ಮಂಗಳೂರು : ನಗರದ ಪಡೀಲ್ ರೈಲ್ವೇ ಅಂಡರ್ ಪಾಸ್ ಬಳಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎಂಡಿಎಂಎ (MDMA) ಮಾದಕ ವಸ್ತುವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದ ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಗುಲ್ ಝಹೀಮ್ ಎಂದು ಗುರುತಿಸಲಾಗಿದೆ. ಈತನ ಶೋಧನೆ ನಡೆಸಿದಾಗ ಪ್ಯಾಂಟ್ ಜೇಬಿನಲ್ಲಿ 25.23 ಗ್ರಾಂ ಹಾಗೂ ಸ್ಕೂಟರ್‌ನಲ್ಲಿ 40.55 ಗ್ರಾಂ ಸೇರಿದಂತೆ ಒಟ್ಟು 65.78 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು ₹6,57,800 ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಒಂದು ವಿವೋ ಮೊಬೈಲ್, ಡಿಜಿಟಲ್ ತೂಕ ಮಾಪನ ಮತ್ತು ಜಿಪ್ ಲಾಕ್ ಕವರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್ ಮತ್ತು ತಂಡ ಏಪ್ರಿಲ್ 24ರಂದು ಗಸ್ತಿನಲ್ಲಿದ್ದಾಗ, ಪಡೀಲ್‌ನ ಪೇರ್ಲ ರಸ್ತೆಯಲ್ಲಿ ಕಪ್ಪು ಬಣ್ಣದ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಾಹನವನ್ನು ಕಂಡು ಓಡಿ ಹೋಗಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ.ಆರೋಪಿ…
Author: main-admin
ಬೆಂಗಳೂರು : ‘ಕಾಂತಾರ ಚಾಪ್ಟರ್-1’ ಚಿತ್ರದ ದೈವದ ಪಾತ್ರವನ್ನು ಅಣಕಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ವಿಶಿಷ್ಟ ಷರತ್ತಿನೊಂದಿಗೆ ರಿಲೀಫ್ ನೀಡಿದೆ. ರಣವೀರ್ ಸಲ್ಲಿಸಿದ ಬೇಷರತ್ ಕ್ಷಮಾಪಣೆಯನ್ನು ಅಂಗೀಕರಿಸಿದ ನ್ಯಾಯಾಲಯ, ಒಂದು ತಿಂಗಳೊಳಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿದೆ. 2025ರ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡುವಾಗ ದೈವದ ನರ್ತನ ಮತ್ತು ಕೂಗನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ವಕೀಲ ಪ್ರಶಾಂತ್ ಮೆಥಲ್ ಅವರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ರಣವೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ರಣವೀರ್ ಪರ ಹಿರಿಯ ವಕೀಲ ಸಜನ್ ಪೂವಯ್ಯ ಅವರು ನಟನ ಪ್ರಮಾಣ ಪತ್ರವನ್ನು ಸಲ್ಲಿಸಿದರು. “ನಾನು ಮುಂಬೈನ ಸಿಂಧಿ ಕುಟುಂಬದವನಾಗಿದ್ದು, ದೈವದ ಆಚರಣೆಯ…
ಮಂಗಳೂರು: ಕರಾವಳಿಯ ವಾಣಿಜ್ಯ ಚಟುವಟಿಕೆಗಳಿಗೆ ಹೊಸ ಆಯಾಮ ನೀಡುವ ಮಹತ್ವದ ಬೆಳವಣಿಗೆಯೊಂದರಲ್ಲಿ, ರೋಹನ್ ಕಾರ್ಪೊರೇಷನ್ ಹಾಗೂ ‘ರೇನ್ ಮೇಕರ್ಸ್ ವರ್ಕ್‌ಸ್ಪೇಸ್’ ನಡುವೆ ಕಾರ್ಯಾಲಯ (Work Space) ಸ್ಥಾಪನೆಗಾಗಿ ಸಂಯುಕ್ತ ಒಕ್ಕೂಟ (Joint Venture) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಅನ್ವಯ ರೋಹನ್ ಸ್ಕ್ವೇರ್ ಕಟ್ಟಡದ 4ನೇ ಮಹಡಿಯಲ್ಲಿ ಅತ್ಯಾಧುನಿಕ ವರ್ಕ್‌ಸ್ಪೇಸ್ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ರೋಹನ್ ಕಾರ್ಪೊರೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್ ಮೊಂತೆರೋ ಮತ್ತು ನಿರ್ದೇಶಕ ಡಿಯೋನ್ ಮೊಂತೆರೋ ಅವರು, ರೇನ್ ಮೇಕರ್ಸ್ ವರ್ಕ್‌ಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕ ಪಾಣೀಶ್ ರಾವ್ ಮತ್ತು ಪ್ರತಿನಿಧಿಗಳಾದ ಶ್ರೀಕರ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಕ್ಕೂಟವು ಮಂಗಳೂರಿನ ಉದ್ಯಮ ವಲಯಕ್ಕೆ ಹೊಸ ಅವಕಾಶಗಳ ಬಾಗಿಲು ತೆರೆಯಲಿದೆ. “ಯುವ ಉದ್ಯಮಿಗಳಿಗೆ ಉತ್ತಮ ವೇದಿಕೆ”ಈ ಸಂದರ್ಭದಲ್ಲಿ ಮಾತನಾಡಿದ ಡಾ. ರೋಹನ್ ಮೊಂತೆರೋ, “ಮಂಗಳೂರು ಇಂದು ದಕ್ಷಿಣ ಭಾರತದ ಪ್ರಮುಖ ಉದ್ಯಮ ಕೇಂದ್ರಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ. ಇಲ್ಲಿ ಆಧುನಿಕ ಮತ್ತು ನವೀನ ಕಾರ್ಯಾಲಯ ಸೌಲಭ್ಯಗಳನ್ನು…
ಮಂಗಳೂರು: ವಾಮಂಜೂರು ನಿವಾಸಿ ನವೀನ್ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರ ಪತ್ನಿ ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದು ಜೋಕಟ್ಟೆಗೆ ಸ್ಥಳಾಂತರಗೊಂಡ ನಂತರ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಏಪ್ರಿಲ್ 24 ರ ಶುಕ್ರವಾರ ರಾತ್ರಿ, ನವೀನ್ ಮಚ್ಚು ತೆಗೆದುಕೊಂಡು ಕಲವರ್ ನಿವಾಸಿ ದೇವಿ ಪ್ರಸಾದ್ ಮೇಲೆ ಹಲ್ಲೆ ಮಾಡಲು ಹೋಗಿ, ಆತನ ಮತ್ತು ಆತನ ಪೋಷಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾಗಿ ವರದಿಯಾಗಿದೆ.ದೇವಿ ಪ್ರಸಾದ್ 112 ಗೆ ಕರೆ ಮಾಡುವ ಮೂಲಕ ತುರ್ತು ಸೇವೆಗಳಿಗೆ ಮಾಹಿತಿ ನೀಡಿದರು. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ನವೀನ್ ತನ್ನ ಬೈಕ್‌ನಿಂದ ಬಿದ್ದನು. ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದಾಗ, ಆತನನ್ನು ಬಂಧಿಸಲಾಯಿತು.ದೇವಿ ಪ್ರಸಾದ್ ನೀಡಿದ ದೂರಿನ ಆಧಾರದ ಮೇಲೆ ಸೆಕ್ಷನ್ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪ್ರಸ್ತುತ ಪೊಲೀಸ್ ಠಾಣೆಯಲ್ಲಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಬೆಂಗಳೂರು: ನಗರದ ವಿವಿಧೆಡೆ ಬಿಎಸ್‌ಎನ್‌ಎಲ್ ಸಿಬ್ಬಂದಿಯ ಸೋಗಿನಲ್ಲಿ ಬೆಲೆಬಾಳುವ ಕಾಪರ್ ವೈರ್ ಹಾಗೂ ಮಾಡ್ಯೂಲ್‌ಗಳನ್ನು ಕದಿಯುತ್ತಿದ್ದ ಉತ್ತರ ಪ್ರದೇಶ ಮೂಲದ ಮೂವರು ಹೈಟೆಕ್ ಅಂತರರಾಜ್ಯ ಕಳ್ಳರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ತಾಮ್ರದ ಕೇಬಲ್ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಪ್ರದೇಶ ಮೂಲದ ರವಿ ಚೌಹಾಣ್, ಸಂದೀಪ್ ಮತ್ತು ಸೈಯದ್ ಜಾಹೇದ್ ಬಂಧಿತ ಆರೋಪಿಗಳಾಗಿದ್ದು, ಇವರೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಶೋಯೆಜ್ ಎಂಬಾತ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ. ಬಿಎಸ್‌ಎನ್‌ಎಲ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು, ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ದೊಡ್ಡ ಜಾಲವನ್ನು ಭೇದಿಸಿದ್ದಾರೆ. ಈ ಗ್ಯಾಂಗ್‌ನ ಕಳ್ಳತನದ ಶೈಲಿ ಪೊಲೀಸರನ್ನೇ ಬೆರಗುಗೊಳಿಸಿದೆ. ಆರೋಪಿಗಳು ಕಳ್ಳತನ ಮಾಡುವ ಉದ್ದೇಶದಿಂದಲೇ ಉತ್ತರ ಭಾರತದಿಂದ ಬೆಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದರು. ನಗರಕ್ಕೆ ಬಂದಿಳಿದ ನಂತರ ಸಾರ್ವಜನಿಕರಿಗೆ ಯಾವುದೇ ಅನುಮಾನ ಬಾರದಂತೆ ಬಿಎಸ್‌ಎನ್‌ಎಲ್ ಸಿಬ್ಬಂದಿಯಂತೆ ನೀಲಿ ಬಣ್ಣದ…
ಶಬರಿಮಲೆ : ಶಬರಿಮಲೆಯ ಪವಿತ್ರ ಸನ್ನಿಧಾನಂ ಮೇಲೆ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪೂರ್ವಾನುಮತಿ ಇಲ್ಲದೆ ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭದ್ರತಾ ನಿಯಮಗಳ ಉಲ್ಲಂಘನೆಗಾಗಿ ಪಂಬಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್‌ನ ‘ಚೇತಕ್’ (ನೋಂದಣಿ ಸಂಖ್ಯೆ CG-821) ಹೆಲಿಕಾಪ್ಟರ್ ಸನ್ನಿಧಾನಂ ವಲಯದಲ್ಲಿ ನಾಲ್ಕು ಬಾರಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ. ಈ ವೇಳೆ ಹೆಲಿಕಾಪ್ಟರ್ ದೇವಾಲಯದ ಪವಿತ್ರ ಧ್ವಜಸ್ತಂಭದ (ಕೋಡಿಮಾರಂ) ಕೇವಲ ಐದು ಮೀಟರ್ ಹತ್ತಿರಕ್ಕೆ ಬಂದಿದ್ದು, ಭಕ್ತರು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಹೆಲಿಕಾಪ್ಟರ್‌ನಿಂದ ದೇವಾಲಯದ ಆವರಣವನ್ನು ಚಿತ್ರೀಕರಿಸಿರುವ ಶಂಕೆಯೂ ವ್ಯಕ್ತವಾಗಿದೆ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಇ) ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. “ವಿಶೇಷ ಭದ್ರತಾ ವಲಯದಲ್ಲಿ ಅನುಮತಿ ಇಲ್ಲದೆ ಹಾರಾಟ ನಡೆಸಿರುವುದು ನಿಯಮಗಳ ಉಲ್ಲಂಘನೆಯಾಗಿದೆ,” ಎಂದು ಪಂಬಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಸ್ಟ್ ಗಾರ್ಡ್,…
ಕೇಂದ್ರ ಮತ್ತು ಆಂದ್ರದ ರಾಜ್ಯ ಸರ್ಕಾರಗಳು ಅಧಿಕೃತವಾಗಿ ಆಂದ್ರ ಪ್ರದೇಶ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದೆ. ಅಮರಾವತಿಗೆ ಆಂಧ್ರಪ್ರದೇಶದ ರಾಜಧಾನಿಯಾಗಿ ಶಾಶ್ವತ ಸ್ಥಾನಮಾನವನ್ನು ನೀಡಿವೆ. ಈ ನಕ್ಷೆಗಳೊಂದಿಗೆ, ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಸೇರಿಸಲಾಗಿದೆ.ಈ ಮೂಲಕ ಭಾರತದ ನಕ್ಷೆಯಲ್ಲಿ ಇನ್ನು ಮುಂದೆ ಆಂಧ್ರದ ರಾಜಧಾನಿಯಾಗಿ ಅಮರಾವತಿ ಎಂಬ ಅಂಶ ಸೇರಿಸಲಾಗಿದ್ದನ್ನು ನೋಡಬಹುದಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ, ಸಂಸತ್ತಿನಲ್ಲಿ ರಾಜ್ಯದ ರಾಜಧಾನಿಯನ್ನು ಅಂತಿಮಗೊಳಿಸುವ ಕಾನೂನನ್ನು ಮಾಡಲಾಗಿದೆ. ಸಂಸತ್ತು ಎಪಿ ಮರುಸಂಘಟನೆ ತಿದ್ದುಪಡಿ ಮಸೂದೆ -2026 ಅನ್ನು ಅನುಮೋದಿಸಿದೆ. ಜೂನ್ 2, 2024 ರಿಂದ ಅದನ್ನು ಜಾರಿಗೆ ತರಲು ಕಾನೂನನ್ನು ಜಾರಿಗೆ ತರುವ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಎರಡು ಹೊಸ ಜಿಲ್ಲೆಗಳಿಗೆ ಅಸ್ತು: ಏತನ್ಮಧ್ಯೆ, ಆಂಧ್ರಪ್ರದೇಶದ ಆಡಳಿತ ನಕ್ಷೆಯಲ್ಲಿ ಮತ್ತೊಂದು ಪ್ರಮುಖ ಬದಲಾವಣೆ ನಡೆದಿದೆ. ಆಂಧ್ರಪ್ರದೇಶವು ರಾಜ್ಯದ ರಾಜಧಾನಿ ಅಮರಾವತಿಯನ್ನು ನಕ್ಷೆಯಲ್ಲಿ ಸೇರಿಸಿದೆ. ಹೊಸ ಮಾರ್ಕಪುರಂ ಮತ್ತು ಪೋಲವರಂ ಜಿಲ್ಲೆಗಳನ್ನು ರಚಿಸಲಾಗಿದೆ. ಈ ಹೊಸ ಜಿಲ್ಲೆಗಳೊಂದಿಗೆ, ಆಂಧ್ರಪ್ರದೇಶದ ಒಟ್ಟು ಜಿಲ್ಲೆಗಳ ಸಂಖ್ಯೆ 28ಕ್ಕೆ ತಲುಪಿದೆ.ಸರ್ಕಾರವು…
ತಿರುವನಂತಪುರಂ:ಆಟವಾಡುತ್ತಿದ್ದಾಗ ಪಾತ್ರೆಯೊಳಗೆ ಸಿಲುಕಿಕೊಂಡಿದ್ದ ಪುಟ್ಟ ಮಗುವೊಂದನ್ನು ಕೇರಳದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇವರ ಈ ಸಮಯೋಚಿತ ಕಾರ್ಯಕ್ಕೆ ಈಗ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಅಡುಗೆ ಮನೆಯಲ್ಲಿದ್ದ ದೊಡ್ಡದಾದ ಅಲ್ಯೂಮಿನಿಯಂ ಪಾತ್ರೆಯೊಳಗೆ ಇಳಿದಿದೆ. ಆದರೆ, ಹೊರಬರಲು ಪ್ರಯತ್ನಿಸಿದಾಗ ಮಗುವಿನ ಸೊಂಟದ ಭಾಗ ಪಾತ್ರೆಯಲ್ಲಿ ಸಿಲುಕಿಕೊಂಡಿದೆ. ಮಗುವಿನ ಅಳು ಕೇಳಿ ಓಡಿ ಬಂದ ಪೋಷಕರು ಎಷ್ಟೇ ಪ್ರಯತ್ನಿಸಿದರೂ ಮಗುವನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಪೋಷಕರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ.ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಮಗುವಿಗೆ ಯಾವುದೇ ನೋವಾಗದಂತೆ ಅತ್ಯಂತ ಎಚ್ಚರಿಕೆ ವಹಿಸಿ, ಹೈಡ್ರಾಲಿಕ್ ಕಟ್ಟರ್‌ಗಳನ್ನು ಬಳಸಿ ಅಲ್ಯೂಮಿನಿಯಂ ಪಾತ್ರೆಯನ್ನು ನಿಧಾನವಾಗಿ ಕತ್ತರಿಸುವ ಮೂಲಕ ಮಗುವನ್ನು ಸುರಕ್ಷಿತವಾಗಿ ಹೊರತೆಗೆದರು. ಮಗು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಷ್ಟದ ಸಮಯದಲ್ಲಿ ದೇವರಂತೆ ಬಂದು ನೆರವಾದ ಪೊಲೀಸರ ಈ ಕಾರ್ಯ ‘ಮಾನವೀಯತೆಯ ಸುಂದರ ನೋಟ’ ಎಂದು…
ಮೈಸೂರು: ಜಿಲ್ಲೆಯ ಕೆ.ಆರ್. ನಗರ ತಾಲೂಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಜಮೀನಿನಲ್ಲಿದ್ದ ವಿದ್ಯುತ್ ತಂತಿ ತಗುಲಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಇನ್ನೊಂದು ಪ್ರಕರಣದಲ್ಲಿ 22 ವರ್ಷದ ಯುವಕ ಪಂಪ್‌ಸೆಟ್ ಸರಿ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ. ಎರದೂ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಪಕ್ಕದ ಜಮೀನಿನಿಂದ ಬಂದಿದ್ದ ವಿದ್ಯುತ್ ತಂತಿ ಮೊದಲ ಘಟನೆಯಲ್ಲಿ, ಅಡಗೂರು ಮಾರಗೌಡನಹಳ್ಳಿ ಗ್ರಾಮದ ನಿವಾಸಿ ಮಹದೇವ್ (58) ಜಮೀನಿಗೆ ನೀರು ಹಾಯಿಸಲು ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಪಕ್ಕದ ಜಮೀನಿನಿಂದ ಬಂದಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಅದನ್ನು ಅರಿಯದೆ ತುಳಿದ ಪರಿಣಾಮ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾಗಿದ್ದವ ಸಾವು ಮತ್ತೊಂದು ಘಟನೆಯಲ್ಲಿ, ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ 22 ವರ್ಷದ ಯುವಕ ಪುನೀತ್ ವಿದ್ಯುತ್ ಶಾಕ್‌ಗೆ ಬಲಿಯಾಗಿದ್ದಾನೆ. ಪಕ್ಕದ ಜಮೀನಿನ ಪಂಪ್‌ಸೆಟ್ ಮೋಟಾರ್ ದುರಸ್ತಿ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಈ ಅವಘಡ…
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ನಡೆದ ಜಗಳವೊಂದು ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾರಿವಾಳ ಕಳ್ಳತನದ ವಿಚಾರವಾಗಿ ಉಂಟಾದ ಕಿರಿಕ್‌ನಲ್ಲಿ ಆಟೋ ಚಾಲಕ ಮಲ್ಲಿಕಾರ್ಜುನ್ (24) ಎಂಬಾತ ಕೊಲೆಯಾಗಿದ್ದಾರೆ. ಪಾರಿವಾಳ ಕಳ್ಳತನ, ಜಗಳ ಘಟನೆಯ ವಿವರ ಲಗ್ಗೆರೆಯ ನಿವಾಸಿಗಳಾದ ಶಂಕರ್ ರಾವ್ ಮತ್ತು ಅನ್ನಪೂರ್ಣ ದಂಪತಿಯ ಪುತ್ರ ಮಲ್ಲಿಕಾರ್ಜುನ್ ಕಳೆದ ಸೋಮವಾರ ರಾತ್ರಿ ಕೊಲೆಯಾದ ದುರ್ದೈವಿ. ಸೋಮವಾರ ಸಂಜೆ ಮಲ್ಲಿಕಾರ್ಜುನ್ ಸ್ನೇಹಿತ ಪ್ರಶಾಂತ್ ಎಂಬಾತ ಸಾಕಿದ್ದ ಪಾರಿವಾಳವನ್ನು ಅದೇ ಏರಿಯಾದ ಸುರೇಂದ್ರ, ದರ್ಶನ್ ಹಾಗೂ ಮಹೇಂದ್ರ ಎಂಬುವವರ ಗುಂಪು ಕಳ್ಳತನ ಮಾಡಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು. ಈ ವೇಳೆ ಸ್ನೇಹಿತ ಪ್ರಶಾಂತ್ ಕರೆ ಮಾಡಿದ್ದಾನೆಂದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಮಲ್ಲಿಕಾರ್ಜುನ್ ಧಾವಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿಗಳ ಗುಂಪು ಮಲ್ಲಿಕಾರ್ಜುನ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬೆನ್ನು ಮತ್ತು ದೇಹದ…










