ಉಳ್ಳಾಲ: ರಾ.ಹೆ. 66 ರ ತೊಕ್ಕೊಟ್ಟಿನ ಕಾಪಿಕಾಡು ಎಂಬಲ್ಲಿ ಲಾರಿ ಮತ್ತು ಎರಡು ಕಾರುಗಳ ನಡುವೆ ನಡೆದ ಸರಣಿ ಅಘಾತದಲ್ಲಿ ಧಾರ್ಮಿಕ ಮುಂದಾಳು ಕೆ.ಪಿ ಸುರೇಶ್ ಅವರು ಚಲಾಯಿಸುತ್ತಿದ್ದ ಕಾರು ಡಿವೈಡರ್ ಏರಿದ್ದು ಅದೃಷ್ಟವಶಾತ್ ಅವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮಾಡೂರು ಶ್ರೀ ಸಾಯಿಬಾಬ ಮಂದಿರದ ಮೊಕ್ತೇಸರರಾದ ಕೆ.ಪಿ ಸುರೇಶ್ ಅವರು ಇಂದು ಬೆಳಿಗ್ಗೆ ತಮ್ಮ ಕಾರಲ್ಲಿ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಕಾಪಿಕಾಡು ಎಂಬಲ್ಲಿ ಸ್ಕೂಟರಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ನಿಯಂತ್ರಣ ತಪ್ಪಿ ಕೆಳಗುರುಳಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಸುರೇಶ್ ಅವರು ತನ್ನ ಕಾರನ್ನ ಹೆದ್ದಾರಿ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿದ್ದಾರೆ.ಈ ವೇಳೆ ಹಿಂದಿನಿಂದ ಬಂದ ಕೇರಳ ನೋಂದಣಿ ಕಾರೊಂದು ಕಾಪಿಕಾಡಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಟೆಂಪೊವೊಂದನ್ನ ತಪ್ಪಿಸುವ ಭರದಲ್ಲಿ ಸುರೇಶ್ ಅವರ ಕಾರಿನ ಹಿಂಬದಿಗೆ ಬಲವಾಗಿ ಡಿಕ್ಕಿ ಹೊಡೆದಿದ್ದು ಸುರೇಶ್ ಅವರ ಕಾರು ಡಿವೈಡರ್ ಮೇಲಕ್ಕೇರಿದೆ.ಹಿಂದಿನಿಂದ ಅತೀ ವೇಗದಲ್ಲಿ ಬಂದ ಸರಕು ಲಾರಿಯು ಕೇರಳ ನೊಂದಣಿ ಕಾರಿನ ಹಿಂಬದಿಗೆ…
Author: main-admin
ಬೆಂಗಳೂರು: ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಪ್ಪಿತಪ್ಪಿಯೂ ವಿಡಿಯೋ ಚಿತ್ರೀಕರಣ ಇಲ್ಲವೇ ಫೋಟೋ ತೆಗೆಯುವಂತಿಲ್ಲ. ಶುಕ್ರವಾರ ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅೀನ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ಅವರು ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ವ್ಯಾಪ್ತಿಗೆ ಒಳಪಡುವ ಕಚೇರಿ ಸಮಯದಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ತೆಗೆಯುವುದು ಇಲ್ಲವೆ ವಿಡಿಯೋ ಚಿತ್ರೀಕರಣ ಮಾಡದಂತೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬಂದಾಗ ಫೋಟೋ ತೆಗೆಯುವುದು ಇಲ್ಲವೇ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ರುಪಯೋಗವಾಗಿರುವುದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರ ನೆಪದಲ್ಲಿ ಬರುವ ಖಾಸಗಿ ವ್ಯಕ್ತಿಗಳು ಯಾರೊಬ್ಬರ ಅನುಮತಿ ಪಡೆಯದೇ ಈ ರೀತಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಹಿಳಾ ನೌಕರರಿಗೆ ಇದರಿಂದ ಸಮಸ್ಯೆ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ನೌಕರರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಅನುಮತಿ ಪಡೆಯದೆ ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ…
ಬೆಳ್ತಂಗಡಿ: ಇಲ್ಲಿನ ನೇತ್ರಾವತಿ ಸ್ನಾನಘಟ್ಟಕ್ಕೆ ಇಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ. ಇಂದು ಬೆಳಗ್ಗೆ 6 ಗಂಟೆಗೆ ಧರ್ಮಸ್ಥಳ ಕ್ಷೇತ್ರ ದರ್ಶನಕ್ಕೆ ಬಂದು ತದನಂತರ ಆಟೋದಲ್ಲಿ ಬಂದು ಸ್ನಾನ ಮಾಡಲು ಸ್ನಾನಘಟ್ಟದ ಮೆಟ್ಟಲಿನಲ್ಲಿ ಚಪ್ಪಲಿ ಇಟ್ಟು ನೀರಿಗೆ ಇಳಿದ್ದಿದ್ದು, ನಾಪತ್ತೆಯಾಗಿದ್ದಾಳೆ. ಸದ್ಯ ಯುವತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಯುವತಿ ಎಲ್ಲಿಂದ ಬಂದಿದ್ದಾಳೆ, ಒಬ್ಬಳೇ ಬಂದಿದ್ದಾಳೆಯೇ ಇನ್ನಿತರ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಶೋಧ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಹಾಗೂ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ನದಿಯು ತುಂಬಿ ಹರಿಯುತ್ತಿದೆ.
ರಾಜ್ಯ ಸರ್ಕಾರವು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕಲಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದ 1,500 ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿಸುವ ಕೆಲಸವನ್ನು ಶೀಘ್ರವೇ ಮಾಡಲಾಗುವುದು. ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಸಲಾಗುವುದು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಪಠ್ಯಪರಿಷ್ಕರಣೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಪಠ್ಯಪರಿಷ್ಕರಣೆ ಹಿಂದೆಯೂ ಆಗಿತ್ತು. ಆದರೆ ನಾವು ಚರ್ಚೆ ನಡೆಸುತ್ತಿದ್ದೇವು. ಈಗಿನ ವಿರೋಧ ಪಕ್ಷಗಳಂತೆ ಬೀದಿಯಲ್ಲಿ ಕೂಗುತ್ತಿರಲಿಲ್ಲ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪುಸ್ತಕ ಬದಲಾವಣೆ ಮಾಡಲಾಗಿತ್ತು. ಆದರೆ ಈಗ ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯಗೊಳಿಸುತ್ತಿರುವುದು ದುರಾದೃಷ್ಟ ಎಂದು ಹೇಳಿದ್ದಾರೆ.
ಮಂಗಳೂರು:ನಗರದ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಸ್ಪರ್ಧೆಯೊಂದನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸಮಸ್ಯೆ ಪೋಸ್ಟ್ ಮಾಡಿದವರಿಗೆ ಬಹುಮಾನ ಸಿಗಲಿದೆ. ಈ ಕುರಿತ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರ ವ್ಯಾಪ್ತಿಯಲ್ಲಿ ಸಮಸ್ಯೆ ಇರುವ ರಸ್ತೆ, ತೋಡು, ಒಳಚರಂಡಿ ಇತ್ಯಾದಿ ಯಾವುದೇ ಸಮಸ್ಯೆ ಇದ್ದರೂ ಅದರ ಬಗ್ಗೆ ಮೂರು ನಿಮಿಷಗಳ ವಿಡಿಯೊ ಮಾಡಿ, ನಿಮ್ಮ ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂನಲ್ಲಿ ಹಾಕಬೇಕು. ವೈಯಕ್ತಿಕವಾಗಿ ಪೋಸ್ಟ್ ಮಾಡಿದಾಗ, ಅದನ್ನು ವೈಯಕ್ತಿಕ ಸ್ಪರ್ಧೆ ಎಂದು ಪರಿಗಣಿಸಲಾಗುವುದು. ಊರಿನವರು, ಸಂಸ್ಥೆ, ಗುಂಪಿನವರು ಭಾಗವಹಿಸಿದಾಗ ಅದನ್ನು ಗುಂಪು ಸ್ಪರ್ಧೆಯಲ್ಲಿ ಪರಿಗಣಿಸಲಾಗುವುದು. ಯಾರ ಪೋಸ್ಟ್‌ಗೆ ಹೆಚ್ಚು ಲೈಕ್ ಬಂದಿದೆಯೋ ಅವರಿಗೆ ಈ ಎರಡು ಪ್ರಶಸ್ತಿ ನೀಡಲಾಗುವುದು. ಯಾವುದೇ ವ್ಯಕ್ತಿ ನಿಂದನೆ, ಜಾತಿನಿಂದನೆ ಮಾಡಬಾರದು ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಸ್ಪರ್ಧೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಿಗೆ ಸೀಮಿತವಾಗಿದೆ. ಒಂದು ವಾರದಲ್ಲಿ ಯಾರ ಪೋಸ್ಟ್‌ಗೆ ಹೆಚ್ಚು ಲೈಕ್ ಬಂದಿದೆ ಎಂಬುದನ್ನು ಪರಿಗಣಿಸಿ ಗುಂಪು ಸ್ಪರ್ಧೆಗೆ ಪ್ರಥಮ 10 ಸಾವಿರ, ದ್ವಿತೀಯ…
ಪುತ್ತೂರು: ಪುತ್ತೂರು ದರ್ಬೆ ಸಮೀಪ ಕಾನಾವು ಕಟ್ಟಡದ ಮುಂಭಾಗದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಜು.14 ರ ಮಧ್ಯಾಹ್ನ ನಡೆದಿದೆ. ಘಟನಾ ಸ್ಥಳದಲ್ಲಿದ್ದ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ಕಾರಿನ ಬ್ಯಾಟರಿಯಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ಈ ಬೆಂಕಿ ಹತ್ತಲು ಕಾರಣ ಎಂದು ಹೇಳಲಾಗುತ್ತಿದೆ.
ಪೆರ್ನೆ: ಭಾರೀ ಗಾಳಿಗೆ ಬೃಹತ್ ಗಾತ್ರದ ಎರಡು ಮರಗಳು ಧರೆಗುರುಳಿದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ದೋರ್ಮೆ ಎಂಬಲ್ಲಿ ನಡೆದಿದೆ. ಬೃಹತ್ ಗಾತ್ರದ ಎರಡು ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಈ ಹಿನ್ನೆಲೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು, ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ. ಮರ ಬಿದ್ದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ವಿದ್ಯುತ್ ಕಂಬಗಳು ಸಹ ಧರೆಗುರುಳಿವೆ. ಸ್ಥಳೀಯರು ಮರ ತೆರವು ಗೊಳಿಸಿದ್ದಾರೆ.
ಉಡುಪಿ: ಆಟವಾಡಲೆಂದು ತೆರಳಿದ್ದ 5 ವರ್ಷದ ಮಗು ನೀರಿಗೆ ಬಿದ್ದು ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ತೆಂಕಬೆಟ್ಟು ಎಂಬಲ್ಲಿ ಸಂಭವಿಸಿದೆ. ಲಾರೆನ್ ಲೂವಿಸ್ ಮೃತ ಬಾಲಕ. ಈತ ಉಪ್ಪೂರು ನಿವಾಸಿ ನೋರ್ಮನ್ ಮತ್ತು ಸಿಲ್ವಿಯ ಎಂಬವರ ಪುತ್ರನಾಗಿದ್ದಾನೆ. ಇವರು ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು. ಮಗು ,ಮನೆಯ ಪಕ್ಕ ಆಟವಾಡುತ್ತಿದ್ದಾಗ ಅಕಸ್ಮಾತ್ತಾಗಿ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದೆ.ಬ್ರಹ್ಮಾವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು;ಹ್ಯಾರಿಸ್ ಎಂಬವರಿಗೆ ಸೇರಿದ 17 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ವಶಪಡಿಸಿಕೊಂಡ ಇ.ಡಿ. ಅಧಿಕಾರಿಗಳು ಮಂಗಳೂರು; ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 ರ ಅಡಿಯಲ್ಲಿ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ. ವಶಪಡಿಸಿಕೊಂಡ ಆಸ್ತಿಗಳಲ್ಲಿ ಮಂಗಳೂರಿನಲ್ಲಿರುವ ಎರಡು ವಸತಿ ಮನೆಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಸೇರಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಧಿಕಾರಿಗಳು ಫೆಮಾ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಮಾಡಿದ್ದಾರೆ. ಮಂಗಳೂರಿನ ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಹ್ಯಾರಿಸ್ ಅವರು ನಿಬಂಧನೆಗಳನ್ನು ಉಲ್ಲಂಘಿಸಿ ಸ್ಥಿರ ಆಸ್ತಿ, ವ್ಯಾಪಾರ ಘಟಕಗಳನ್ನು ಸಂಪಾದಿಸಿದ್ದಾರೆ ಮತ್ತು ಭಾರತದ ಹೊರಗೆ ವಿದೇಶೀ ವಿನಿಮಯ ವಹಿವಾಟು ನಡೆಸಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಇದೀಗ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಸ್ಥೆ ಹೇಳಿರುವ ಬಗ್ಗೆ ವರದಿಯಾಗಿದೆ.
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸೇತುವೆ ಬಳಿ ಕಾರೊಂದರ ಮೇಲೆ ಮರ ಬಿದ್ದು ಕಾರಿನಲ್ಲಿದ್ದವರು ಅಪಾಯದಿಂದ ಪಾರಾದ ಘಟನೆ ನಡೆದಿದೆ. ಜುಲೈ 13ರಂದು ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಚಲಿಸುತ್ತಿದ್ದ ಕಾರಿನ ಮೇಲೆ ಮರ ಮುರಿದು ಬಿದ್ದಿದೆ. ಕಾರು ಭಾಗಶಃ ಜಖಂಗೊಂಡಿದ್ದು ಕಾರಿನಲ್ಲಿದ್ದ ಮಗು ಸಹಿತ, ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಆತೂರು ನಿವಾಸಿ ಆಸಿಫ್ ಎಂಬುವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ಆಸಿಫ್‌ರವರು ಕುಂಬ್ರಕ್ಕೆ ಬಂದು ತಿರುಗಿ ಪುತ್ತೂರಿಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಕಾರಿನಲ್ಲಿ ಆಸಿಫ್‌ರವರ ಪತ್ನಿ, ಅತ್ತೆ, ನಾದಿನಿ ಹಾಗೂ ಅವರ 1.5 ವರ್ಷದ ಮಗು ಪ್ರಯಾಣಿಸುತ್ತಿದ್ದರೆ ಎನ್ನಲಾಗಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ವರದಿಯಾಗಿದೆ.










