ಕರ್ನಾಟಕದಲ್ಲಿ ನಾಪತ್ತೆಯಾಗುತ್ತಿರುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಪೊಲೀಸ್ ಇಲಾಖೆಗೂ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 2021ರಿಂದ ಈವರೆಗೆ 3 ವರ್ಷಗಳಲ್ಲಿ ಒಟ್ಟು 42,237 ಮಹಿಳೆಯರು ನಾಪತ್ತೆಯಾಗಿರುವ ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು, ಅವರಲ್ಲಿ 39389 ಮಹಿಳೆಯರಷ್ಟೇ ಪತ್ತೆಯಾಗಿದ್ದಾರೆ ಎಂದು ಗೃಹ ಇಲಾಖೆ ಸ್ಪೋಟಕ ಮಾಹಿತಿ ಬಹಿರಂಗಗೊಳಿಸಿದೆ. ವಿಧಾನಸಭೆಯಲ್ಲಿ ಶಾಸಕ ರಿಜ್ವಾನ್ ಅರ್ಷದ್ ಕೇಳಿರುವ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಉತ್ತರ ನೀಡಿರುವ ಗೃಹ ಇಲಾಖೆ ಈ ಆತಂಕಕಾರಿ ಮಾಹಿತಿಯನ್ನು ಒದಗಿಸಿದೆ. ಗೃಹ ಇಲಾಖೆ ನೀಡುವ ಮಾಹಿತಿಯ ಆಧಾರದಲ್ಲಿ ರಾಜ್ಯದಲ್ಲಿ ಇನ್ನೂ ಅಧಿಕೃತವಾಗಿ ಸುಮಾರು 2848 ಮಹಿಳೆಯರು ಎಲ್ಲಿದ್ದಾರೆ ಎಂಬುದೇ ಪತ್ತೆಯಾಗಿಲ್ಲ. ನಾಪತ್ತೆ ಆಗಿರುವವರ ಪತ್ತೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು ಮಾನವ ಕಳ್ಳ ಸಾಗಣೆ ದಂಧೆ ಮೇಲೂ ನಿಗಾ ಇಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ.ಕಳೆದ ಮೂರುವರೆ ವರ್ಷದಲ್ಲಿ ಒಟ್ಟು 42,237 ಮಹಿಳೆಯರ ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 39389 ಮಹಿಳೆಯರನ್ನು ಪತ್ತೆ ಹಚ್ಚಲಾಗಿದೆ. ಉಳಿದ ಮಹಿಳೆಯರು ಎಲ್ಲಿದ್ದಾರೆ ಎಂಬುವುದು ಇಂದಿಗೂ…
Author: main-admin
ವಿಟ್ಲ : ಕಾರು ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಮೃತಪಟ್ಟ ಘಟನೆ ವಿಟ್ಲದ ಉಕ್ಕುಡ ದರ್ಬೆ ಎಂಬಲ್ಲಿ ನಡೆದಿದೆ. ರಿಕ್ಷಾ ಚಾಲಕ ಪೆರುವಾಯಿ ನಿವಾಸಿ ಅಬ್ಬಾಸ್ ಮೃತಪಟ್ಟವರು. ಮೃತದೇಹವನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು: ಮದ್ಯದ ನಶೆಯಲ್ಲಿ ಮೋರಿಗೆ ಬಿದ್ದ ಕುಡುಕನೋರ್ವನನ್ನು ಸಂಚಾರಿ ಪೊಲೀಸರಿಬ್ಬರು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮಂಗಳೂರಿನ ಪಂಪ್‌ವೆಲ್ ಬಳಿ ಇಂದು ಬೆಳಗ್ಗೆ ನಡೆದಿದೆ. ಆರೇಳು ಅಡಿ ಆಳವಿದ್ದ ಈ ಮೋರಿಯಲ್ಲಿ ಮಳೆಯ ಕಾರಣ ನೀರು ರಭಸವಾಗಿ ಹರಿಯುತ್ತಿತ್ತು. ಕೊಂಚ ಹೆಚ್ಚು ಕಡಿಮೆಯಾದರೂ ಮೋರಿಗೆ ಬಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆಯಿತ್ತು. ಇದನ್ನು ಗಮನಿಸಿದ ಮಂಗಳೂರು ನಗರ ಜೆಪ್ಪಿನಮೊಗರು ಸಂಚಾರಿ ಠಾಣೆಯ ಹೆಡ್ ಕಾನ್‌ಸ್ಟೇಬಲ್ ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವಿಲ್ಸನ್ ಫೆರ್ನಾಂಡಿಸ್ ಅವರು ಸ್ವತಃ ಮೋರಿಗಿಳಿದು ಹರಸಾಹಪಟ್ಟು ಮೇಲಕ್ಕೆತ್ತಿ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸಿದ್ದಾರೆ.
ಮಂಗಳೂರು: ಹಂಪನಕಟ್ಟೆ ಸಮೀಪ ಮಾದಕ ವಸ್ತು ಸೇವಿಸಿ ತೂರಾಡುತ್ತಿದ್ದ ಯುವಕನನ್ನು ಆ್ಯಂಟಿ ಡ್ರಗ್ಸ್ ಟೀಮ್‌ನ ಪಿಎಸ್‌ಐ ಪ್ರದೀಪ್ ಟಿ.ಆರ್. ಅವರ ನೇತೃತ್ವದ ಪೊಲೀಸರ ತಂಡ ವಶಕ್ಕೆ ಪಡೆದುಕಂಡಿದೆ. ಪುತ್ತೂರು ಎಂಪಿಎಂಸಿ ರಸ್ತೆಯ ನಿವಾಸಿ ಜೋಸ್ವಿನ್ ಮಸ್ಕರೇನ್ಹಸ್ (24) ಬಂಧಿತ ಯುವಕ. ಪೊಲೀಸರು ಯುವಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಜೊತೆಗೆ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಈ ವೇಳೆ ಯುವಕ ಟೆಟ್ರಾ ಹೆಡ್ರಾಕೆನಬಿನಾಯ್ಡ ಎಂಬ ನಿಷೇಧಿತ ಮಾದಕ ದ್ರವ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ. ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ: ಸಂಬಂಧಿ ಯುವತಿಯನ್ನೇ ವಿವಾಹಿತನೋರ್ವನು ಬಲವಂತವಾಗಿ ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿರುವ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಮ್ಟಾಡಿ ನಿವಾಸಿ ಗುರುಪ್ರಸಾದ್ ಅತ್ಯಾಚಾರಗೈದ ವಿವಾಹಿತ. ಗುರುಪ್ರಸಾದ್ ತನ್ನ ಸಂಬಂಧಿ ಯುವತಿಯನ್ನು ಕಳೆದ ಒಂದು ವರ್ಷಗಳಲ್ಲಿ ಎರಡು ಬಾರಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದ. ಪರಿಣಾಮ ಆಕೆ ಈಗ ಗರ್ಭಿಣಿಯಾಗಿದ್ದಾಳೆ. ಇದೀಗ ಸಂತ್ರಸ್ತೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಸಂತ್ರಸ್ತ ಯುವತಿಗೆ ಅನ್ಯಾಯವೆಸಗಲಾಗಿದೆ ಎಂದು ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗುರುಪ್ರಸಾದ್ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ ಮಾನ್ಯ ಉಚ್ಚನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 19033/2023 ರಲ್ಲಿ ದಿನಾಂಕ 15/11/2023 ರಂದು ನೀಡಿರುವ ಆದೇಶದಲ್ಲಿ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತಿಯಿಂದ ನಗರ,ಸ್ಥಳೀಯ ಸಂಸ್ಥೆಯಿಂದ ವಿನ್ಯಾಸ ಮಂಜೂರಾಗಿದ್ದು,ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 17 ರಲ್ಲಿ ಕಲ್ಪಿಸಿರುವ ಅವಕಾಶಕ್ಕೆ ವ್ಯತ್ತಿರಿಕ್ತವಾಗಿದ್ದು ಈ ಅನುಮೋದನೆಗಳ ವಿರುದ್ದ ದೂರು ಸ್ವೀಕರಿಸಿದ ಹಿನ್ನಲೆಯಲ್ಲಿ ವಿನ್ಯಾಸ ನಕ್ಷೆ ಮತ್ತು ಖಾತೆಗಳನ್ನು ರದ್ದುಗೊಳಿಸಿ ಆದೇಶಿಸಿದ್ದು,ಇದು ಮೂರನೇ ವ್ಯಕ್ತಿಯ ಖರೀದಿದಾರರ ಹಿತಾಸಕ್ತಿಗಳನ್ನು ಒಳಗೊಂಡಿದ್ದು ಅನಾವಶ್ಯಕ ವಿವಾದಗಳಿಗೆ ಕಾರಣವಾಗಿರುವುದರಿಂದ ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ರೂಪುರೇಷೆಗಳನ್ನು ರಚಿಸಲು ಸರ್ಕಾರಕ್ಕೆ ಸೂಚಿಸಿರುತ್ತದೆ.ಸದರಿ ಆದೇಶಗಳ ಹಿನ್ನಲೆಯಲ್ಲಿ ಈ ಹಿಂದಿನ ಪ್ರಸ್ತಾವನೆಯನ್ನು ತಡೆಹಿಡಿದು 2014 ಪೂರ್ವದಲ್ಲಿದ್ದಂತೆ ಸ್ಥಳೀಯ ಯೋಜನಾ ಪ್ರದೇಶದ ಹೊರತಾದ ಗ್ರಾಮಾಂತರ ಪ್ರದೇಶದಲ್ಲಿ ಭೂಪರಿವರ್ತಿತ ಎಕ ನಿವೇಶನ ನೀಡುವಂತೆ ಮತ್ತು ಈಗೀನ ತೊಂದರೆಯ ಬಗ್ಗೆ ಮತ್ತು ಅದಕ್ಕಿರುವ ಪರಿಹಾರ ಮಾರ್ಗದ ಬಗ್ಗೆಯೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾದ್ಯಕ್ಷರಾದ ಶ್ರೀ ಕುಳಾಲ್ ಸುಭಾಶ್ಚಂದ್ರ ಶೆಟ್ಟಿ ನೇತೃತ್ವದ…
ಅಂಕೋಲಾ: ಇಲ್ಲಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತಗೊಂಡು ಈವರೆಗೆ 11 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಈಗಾಗಲೇ ಕೆಲವರ ಮೃತದೇಹವನ್ನು ಗುಡ್ಡ ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿದೆ. ಇದರ ನಡುವೆ ತಮಿಳುನಾಡು ಮೂಲಕ ಲಾರಿ ಚಾಲಕನೊಬ್ಬನು ನಾಪತ್ತೆಯಾಗಿದ್ದಾರೆ ಅಂತ ಕುಟುಂಬಸ್ಥರು ದೂರು ನೀಡಿದ್ದಾರೆ. ಹೀಗಾಗಿ ಶಿರೂರು ಬಳಿಯ ಗುಡ್ಡಕುಸಿತ ಘಟನೆಯಲ್ಲಿ ನಾಪತ್ತೆಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅಂಕೋಲ ಬಳಿಯ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿತ್ತು. ಈ ಸಂದರ್ಭದಲ್ಲಿ ಎರಡು ಕುಟುಂಬದ ಜನರು, ಅದೇ ಸಂದರ್ಭದಲ್ಲಿ ಟೀ ಅಂಗಡಿಯ ಮುಂದೆ ನಿಂತಿದ್ದಂತ ಲಾರಿ ಚಾಲಕ ಸೇರಿದಂತೆ 11 ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿತ್ತು. ಈಗಾಗಲೇ ಕೆಲವರ ಮೃತದೇಹಗಳು ಗುಡ್ಡ ಕುಸಿತದ ಮಣ್ಣು ತೆರವು ಕಾರ್ಯಾಚರಣೆಯ ವೇಳೆಯಲ್ಲಿ ಪತ್ತೆಯಾಗಿವೆ. ಇದರ ನಡುವೆ ತಮಿಳುನಾಡು ಮೂಲಕ ಲಾರಿ ಚಾಲಕ ಶರವಣ ಎಂಬುವರು ನಾಪತ್ತೆಯಾಗಿದ್ದಾರೆ ಅಂತ ಕುಟುಂಬಸ್ಥರು ಅಂಕೋಲಾ ಪೊಲೀಸ್ ಠಾಣೆಗೆ ದೂರು…
ಮಂಗಳೂರು: ಶೃಂಗೇರಿ ದೇವಸ್ಥಾನದಂತೆ ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ವಿಶ್ವ ಹಿಂದೂ ಪರಿಷದ್ ನ ಸಹ ಕಾರ್ಯದರ್ಶಿ ಶರಣ್ ಕುಮಾರ್ ಪಂಪ್‌ವೆಲ್ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ರಾಜ್ಯ ಸರಕಾರಕ್ಕೆ ಮನವಿ ಮಾಡಿದ ಅವರು, ಇತ್ತೀಚಿಗೆ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರ ಶೃಂಗೇರಿ ಶ್ರೀ ಶಂಕರ ಮಠದವರು ವಸ್ತ್ರ ಸಂಹಿತೆ ಯನ್ನು ಜಾರಿ ಮಾಡ್ದಿದು ಕ್ಷೇತ್ರಕ್ಕೆ ಬರುವವರು ಹಿಂದೂ ಸಂಪ್ರದಾಯದಂತೆ ಉಡುಗೆ ತೊಡುಗೆ ಧರಿಸಿ ಬರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇವರ ನಿರ್ಧಾರವನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಶೃಂಗೇರಿ ಮಠದಲ್ಲಿ ಜಾರಿಗೆಗೊಳಿಸಿದ ವಸ್ತ್ರ ಸಂಹಿತೆಯ ಮಾದರಿಯನ್ನು ಮುಂಬರುವ ದಿನಗಳಲ್ಲಿ ಕರ್ನಾಟಕದ ಎಲ್ಲಾ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ಒಳಪಟ್ಟ ಎಲ್ಲ ದೇವಸ್ಥಾನಗಳಲ್ಲಿ ಆಗಮಿಸುವ ಭಕ್ತರಿಗೆ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳೂರು: ನಗರದ ಜಿಲ್ಲಾ ಕಾರಾಗೃಹಕ್ಕೆ ಇಂದು ಮುಂಜಾನೆ ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಹಠಾತ್ ದಾಳಿ ನಡೆಸಿ, ಗಾಂಜಾ ,ಮೊಬೈಲ್ ಫೋನ್‌ಗಳ ಜೊತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ನಗರ ಪೊಲೀಸರು ಮಂಗಳೂರು ನಗರದ ಜೈಲ್ ಬ್ಯಾರಕ್ ಮೇಲೆ ಇಂದು ಮುಂಜಾನೆ 4 ಗಂಟೆಗೆ ಹಠಾತ್ ದಾಳಿ ನಡೆಸಿದರು. ಕಾರ್ಯಾಚರಣೆಯಲ್ಲಿ 2 ಡಿಸಿಪಿಗಳು, 3 ಎಸಿಪಿಗಳು, 15 ಪಿಐಗಳು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು. ಜೈಲಿನ ಎಲ್ಲಾ ಬ್ಲಾಕ್‌ಗಳನ್ನು ಏಕಕಾಲದಲ್ಲಿ ಕವರ್ ಮಾಡಲು ಹಲವಾರು ತಂಡಗಳನ್ನು ರಚಿಸಲಾಯಿತು, ಅದರ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಕೊನೆಯ ಕ್ಷಣದವರೆಗೂ ದಾಳಿಯ ಗೌಪ್ಯತೆಯನ್ನು ಕಾಪಾಡಲಾಗಿದೆ. ಶೋಧದ ಸಮಯದಲ್ಲಿ, ಈ ಕೆಳಗಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ: 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3 ಕೇಬಲ್‌ಗಳು ಮತ್ತು ಗಾಂಜಾ ಮತ್ತು ಇತರ ಡ್ರಗ್‌ಗಳ ಬಹು ಪ್ಯಾಕೆಟ್‌ಗಳು. ಈ ಕಾರ್ಯಾಚರಣೆಯು ಭದ್ರತೆಯನ್ನು ಕಾಪಾಡಿಕೊಳ್ಳಲು…
ಬಂಟ್ವಾಳ: ಭೀಕರ ಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಮನೆಯೊಂದು ಸಂಪೂರ್ಣ ಹಾನಿಗೊಳಗಾಗಿ ಮನೆಮಂದಿ ಅಪಾಯದಿಂದ ಪಾರಾದ ಘಟನೆ ಮಾಣಿ ಸಮೀಪದ ನೇರಳಕಟ್ಟೆ ಎಂಬಲ್ಲಿ ನಡೆದಿದೆ. ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಮದನಿ ಉಸ್ತಾದರ ಮನೆಗೆ ರಾತ್ರಿ ವೇಳೆ ಬಂದ ಭೀಕರ ಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಮನೆ ಸಂಪೂರ್ಣ ಹಾನಿಯಾಗಿದೆ,ಮನೆಯಲ್ಲಿ ಮಲಗಿದ್ದವರೆಲ್ಲಾ ಪವಾಡ ಸದೃಶ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.