ಮೂಡಬಿದಿರೆ: ಮದುಕನೊಬ್ಬ ನೀಡುತ್ತಿದ್ದ ಲೈಂಗಿಕ ಕಿರುಕುಳಕ್ಕೆ ಮನನೊಂದು ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀಧರ ಪುರಾಣಿಕ್‌ನನ್ನು (62) ಎಂದು ಗುರುತಿಸಲಾಗಿದೆ. ಮೂಡಬಿದಿರೆ ಖಾಸಗಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮಂಗಳವಾರ ತರಗತಿಯಲ್ಲಿ ಕಿವಿನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಕಾಲೇಜಿನ ಪ್ರಾಂಶುಪಾಲರು ಆಕೆಯನ್ನು ಮನೆಗೆ ಕಳುಹಿಸಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವಂತೆ ಪರಿಚಿತರಾದ ಕಾಲೇಜಿನ ನಿವೃತ್ತ ಕ್ಲರ್ಕ್ ಶ್ರೀಧರ ಪುರಾಣಿಕ್ ಎಂಬುವರನ್ನು ಜೊತೆಗೆ ಕಳುಹಿಸಿದ್ದರು.ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿನಿಗೆ ಶ್ರೀಧರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ, ತನ್ನ ಆತ್ಮಹತ್ಯೆಗೆ ಶ್ರೀಧರ ಪುರಾಣಿಕ್ ಅವರೇ ಕಾರಣ ಎಂದು ತಿಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದು ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪಣಂಬೂರು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಆರೋಪಿ ಶ್ರೀಧರ…
Author: main-admin
ಮಂಗಳೂರು: ನಗರದ ಪಿಡಬ್ಲ್ಯೂಡಿ ಮಾಜಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇ) ಎನ್.ನರಸಿಂಹರಾಜು ಅವರ ಮೇಲಿನ ಅಕ್ರಮ ಆಸ್ತಿ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ನರಸಿಂಹರಾಜುಗೆ ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ ದಂಡ ವಿಧಿಸಿದೆ. ಬೆಂಗಳೂರಿನ ದೇವನಹಳ್ಳಿಯ ಮದ್ದಯ್ಯ ರಸ್ತೆಯ ನಿವಾಸಿ ನರಸಿಂಹರಾಜು ಎಂಬುವರ ವಿರುದ್ಧ 2010ರಲ್ಲಿ ನಗರದ ಲೋಕಾಯುಕ್ತದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಬಿ ಜಕಾತಿ ಅವರು ನವೆಂಬರ್ 10 ರಂದು ತೀರ್ಪು ಪ್ರಕಟಿಸಿದರು. ಆರೋಪಿಯು ದಂಡವನ್ನು ಪಾವತಿಸಲು ವಿಫಲವಾದರೆ, ಅವರು ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಡಿವೈಎಸ್ಪಿ ಸದಾನಂದ ಎಂ ವರ್ಣೇಕರ್ ದೂರುದಾರರು. ಡಿವೈಎಸ್ಪಿ ವಿಟ್ಲದಾಸ್ ಪೈ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ ವಾದ ಮಂಡಿಸಿದ್ದರು. ಅಪರಾಧಿ…
ಬೆಂಗಳೂರು : 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ರಾಜ್ಯ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಲ್ಲಿ 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅನುಯಾಯಿ (FOLLOWER) ಪೊಲೀಸ್ ಪೇದೆ (PC) ಮುಖ್ಯ ಪೇದೆ (H.C), ಸಹಾಯಕ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ASI), ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI), ಪೊಲೀಸ್ ಇನ್ಸಪೆಕ್ಟರ್ (PI), ಹುದ್ದೆಯವರಿಗೆ ಒಟ್ಟು 93,013 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ (24X7) ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ಮಂಜೂರಾತಿ ಆದೇಶ ಹೊರಡಿಸಿದೆ. ಅಧಿಕಾರಿಗಳು ಮೃತರ ಕುಟುಂಬದವರಿಗೆ (ಕಾನೂನುಬದ್ಧ ವಾರಸುದಾರರಿಗೆ) ವಿಮಾ ಪರಿಹಾರ ಮೊತ್ತ ರೂ.20.00 ಲಕ್ಷಗಳನ್ನು ಮಂಜೂರು ಮಾಡುವ ಸಂಬಂಧ, ವಿವರವಾದ ವರದಿಯೊಂದಿಗೆ 15 ದಿನಗಳ ಒಳಗೆ ಕೈಂ ಫಾರಂ ಅನ್ನು…
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿಯಲ್ಲಿ ಬಸ್ ಕ್ಲೀನರ್ ನನ್ನು ಉಳ್ಳಾಲ ಠಾಣಾ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್(26) ಬಂಧಿತ ಆರೋಪಿ. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯದಲ್ಲಿರುವ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್ ಗುರುವಾರ ಮುಂಜಾನೆ ಉಳ್ಳಾಲ ಠಾಣಾ ವ್ಯಾಪ್ತಿಗೆ ತಲುಪಿದಾಗ ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್ ತಾನು ಧರಿಸಿದ್ದ ಪ್ಯಾಂಟ್ ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವೈದ್ಯೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪುತ್ತೂರು : ಪುತ್ತೂರಿನ ವಸತಿ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದ ಮೈಸೂರಿನವರಾದ ತಿಪ್ಪೇಶ್ ಮತ್ತು ಅಭೀಷೆಕ್ ನವೆಂಬರ್ 7ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.ಶಾಲೆ ಮುಗಿಸಿದ ಇಬ್ಬರೂ ಮತ್ತೆ ತಮ್ಮ ಹಾಸ್ಟೆಲ್‌ಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಶಾಲಾ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿದೆ.
ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಮುತ್ತಿಗೆ ಹಾಕಲು ಆಗಮಿಸಿದ್ದ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಮುತ್ತಿಗೆ ಹಾಕಲು ಮೈದಾನದ ಬಳಿಯಿರುವ ಚೆನ್ನಮ್ಮ ವೃತ್ತಕ್ಕೆ ಆಗಮಿಸಿದ ಸಂದರ್ಭ ಪೊಲೀಸರು ತಡೆದರು. ಅವರದೇ ಕಾರಿನಲ್ಲಿ ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದುಕೊಂಡು ಹೋಗಲಾಯಿತು. ಇದೇ ಸಂದರ್ಭದಲ್ಲಿ ಅವರೊಂದಿಗೆ ಆಗಮಿಸಿದ್ದ ಕಾರ್ಯಕರ್ತರನ್ನು ವಶಕ್ಕೆ ಪಡೆದು ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಕರೆದೊಯ್ಯಲಾಯಿತು. ಪ್ರಮೋದ್ ಮುತಾಲಿಕ್ ಮೈದಾನಕ್ಕೆ ಬರುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮೈದಾನ ಸುತ್ತಲೂ ಪೊಲೀಸ್ ಬಂದೋಬಸ್ತ್ ಆಯೋಜಿಸಿ ಸಂಚರಿಸುವ ಎಲ್ಲಾ ಕಾರುಗಳನ್ನು ಪೊಲೀಸರು ತಪಾಸಣೆ ಮಾಡುತ್ತಿರುವುದು ಕಂಡು ಬಂದಿತು. ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. ಹೀಗಾಗಿ ನಮಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ಆತ ಹಿಂದೂ ಮತ್ತು ಕನ್ನಡ ವಿರೋಧಿ ಹಾಗಾಗಿ ಎಲ್ಲಿಯೂ ಆಚರಣೆ ಮಾಡಲು ಬಿಡುವುದಿಲ್ಲ. ಯಾವುದೇ ಸಂದರ್ಭದಲ್ಲಿ ಆಚರಣೆ ತಡೆಯುತ್ತೇವೆ. ಎಲ್ಲ ಮಹಾಪುರುಷರಿಗೆ…
ಧರ್ಮಸ್ಥಳ : ಪವಿತ್ರ ತೀರ್ಥ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಸಜ್ಜಾಗಿದೆ. ನವೆಂಬರ್ 19 ರಿಂದ ನವೆಂಬರ್ 23ರವರೆಗೆ ಧರ್ಮಸ್ಥಳ ದಲ್ಲಿ ಲಕ್ಷದೀಪೋತ್ಸವ ವೈಭವ ನಡೆಯಲಿದ್ದು, ಲಕ್ಷಾಂತರ ಭಕ್ತರ ಸಮಾಗಮದ ಜೊತೆಗೆ ಅದ್ಭುತ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಾಕ್ಷಿಯಾಗಲಿದೆ. ನವೆಂಬರ್ 22ರಂದು 90ನೇ ವರುಷದ ಸರ್ವಧರ್ಮ ಸಮ್ಮೇಳನ ನವೆಂಬರ್ 23 ರಂದು ಸಾಹಿತ್ಯ ಸಮ್ಮೇಳನ ಲಕ್ಷದೀಪೋತ್ಸವದ ಅಂಗವಾಗಿ ನಡೆಯಲಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ನಾಡಿನ ವಿದ್ವಾಂಸರು ಈ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲಿದ್ದಾರೆ.. ನವೆಂಬರ್22 ರಂದು ನಡೆಯುವ ಸರ್ವ ಧರ್ಮ ಸಮ್ಮೇಳನವನ್ನು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟನೆ ನಡೆಸಲಿದ್ದಾರೆ. ಸಾಹಿತ್ಯ ಸಮ್ಮೇಳನವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಪಿ ಶೇಷಾದ್ರಿ ಉದ್ಘಾಟನೆ ಮಾಡಲಿದ್ದಾರೆ.. ಲಕ್ಷದೀಪೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು,ವಸ್ತು ಪ್ರದರ್ಶನ, ಮನೋರಂಜನಾ ಕಾರ್ಯಕ್ರಮಗಳು ರಾತ್ರಿಯಿಡಿ ಧರ್ಮಸ್ಥಳ ದಲ್ಲಿ ನಡೆಯಲಿದೆ. ನವೆಂಬರ್19 ರಂದು ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ, ನವೆಂಬರ್20ರಂದು…
ನವದೆಹಲಿ: ಮತಾಂತರವಾದವರಿಗೆ ಪರಿಶಿಷ್ಟ ಜಾತಿ ಸ್ಥಾನ ನೀಡುವ ಕುರಿತಂತೆ ಕೇಂದ್ರದಿಂದ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಲಾಗಿದೆ. ಕ್ರಿಶ್ಚಿಯನ್, ಮುಸ್ಲಿಂ ಮೊದಲಾದ ಧರ್ಮಗಳಿಗೆ ಮತಾಂತರವಾದ ಹಿಂದುಳಿದ ಜಾತಿ ವ್ಯಕ್ತಿಗಳಿಗೆ ಮೀಸಲಾತಿ ನೀಡಿಕೆ ಕುರಿತ ಪ್ರಕರಣದಲ್ಲಿ ಕೇಂದ್ರ ಸರ್ಕಾರದಿಂದ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಲಾಗಿದ್ದು, ಮತಾಂತರ ಹೊಂದಿದವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಪರೋಕ್ಷವಾಗಿ ಹೇಳಿದೆ. ಪರಿಶಿಷ್ಟ ಜಾತಿ ವ್ಯಕ್ತಿಗಳು ಬೌದ್ಧ, ಸಿಖ್ ಧರ್ಮಗಳಿಗೆ ಮತಾಂತರ ಆಗುವುದಕ್ಕೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರ ಹೊಂದುವುದಕ್ಕೂ ವ್ಯತ್ಯಾಸವಿದೆ. ಬೌದ್ಧ ಮತ್ತು ಸಿಖ್ ಧರ್ಮಗಳು ಭಾರತದಲ್ಲಿಯೇ ಹುಟ್ಟಿವೆ. ಆದರೆ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮಗಳು ವಿದೇಶಗಳಿಂದ ಬಂದಿವೆ. ಭಾರತದ ಧರ್ಮ ಮತ್ತು ಕ್ರಿಶ್ಚಿಯನ್, ಮುಸ್ಲಿಂ ಧರ್ಮದ ಆಚರಣೆಗಳು ವಿಭಿನ್ನವಾಗಿವೆ. ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದನ್ನೇ ಕ್ರಿಶ್ಚಿಯನ್, ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲವೆಂದು ಹೇಳಲಾಗಿದೆ.
ಬೆಂಗಳೂರು: ಹಿಂದೂ ಪದದ ಬಗ್ಗೆ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಂತ ಹೇಳಿಕೆ ಬಗ್ಗೆ ಬಿಜೆಪಿ ಸೇರಿದಂತೆ ಜೆಡಿಎಸ್ ನಿಂದಲೂ ವ್ಯಾಪಕ ವಿರೋಧ, ಆಕ್ಷೇಪ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಶಾಸಕ ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಜೊತೆಗೆ ಜನತೆಯಲ್ಲಿ ವಿಷಾದವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು ಹಿಂದೂ ಪದದ ಬಗ್ಗೆ ತಾವು ಹೇಳಿದ್ದಂತ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆ. ಈ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೇ ವಿಷಾಧಿಸುತ್ತೇನೆ ಎಂದಿದ್ದಾರೆ. ಇನ್ನೂ ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರವನ್ನು ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮ ಹೇಳಿಕೆಯಲ್ಲಿ ತಪ್ಪು ಇದೆಯಾ ಎನ್ನುವ ಬಗ್ಗೆ ತನಿಖೆ ನಡೆಸುವಂತೆಯೂ ಕೋರಿದ್ದಾರೆ. ಅಂದಹಾಗೇ ನವೆಂಬರ್ 6ರಂದು ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆಯಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಹಿಂದೂ ಪದದ ಬಗ್ಗೆ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಂತ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಇಂತಹ ಹೇಳಿಕೆಯನ್ನು ವಾಪಾಸ್ ಪಡೆದಿದ್ದಾರೆ.
ವಿಟ್ಲ: ಆಟೋ ರಿಕ್ಷಾ ಚಾಲಕರೋರ್ವರು ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ನ.9 ರಂದು ಬಂಟ್ವಾಳ ತಾಲೂಕಿನ ಮಾಣಿ ಸಮೀಪ ನಡೆದಿದೆ.ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45) ಮೃತರು. ಜಯಕರ ಪೂಜಾರಿ ರವರು ಆಟೋ ರಿಕ್ಷಾ ಚಾಲಕರಾಗಿದ್ದು, ಪ್ರತಿದಿನ ಬೆಳಗ್ಗೆ ಕೆಲ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಎಂದಿನಂತೆ ಇಂದು ಮಕ್ಕಳನ್ನು ಆಟೋ ರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ ನಿಲ್ಲಿಸಲು ಸೂಚಿಸಿದ್ದು, ಈ ವೇಳೆ ಆಟೋ ರಿಕ್ಷಾ ನಿಲ್ಲಿಸಿದ್ದು, ಮಕ್ಕಳು ಜೆರಾಕ್ಸ್ ತೆಗೆದು ಹಿಂದಿರುಗಿದ ವೇಳೆ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತಕ್ಷಣ ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.










