Author: main-admin

ಕಾರ್ಕಳ: ಬೋಳ ಶ್ರೀ ಮೃತ್ಯುಂಜಯ ದೇವಸ್ಥಾನದಿಂದ ಪಂಚಲೋಹದ ಬಲಿ ಮೂರ್ತಿ, ಕಾಣಿಕೆ ಹುಂಡಿ, ಸಿಸಿ ಕ್ಯಾಮರದ ಡಿವಿಆರ್ ಕಳವಾಗಿದೆ. ಭಾನುವಾರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಬಲಿ ಮೂರ್ತಿ, ಹುಂಡಿಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಕಳ್ಳತನವಾಗಿದೆ. ಸೋಮವಾರ ಬೆಳಗ್ಗೆ ಆರು ಗಂಟೆಗೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂಬದಿ ಬಾಗಿಲು ಒಡೆದು ಒಳ ನುಗ್ಗಿರುವ ಕಳ್ಳರು ಪಂಚಲೋಹದ ಬಲಿಮೂರ್ತಿ ಕಳವು ಮಾಡಿದ್ದಾರೆ. ಅಲ್ಲದೆ ಕಾಣಿಕೆ ಡಬ್ಬಿ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದಾರೆ.

Read More

ಕಾಣಿಯೂರು;ಬೈತಡ್ಕ ಮಸೀದಿಯ ಬಳಿಯಿರುವ ಕಿರುಸೇತುವೆಯಿಂದ ಕಾರೊಂದು ಕೆಳಗೆ ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಕುರಿತಂತೆ ಇದೀಗ ಮತ್ತೊಂದು ಮಾಹಿ‌ತಿ‌ ಲ‌ಭ್ಯವಾಗಿದೆ. ನಾಪತ್ತೆಯಾಗಿರುವ ಯುವಕರನ್ನು ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕದ ಧನುಷ್ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್ (21) ಎಂದು ಗುರುತಿಸಲಾಗಿದೆ. ಸವಣೂರಿನಲ್ಲಿ ಪೊಲೀಸ್ ಚೆಕ್ ಪೋಸ್ಟ್‌ನಲ್ಲಿ ರಾತ್ರಿ 11.53 ಕ್ಕೆ ತಪಾಸಣೆಗೆ ಒಳಪಟ್ಟು ಮುಂದೆ ಸಾಗಿ 12. 02 ನಿಮಿಷಕ್ಕೆ ಕಾರು ಸೇತುವೆಗೆ ಢಿಕ್ಕಿಯಾಗಿ ತಡೆಗೋಡೆ ಮುರಿದು ಕೆಳಕ್ಕೆ ಬಿದ್ದಿದೆ. ನಾಪತ್ತೆಯಾಗಿರುವ ಪೈಕಿ ವಿಟ್ಲ ಕನ್ಯಾನ ನಿವಾಸಿ ಧನುಷ್ ಕುಂಡಡ್ಕ ನಿವಾಸಿ ಧನುಷ್ ಅವರ ತಾಯಿಗೆ ಕರೆ ಮಾಡಿ ನಮ್ಮ ಕಾರು ಹಳೆಯಂಗಡಿಯಲ್ಲಿ ಲಾರಿಗೆ ಢಿಕ್ಕಿಯಾಗಿದೆ, ನಾವು ಬದುಕಿ ಉಳಿದಿರುವುದೇ ಹೆಚ್ಚು, ಏನೂ ತೊಂದರೆಯಿಲ್ಲ, ನಾವು ಮನೆಗೆ ಮುಟ್ಟುವಾಗ ಬೆಳಿಗ್ಗೆ ಆಗಬಹುದು ಎಂದು ಹೇಳಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಧನುಷ್ ತಾಯಿಗೆ ಕರೆ ಮಾಡಿರುವುದು 11.52 ಕ್ಕೆ ಎಂದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಾರು ಹೊಳೆಗೆ ಬಿದ್ದಿರುವುದು…

Read More

ಉಡುಪಿ: ಬ್ರಹ್ಮಾವರದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ನ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸವಾರ ಮೃತ ಪಟ್ಟಿದ್ದಾನೆ. ಈ ದುರ್ಘಟನೆ ರಾಷ್ಟ್ರೀಯ ಹೆದ್ದಾರಿಯ ಹೊಟೇಲ್ ಮಣಿಪಾಲ್ ಇನ್ ಬಳಿ ಸಂಭವಿಸಿದೆ. ಮೊದಲು ರಸ್ತೆಯ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದಿದೆ. ಪರಿಣಾಮ ಬೈಕ್‌ ಸವಾರ ವಿಜಯಪುರದ ನಿವಾಸಿ ಸುನಿಲ್ (24) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಹಸವಾರ ಬಾಗಲಕೋಟೆ ನಿವಾಸಿ ಮಂಜುನಾಥ್‌ ಗಾಯಗೊಂಡಿದ್ದಾರೆ. ಉಡುಪಿ ನಗರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಭೋಪಾಲ್: ಸರಕಾರಿ ಆಂಬ್ಯುಲೆನ್ಸ್ ಸಿಗದ ಕಾರಣ ಎಂಟು ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ಕಿರಿಯ ಸಹೋದರನ ಶವವನ್ನು ಮಡಿಲ ಮೇಲೆ ಮಲಗಿಸಿಕೊಂಡು ರಸ್ತೆ ಬದಿಯಲ್ಲಿ ಕುಳಿತುಕೊಂಡಿದ್ದ ಮನಕಲಕುವ ದೃಶ್ಯ ಮಧ್ಯಪ್ರದೇಶದ ಮೊರೆನಾದಲ್ಲಿ ಕಂಡು ಬಂದಿದೆ. ಪೂಜಾರಾಮ್ ಜಾತವ್ ಅವರ ಎರಡು ವರ್ಷದ ಮಗು ರಾಜನ ಆರೋಗ್ಯ ಹದಗೆಟ್ಟಿತು. ಆರಂಭದಲ್ಲಿ ಮನೆಯಲ್ಲಿಯೇ ಮಗನನ್ನು ಗುಣಪಡಿಸಲು ಪೂಜಾರಾಮ್ ಜಾತವ್ ಪ್ರಯತ್ನಿಸಿದರು. ಆದರೆ ಮಗುವಿಗೆ ಹೊಟ್ಟೆ ನೋವು ತೀವ್ರವಾಗಿದ್ದರಿಂದ, ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೇ ವೇಳೆ ಪೂಜಾರಾಮ್ ಜಾತವ್ ಅವರು ಹಿರಿಯ ಮಗ ಗುಲ್ಶನ್ ಕೂಡ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ನಂತರ ಮಗುವಿನ ಶವವನ್ನು ಗ್ರಾಮಕ್ಕೆ ಕೊಂಡೊಯ್ಯಲು ಪೂಜಾರಾಮ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ನೀಡಲು ಆಸ್ಪತ್ರೆ ಅಧಿಕಾರಿಗಳು ತಿರಸ್ಕರಿಸದ್ದಾರೆ. ನಂತರ ಆಸ್ಪತ್ರೆಯಿಂದ ಹೊರಗೆ ಮಗುವಿನ ಶವ ಎತ್ತುಕೊಂಡು ಬಂದ ಪೂಜಾರಾಮ್ ಜಾತವ್ ಅವರು, ವಾಹನಗಳಿಗಾಗಿ…

Read More

ಅಲಪ್ಪುಝ:ಕೇರಳದ ಅಲಪ್ಪುಝದ ಅಲುವಾದಲ್ಲಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟ ಘಟನೆ ನಡೆದಿದೆ. ಫೌಜಿಯಾ ಹಕೀಂ (21) ಮೃತ ವಿದ್ಯಾರ್ಥಿನಿ. ಮಂಗಳೂರಿನಿಂದ ರೈಲಿನಲ್ಲಿ ಅಲುವಾ ತಲುಪಿದ ಫೌಜಿಯಾ ಸ್ಕೂಟರ್ ನಲ್ಲಿ ಮನೆಯತ್ತ ಬರುವಾಗ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನಕ್ಕೆ ಸೈಡ್ ನೀಡುವಾಗ, ಸ್ಕೂಟರ್ ನೀರಿಗೆ ಇಳಿದು ನಿಯಂತ್ರಣ ಕಳೆದುಕೊಂಡು ಬಿದ್ದಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ‌.

Read More

ಬೆಳ್ಮಣ್: ಇನ್ನೋವಾ ಕಾರು-ಸ್ಕೂಟರ್‌ ಢಿಕ್ಕಿ ಹೊಡೆದ ಪರಿಣಾಮ ಸಹೋದರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಂದಳಿಕೆ ಮಾವಿನಕಟ್ಟೆಯ ಬಳಿ ನಡೆದಿದೆ. ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್ ಕುಲಾಲ್ ಮೃತ ದುರ್ದೈವಿಗಳು. ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾಸನ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಭೂಕುಸಿತವುಂಟಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತವುಂಟಾಗಿದ್ದು, ಭಾರಿ ಪ್ರಮಾಣದಲ್ಲಿ ಮಣ್ಣು, ಬೃಹತ್ ಕಲ್ಲು ಬಂಡೆಗಳು ರಸ್ತೆಯ ಮೇಲೆ ಬಿದ್ದಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ಭೂಕುಸಿತವಾಗಿ ಒಂದು ತಿಂಗಳ ಕಾಲ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ಮತ್ತದೇ ಜಾಗದಲ್ಲಿ ಭೂಕುಸಿತವಾಗಿದ್ದು, ಮತ್ತಷ್ಟು ಭೂಕುಸಿತವುಂಟಾಗದಂತೆ ತಡೆಯಲು ಹೆದ್ದಾರಿ ನಿರ್ಮಾಣ ಕಂಪನಿ ಮರಳು ಚೀಲ ಜೋಡಿಸುತ್ತಿದೆ. ಮತ್ತೆ ಭೂಕುಸಿತವುಂಟಾದರೆ ಸಂಚಾರ ಸಂಪೂರ್ಣ ಬಂದ್ ಅಗುವ ಆತಂಕ ಎದುರಾಗಿದೆ.

Read More

ಮಂಗಳೂರು: ಸೇತುವೆಗೆ ಡಿಕ್ಕಿ ಹೊಡೆದ ಕಾರೊಂದು ಹೊಳೆಗೆ ಉರುಳಿದ ಘಟನೆ ತಡರಾತ್ರಿ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ನಾಪತ್ತೆಯಾಗಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ನುಜ್ಜುಗುಜ್ಜಾದ ಸ್ಥಿತಿಯಲ್ಲಿ ಹೊಳೆಯಿಂದ ಕಾರನ್ನು ಹೊರತೆಗೆಯಲಾಗಿದೆ, ಆದರೆ ಅದರಲ್ಲಿದ್ದ ಇಬ್ಬರು ಮಾತ್ರ ಪತ್ತೆಯಾಗಿಲ್ಲ. ಇಬ್ಬರೂ ಏನಾದರೂ ಎಂಬುದೇ ತಿಳಿಯುತ್ತಿಲ್ಲ. ಘಟನಾ ಸ್ಥಳದಿಂದ ಸುಮಾರು500 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದೆ, ಆದರೆ ಕಾರಿನಲ್ಲಿದ್ದ ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಇಬ್ಬರೂ ಸೋದರಸಂಬಂಧಿ ಎನ್ನಲಾಗಿದೆ. ಸದ್ಯ ಇಬ್ಬರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಿನ್ನೆ ರಾತ್ರಿ 12:05 ಗಂಟೆಯ ವೇಳೆಗೆ ಕಾಣಿಯೂರು ಸಮೀಪದ ಬೈತಡ್ಕದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ ಮಸೀದಿ ಸಿಸಿ ಕ್ಯಾಮರಾ ಚೆಕ್ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ.

Read More

ಸುಳ್ಯ : ಅತಿ ವೇಗವಾಗಿ ಬಂದ ಕಾರೊಂದು ಉಕ್ಕಿ ಹರಿಯುವ ಹೊಳೆಗೆ ಬಿದ್ದಿರುವ ಘಟನೆ ಕಳೆದ ರಾತ್ರಿ ನಡೆದಿದ್ದು ಸಿಸಿ ಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಸುಳ್ಯ ತಾಲೂಕಿನ ಮಂಜೇಶ್ವರ – ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪ ಈ ಘಟನೆ ನಡೆದಿದ್ದು, ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಅತಿ ವೇಗವಾಗಿ ಬಂದಿರುವ ಈ ಕಾರು ತಿರುವು ಪಡೆದುಕೊಳ್ಳದೆ ನೇರವಾಗಿ ಗೌರಿ ಹೊಳೆಗೆ ಬಿದ್ದಿದೆ. ಘಟನೆಯ ಸಿಸಿ ಟಿವಿ ದೃಶ್ಯವನ್ನು ವೀಕ್ಷಿಸಿದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದು ಕಾರು ಪತ್ತೆಯಾಗಿಲ್ಲ. ಕಾರಿನಲ್ಲಿ ಎಷ್ಟು ಜನರಿದ್ದರು. ಅವರಿಗೆ ಏನಾದರೂ ಅಪಾಯ ಸಂಭವಿಸಿದೆಯೋ ಎಂಬುದರ ಕುರಿತು ಈವರೆಗೂ ಯಾವುದೇ ಮಾಹಿತಿ ದೊರೆತಿಲ್ಲ.

Read More

ಶಿವಮೊಗ್ಗ: ಮಳೆಯ ಅರ್ಭಟಕ್ಕೆ ಆಗುಂಬೆ ಘಾಟಿಯ ಸೋಮೇಶ್ವರ ಕಡೆಯಿಂದ ಬರುವ ಮೂರನೇ ತಿರುವಿನಲ್ಲಿ ರಸ್ತೆಯ ಮೇಲೆ ಭಾನುವಾರ ನಸುಕಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ತೀರ್ಥಹಳ್ಳಿ- ಹೆಬ್ರಿ ನಡುವಿನ ರಾಷ್ಟ್ರೀಯ ಹೆದ್ದಾರಿ 169 ಎ ಸಂಪರ್ಕ ಕಡಿತಗೊಂಡಿದೆ. ಆಗುಂಬೆ ಹಾಗೂ ಸೋಮೇಶ್ವರ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳನ್ನು ಮರಳಿ ಕಳುಹಿಸಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದವರು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Read More