Author: main-admin

ಸುಳ್ಯ: ಬಾಟಲಿಯಿಂದ ಯುವಕನೊಬ್ಬನ ತಲೆಗೆ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣದ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ತಾಲೂಕಿನ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಜು. 19ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು. ಸ್ಥಳೀಯ ನಿವಾಸಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜೀತ್ ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರು ಬಂಧಿತ ಆರೋಪಿಗಳು. ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ (18 ವರ್ಷ) ಹಲ್ಲೆಗೊಳಗಾದ ಯುವಕ. ಮೊನ್ನೆ ಸಂಜೆ ಇಲ್ಲಿನ ವಿಷ್ಣು ನಗರದಲ್ಲಿ ಖಾಸಗಿ ಸಮಾರಂಭವೊಂದು ನಡೆದಿದ್ದು ಅದಕ್ಕೆ ಮಸೂದ್ ಬಂದಿದ್ದ. ಈ ವೇಳೆ ಅಲ್ಲಿ ಸಮೀಪದ ಅಂಗಡಿಯ ಬಳಿ ಆರೋಪಿ ಸುದೀರ್ ನಿಂತಿದ್ದು, ಕ್ಷುಲ್ಲಕ ಕಾರಣಕ್ಕೆ ಮಸೂದ್ ಹಾಗೂ ಆರೋಪಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಪರಿಣಾಮ ಎಂಟು ಜನ ಆರೋಪಿಗಳು ಒಟ್ಟು ಸೇರಿ ಏಕಾಏಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ…

Read More

ಬೈಂದೂರು: ನಿನ್ನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್‌ನಲ್ಲಿ ಆಂಬ್ಯುಲೆನ್ಸ್ ದುರಂತ ಸಂಭವಿಸಿದ ಪರಿಣಾಮ ನಾಲ್ವರ ದುರ್ಮರಣಕ್ಕೆ ಸಂಬಂಧಿಸಿ ಪೊಲೀಸರು ಆಂಬ್ಯುಲೆನ್ಸ್ ಚಾಲಕ ರೋಶನ್ ನನ್ನು ವಶಕ್ಕೆ ಪಡೆದಿದ್ದಾರೆ. ಬೈಂದೂರು ಪೊಲೀಸರ ವಶದಲ್ಲಿರುವ ಚಾಲಕ ರೋಶನ್‌ನ ರಕ್ತದ ಮಾದರಿಯನ್ನು ಮಣಿಪಾಲದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಾಲಕ ಮದ್ಯ ಸೇವನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಅತಿ ವೇಗದಿಂದ ಬಂದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಶಿರೂರು ಟೋಲ್ ಗೇಟ್‌ನ ಕಂಬಕ್ಕೆ ಡಿಕ್ಕಿ ಹೊಡೆದು ನಾಲ್ಕು ಮಂದಿ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿದ್ದರು.

Read More

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋವೊಂದು ವೈರಲ್ ಆಗಿದೆ. ಇದೀಗ ಈ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪಿಯುಸಿ ವಿದ್ಯಾರ್ಥಿಗಳು ಖಾಸಗಿ ಕೊಠಡಿಯಲ್ಲಿ ಕಿಸ್ಸಿಂಗ್‌ನಲ್ಲಿ ತೊಡಗಿದ್ದರು ಎನ್ನಲಾಗಿದೆ. ಕಾಲೇಜು ಯೂನಿಫಾರಂನಲ್ಲೇ ಕಿಸ್ಸಿಂಗ್‌ನಲ್ಲಿ ತೊಡಗಿರುವ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಇದೇ ಕಾರಣದಿಂದ ಈ ವಿಡಿಯೋದಲ್ಲಿರುವುದು ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಎನ್ನುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳ ತಂಡದ ಮಧ್ಯೆಯಿದ್ದ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಲಿಪ್ ಲಾಕ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಈ ವಿಡಿಯೋ ಮಾಡಿ ವೈರಲ್ ಮಾಡಿರುವ ವಿದ್ಯಾರ್ಥಿಯನ್ನ ಮಂಗಳೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಕಾನೂನು ತಜ್ಞರ ಸಲಹೆ ಪಡೆದ ಕ್ರಮಕ್ಕೆ ‌ಮುಂದಾಗಿದ್ದಾರೆ. ಈ ವಿಡಿಯೋದಲ್ಲಿ ಮೂವರು ಯುವಕರು ಹಾಗೂ ಮೂವರು ವಿದ್ಯಾರ್ಥಿನಿಯರಿದ್ದಾರೆ. ಮೂವರು ವಿದ್ಯಾರ್ಥಿನಿಯರು ಕಾಲೇಜು ಯೂನಿಫಾರಂ,…

Read More

ಮಂಗಳೂರು: ಉದ್ಯೋಗಿಯಿಂದಲೇ ಬ್ಯಾಂಕ್ ಹಣ ದುರುಪಯೋಗ ದೇರಳಕಟ್ಟೆಯ ವಿಜಯಾಬ್ಯಾಂಕ್ ಯೆನೆಪೊಯ ಯುನಿವರ್ಸಿಟಿಯ ಬ್ರ್ಯಾಂಚ್ ನೌಕರ ವಿಕಾಸ್ ವಿ. ಶೆಟ್ಟಿಗೆ 2ನೇ ಜಿಲ್ಲಾ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ಬ್ಯಾಂಕ್ ಮ್ಯಾನೇಜರ್ ಸಂದೀಪ್ ಗದ್ದೆಯವರು 2017ರ ಡಿಸೆಂಬರ್ 28-30 ರವರೆಗೆ ರಜೆಯಲ್ಲಿದ್ದರು. ಈ ವೇಳೆ ವಿಕಾಸ್ ವಿ. ಶೆಟ್ಟಿ ಪ್ರಭಾರದಲ್ಲಿದ್ದರು. ಆದರೆ 2017ರ ಡಿಸೆಂಬರ್ 29ರಂದು ಸಂಜೆ ಬ್ಯಾಂಕ್ ಸಿಬ್ಬಂದಿ ಕ್ಲೋಸಿಂಗ್‌ ಕ್ಯಾಶ್‌ನ್ನು ಬ್ಯಾಂಕ್‌ನ ಫಿನಾಕಲ್ ಸ್ವಾಫ್ಟ್ ವೇರ್‌ನಲ್ಲಿ ಟ್ಯಾಲಿ ಮಾಡಿದಾಗ ಕ್ಲೋಸಿಂಗ್ ಕ್ಯಾಶ್ ಟ್ಯಾಲಿಯಾಗದೆ 27,29,875 ರೂ. ಕಡಿಮೆ ಇತ್ತು. ಈ ಬಗ್ಗೆ ವಿಕಾಸ್ ವಿ.ಶೆಟ್ಟಿಯಲ್ಲಿ ವಿಚಾರಿಸಿದಾಗ, ಈ ಹಣವನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದನು. ಹಾಗೂ ಈ ಹಣವನ್ನು ಡಿಸೆಂಬರ್ 31ರಂದು ಬ್ಯಾಂಕಿಗೆ ಮರು ಪಾವತಿ ಮಾಡಿದ್ದಾನೆ. ಆದರೆ ಆರೋಪಿ ಸಾರ್ವಜನಿಕ ಹಣವನ್ನು ತನ್ನ ಸ್ವಂತ ಉಪಯೋಗಕ್ಕೆ ದುರುಪಯೋಗ ಪಡಿಸಿ ನಂಬಿಕೆ ದ್ರೋಹ ಎಸಗಿರುವುದಾಗಿ ಮಂಗಳೂರು ಇಕಾನಮಿಕ್ & ನಾರ್ಕೋಟಿಕ್…

Read More

ಬೈಂದೂರು: ಅತಿವೇಗದಿಂದ ಚಲಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಶಿರೂರಿನ ಟೋಲ್ ಗೇಟ್‌‌ನ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ಹೊನ್ನಾವರದಿಂದ ಕುಂದಾಪುರ ಆಸ್ಪತ್ರೆಗೆ ರೋಗಿಯನ್ನು ಕರೆತರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಶಿರೂರಿನ ಟೋಲ್ ಗೇಟ್‌‌ನ ಕಂಬಕ್ಕೆ ಢಿಕ್ಕಿ ಹೊಡೆದ ಬಳಿಕ ಪಲ್ಟಿಯಾಗಿದ್ದು, ಅದರಲ್ಲಿದ್ದ ಮೂವರು ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೈಂದೂರು (ಉಪ್ಪುಂದ): ಕವರ್‌ ಸಹಿತ ಚಾಕಲೇಟ್‌ ನುಂಗಿ ಎರಡನೇ ತರಗತಿ ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿಜೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಳವಾಡಿಯಲ್ಲಿ ಬುಧವಾರ ನಡೆದಿದೆ. ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬವಳಾಡಿ ಗ್ರಾಮದ ನಿವಾಸಿ ಸಮನ್ವಿ ಮೃತ ಬಾಲಕಿ ಎಂದು ತಿಳಿದುಬಂದಿದೆ. ಘಟನೆ ವಿವರ: ಸಮನ್ವಿ ಖಾಸಗಿ ಆಂಗ್ಲಮಾಧ್ಯಮದಲ್ಲಿ 2ನೇ ತರಗತಿ ಓದುತ್ತಿದ್ದು, ಮುಂಜಾನೆ ಶಾಲೆಗೆ ಹೊರಡುತ್ತಿರುವ ವೇಳೆ ಹಠ ಹಿಡಿದಿದ್ದಳು. ಮಗಳನ್ನು ಸಮಧಾನಪಡಿಸಲು ಅಮ್ಮ ಚಾಕಲೇಟ್‌ ನೀಡಿದ್ದಾರೆ. ಈ ವೇಳೆ ಶಾಲಾ ವಾಹನ ಬಂದಿದ್ದು, ವಿದ್ಯಾರ್ಥಿನಿ ಕವರ್‌ ಸಹಿತ ಚಾಕಲೇಟ್‌ ನುಂಗಿದ್ದಾಳೆ. ಚಾಕಲೇಟ್ ಗಂಟಲಲ್ಲಿ ಸಿಲುಕಿಕೊಂಡು, ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಆ ವೇಳೆಗಾಗಲೇ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Read More

ಉಡುಪಿ: ನಗರದ ಕೋರ್ಟ್‌ ಹಿಂಬದಿ ರಸ್ತೆಯ ವಕೀಲರೊಬ್ಬರ ಮನೆಗೆ ಜು.19 ರಂದು ಹಾಡಹಗಲೇ ನುಗ್ಗಿದ ಕಳ್ಳರು 25 ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ. ಉಡುಪಿಯ ವಕೀಲೆ ವಾಣಿ ವಿ. ರಾವ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಪರ್ಸ್ ನಲ್ಲಿದ್ದ 45,000 ರೂ. ನಗದು ಮತ್ತು ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್, 6 ಪವನ್ ತೂಕದ 2 ಮುತ್ತಿನ ಬಳೆ, ಐದೂವರೆ ಪವನ್ ತೂಕದ 2 ಚಿನ್ನದ ಖಡಗ ಬಳೆಗಳು, 6 ಪವನ್ ತೂಕದ ಚಿನ್ನದ ಸರ ಮತ್ತು 1 ಪವನ್ ತೂಕದ ಪೆಂಡೆಂಟ್, 6 ಪವನ್ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, ಒಂದೂವರೆ ಪವನ್ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಮರಳಿನ 2 ಬೆಂಡೋಲೆ, ಜುಮ್ಕಿ ಮತ್ತು 2…

Read More

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇಬ್ಬರ ಮೇಲೆ ಗೂಂಡಾ ಕಾಯ್ದೆ ಜಾರಿಯಾಗಿದೆ. ನಗರದ ಎಕ್ಕೂರು ನಿವಾಸಿ ಧೀರಜ್ ಕುಮಾರ್(27), ಬಜಾಲ್ ಜಲ್ಲಿಗುಡ್ಡೆ ನಿವಾಸಿ ಪ್ರೀತಂ ಪೂಜಾರಿ (26) ಗೂಂಡಾ ಕಾಯ್ದೆ ಜಾರಿಗೊಂಡ ಆರೋಪಿಗಳು. ಆರೋಪಿಗಳಿಬ್ಬರೂ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವಂತಹ ಕೃತ್ಯದಲ್ಲಿ ಪದೇ ಪದೇ ತೊಡಗಿಕೊಂಡಿರುತ್ತಾರೆ. ಇವರುಗಳು ಕೊಲೆಯತ್ನ, ಸುಲಿಗೆ, ದರೋಡೆಗೆ ಯತ್ನ, ಹಲ್ಲೆ ಅಪರಾಧಕ್ಕೆ ಒಳಸಂಚು ಪ್ರಕರಣಗಳಲ್ಲಿ ಪದೇ ಪದೇ ನಡೆಸುತ್ತಿದ್ದ ಸಾರ್ವಜನಿಕ ವ್ಯವಸ್ಥೆಗೆ ಧಕ್ಕೆಯಾಗುವಂತಹ ಕೃತ್ಯದಲ್ಲಿ ತೊಡುಗುತ್ತಿರುವುದರಿಂದ ಸಾಮಾನ್ಯ ಕಾನೂನುಗಳಿಂದ ಇವರ ಅಪರಾಧ ಕೃತ್ಯಗಳಿಗೆ ನಿಯಂತ್ರಣ ಹೇರುವುದು ಕಷ್ಟಕರವಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಇಬ್ಬರೂ ಆರೋಪಿಗಳನ್ನು ಗೂಂಡಾ ಕಾಯ್ದೆಯನ್ವಯ ಗರಿಷ್ಠ ಅವಧಿಗೆ ಬಂಧನದಲ್ಲಿಡುವಂತೆ ಆದೇಶಿಸಲಾಗಿದೆ. ಸದ್ಯ ಇವರಿಬ್ಬರೂ ಮಂಗಳೂರು ಕಾರಾಗೃಹದಲ್ಲಿ ಬಂಧಿಗಳಾಗಿದ್ದಾರೆ.

Read More

ಮಂಗಳೂರು : ಮಂಗಳೂರಿನ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ವಿರುದ್ಧ ದೂರು ದಾಖಲಾಗಿದೆ. ಶ್ರೀನಿವಾಸ ಗೌಡ ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಶ್ರೀನಿವಾಸ ಗೌಡ ವಿರುದ್ದ ಮೂಡಬಿದ್ರೆ ಪೊಲೀಸ್ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬುವವರು ದೂರು ನೀಡಿದ್ದಾರೆ. ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿ ನಡೆಸುವ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ದ ಕ್ರಿಮಿನಲ್ ದೂರು ನೀಡಲಾಗಿದೆ.

Read More

ಬೆಂಗಳೂರು: ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, 18 ದಿನಗಳಲ್ಲಿ 910 ಮಂದಿಗೆ ಡೆಂಘಿ ಜ್ವರ ಕಾಣಿಸಿಕೊಂಡಿದ್ದು, ಒಟ್ಟೂ ಪ್ರಕರಣಗಳ ಸಂಖ್ಯೆ 3,384ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ 176, ಉಡುಪಿ 356, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 585, ಮೈಸೂರು 349, ಚಿತ್ರದುರ್ಗ 163, ಶಿವಮೊಗ್ಗ 158, ಹಾಸನ 124, ದಾವಣಗೆರೆ 114, ವಿಜಯಪುರ 110, ಬೆಳಗಾವಿ 103, ಕಲಬುರಗಿ 101, ಕೊಪ್ಪಳ 100 ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಘಿ ಪ್ರಕರಣಗಳು ವರದಿಯಾಗಿವೆ. ಇನ್ನು ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಹೆಚ್ಚಿನ ಜನರಲ್ಲಿ ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಈ ವರ್ಷ ಜ.1 ರಿಂದ ಜೂ. 24ರವರೆಗೆ 62,357 ಡೆಂಘಿ ಶಂಕಿತರನ್ನು ಗುರುತಿಸಿ, ತಪಾಸಣೆಗೆ ಒಳಪಡಿಸಲಾಗಿದೆ. 26,719 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದೆ. 3,384 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ

Read More