ಕೊಣಾಜೆ:ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಟ್ಲ ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33) ಆತ್ಮಹತ್ಯೆ ಮಾಡಿಕೊಂಡವರು.ಹರೀಶ್ ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಮಾ.12ರಂದು ಹರೀಶ್ ತನ್ನ ಸಂಬಂದಿ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರಿಗೆ ಕರೆ ಮಾಡಿ ತನ್ನ ಬ್ಯಾಗಿನಲ್ಲಿ ಭಸ್ಮ ದೊರೆತಿದ್ದು, ವಾಮಾಚಾರ ಮಾಡಿದ್ದಾರೆ ಎಂದು ಹೇಳಿದ್ದರು.ಇದಕ್ಕೆ ಸಹೋದರ ರಮೇಶ್ ಮಾ.19ರಂದು ಮನೆಗೆ ಬಾ ಮಾತನಾಡುವ ಎಂದು ಹೇಳಿದ್ದರಂತೆ. ಅದರಂತೆ ಹರೀಶ್ ಅವರು ಮನೆಗೆ ಬರುವಾಗ ಕೈಯಲ್ಲಿ ಪೆಟ್ರೋಲ್ ನ್ನು ಕ್ಯಾನಿನಲ್ಲಿ ಹಿಡಿದುಕೊಂಡು ಬಂದಿದ್ದಾರೆ. ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Author: main-admin
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಮೊದಲು ಕನ್ನಡದಲ್ಲಿ ಮಾತ್ರ ರಿಲೀಸ್ ಮಾಡಲಾಗಿತ್ತು. ಕನ್ನಡ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡು, ಹಾಡಿಹೊಗಳಿದ ಬಳಿಕ ಬೇರೆ ಬೇರೆ ಭಾಷೆಯ ಪ್ರೇಕ್ಷರಿಂದ ಬೇಡಿಕೆ ಹೆಚ್ಚಾಯಿತು. ಬಳಿಕ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು. ಎಲ್ಲಾ ಭಾಷೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಭರ್ಜರಿ ಕಲೆಕ್ಷನ್ ಕೂಡ ಆಯಿತು. ಒಟಿಟಿ ಪ್ರೇಕ್ಷಕರಿಗಾಗಿ ಇಂಗ್ಲಿಷ್ ವರ್ಷನ್ ಕೂಡ ರಿಲೀಸ್ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗುತ್ತಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ. ‘ಈ ವಿಷಯ ತಿಳಿಸಲು ನಮಗೆ ತುಂಬಾ ಖುಷಿಯಾಗಿದೆ. ಅಂತಾರಾಷ್ಟ್ರೀಯ ಪ್ರೇಕ್ಷಕರಿಂದ ಬೇಡಿಕೆ ಬಂದಿರುವುದಕ್ಕೆ ಧನ್ಯವಾದಗಳು. ಇಟಾಲಿಯನ್ ಮತ್ತು ಸ್ಪ್ಯಾನಿಶ್ ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಎಡಿಟ್ ಮಾಡಲಾಗುತ್ತಿದೆ’ ಎಂದು ಇಟಾಲಿಯನ್ ಭಾಷೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಹೊಂಬಾಳೆ…
ಮಧ್ಯಾಹ್ನದ ಅಡುಗೆಗೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ.? ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ ಅಥವಾ ಸಾಂಬಾರು ತಿನ್ನುವುದಕ್ಕೆ ಬೇಜಾರು ಅನಿಸಿದಾಗ ನೆಲ್ಲಿಕಾಯಿ ಬಳಸಿ ಮಾಡಿ ಈ ತಂಬುಳಿ. ಮೊದಲಿಗೆ 3 ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಅದರ ಬೀಜ ತೆಗೆದು ಕತ್ತರಿಸಿಕೊಳ್ಳಿ. ನಂತರ ¼ ಸ್ಪೂನ್ ಎಣ್ಣೆಯನ್ನು ಒಂದು ಚಿಕ್ಕ ಪ್ಯಾನ್ ಗೆ ಹಾಕಿಕೊಂಡು ಅದಕ್ಕೆ 1/4 ಟೀ ಸ್ಪೂನ್ ಜೀರಿಗೆ ಹಾಕಿ ನಂತರ 1 ಹಸಿಮೆಣಸು ಕತ್ತರಿಸಿ ಹಾಕಿ ಫ್ರೈ ಮಾಡಿ. ಇದು ತಣ್ಣಗಾದ ಮೇಲೆ ಇದನ್ನು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ 2 ಟೇಬಲ್ ಸ್ಪೂನ್ ತೆಂಗಿನಕಾಯಿ ತುರಿ ಸೇರಿಸಿ ತುಸು ನೀರು ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಇದಕ್ಕೆ 1 ಕಪ್ ಮೊಸರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಕ್ಸ್ ಮಾಡಿದರೆ ರುಚಿಯಾದ ತಂಬುಳಿ ಸವಿಯಲು ಸಿದ್ಧ.
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಚುನಾವಣಾ ಆಯೋಗವು ಮಾರ್ಚ್ ಕೊನೆಯ ವಾರದಲ್ಲಿ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದ್ದು, ಮೇ 2 ನೇ ವಾರ ಚುನಾಣೆ ನಡೆಯುವ ನಿರೀಕ್ಷೆ ಇದೆ. ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಚುನಾವಣೆ ನಡೆಸಲು ಸಂಪೂರ್ಣ ಸಿದ್ಧತೆಗಳನ್ನು ಕೈಗೊಂಡಿದ್ದು, ಇತ್ತೀಚೆಗಷ್ಟೇ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ರಾಜ್ಯಕ್ಕೆ ಆಗಮಿಸಿ 3 ದಿನಗಳ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಮಾರ್ಚ್ ಕೊನೆಯ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರಸಕ್ತ ರಾಜ್ಯ ಸರ್ಕಾರದ ಅವಧಿ ಮೇ. 24 ಕ್ಕೆ ಮುಕ್ತಾಯವಾಗುವ ಕಾರಣ 2018 ರ ವೇಳಾಪಟ್ಟಿಯಂತೆಯೇ ಈ ಬಾರಿಯೂ ಚುಣಾವಣೆ ನಡೆಯುವ ಸಾಧ್ಯತೆ ಇದೆ. ಕಳೆ ಬಾರಿ ಮೇ. 12 ರಂದು ಮತದಾನ ನಡೆದಿತ್ತು. ಹೀಗಾಗಿ ಏಪ್ರಿಲ್ ತಿಂಗಳ 2 ನೇ ವಾರದಲ್ಲಿ ಅಧಿಸೂಚನೆ ಹೊರಡಿಸಿ, ಮೇ ಮೊದಲ ವಾರದ…
ಕುಂಬಳೆ: ಕುಂಬಳೆ ಬಸ್ ನಿಲ್ದಾಣ ಪರಿಸರದಲ್ಲಿ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಇಲ್ಲಿನ ಜಿಎಚ್‌ಎಸ್‌ಎಸ್‌ನ ವಿದ್ಯಾರ್ಥಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ ನಿರತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ವಿದ್ಯಾರ್ಥಿನಿಯರ ಬಗ್ಗೆ ಉಂಟಾದ ವಾಗ್ವಾದವೇ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಎಸೆಸೆಲ್ಸಿ ಪರೀಕ್ಷೆ ಮುಗಿದು ಪೇಟೆಗೆ ತಲುಪಿದ ಹತ್ತನೇ ವಿದ್ಯಾರ್ಥಿಗಳ ಹಾಗೂ ಒಂಬತ್ತನೇ ತರಗತಿ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಹಿಂದೆಯೂ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿತ್ತು. ಕೆಲವು ವಿದ್ಯಾರ್ಥಿಗಳಿಗೆ ಟಿ.ಸಿ. ನೀಡಿ ಶಾಲೆಯಿಂದ ಹೊರ ಹಾಕಿದ್ದರಿಂದ ಹೊಡೆದಾಟ ನಿಯಂತ್ರಣಕ್ಕೆ ಬಂದಿತ್ತು.
ವಿಟ್ಲ : ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿ ಹಾಗೂ ದ್ವಿಚಕ್ರವಾಹನದ ನಡುವೆ ಅಪಫಾತ ಸಂಭವಿಸಿ, ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಾಯಗೊಂಡ ಘಟನೆ ವಿಟ್ಲ ಪೇಟೆ ಹೊರವಲಯದ ಹೆದ್ದಾರಿಯ ಕಾಶಿಮಠದಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಆಲಂಗಾರು ಬ್ರಾಣಪಾದೆ ನಿವಾಸಿ ರಂಜಿತ್ ಎಂದು ಗುರುತಿಸಲಾಗಿದ್ದ , ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ರಂಜಿತ್ ತನ್ನ ದ್ವಿಚಕ್ರ ವಾಹನದಲ್ಲಿ ವಿಟ್ಲ ಕಡೆಯಿಂದ ಉಕ್ಕುಡದತ್ತ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಬೋರ್ ವೆಲ್ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿಗೆ ದ್ವಿಚಕ್ರ ಸಿಲುಕಿ ಹಾಕಿಕೊಂಡಿದ್ದು, ಕೆಲವು ಮೀಟರ್ ದೂರಕ್ಕೆ ಸಹಸವಾರನನ್ನು ಲಾರಿ ಎಳೆದೊಯ್ದಿದೆ. ಇದರಿಂದ ಸಹಸವಾರನ ತಲೆ ಸಂಪೂರ್ಣ ಛಿದ್ರವಾಗಿದೆ. ಸವಾರನ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಬಗ್ಗೆ ಪ್ರಕರಣ…
ಮಂಗಳೂರು : ಟಿಪ್ಪರ್ ಲಾರಿಯೊಂದು ಸ್ಕೂಟರ್ ಮೇಲೆ ಹರಿದ ಪರಿಣಾಮ ಇಬ್ಬರು ಸಾವನಪ್ಪಿದ ಘಟನೆ ಮಂಗಳೂರು ನಗರದ ನಂತೂರು ಸರ್ಕಲ್ ನಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಇಬ್ಬರು ಸಿಗ್ನಲ್ ಕಾಯುತ್ತಿದ್ದ ವೇಳೆ ಏಕಾಏಕಿ ಬಂದ ಟಿಪ್ಪರ್ ಲಾರಿ ದ್ವಿಚಕ್ರ ವಾಹನದ ಮೇಲೆ ಹರಿದಿದ್ದು, ದ್ವಿಚಕ್ರದಲ್ಲಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಂದೆ – ಮಗಳು ಎನ್ನಲಾಗಿದೆ. ಘಟನೆ ನಡೆದ ಬೆನ್ನಲ್ಲೆ ಸ್ಥಳೀಯರು ಲಾರಿ ಚಾಲಕನಿಗೆ ಸ್ಥಳೀಯರು ಧರ್ಮದೇಟು ನೀಡಿದ್ದು , ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ನಂತೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮುಲ್ಕಿ: ಕಿನ್ನಿಗೊಳಿ ಸಮೀಪದ ಅತ್ತೂರು ತಿಮ್ಮಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬರು ಬೈಕ್ ಗೆ ಸ್ಕೂಟರ್ ಅಡ್ಡ ಇಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡವರನ್ನು ಅಬ್ದುಲ್ ಬಶೀರ್ ಎಂದು ಗುರುತಿಸಲಾಗಿದೆ. ಗಾಯಾಳು ಅಬ್ದುಲ್ ಬಶೀರ್ ತಮ್ಮ ನಾಲ್ಕು ವರ್ಷದ ಮಗುವಿನ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಅತ್ತೂರು ತಿಮ್ಮಕಟ್ಟೆ ವಾಟರ್ ಟ್ಯಾಂಕ್ ಬಳಿ ಆರೋಪಿ ಮೊಹಮ್ಮದ್ ಮುಸ್ತಾಫ ಎಂಬಾತನು ತನ್ನ ಸ್ಕೂಟರನ್ನು ಅಡ್ಡ ಇಟ್ಟು ಹರಿತವಾದ ಚಾಕುವನ್ನು ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಲು ಮುಂದಾದಾಗ ಅಬ್ದುಲ್ ಬಶೀರ್ ಆತಂಕಗೊಂಡು ತನ್ನ ಮಗುವಿನ ಜೊತೆಗೆ ಸ್ಥಳದಿಂದ ಹೋಗಲು ಯತ್ನಿಸಿದಾಗ ಆರೋಪಿ ಹಿಂಬಾಲಿಸಿ ಬಶೀರ್ ಬೆನ್ನಿಗೆ ಚೂರಿ ಹಾಕಿದ್ದಾನೆ. ಘಟನೆಯಿಂದ ಗಂಭೀರ ಗಾಯಗೊಂಡ ಬಶೀರ್ ರವರನ್ನು ಕೂಡಲೇ ಸ್ಥಳದಲ್ಲಿದ್ದ ಇಸ್ಮಾಯಿಲ್, ರಫಿಕ್ ಮತ್ತಿತರರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮೊಹಮ್ಮದ್ ಮುಸ್ತಫಾ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣದಾಗಲಾಗಿದೆ.
ಹೊನ್ನಾವರ : ಕಂಟೈನರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಲಾಯಿಸುತ್ತಿದ್ದ ಉಡುಪಿ ಕಾಲೇಜು ಪ್ರಾಧ್ಯಾಪಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಂಭವಿಸಿದೆ, ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್ (40) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಅನಂತೇಶ ರಾವ್ ಉಡುಪಿಯಿಂದ ಸೋದೆ ಮೂಲ ಮಠಕ್ಕೆ ತೆರಳುತ್ತಿದ್ದ ವೇಳೆ ಅವರ ಕಾರು ಹೊನ್ನಾವರದ ಬಳಿ ಕಂಟೈನರ್‌ಗೆ ಢಿಕ್ಕಿ ಹೊಡೆದಿದ್ದು, ಈ ಪರಿಣಾಮ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಗಳೂರು ನಿವಾಸಿಯಾದ ಅವರು ಪತ್ನಿ ಮಂಗಳೂರು ಎಂ.ವಿ.ಶೆಟ್ಟಿ ಎಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ಪ್ರಾಂಶುಪಾಲೆ ಶ್ರೀಪ್ರಿಯಾ ಅನಂತೇಶ್ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಕಾರ್ಯದರ್ಶಿ ರತ್ನಕುಮಾರ್ ಮತ್ತು ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲ ಡಾ| ಗಣೇಶ್ ಐತಾಳ್ ಸಂತಾಪ ಸೂಚಿಸಿದ್ದಾರೆ.
ನವದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಅಬ್ಬರ ಶುರುವಾಗಿದ್ದು, ಶುಕ್ರವಾರ ಒಂದೇ ದಿನ 796 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದಾಖಲಾಗಿವೆ. ಈ ಮೂಲಕ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ದೇಶದಲ್ಲಿ ನಿನ್ನೆ ಒಂದೇ ದಿನ 796 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ ಒಬ್ಬರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,000 ಗಡಿ ದಾಟಿದ್ದು, ಇದು 109 ದಿನದ ಗರಿಷ್ಠ ಪ್ರಕರಣಗಳಾಗಿವೆ. ದೇಶದಲ್ಲಿ ಈವರೆಗೂ 4.46 ಕೋಟಿ ಮಂದಿ ಕೊರೊನಾ ಸೋಂಕು ಗುರಿಯಾಗಿದ್ದು, ಅದರಲ್ಲಿ 4.41 ಕೋಟಿ ಮಂದಿ ಗುಣಮುಖರಾಗಿದ್ದು, ಹಾಗೂ 5.30 ಲಕ್ಷ ಜನರು ಸಾವನ್ನಪ್ಪಿದ್ದಾರೆ.










