ಉಡುಪಿ: ಮೇಯಲು ಹೋದ ಜಾನುವಾರುಗಳಿಗೆ ವಿದ್ಯುತ್ ಶಾಕ್ ಆಗಿ ನಾಲ್ಕು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿಯ ಬೈಂದೂರು ತಾಲೂಕು ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಕೂರು ಬಳಿ ನಡೆದಿದೆ. ಗಾಳಿ ಮಳೆ ಹಿನ್ನಲೆಯಲ್ಲಿ ತುಂಡಾಗಿ ನೆಲಕ್ಕೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದ ಹಸುಗಳು ಮೃತಪಟ್ಟಿದೆ. ಹಳೆ ವಿದ್ಯುತ್ ತಂತಿ ದುರಸ್ತಿಗೆ ಅನೇಕ ಬಾರಿ ಸ್ಥಳೀಯರು ಮನವಿ ಮಾಡಿದ್ದರೂ ಕೂಡಾ ದುರಸ್ತಿ ಮಾಡದೇ ನಿರ್ಲಕ್ಷ್ಯ ತೋರಿದ್ದ ಕೆಇಬಿ ಅಧಿಕಾರಿಗಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ.
Author: main-admin
ಮಂಗಳೂರು: ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ -2022 ವೇಟ್ ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಬಂದ ಕುಂದಾಪುರದ ಗುರುರಾಜ್ ಪೂಜಾರಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸ್ವಾಗತಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಆತ್ಮೀಯವಾಗಿ ಅಭಿನಂದಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರೂ ಅಭಿನಂದಿಸಿದರು. ಕಾಮನ್ ವೆಲ್ತ್ ಗೇಮ್ಸ್ -2022ರಲ್ಲಿ ವೇಟ್‌ಲಿಫ್ಟಿಂಗ್‌ನಲ್ಲಿ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಗುರುರಾಜ್ ಸತತ ಎರಡನೇ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ಬಾರಿ ಪುರುಷರ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಅವರು ಬೆಳ್ಳಿಯ ಪದಕ ಗೆದ್ದಿದ್ದರು.
ಮಂಗಳೂರು : ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಿಧಿ ಸಿದ್ದ ಕೆಲವು ನಿರ್ಬಂಧಗಳನ್ನು ಆ. 8ರ ಮುಂಜಾನೆಯಿಂದ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ. ಆದರೆ ಮಂಗಳೂರು ಪೊಲೀಸ್ ಕಮಿಷನರೆಟ್ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ನಿಷೇಧಾಜ್ಞೆಯನ್ನು ಆ. 14ರ ಮಧ್ಯರಾತ್ರಿ ವರೆಗೆ ವಿಸ್ತರಿಸಲಾಗಿದೆ. ಎಲ್ಲ ವಾಣಿಜ್ಯ, ವ್ಯವಹಾರ ಮಳಿಗೆಗಳು, ಅಂಗಡಿಗಳು ಹಾಗೂ ಮದ್ಯದ ಅಂಗಡಿಗಳು ಆ. 8ರಿಂದ ಎಂದಿನಂತೆ ಕಾರ್ಯಾಚರಿಸಬಹುದಾಗಿದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಆದೇಶದಲ್ಲಿ ತಿಳಿಸಿದ್ದಾರೆ. ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಆದರೆ ಅನಗತ್ಯ ರಾತ್ರಿ ಸಂಚಾರ ಬೇಡ ಎಂದು ಹೇಳಿದ್ದಾರೆ.
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು ಅ. 8ರಿಂದ 9ರ ವರೆಗೆ ‘ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆ ಇರಲಿದ್ದು, ಸಮುದ್ರದ ಅಬ್ಬರ ಕೂಡ ಹೆಚ್ಚಿರುವ ಸಾಧ್ಯತೆ ಇದೆ. ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಆ.11ರವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ತೆರಳಿರುವ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಚುರುಕುಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗ ಪ್ರವೀಣ್ ಹಂತಕತರಲ್ಲಿ ಮತ್ತಿಬ್ಬರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಸುಳ್ಯದ ನಾವೊರಿನ್ ಅಬೀದ್ ಮತ್ತು ನೌಪಾಲರನ್ನ ಎನ್‌ಐಎ ಅಧಿಕಾರಿಗಳು ಹೆಡಮುರಿಕಟ್ಟಿದ್ದಾರೆ. ಈ ಮೂಲಕ ಈ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 6 ಜನರ ಬಂಧನವಾಗಿದೆ. ಕಠಿಣ ನಿರ್ಬಂಧಕ್ಕೆ ಒಳಗಾದ ಕರಾವಳಿ ಜಿಲ್ಲೆಗೆ ಈಗ ಸಡಿಲಿಕೆ ನೀಡಲಾಗಿದೆ.
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಿದ ಘಟನೆ ಪಣಂಬೂರಿನಿಂದ ಸುಮಾರು 90 ಮೀಟರ್ ದೂರ ಆಳ ಸಮುದ್ರದಲ್ಲಿ ನಡೆದಿದೆ. ಹಡಗಿನಲ್ಲಿ 11 ಮಂದಿ ಮೀನುಗಾರರರಿದ್ದು, ಅವರೆಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಸಮೀಪದಲ್ಲಿದ್ದ ಇನ್ನೊಂದು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಜೈಶ್ರೀರಾಮ್ ಹೆಸರಿನ ಬೋಟ್ ಅಲೆಗಳ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮುಳುಗಿದೆ ಎನ್ನಲಾಗಿದ್ದು, ಶಶಿ ಬೆಂಗ್ರೆ ಎಂಬುವವರ ಒಡೆತನದಲ್ಲಿ ದೋಣಿ ಇತ್ತು ಎಂದು ತಿಳಿದುಬಂದಿದೆ.
ಬೆಂಗಳೂರು (ಆ. 07): ಪಿಎಸ್‌ಐ ಎಕ್ಸಾಂ ಅಕ್ರಮ ಹಗರಣದಲ್ಲಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಕೊಠಡಿಯಲ್ಲಿ ಕಿರುಚಾಡುತ್ತಿದ್ದಾರೆ. ನಿಮ್ಹಾನ್ಸ್‌ನಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ‘ಹಿರಿಯ ಅಧಿಕಾರಿಗಳನ್ನು ನಂಬಿ ನಾನು ಹಾಳಾದೆ. ನಾನು ಕಂಬಿ ಹಿಂದೆ ಬರಲು ಹಿರಿಯ ಅಧಿಕಾರಿಗಳೇ ಕಾರಣ. ನನ್ನನ್ನು ಕಮಿಷನರ್ ಮಾಡುವುದಾಗಿ ಆಮೀಷವೊಡ್ಡಿ, ಈ ಕೆಲಸ ಮಾಡಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ರಾಮನಗರ: ಕಳೆದೊಂದು ವಾರದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆಯಿಂದಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಸೋಲೂರಿನಲ್ಲಿ ದನದ ಕೊಟ್ಟಿಗೆಯ ಗೋಡೆ ಕುಸಿದು ಮಕ್ಕಳಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ನೇಪಾಳ ಮೂಲದ ಫರ್ಬಿನ್(4), ಇಷಿಕಾ(3) ಮೃತಪಟ್ಟವರು. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೊಟ್ಟಿಗೆ ಪಕ್ಕದ ಶೆಡ್ ನಲ್ಲಿ ಇಬ್ಬರು ಮಕ್ಕಳು ಮಲಗಿದ್ದರು. ಈ ವೇಳೆ ಕೊಟ್ಟಿಗೆಯ ಗೋಡೆ ಕುಸಿದು ಪಕ್ಕದ ಶೆಡ್ ಮೇಲೆ ಬಿದ್ದು ಮಕ್ಕಳ ಮೇಲೆ ಬಿದ್ದಿದೆ. ಇದರಿಂದ ಮಕ್ಕಳು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೀನಾ ಮತ್ತು ಮೋನಿಷಾ ಎಂಬಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎರಡು ಕುಟುಂಬಗಳು ಒಂದೇ ಶೆಡ್‌ನಲ್ಲಿ ವಾಸವಾಗಿದ್ದರು. ಕುಸಿದ ಕೊಟ್ಟಿಗೆ ಗಂಗರಂಗಮ್ಮ ಎಂಬವರಿಗೆ ಸೇರಿದ್ದಾಗಿದೆ. ಕುದೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಘಟಿಸಿದೆ.
ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್ಎಸ್ಎಲ್ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ರೂಪಿಸಿರುವ EOS-02 ಭೂ ನಿಗಾ ಉಪಗ್ರಹ ಮತ್ತು ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ರೂಪಿಸಿರುವ 75 ಪುಟ್ಟ ಉಪಗ್ರಹಗಳು (ಪೇಲೋಡ್) ಈ ಬಾಹ್ಯಾಕಾಶ ವಾಹನದ ಮೂಲಕ ಅಂತರಿಕ್ಷದ ಭೂ ಕಕ್ಷೆ ಸೇರಿದವು.
ಉಡುಪಿ; ಅಪರೂಪದ ಪ್ರಕರಣವೊಂದರಲ್ಲಿ ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಕೊಟ್ಟ ಅಂಗಡಿ ವಿರುದ್ದ ಕೋರ್ಟ್ ನಲ್ಲಿ ದಾವೆ ಹೂಡಿದ್ದ ಗ್ರಾಹಕ ಮಹಿಳೆ ಇದೀಗ ಪರಿಹಾರವನ್ನು ಪಡೆದುಕೊಂಡಿದ್ದಾರೆ. ಉಡುಪಿಯ ಪೈ ಇಂಟರ್‌ನ್ಯಾಷನಲ್ ಹಾಗೂ ಪ್ರೀತಿ ಕಿಚನ್ ಅಪ್ಲೆಯನ್ಸಸ್ ಪ್ರೈ.ಲಿ. ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪರಿಹಾರ ನೀಡುವಂತೆ ಸೂಚಿಸಿದೆ. ಅನಿತಾ ಎಂಬವರು ಎರಡು ವರ್ಷಗಳ ಹಿಂದೆ ಪೈ ಇಂಟರ್‌ನ್ಯಾಷನಲ್ ನಲ್ಲಿ 4,239 ರೂ.ಗಳನ್ನು ನೀಡಿ ಪ್ರೀತಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು. ಆದರೆ ಪೈ ಇಂಟರ್‌ನ್ಯಾಷನಲ್ ನವರು ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು. ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿದ್ದವು. ಇದರಿಂದ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪೈ…










