Author: main-admin

ತುಳಸಿಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ತುಳಸಿ ಗಿಡವನ್ನು ಆಯುರ್ವೇದದಲ್ಲಿ ಔಷಧಿಯಾಗಿ ಬಳಸಿಕೊಳ್ಳಲಾಗಿದೆ. ತುಳಸಿ ಎಲೆಯನ್ನು ಸೇವಿಸುವ ಅಥವಾ ತುಳಸಿ ಹಾಕಿದ ನೀರನ್ನು ಕುಡಿಯುವ ಮುಖಾಂತರ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸಬಹುದು. ತುಳಸಿ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ತುಳಸಿ ಎಲೆಯಲ್ಲಿರುವ ಆಡಾಪ್ಟಾ ಜೆನ್ ಅಂಶವು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನರ ವ್ಯವಸ್ಥೆ ಆರಾಮವಾಗಿರಲು ಇದು ನೆರವಾಗುತ್ತದೆ. ರಕ್ತ ಸಂಚಾರವೂ ಸುಧಾರಿಸುತ್ತದೆ. 2 ದಿನಕೊಮ್ಮೆ 5 ತುಳಸಿ ಎಲೆಯನ್ನು ಸೇವನೆ ಮಾಡಿದರೆ ಒಳ್ಳೆಯದು. ಶೀತದ ಸಮಸ್ಯೆ ಬೇಗ ನಿವಾರಣೆಯಾಗುತ್ತವೆ. ಈ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದು ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡುತ್ತದೆ. ತುಳಸಿ ಎಲೆಗಳನ್ನು ಟೂತ್ ಪೇಸ್ಟ್ ಗಳಲ್ಲೂ ಜಾಸ್ತಿ ಬಳಸಲಾಗುತ್ತದೆ. ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಉಂಟು ಮಾಡುವ ಹಾನಿಕಾರಕ ರೋಗಗಳ ವಿರುದ್ಧ ಇದು ಹೊರಡುತ್ತದೆ.…

Read More

ಬೆಂಗಳೂರು: ಬೆಲೆ ಏರಿಕೆಯಿಂದ ಮೊದಲೇ ತತ್ತಿರಿಸುವ ಜನತೆಗೆ ಮತ್ತೊಂದು ದೊಡ್ಡ ಹೊಡೆತ ನೀಡಲು ಕರ್ನಾಟಕ ಹಾಲು ನಿಗಮ ಮುಂದಾಗಿದೆ. ಹೌದು, ಕರ್ನಾಟಕ ಹಾಲು ನಿಗಮ ತನ್ನ ಉತ್ಪನಗಳ ಬೆಲೆಯನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದ್ದು, ನಾಳೆ ಯಿಂದಲೇ ಈ ಬೆಲೆಗಳು ಜಾರಿಗೆ ಬರಲಿದೆ. ಹಾಗಾದ್ರೇ ಯಾವುದರ ಬೆಲೆ ಎಷ್ಟು ಹೆಚ್ಚಳವಾಗಲಿದೆ ಎನ್ನುವುದನ್ನು ನೋಡುವುದಾದ್ರೆ ಅದರ ವಿವರ ಕೆಳಕಂಡತಿದೆ.

Read More

ಬೈಂದೂರು: ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಬಳಿ ಫಲಕಕ್ಕೆ ಢಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕಂಬದಕೋಣೆ ಸೇತುವೆ ಬಳಿ ನಡೆದಿದೆ. ಆಂಧ್ರದ ಕಲ್ಲೂರು ತರುಣ್ ಕುಮಾರ್ ರೆಡ್ಡಿ (19) ಹಾಗೂ ಆದಿತ್ಯ ರೆಡ್ಡಿ (18) ಮೃತ ವಿದ್ಯಾರ್ಥಿಗಳು. ಇವರು ಮಣಿಪಾಲದಿಂದ ಮುರ್ಡೇಶ್ವರಕ್ಕೆ ಬೈಕಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ‌ ಎಂದು ತಿಳಿದು ಬಂದಿದೆ.

Read More

ಮಂಗಳೂರು : ಮಂಗಳೂರು ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿದ್ದು, ನಗರದ ಅಸೈಗೋಳಿ ಬಳಿ ಪೊಲೀಸರು ನಟೋರಿಯಸ್ ರೌಡಿಶೀಟರ್ ಮುಕ್ತಾರ್ ಮೇಲೆ ಫೈರಿಂಗ್ ಮಾಡಿರುವ ಘಟನೆ ನಡೆದಿದೆ. 15ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿರುವ ಮುಕ್ತಾರ್, ಪ್ರಕರಣವೊಂದರಲ್ಲಿ ಬಂಧಿಸಿ ಕಾರಿನ ಮಹಜರಿಗೆ ಹೋಗಿದ್ದ ವೇಳೆ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮುಕ್ತಾರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ರೌಡಿಶೀಟರ್ ಮುಕ್ತಾರ್ ಹಲವು ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿದ್ದ. ಸದ್ಯ ಬಂಧಿಸಿದ್ದ ಪೊಲೀಸರು ಪ್ರಕರಣವೊಂದರ ಮಹಜರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಪರಾರಿಯಾಗಲು ಯತ್ನಿಸಿದ್ದ.

Read More

ಬಂಟ್ವಾಳ: ಮಹಿಳೆಯೋರ್ವಳನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಬಂಟ್ವಾಳದ ಪಿಲಿಮೊಗರು ಗ್ರಾಮದಲ್ಲಿ ನಡೆದಿದೆ. ಪಿಲಿಮೊಗರು ನಿವಾಸಿ ಉಮೇಶ್ ಎಂಬವರ ಪತ್ನಿ ಲತಾಅವರ ಮೇಲೆ‌ ಸಂಬಂದಿಕನೇ ಆಗಿರುವ ರಮೇಶ್ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಗಾಯಗೊಂಡಿರುವ ಲತಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಲ್ಲಿಪಾಡಿ ನಿವಾಸಿ‌ ಆರೋಪಿ ರಮೇಶ್, ಲತಾ ಅವರ ಮನೆಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಲತಾ ಅವರಿಗೆ ಮದುವೆ ಆಗಿದೆ. ರಮೇಶ್ ಕುಟುಂಬಸ್ಥ ಆದ ಕಾರಣ ಲತಾ ರಮೇಶ್ ಜೊತೆ ಸಲುಗೆಯಿಂದಿದ್ದರು ಎನ್ನಲಾಗಿದೆ. ರಮೇಶ್ ಲತಾಗೆ ಮೆಸೇಜ್ ಮಾಡುತ್ತಿದ್ದ. ಆದರೆ ರಮೇಶ್ ವರ್ತನೆ ಮಿತಿ ಮೀರಿದಾಗ ಲತಾ ಮೆಸೇಜ್ ಮಾಡುವುದನ್ನು ನಿಲ್ಲಿಸಿ ಎಚ್ಚರಿಕೆ ಕೊಟ್ಟಿದ್ದಾರೆ.ಇದರಿಂದ ಕೋಪಗೊಂಡು ಮನೆಗೆ ಬಂದು ಕೊಲೆ ಮಾಡುವ ಯತ್ನದಿಂದ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿದೆ. ಇದೀಗ ಪೊಲೀಸರು‌ ಆರೋಪಿಗೆ ಬಲೆ ಬೀಸಿದ್ದಾರೆ.

Read More

ಮಂಗಳೂರು: ಇತ್ತೀಚೆಗೆ ಗಾಂಜಾ ಸಹಿತ ಹಲವು ಕಾಲೇಜು ವಿದ್ಯಾರ್ಥಿಗಳನ್ನು ನಗರದಲ್ಲಿ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ನಗರದಲ್ಲಿ ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಖ್ಯಾತ್ (28) ಮತ್ತು ಆತನ ಪತ್ನಿ ಅಂಜನಾ (21) ಬಂಧಿತರು. ಇವರು ನಗರದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರ ತಂಡ ಕಾವೂರು ಶಂಕರ ನಗರ ಕೆ ಸಿ ಆಳ್ವ ಲೇಔಟ್ ನ ಮನೆಯೊಂದಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಈ ಮೊದಲು ಕೂಡ ಹಲವು ಪ್ರಕರಣ ದಾಖಲಾಗಿದೆ ಎಂಬ ಬಗ್ಗೆ ಕೂಡ ಮಾಹಿತಿ ಇದೆ. ಇದೀಗ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಪುರುಷನೊಂದಿಗೆ ಸಂಬಂಧವಿಟ್ಟುಕೊಂಡು ಆತನೊಂದಿಗೆ ಸ್ವ-ಇಚ್ಛೆಯಿಂದ ವಾಸಿಸುತ್ತಿದ್ದ ಮಹಿಳೆ ಆ ಸಂಬಂಧ ಹದಗೆಟ್ಟ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅತ್ಯಾಚಾರ, ಅಸಹಜ ಅಪರಾಧಗಳು ಹಾಗೂ ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿದ್ದ ಅನ್ಸಾರ್ ಮೊಹಮ್ಮದ್ ಅವರ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ದ್ವೀ-ಸದಸ್ಯ ಪೀಠವು ಅನ್ಸಾರ್‌ಗೆ ಜಾಮೀನು ನೀಡಿದೆ.  ಈ ಪ್ರಕರಣದಲ್ಲಿ ಮೇಲ್ಮನವಿದಾರನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ದೂರುದಾರೆ ಮಹಿಳೆ ಸ್ವಇಚ್ಛೆಯಿಂದ ಮೇಲ್ಮನವಿದಾರ ಅನ್ಸಾರ್ ಜೊತೆ ಇದ್ದು ಆತನೊಂದಿಗೆ ಸಂಬಂಧ ಹೊಂದಿದ್ದರು. ಈಗ ಸಂಬಂಧ ಹದಗೆಟ್ಟಿದ್ದರೆ ಅದು ಐಪಿಸಿ ಸೆಕ್ಷನ್ 376 (2) (ಎನ್) ಅಡಿ ಪ್ರಕರಣ ದಾಖಲಿಸಲು ಆಧಾರವಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ. ಅನ್ಸಾರ್ ಜೊತೆ ದೂರುದಾರೆ ಕಳೆದ 4 ವರ್ಷಗಳಿಂದಲೂ ಸಂಬಂಧ ಹೊಂದಿದ್ದು ಆಕೆ ಮತ್ತು ಅನ್ಸಾರ್ ನಡುವೆ ಸಂಬಂಧ ಬೆಳೆದಾಗ ಮಹಿಳೆಗೆ 21 ವರ್ಷ…

Read More

ಕೋಟ: ಇಲ್ಲಿಗೆ ಸಮೀಪದ ಕೆದೂರು ಮಹಾಕಾಳಿ ದೇವಸ್ಥಾನದ ಸಮೀ ಪದ ರೈಲ್ವೆ ಟ್ರ್ಯಾಕ್ ಬಳಿ ಮುಂಬಯಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಮಂಗಳಾ ಲಕ್ಷದೀಪ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಮಂಗಳೂರು ಡೊಂಗರಕೇರಿ ನಿವಾಸಿ ನಿತ್ಯಾನಂದ ಶೇಟ್ (52) ಆಯತಪ್ಪಿ ಬಿದ್ದು ಸಾವನ್ನಪ್ಪಿದವರು. ಇವರು ಮಹಾರಾಷ್ಟ್ರದಲ್ಲಿ ಶ್ರೀಗಳೊಬ್ಬರ ಚಾತುರ್ಮಾಸ ಸಮಾರಂಭ ಮುಗಿಸಿ ತಮ್ಮ ಸಮಾಜ ಬಾಂಧವರ ಜತೆ ಬರುತ್ತಿದ್ದಾಗ ಕೆದೂರು ರೈಲ್ವೆ ಟ್ರ್ಯಾಕ್ ಸಮೀಪ ಚಲಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೃತರು ಅವಿವಾಹಿತರಾಗಿದ್ದು, ಮಂಗಳೂರಿನ ಶಾವಿಗೆ ತಯಾರಿಕಾ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಡಬ: ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಪಂಜ- ಕಡಬ ರಸ್ತೆಯ ಕೋಡಿಂಬಾಳದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಧರ್ಮಸ್ಥಳ ಕಾಯರಡ್ಕದ ಮೂಲದ ಮೂವರು ಪಂಜ ಕಡೆ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ‌ ಸಂಸ್ಥೆಗೆ ಸೇರಿದ ಖಾಸಗಿ ಬಸ್ ನಡುವೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಕಾರು ಚಾಲಕ ಲೋಲಕ್ಷ ಎಂಬವರಿಗೆ ಗಾಯವಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ. ಉಳಿದಂತೆ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಶಿರಾಡಿ ಘಾಟಿಯಲ್ಲಿ ರಸ್ತೆ ಸಂಚಾರ ತಡೆ ಹಿನ್ನೆಲೆಯಲ್ಲಿ ಕಿರಿದಾದ ದಾರಿಯಲ್ಲಿ ಸಂಚರಿಸುತ್ತಿರುವ ಘನ ವಾಹನಗಳು ತಿರುವುಗಳ ಅರಿವು ಇಲ್ಲದೇ ಇಂತಹ ಘಟನೆಗಳು ಸಂಭವಿಸುತ್ತಿವೆ ಎಂದು ಸ್ಥಲೀಯರು ತಿಳಿಸಿದ್ದಾರೆ. Post Settings

Read More

ಉದಯೋನ್ಮುಖ ನಟ, ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಅವರಿಗೆ ಮಾತೃ ವಿಯೋಗ ಉಂಟಾಗಿದೆ. ಅವರ ತಾಯಿ ಸುಜಾತ ವೀರಪ್ಪ ಅಂಬಾರ್ ಅವರು ಅಲ್ಪಕಾಲ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಜಾತ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿಯಾಗಿದ್ದು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಇವರ ಅಂತ್ಯಕ್ರಿಯೆ ಇಂದು ಮಂಗಳೂರಿನಲ್ಲಿ ನಡೆಯಲಿದೆ. ದುರ್ಗಾಪರಮೇಶ್ವರಿ ಮಹಿಳಾ ಸಂಘದಲ್ಲಿ ತೊಡಗಿಸಿಕೊಂಡಿದ್ದ ಸುಜಾತ ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನೂ ಇವರ ಪುತ್ರ ನಟ ಪೃಥ್ವಿ ಅಂಬರ್‌ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು, ದಿಯಾ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ತೆರೆಕಂಡ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರದಲ್ಲಿ ಪೃಥ್ವಿ ಅಂಬರ್ ನಟಿಸಿದ್ದಾರೆ. ಚಿತ್ರಗಳ ಸಕ್ಸಸ್​ನ್ನು ಖುಷಿ ಪಡೋ ಸಮಯದಲ್ಲಿ ನಟ ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ.

Read More