡೋಸ್ ಲಸಿಕೆ ಪಡೆಯುವುದು, ಮಾಸ್ಕ್ ಧರಿಸುವುದು ಮತ್ತು ಒಳಾಂಗಣದಲ್ಲಿರುವ ಆಸನಗಳಿಗೆ ಮಾತ್ರ ಅವಕಾಶ…

Read More

ಮಂಗಳೂರು: ಅಪ್ರಾಪ್ತ ವಯಸ್ಸಿನ ಸೊಸೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 32 ವರ್ಷದ ವ್ಯಕ್ತಿಗೆ 15 ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಹಾಗೂ 50,000 ರೂಪಾಯಿ ದಂಡವನ್ನು ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಎಫ್‌ಟಿಎಸ್‌ಸಿ-ಐಐ (ಪೋಕೊ) ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ತೀರ್ಪು ನೀಡಿದ್ದಾರೆ. ಮಾತ್ರ ವ ಲ್ಲದೇ ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರವನ್ನೂ ನ್ಯಾಯಾಲಯ ಘೋಷಿಸಿದೆ. 2021 ರ ಆ. 9ರಂದು ಈ ಘಟನೆ ನಡೆದಿತ್ತು. ಆ. 15ರಂದು ಆರೋಪಿಯನ್ನು ಬಂಧಿಸಲಾಗಿತ್ತು. ಇನ್‌ಸ್ಪೆಕ್ಟರ್‌ ದಿನೇಶ್‌ ಕುಮಾರ್‌ ತನಿಖಾಧಿಕಾರಿಯಾಗಿದ್ದರು ಎಂದು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ವೆಂಕಟರಮಣ ಸ್ವಾಮಿ ಮಾಹಿತಿ ನೀಡಿದ್ದಾರೆ. ಕ್ರಿಮಿನಲ್‌ ಬೆದರಿಕೆಗಾಗಿ ನ್ಯಾಯಾಲಯವು ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ತಿಂಗಳು ಶಿಕ್ಷೆ ಕೂಡ ವಿಧಿಸಿದೆ.

Read More

ಉಳ್ಳಾಲ: ಮಂಗಳೂರು ವಿಶ್ವವಿದ್ಯಾನಿಲಯವು ಎನ್ಇಪಿ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 24, 2022 ರಂದು ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಪ್ರಕಟಿಸಿದೆ. ಸಮಸ್ಯೆಯಿರುವ ಉಳಿಕೆಯಾದ ಫಲಿತಾಂಶವನ್ನು ಡಿಸೆಂಬರ್ 29 ರಂದು ಪ್ರಕಟಿಸಲಾಗುವುದು. ಮೌಲ್ಯಮಾಪನ ಕಾರ್ಯವು ಹಂತಹಂತವಾಗಿ ಪೂರ್ಣಗೊಳ್ಳುತ್ತಿದ್ದು ಈಗಾಗಲೇ ಸ್ನಾತಕ ಪದವಿಯ ಆರನೇ ಸೆಮಿಸ್ಟರ್ನ ಫಲಿತಾಂಶ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. ತರಗತಿಗಳ ನಡುವೆಯೇ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್ನ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದ್ದು ಸದರಿ ಸೆಮಿಸ್ಟರ್ಗಳ ಫಲಿತಾಂಶವನ್ನು ಜನವರಿ 20, 2023 ರ ಒಳಗೆ ಪ್ರಕಟಿಸಲಾಗುವುದು, ಎಂದು ಕುಲಸಚಿವರ (ಪರೀಕ್ಷಾಂಗ) ಪ್ರಕಟಣೆ ತಿಳಿಸಿದೆ.

Read More

ಕೊಣಾಜೆ:ರಸ್ತೆ ಬದಿ ನಿಂತಿದ್ದ ಶಾಲಾ ವಿದ್ಯಾರ್ಥಿಗೆ ಕಾರು ಢಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಇದೀಗ ನಡೆದಿದೆ. ಬೋಳಿಯಾರು ಭಟ್ರಬೈಲು ನಿವಾಸಿ 8ನೇ ತರಗತಿ ವಿದ್ಯಾರ್ಥಿ ಕಾರ್ತಿಕ್ (14) ಮೃತ ಬಾಲಕ. ಕಾರ್ತಿಕ್ ಶಾಲೆ ಬಿಟ್ಟು ಮನೆಗೆ ತೆರಳಲು ರಸ್ತೆಬದಿಯಲ್ಲಿ ನಿಂತಿದ್ದ ವೇಳೆ ಮುಡಿಪು ಕಡೆಗೆ ತೆರಳುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಸ್ಥಳಕ್ಕೆ ಮಂಗಳೂರು ಸಂಚಾರಿ ಠಾಣೆ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಳ್ತಂಗಡಿ; ನಿಡ್ಲೆ ಗ್ರಾಮದ ಬೂಡುಜಾಲು ಸಮೀಪ ಮಕ್ಕಳ ಪ್ರವಾಸದ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಹಲವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸಿಂದನೂರಿನ ಶಾಲಾ ಮಕ್ಕಳ ಪ್ರವಾಸದ ಬಸ್ ಹಾಗೂ ಸುಬ್ರಹ್ಮಣ್ಯದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಸರಕಾರಿ ಬಸ್ ಎದುರು ಬದುರಾಗಿ ಡಿಕ್ಕಿ ಹೊಡೆದಿದೆ. ಹೊಡೆತದ ರಭಸಕ್ಕೆ ಎರಡೂ ಬಸ್ಸಿನ ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಾಹನದಲ್ಲಿದ್ದ ಮಕ್ಕಳು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಶೌರ್ಯ ತಂಡದವರ ನೇತೃತ್ವದಲ್ಲಿ ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ

Read More

ಹಾಸನ: ಡಿಟಿಡಿಸಿ ಕೊರಿಯರ್‌ ಶಾಪ್‌ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ತಜ್ಞರ ತಂಡ ಭೇಟಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬ್ಲಾಸ್ಟ್‌ ಆದ ಸುತ್ತಮುತ್ತಲಿನ ಪೊಲೀಸರು ಅಂಗಡಿ ಬಂದ್‌ ಮಾಡಿಸಿದ್ದಾರೆ.ಅಲ್ಲಿಗೆ ಯಾರು ಪ್ರವೇಶಿಸದಂತೆ ಬ್ಯಾರಿಕೇಡ್‌ ಪೊಲೀಸರು ಅಳವಡಿಸಿದ್ದಾರೆ.ಕೊರಿಯರ್ ಶಾಪ್​​ವೊಂದರಲ್ಲಿ ಮಿಕ್ಸಿ ಬ್ಲಾಸ್ಟ್ ಆಗಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಇಂದು ಸಂಜೆ 7:30ರ ಸಂದರ್ಭದಲ್ಲಿ ಘಟನೆ ನಡೆದಿದೆ. ಕೊರಿಯರ್​​ನಲ್ಲಿ ಬಂದಿದ್ದ ಮಿಕ್ಸಿಯನ್ನು ತರೆಯುವ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಸ್‌​ ಆಗಿದೆ. ಕಚೇರಿ ಮಾಲೀಕ ಶಶಿ ಎಂಬುವರ ಬಲಗೈ ಐದು ಬೆರಳುಗಳು ಸಂಪೂರ್ಣ ತುಂಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Read More

ಸುಳ್ಯ ಕುರುಂಜಿಭಾಗ್ ಸಮೀಪ ಇರುವ ಬಿಸಿಎಂ ಹಾಸ್ಟೆಲ್ ನಲ್ಲಿ ಬೆಂಗಳೂರು ಮೂಲದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಳ್ಯ ಶಾರದಾ ಹೆಣ್ಮಕ್ಕಳ ಪದವಿ ಪೂರ್ವ ಕಾಲೇಜಿನ‌ಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಸೋನಿಯಾ (18) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಬೆಂಗಳೂರು ರಾಮನಾಥ ಪುರದ, ಕೋರಮಂಗಲ ತಾಲೂಕಿನ ಮಾರ್ಲಮಂಗಲ ಗ್ರಾಮದ ಪುರುಷೋತ್ತಮ ಎಂಬವರ ಪುತ್ರಿ. ಸೋನಿಯಾ ಇಂದು ಕಾಲೇಜಿಗೆ ಹೋಗದೇ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದಳು. ಮದ್ಯಾಹ್ನ ಆಕೆಯ ರೂಂ ನಲ್ಲಿದ್ದ ಇನ್ನೊಬ್ಬಳು ವಿದ್ಯಾರ್ಥಿನಿ ಊಟದ ತಟ್ಟೆ ತರಲೆಂದು ರೂಂ ಗೆ ಹೋದಾಗ ಬಾಗಿಲು ಹಾಕಿತ್ತು. ಬಾಗಿಲು ತಟ್ಟಿದ್ದರೂ ಬಾಗಿಲು ತೆರೆದಿರಲಿಲ್ಲ, ಆಕೆ ಮಲಗಿರಬಹುದು ಎಂದು ಭಾವಿಸಿ ಗೆಳತಿಯ ತಟ್ಟೆಯಲ್ಲಿ ಊಟ ಮುಗಿಸಿ ಮತ್ತೆ ರೂಮಿಗೆ ಬಂದಾಗಲೂ ಬಾಗಿಲು ತೆರೆಯದೇ ಇದ್ದ ಕಾರಣ ಸಂಶಯಗೊಂಡ ವಿದ್ಯಾರ್ಥಿನಿ ವಾರ್ಡನ್ ಗೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿಗಳು ಬಂದು ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ, ಸ್ಥಳಕ್ಕೆ…

Read More