Author: main-admin

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳವಾದ ಕಮರಿಗೆ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ ಅಂಚಿ ಕಟ್ಟೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಜಾರಿಗೆ ಬೈಲು ನಿವಾಸಿಗಳಾದ ಕಾರಿನ ಚಾಲಕ ಸಾಹಿಕ್, ಪ್ರಯಾಣಿಕರಾದ ಶಾಹಿನಾ, ಪೌಜಿಯಾ, ಸೌದ ಮತ್ತು 6 ತಿಂಗಳ ಮಗು ಪವಾಡಸದೃಶವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿರುವ ಕಮರಿಗೆ ತಲೆಕೆಳಗಾಗಿ ಕಾರು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 6 ತಿಂಗಳ ಮಗು ಸಹಿತ ಐದು ಮಂದಿ ಪ್ರಯಾಣಿಕರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡ ಇವರು ಬಂಟ್ವಾಳ ಸರಕಾರಿ ಆಸ್ಪತ್ರೆಯ ಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ಸಂಬಂಧಿಕರೊರ್ವರು ಹುಷಾರಿಲ್ಲದ ಕಾರಣಕ್ಕಾಗಿ ದಾಖಲಾಗಿದ್ದು ಅವರ ಯೋಗ ಕ್ಷೇಮ ವಿಚಾರಿಸುವ ಸಲುವಾಗಿ ತೆರಳುವ ವೇಳೆ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಹಲವಾರು ತಿರುವುಗಳನ್ನು ಹೊಂದಿದ್ದು, ಕಳೆದ ಕೆಲ…

Read More

ಕರ್ನಾಟಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಹಿಜಾಬ್‌ ವಿವಾದಕ್ಕೆ ಮತ್ತೆ ಮರುಜೀವ ಬಂದಿದೆ. ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯ ಅಡಿಯಲ್ಲಿ ಬರುವುದಿಲ್ಲ ಎಂದು ಮಾರ್ಚ್‌ 15ರಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠದ ಮುಂದೆ ವಕೀಲ ಪ್ರಶಾಂತ್ ಭೂಷಣ್ ಈ ವಿಚಾರವನ್ನು ಪ್ರಸ್ತಾಪಿಸಿದ್ರು. ಮುಂದಿನ ವಾರ ಸೂಕ್ತ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆ ನಡೆಸಲು ಸಮ್ಮತಿಸಲಾಯ್ತು. ಏನಿದು ಹಿಜಾಬ್‌ ವಿವಾದ ? 2022 ರ ಜನವರಿಯಲ್ಲಿ ಉಡುಪಿಯ ಶಾಲೆಯೊಂದು ತರಗತಿಯೊಳಗೆ ಹಿಜಾಬ್ ಧರಿಸದಂತೆ ನಿಷೇಧಿಸಿತ್ತು. ಈ ವಿಚಾರ ಕರ್ನಾಟಕದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಹಿಜಾಬ್‌ ನಿಷೇಧ ವಿಚಾರವನ್ನು ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಫೆಬ್ರವರಿ 25 ರಂದು ಪ್ರಕರಣದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ನಂತರ ಹಿಜಾಬ್…

Read More

ಬೈಂದೂರು: ಬೈಂದೂರು ತಾಲೂಕಿನ ಒತ್ತಿನಣೆ ಕಾಡಲ್ಲಿ ಕಾರು ಮತ್ತು ವ್ಯಕ್ತಿಯ ಶವವೊಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಟ್ಟು ಕರಕಲಾದ ಕಾರಿನಲ್ಲಿ ಓರ್ವ ವ್ಯಕ್ತಿಯ ಅಸ್ಥಿಪಂಜರ ಕಾಣಿಸುತ್ತಿದ್ದು ಬೈಂದೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ಮತ್ತು ಪಿ.ಎಸ್.ಐ ಪವನ್ ನಾಯಕ್ ತಂಡ ಆಗಮಿಸಿದ್ದು ಪ್ರಾಥಮಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ಈ ಕಾರು ಸುಟ್ಟು ಹೋಗಿ ದಿನಗಳೇ ಕಳೆದಿದ್ದು ಇದೊಂದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು: ನಗರದ ಹೊರವಲಯದ ಪಾವಂಜೆಯಲ್ಲಿರುವ ನಂದಿನಿ ನದಿಗೆ ಹಾರಿದ ಅಂಚೆ ನೌಕರ ನಾಪತ್ತೆಯಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮಂಡ್ಯ ಮೂಲದ ಪ್ರಸ್ತುತ ಮಂಗಳೂರಿನ ಅಂಚೆ ಕಚೇರಿಯಲ್ಲಿ ಉದ್ಯೋಗಿಯಾಗಿರುವ ರಾಕೇಶ್ ಗೌಡ ನದಿಗೆ ಹಾರಿದವರು. ರಾಕೇಶ್ ಗೌಡ ನದಿಗೆ ಹಾರುವ ಮುನ್ನ ತನ್ನ ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ಬೈಕ್ ನಲ್ಲಿ ಇಟ್ಟಿದ್ದಾರೆ. ಅಲ್ಲದೆ ತಾನು ನದಿಗೆ ಹಾರುತ್ತಿರುವ ಕುರಿತು ಸಂಬಂಧಿಕರಿಗೆ ವಾಟ್ಸ್ಆ್ಯಪ್ ನಲ್ಲಿ ಮಾಹಿತಿ ರವಾನಿಸಿದ್ದಾರೆ. ಅಲ್ಲದೆ ನದಿಯಿರುವ ಪ್ರದೇಶದ ಲೊಕೇಶನ್ ಕೂಡಾ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮುಲ್ಕಿ ಮತ್ತು ಸುರತ್ಕಲ್ ವ್ಯಾಪ್ತಿಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ರಾಕೇಶ್ ಗೌಡ ಅವರ ಮಾವ ಅಬಕಾರಿ ಇಲಾಖೆಯ ಡಿವೈಎಸ್ಪಿ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅಬಕಾರಿ ಡಿವೈಎಸ್ಪಿಯವರ ಸೂಚನೆಯಂತೆ ಅಬಕಾರಿ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ ಎನ್ನಲಾಗಿದೆ.

Read More

ಮಂಗಳೂರು: ಭಾರೀ ಮಳೆಯಿಂದಾಗಿರುವ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ನೆಲಸಮವಾಗಿದೆ. ಹರಿಹರ ಪಲ್ಲತಡ್ಕ ಎಂಬಲ್ಲಿ ಮನೆ ಸಂಪೂರ್ಣ ನೆಲಸಮವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಮೂಡಿದೆ. ಬಿರುಕು ಬಿಟ್ಟಿದ್ದ ಗೋಡೆ ದುರಸ್ತಿ ಕೆಲಸ ಮಾಡಲಾಗಿದ್ದು, ಜುಲೈ 18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ಕಷ್ಟಪಟ್ಟು ಕಟ್ಟಿದ್ದ ಮನೆ ಗೃಹಪ್ರವೇಶಕ್ಕೆ ಮೊದಲೇ ನೆಲಸಮವಾಗಿದ್ದರಿಂದ ಮನೆಯವರು ಕಂಗಾಲಾಗಿದ್ದಾರೆ.

Read More

ಪುತ್ತೂರು;ಮರದ ಕೊಂಬೆ ಕಡಿಯುವ ವೇಳೆ ಅವಘಡ ಸಂಭವಿಸಿ ವಿದ್ಯುತ್ ಶಾಕ್ ಹೊಡೆದು ಮೆಸ್ಕಾಂ ಪವರ್‌ಮ್ಯಾನ್ ಮೃತಪಟ್ಟ ಘಟನೆ ಕುಂಬ್ರ ಸಮೀಪದ ಪರ್ಪುಂಜದಲ್ಲಿ ನಡೆದಿದೆ. ಕುಂಬ್ರ ಮೆಸ್ಕಾಂ ಶಾಖೆಯ ಪವರ್‌ಮ್ಯಾನ್ ಬಸವರಾಜ್ (26) ಮೃತಪಟ್ಟವರು. ಇವರು ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು ಕೆಲವು ಸಮಯಗಳಿಂದ ಮೆಸ್ಕಾಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

Read More

ಶಿವಮೊಗ್ಗ: ಗುಡ್ಡ ಕುಸಿದು ಬಿದ್ದು ಬಂದ್ ಆಗಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಸ್ತೆಯಲ್ಲಿ ಇಂದಿನಿಂದ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದು ಬಂದ್ ಆಗಿತ್ತು. ರಸ್ತೆಯ ಮೇಲೆ ಗುಡ್ಡ ಕುಸಿದ ಮಣ್ಣು ಹಾಗೂ ಮರಗಳು ಬಿದ್ದಿದ್ದವು. ಇದೀಗ ತೆರವು ಕಾರ್ಯಾಚರಣೆ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಆಗುಂಬೆ ಘಾಟಿಯ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಜುಲೈ 30 ರವರೆಗೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಶಿವಮೊಗ್ಗ – ಉಡುಪಿ – ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿಯ 11 ನೇ ತಿರುವಿನಲ್ಲಿ ಗುಡ್ಡ ಕುಸಿದಿತ್ತು.

Read More

ಕಾಣಿಯೂರು: ಕಾಣಿಯೂರು ಸಮೀಪದ ಕಾಣಿಯೂರು ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ. ಮೃತದೇಹ ಎಂದು ಇನ್ನೂ ಗುರುತಿಸಲಾಗಿಲ್ಲ. ಓರ್ವನ  ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದ್ದು, ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಬ್ಬನ ಮೃತದೇಹವು ೫೦ ಮೀಟರ್ ದೂರದ ಅಂತರದಲ್ಲಿ ಪತ್ತೆಯಾಗಿದೆ.ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಗೌರಿ ಹೊಳೆಗೆ ಕಾರೊಂದು ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಜು. 9ರಂದು ತಡರಾತ್ರಿ ನಡೆದಿತ್ತು. ಬಂಟ್ವಾಳ ತಾಲೂಕಿನ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್‌ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್‌ (21) ಕಾರಿನಲ್ಲಿದ್ದರು ಎನ್ನಲಾಗಿದ್ದು, ಅವರು ನಾಪತ್ತೆಯಾಗಿದ್ದರು.

Read More

ಪುತ್ತೂರು; ಕಾಣಿಯೂರು ಬೈತಡ್ಕ ಮಸೀದಿ ಬಳಿಯ ಸೇತುವೆಯಿಂದ ಕೆಳಗೆ ಕಾರೊಂದು ಬಿದ್ದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬೈತಡ್ಕದಿಂದ ಸುಮಾರು 200 ಮೀಟರ್‌ ದೂರದಲ್ಲಿ ಹೊಳೆಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಮರದ ದಿಮ್ಮಿಯಲ್ಲಿ ಮೃತದೇಹ ಸಿಲುಕಿಕೊಂಡಿದೆ. ಅಧಿಕಾರಿಗಳು, ಇಲಾಖೆಯ ಸಿಬಂದಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಜು.9ರಂದು ರಾತ್ರಿ ಹೊಳೆಯಲ್ಲಿ ವಿಟ್ಲ ಮೂಲದ ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ. ‌ಪ್ರಕರಣ ಹಲವು ಸಂಶಯಕ್ಕೆ ಕಾರಣವಾಗಿತ್ತು.

Read More

ಸುಳ್ಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ಅವರು ಇಂದು ಜು.12 ರಿಂದ ದ.ಕ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಇಂದು ಮಧ್ಯಾಹ್ನ 2.30 ಕ್ಕೆ ಕೊಡಗು ಜಿಲ್ಲೆಯ ಮಡಿಕೇರಿಯಿಂದ ನಿರ್ಗಮಿಸಿ, ರಸ್ತೆ ಮೂಲಕ ಮಾರ್ಗವಾಗಿ ಸುಳ್ಯ ತಾಲೂಕಿಗೆ ಆಗಮಿಸಿ ಮಳೆಯಿಂದ ಹಾನಿಗೊಳಗಾದ ಸುಳ್ಯದ ಗಡಿ ಪ್ರದೇಶ ಸಂಪಾಜೆಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ವತಿಯಿಂದ ಸ್ವಾಗತ ನೀಡಲಿದ್ದು, ಭೂಕಂಪನದ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ನೀಡಲಿದ್ದಾರೆ. ನಂತರದಲ್ಲಿ ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಸಂಗಮ ಸ್ಥಳದ ನದಿ ಮಟ್ಟದ ವೀಕ್ಷಣೆ ಮತ್ತು ಬೆಳೆಹಾನಿ ಪರಿಶೀಲನೆ ಮಾಡಲಿದ್ದಾರೆ.ನಂತರ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಭೂಕುಸಿತದಲ್ಲಿ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ಚೆಕ್ ವಿತರಣೆ ನಂತರ ಉಳ್ಳಾಲ ತಾಲೂಕಿನ ಕಡಲ್ಕೋರೆತದ ಪ್ರದೇಶಗಳಿಗೆ ಭೇಟಿ,ನಂತರ ಮುಲ್ಕಿ ತಾಲೂಕಿನ ಬೆಳೆಹಾನಿ ಪ್ರದೇಶ ಹಾಗೂ ನದಿ ಪ್ರವಾಹ ಸ್ಥಳಗಳಿಗೆ ಭೇಟಿ ನೀಡುವರು. ರಾತ್ರಿ 7.30 ಕ್ಕೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಉಡುಪಿಗೆ ತೆರಳುವರು .ಜು .13 ರ ಬುಧವಾರ ಸಂಜೆ…

Read More