ಉಪ್ಪಿನಂಗಡಿ: ಸುಮಾರು ಆರು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಉಪ್ಪಿನಂಗಡಿ ಪೊಲೀಸರು ರಾಜಸ್ಥಾನದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.ಉಪ್ಪಿನಂಗಡಿ ಪೊಲೀಸ್ ಠಾಣಾ ಅ.ಕ್ರ. 121/2019ರಲ್ಲಿ ದಾಖಲಾಗಿದ್ದ ಐಪಿಸಿ ಕಲಂ 457 ಹಾಗೂ 380ರ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರಾಜಸ್ಥಾನದ ಬೂಂದಿ ಜಿಲ್ಲೆಯ ಜಮೀಲ್ ಚಾಚಾ ಎಂಬಾತನನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆ.24ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್-331 ಗಜೇಂದ್ರ ಹಾಗೂ ಪೊಲೀಸ್ ಕಾನ್‌ಸ್ಟೆಬಲ್-2335 ರಾಮನಗೌಡ ಅವರು ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
Author: main-admin
ಮಂಗಳೂರು: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್ಎಲ್), ‘ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಮ್’ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ಕಳೆದ 16 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಈ ಪರೀಕ್ಷೆಯು ಭಾರತದ ಅತ್ಯಂತ ದೀರ್ಘಕಾಲದ ಮತ್ತು ಅತಿದೊಡ್ಡ ಪ್ರತಿಭಾ ಗುರುತಿಸುವಿಕೆ ವೇದಿಕೆಯಾಗಿ ಹೊರಹೊಮ್ಮಿದೆ. ಪರೀಕ್ಷೆಯ ಮುಖ್ಯ ವೈಶಿಷ್ಟ್ಯಗಳು ವಿಜ್ಞಾನಾಧಾರಿತ ಮೌಲ್ಯಮಾಪನ ಕೇವಲ ಅಂಕಗಳನ್ನು ನೀಡದೆ, ವಿದ್ಯಾರ್ಥಿಯ ವಿಷಯ ಜ್ಞಾನ, ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಪರೀಕ್ಷಾ ನಡವಳಿಕೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವ ‘ನೈದಾನಿಕ ಮೌಲ್ಯಮಾಪನ’ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ANTHE ಇಂಟೆಲಿಜೆನ್ಸ್ ವರದಿ ಪರೀಕ್ಷೆಯ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿವರವಾದ ವರದಿ ಸಿಗಲಿದೆ. ಇದು ಸಿಇಎಸ್ಪಿ ಟಿಟಿಪಿ ಮತ್ತು ಎಐಕ್ಯು ಆಧಾರದಲ್ಲಿ ವಿದ್ಯಾರ್ಥಿಯ ಬಲ ಮತ್ತು ಸುಧಾರಿಸಬೇಕಾದ ಕ್ಷೇತ್ರಗಳನ್ನು ಗುರುತಿಸುತ್ತದೆ.ಶೇಕಡ 100% ವರೆಗೆ ವಿದ್ಯಾರ್ಥಿವೇತನ: ಅರ್ಹ ವಿದ್ಯಾರ್ಥಿಗಳಿಗೆ ಆಕಾಶ್ ಸಂಸ್ಥೆಯ ಕ್ಲಾಸ್ರೂಮ್, ಹೈಬ್ರಿಡ್ ಮತ್ತು ಡಿಜಿಟಲ್ ಕೋರ್ಸ್ಗಳಿಗೆ 100% ವರೆಗೆ ವಿದ್ಯಾರ್ಥಿವೇತನ ಸಿಗಲಿದೆ.₹2.5 ಕೋಟಿ ನಗದು ಬಹುಮಾನ…
ಉಡುಪಿ: : ಮನೆಯ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟಿಕ್ ರಿಕ್ಷಾ ಏಕಾಏಕಿ ಹೊತ್ತಿ ಉರಿದು, ಪಕ್ಕದಲ್ಲಿದ್ದ ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸಿದ ಘಟನೆ ಭಾನುವಾರ ಬೆಳಗ್ಗೆ ಪೆರಂಪಳ್ಳಿ ಸಮೀಪ ನಡೆದಿದೆ. ಸಮಯಪ್ರಜ್ಞೆ ಮೆರೆದ ಇಬ್ಬರು ಯುವಕರು ತಮ್ಮ ಜೀವದ ಹಂಗನ್ನೂ ತೊರೆದು ಬೆಂಕಿಯನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.ಭಾನುವಾರ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ಪೆರಂಪಳ್ಳಿ ಬಳಿಯ ಮನೆಯೊಂದರ ಶೆಡ್‌ನಲ್ಲಿ ನಿಲ್ಲಿಸಲಾಗಿದ್ದ ಎಲೆಕ್ಟಿಕ್ ರಿಕ್ಷಾದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ತೀವ್ರಗೊಂಡಿದ್ದು, ಪಕ್ಕದಲ್ಲೇ ನಿಲ್ಲಿಸಲಾಗಿದ್ದ MG ಕಾರು ಹಾಗೂ ಸ್ಕೂಟರ್‌ಗೂ ಬೆಂಕಿ ವ್ಯಾಪಿಸತೊಡಗಿದೆ. ಈ ವೇಳೆ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ಮನೆಯ ಯಜಮಾನರು ಪರಿಸ್ಥಿತಿಯನ್ನು ಕಂಡು ಆತಂಕಗೊಂಡು ಸಹಾಯಕ್ಕಾಗಿ ಬೊಬ್ಬಿಡಲಾರಂಭಿಸಿದ್ದಾರೆ. ಮನೆಯಲ್ಲಿದ್ದವರ ಸುರಕ್ಷತೆಯ ಜೊತೆಗೆ, ವಾಹನಗಳಿಂದ ಬೆಂಕಿ ಮತ್ತಷ್ಟು ವ್ಯಾಪಿಸುವ ಸಾಧ್ಯತೆಯೂ ಎದುರಾಗಿತ್ತು.ಅದೇ ಸಂದರ್ಭದಲ್ಲಿ ಸಮೀಪದ ತಮ್ಮ ಕಟ್ಟಡ ನಿರ್ಮಾಣ ಸೈಟ್‌ನ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಇಂಜಿನಿಯರ್ ಮನೋಜ್ ಅವರು ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿ ತಕ್ಷಣ…
ಉಡುಪಿಯ ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಹೆತ್ತವರನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ರಹ್ಮಾವರ ಗಾಂಧಿ ನಗರ ನಿವಾಸಿ ಶಾಹಿದ್ ಅಲಿ( 31) ಬಂಧಿತ ಆರೋಪಿ. ಆ.23ರ ರಾತ್ರಿ ಸುಮಾರು 7 ಗಂಟೆ ವೇಳೆಗೆ ಬ್ರಹ್ಮಾವರ ಗಾಂಧಿನಗರ ನಿವಾಸಿಗಳಾದ ಮೆಹೆಬೂಬ್ ಹಾಗೂ ಅವರ ಪತ್ನಿ ಸಂಶದ್ ಬೇಗಂ ಅವರನ್ನು ಆರೋಪಿ ಶಾಹಿದ್ ಅಲಿ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ತಂದೆ-ತಾಯಿ ತನಗೆ ಪ್ರತಿನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಿರುವುದಾಗಿ ಆರೋಪಿ ಶಾಹಿದ್ ಅಲಿ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ. ಆ.24ರ ಬೆಳಗ್ಗೆ ಸುಮಾರು 9 ಗಂಟೆಗೆ ಆರೋಪಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ತನ್ನ ತಂದೆ-ತಾಯಿಯನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಮಾಹಿತಿ ಪಡೆದ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ…
ಬೆಳ್ತಂಗಡಿ: ವಾಹನ ಡಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬೆಳ್ತಂಗಡಿ ಕಲ್ಮಂಜ ನಿವಾಸಿ ಬಾಲಕೃಷ್ಣ (43) ಅವರು ನೀಡಿದ ದೂರಿನಂತೆ, ಧರ್ಮಸ್ಥಳ ನಿವಾಸಿ ಶರತ್ (33) ಎಂಬಾತ ಕೆಲವು ತಿಂಗಳುಗಳ ಹಿಂದೆ ವಾಹನದಿಂದ ಡಿಕ್ಕಿ ಹೊಡೆಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.ಜುಲೈ 30ರಂದು ಸಂಜೆ ಬಾಲಕೃಷ್ಣ ಅವರು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಶರತ್ ಟಾಟಾ ಸುಮೊ (KA-05-AD-6341) ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದು ಧರ್ಮಸ್ಥಳ ಗ್ರಾಮದ ಕುರುಮಾನಿ ಕ್ರಾಸ್ ಬಳಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಬಾಲಕೃಷ್ಣ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿಸಿ ಚಿಕಿತ್ಸೆ ಪಡೆದಿದ್ದರು.ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ. 52/2026ರಂತೆ ಬಿಎನ್‌ಎಸ್-2023ರ ಕಲಂ 109ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ನಡೆಸಿದ ಧರ್ಮಸ್ಥಳ ಠಾಣಾ ಪೊಲೀಸರು ಆರೋಪಿತ ಶರತ್‌ನನ್ನು ಆಗಸ್ಟ್ 22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ…
ಉಡುಪಿ: ಉದ್ಯಮಿ ಡೇವಿಡ್ ಹತ್ಯೆ ಪ್ರಕರಣದ ತನಿಖೆ ವೇಳೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಆರೋಪಿ ಗಾಯಗೊಂಡಿದ್ದಾನೆ.ಬಂಧಿತ ಆರೋಪಿ ಅನೂಜ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ತನಿಖೆ ಮುಂದುವರೆದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಪುತ್ತೂರು: ಪುತ್ತೂರಿನ ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ಅಕ್ರಮವಾಗಿಜಾನುವಾರು ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣಾ ಪಿಎಸ್‌ಐ ಸುರೇಶ್ ಸಿ.ಟಿ. ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಪುತ್ತೂರು ಚಿಕ್ಕ ಮುಡ್ನೂರು ಗ್ರಾಮದ ಜಿಡೆಕಲ್ಲು ಎಂಬಲ್ಲಿ KA 19 D 0948 ನೋಂದಣಿಯ ಪಿಕ್-ಅಪ್ ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ.ಪಿಕ್-ಅಪ್ ಚಾಲಕ ಮಹಮ್ಮದ್ ಜಬ್ಬಾರ್ ವಿಚಾರಣೆ ವೇಳೆ, ಜಾನುವಾರುಗಳನ್ನು ಶಾಂತಿಗೋಡು ಗ್ರಾಮದ ಅಶೋಕ್ ಎಂಬವರಿಂದ ಖರೀದಿಸಿ ಯಾವುದೇ ಪರವಾನಿಗೆ ಇಲ್ಲದೆ ವಧೆ ಉದ್ದೇಶಕ್ಕೆ ಸಾಗಿಸುತ್ತಿದ್ದಾಗಿ ತಿಳಿಸಿದ್ದಾನೆ.ಜಾನುವಾರು ಸಹಿತ ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 101/2026, ಕಲಂ 11(D) ಪ್ರಾಣಿ ಹಿಂಸಾ ಕಾಯ್ದೆ ಮತ್ತು ಕಲಂ 4,5,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ ಕಲಓಕೆ 66/Rw 192(A) IMV Act do ಪ್ರಕರಣ ದಾಖಲಿಸಿ…
ಧರ್ಮಸ್ಥಳ: ಕನ್ಯಾಡಿ ಪುಡೈತ್ ಚಡವು ಬಳಿ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಆರೋಪಿ ಶರತ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ಸೆಪ್ಟೆಂಬರ್ 3ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.ಜುಲೈ 30ರಂದು ನಿಡಿಗಲ್ ನಿವಾಸಿ ಬಾಲಕೃಷ್ಣ ಎಂಬುವವರು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕೃಷ್ಣ ಅವರನ್ನು ತಕ್ಷಣವೇ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಧರ್ಮಸ್ಥಳ ಠಾಣೆ ಪೊಲೀಸರು, ಕಾರು ಚಾಲಕ ಶರತ್‌ನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ್ದರು. ಆ ಬಳಿಕ ಆಸ್ಟ್ 22ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಗೆ ಸೆ.3ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
“ಹಬ್ಬವೆಂದರೆ ಕೇವಲ ಆಚರಣೆಯಲ್ಲ; ಹೃದಯಗಳನ್ನು ಹತ್ತಿರ ತರುವ, ಸಂಬಂಧಗಳಿಗೆ ಹೊಸ ಅರ್ಥ ನೀಡುವ ಸುಂದರ ಕ್ಷಣ.”ಸ್ನೇಹ, ಸಹಬಾಳ್ವೆ, ಸಂತೋಷ ಮತ್ತು ಮಾನವೀಯತೆಯ ಸಂದೇಶ ಸಾರುವ ಓಣಂ ಹಬ್ಬವನ್ನು ಸ್ನೇಹಾಲಯದಲ್ಲಿ ಇಂದು ಅತ್ಯಂತ ಸಂಭ್ರಮ, ಸಡಗರ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು. ಸಂಸ್ಥೆಯ ನಿವಾಸಿಗಳು ಹಾಗೂ ಸಿಬ್ಬಂದಿ ಒಂದಾಗಿ ಸೇರಿ ಆಚರಿಸಿದ ಈ ಹಬ್ಬವು ಸ್ನೇಹಾಲಯದ ಆವರಣವನ್ನು ನಗು, ಸಂತಸ ಮತ್ತು ಹಬ್ಬದ ಸಂಭ್ರಮದಿಂದ ಕಂಗೊಳಿಸಿತು. ಕಾರ್ಯಕ್ರಮವು ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಂಡಿತು. ಸ್ನೇಹಾಲಯದ ಸಿಬ್ಬಂದಿ ಕುಮಾರಿ ಮಾನ್ಯಾ ಅವರು ಆತ್ಮೀಯ ಸ್ವಾಗತ ಭಾಷಣದ ಮೂಲಕ ಎಲ್ಲರನ್ನೂ ಹಾರ್ದಿಕವಾಗಿ ಬರಮಾಡಿಕೊಂಡರು.ಸ್ನೇಹಾಲಯದ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಬ್ರದರ್ ಜೋಸೆಫ್ ಕ್ರಾಸ್ಟಾ, ಸಹ- ಸಂಸ್ಥಾಪಕಿ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಹಾಗೂ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಕ್ಲಿಂಟ್ ಜೋಸೆಫ್ ಅವರು ಓಣಂ ಹಬ್ಬದ ಮಹತ್ವವನ್ನು ಹಂಚಿಕೊಂಡು, ಎಲ್ಲರಿಗೂ ಹೃತ್ಪೂರ್ವಕ ಓಣಂ ಶುಭಾಶಯಗಳನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಟ್ರಸ್ಟೀ ಶ್ರೀ ಜೋವಿಯಲ್ ಕ್ರಾಸ್ಟಾ, ಸ್ನೇಹಾಲಯದ ಚಾಪ್ಲಿನ್ ಫಾ. ಸಿರಿಲ್…
ಬೆಂಗಳೂರು: ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಸುಸ್ಥಿತಿಯಲ್ಲಿರಬೇಕು ಮತ್ತು ಒಂದು ನಿಮಿಷವೂ ಆಫ್ ಆಗಬಾರದು ಎಂದು ಕರ್ನಾಟಕ ಹೈಕೋರ್ಟ್ ಖಡಕ್ ಆದೇಶ ನೀಡಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಕಿರುಕುಳ ಆರೋಪ ಪ್ರಕರಣದಲ್ಲಿ ಕಳೆದ 11 ತಿಂಗಳಿನಿಂದ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂದಿದ್ದ ಪೊಲೀಸರ ಬೇಜವಾಬ್ದಾರಿ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಇದು ಇಲಾಖೆಯ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ ಎಂದಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಠಾಣೆಗಳ ಸಿಸಿಟಿವಿಯನ್ನು ಕಡ್ಡಾಯವಾಗಿ ಲೈವ್ ಟ್ರ್ಯಾಕ್ ಮಾಡಲು ನಿರ್ದೇಶಿಸಿದೆ. ವೈಟ್‌ಫೀಲ್ಡ್ ಪೊಲೀಸರ ವಿರುದ್ಧದ ದೂರು ಮತ್ತು ತನಿಖೆ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಸಿಬ್ಬಂದಿಯಿಂದ ತಮಗೆ ಕಿರುಕುಳವಾಗಿದೆ ಎಂದು ಆರೋಪಿಸಿ ಶೈಲಜಾ ಎಂಬ ಮಹಿಳೆ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಈ ಪ್ರಕರಣದ ತನಿಖೆ ವೇಳೆ, ಕಳೆದ 11 ತಿಂಗಳಿನಿಂದ ಠಾಣೆಯಲ್ಲಿ ಯುಪಿಎಸ್ (UPS) ಸಮಸ್ಯೆ ಇದ್ದು, ಸಿಸಿಟಿವಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ಹೈಕೋರ್ಟ್, “ಪೊಲೀಸರ ಈ…










