Author: main-admin

ಬೆಳ್ತಂಗಡಿ: ತೀವ್ರ ರಕ್ತದ ಒತ್ತಡದಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿಯೊಬ್ಬರು ಕೊನೆಯುಸಿರೆಳೆದ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸನ್ನ ಕಾಲೇಜಿನ ಫೈನಲ್ ಇಯರ್ ಐಟಿಐ ವಿದ್ಯಾರ್ಥಿ ಕಾಲೇಜ್ ವಿದ್ಯಾರ್ಥಿ ಸುಮಂತ್ (20) ಮೃತಪಟ್ಟ ದುರ್ದೈವಿ. ಬಾರ್ಯ ಗ್ರಾಮದ ಗಿರಿಗುಡ್ಡೆ ಸುಶೀಲ ಎಂಬುವವರ ಸುಮಂತ ಮಡಿವಾಳ ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದಿದ್ದ ಸುಮಂತ್‌ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸುಮಂತ್ ಸಾವನ್ನಪ್ಪಿದ್ದಾರೆ.

Read More

 ಪುತ್ತೂರು : ಹೆಬ್ಬಾವೊಂದನ್ನು ಕೊಂದು ಅದನ್ನು ಪೆರ್ಲಂಪಾಡಿಯಲ್ಲಿರುವ ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ಅರಣ್ಯ ಇಲಾಖೆಯ ಸಿಬ್ಬಂದಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ತಾಲೂಕಿನ ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ (38) ಮತ್ತು ಜಯ(36) ಬಂಧಿತ ಆರೋಪಿಗಳು.ಅವರು ಮನೆಗೆ ಬಂದಿದ್ದ ಹೆಬ್ಬಾವನ್ನು ಕೊಂದು ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ಕಟ್ಟಿ ಹಾಕಿದ್ದರು. ಹೆಬ್ಬಾವನ್ನು ಕೊಲ್ಲುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಜಾಮೀನು ರಹಿತ ಅಪರಾಧವಾಗಿರುವ ಕಾರಣ ಪ್ರಕರಣ ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಇಲಾಖೆ ಸಿಬ್ಬಂದಿ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.ನ್ಯಾಯಾಲಯವು ಆರೋಪಿಗಳಿಗೆ ಜು.15 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಬೈಂದೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಚಲಿಸುತ್ತಿದ್ದ ಬಸ್‌ಗೆ ಕುಂದಾಪುರದಿಂದ ಭಟ್ಕಳ ಕಡೆಗೆ ಹೋಗುವ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಬೈಂದೂರು ಠಾಣೆ ಪಿ.ಎಸ್.ಐ ಪವನ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Read More

ಉಡುಪಿ: ಅಂಬಲಪಾಡಿ ಜಂಕ್ಷನ್‌ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಅಪಘಾತವೊಂದರಲ್ಲಿ ಸೈಂಟ್ ಸಿಸಿಲಿಯ ಹೈಸ್ಕೂಲು ವಿದ್ಯಾರ್ಥಿ ಆದಿತ್ಯ ಪಿ. ಶೆಟ್ಟಿಗಾರ್ ತೀವ್ರವಾಗಿ ಗಾಯಗೊಂಡಿದ್ದಾನೆ.ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ವಿಶು ಶೆಟ್ಟಿ ಅವರು ಸಾರ್ವಜನಿಕರ ನೆರವಿನಿಂದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭಿಸಿದೆ. ಘಟನೆಯ ವಿವರ: ಎಂದಿನಂತೆ ಸೈಕಲ್ ಮೂಲಕ ಶಾಲೆಗೆ ಹೊರಟಿದ್ದ ಆದಿತ್ಯನಿಗೆ ಅಂಬಲಪಾಡಿ ಜಂಕ್ಷನ್‌ನಲ್ಲಿ ಅತೀ ವೇಗದಿಂದ ಬಂದ ಬೊಲೆರೋ ಟೆಂಪೊ ಡಿಕ್ಕಿ ಹೊಡೆದಿದೆ. ಬಾಲಕ ತೀವ್ರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ತಕ್ಷಣ ಸಮೀಪದ ಹೈಟೆಕ್ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಅಲ್ಲಿನ ವೈದ್ಯರ ಶಿಫಾರಸ್ಸಿನಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಟೆಂಪೋ ಚಾಲಕನ ಅತೀ ವೇಗದ ಚಾಲನೆಯೇ ದುರ್ಘಟನೆಗೆ ಕಾರಣವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶು ಶೆಟ್ಟಿ ಅವರ ದೂರಿನ ಮೇರೆಗೆ ಪ್ರಕರಣ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಲ್ಲಡ್ಕ-ಕಾಂಞಂಗಾಡ್ ಅಂತಾರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್‌ಪೋಸ್ಟ್‌ ಬಳಿ ಗುಡ್ಡ ಕುಸಿತಗೊಂಡು ಕರ್ನಾಟಕ-ಕೇರಳ ನಡುವಿನ ಸಂಚಾರ ಮೊಟಕುಗೊಂಡಿದೆ.ಗುಡ್ಡ ಕುಸಿತದಿಂದಾಗಿ ರಸ್ತೆಗೆ ಅಪಾರ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಅಲ್ಲದೆ, ಬೈಕೊಂದು ಮಣ್ಣಿನಡಿ ಸಿಲುಕಿರುವ ಶಂಕೆಯೂ ವ್ಯಕ್ತವಾಗಿದೆ. ಗಿಡಗಂಟಿಗಳೂ ರಸ್ತೆಗೆ ಬಿದ್ದಿದೆ. ಮಣ್ಣು ರಸ್ತೆಗೆ ಕುಸಿದಿರುವುದರಿಂದ ಎರಡೂ ಕಡೆಯಿಂದ ಬರುವ ವಾಹನಗಳ ಸಂಚಾರಕ್ಕೆ ತೊಡಕಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ವಿಟ್ಲ ಮಾರ್ಗವಾಗಿ ಪೆರ್ಲ, ಬದಿಯಡ್ಕ, ಕಾಸರಗೋಡು ನಡುವೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.ವಿಟ್ಲ-ಸಾಲೆತ್ತೂರು-ಮುಡಿಪು ರಸ್ತೆಯ ಕುಡ್ತಮುಗೇರು ಬಳಿ ನದಿ ನೀರು ಪ್ರಮಾಣ ಜಾಸ್ತಿಯಾಗುತ್ತಿದ್ದು, ರಸ್ತೆಗೆ ನೀರು ಬಂದಲ್ಲಿ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ.

Read More

ಬಂಟ್ವಾಳ:ಯುವಕನೋರ್ವನನ್ನು ಆತನ ಸ್ನೇಹಿತರಿಬ್ಬರು ಸೇರಿಕೊಂಡ ಕತ್ತಿ ಯಿಂದ ಕಡಿದು ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ಮಧ್ಯ ರಾತ್ರಿ ವೇಳೆ ನಡೆದಿದೆ. ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29) ಕೊಲೆಯಾದ ಯುವಕ.ಅತನ ಸ್ನೇಹಿತ ನೌಫಾಲ್ ಸೇರಿ ಇಬ್ಬರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲ್ ಒಂದರ ಸಮೀಪದಲ್ಲಿ ರಾತ್ರಿ ಒಂದು ಗಂಟೆಯ ವೇಳೆ ಮಾತಿಗೆ ಮಾತು ಬೆಳೆದು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ ಘಟನಾ ಸ್ಥಳಕ್ಕೆ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್ ಹಾಗೂ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಮಳೆಯು ಬಿರುಸು ಪಡೆಯುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ನಿರಂತರ ಮಳೆಯಾಗುತ್ತಿದ್ದು, ಇಂದು ಬೆಳಗ್ಗೆಯೂ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ ಮುನ್ನೆಚ್ಚರಿಕಾ ದೃಷ್ಟಿಯಿಂದ ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು, ಡಿಪ್ಲೊಮಾ/ಐಟಿಐಗಳಿಗೆ ದ.ಕ.ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಇಂದು ಮಳೆಯ ತೀವ್ರತೆ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಕರಾವಳಿಯಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದೆ.

Read More

ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೊಲೀಸ್ ಉನ್ನತ ಅಧಿಕಾರಿಯ ಬಂಧನವಾಗಿದೆ. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ನೇಮಕಾತಿಯಲ್ಲಿ ಇದು ದೊಡ್ಡ ಬಂಧನವಾಗಿದೆ. ಎಡಿಜಿಪಿ ಅಮೃತ್ ಪೌಲ್ ಬರೋಬ್ಬರಿ-25 ಅಭ್ಯರ್ಥಿಗಳ ಜೊತೆಗೆ ಅಮೃತ್ ಪೌಲ್ ಡೀಲ್ ಮಾಡಿದ್ದರು. ತಲಾ 30 ಲಕ್ಷ ಹಣವನ್ನ ಅಮೃತ್ ಪೌಲ್ ಪಡೆದು, ಡಿವೈಎಸ್ಪಿ ಶಾಂತಕುಮಾರ್ ಅವರಿಂದ ಡೀಲ್ ಮಾಡಿಸುತ್ತಿದ್ದು,25 ಜನರ ಬಳಿ ಅಮೃತ್ ಪೌಲ್ ಒಟ್ಟು 5 ಕೋಟಿ ಡೀಲ್ ಮಾಡಿದ್ದರು. 545 ಪಿಎಸ್ ಐ ಹುದ್ದೆಗಳ ಡೀಲ್ ನಡೆದಾಗ ರಿಕ್ರ್ಯೂಟ್ ಮೆಂಟ್ ಎಡಿಜಿಯಾಗಿದ್ದ ಅಮೃತ್ ಪೌಲ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಡಿವೈ ಎಸ್ ಪಿ ಶಾಂತಕುಮಾರ್ ವಿಚಾರಣೆಯಲ್ಲಿ ಅಮೃತ್ ಪೌಲ್ ಹೆಸರು ಬಾಯ್ಬಿಟ್ಟಿದ್ದು, ಈಗ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ.

Read More

ಕಾಳಿ ಎನ್ನುವ ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪೋಸ್ಟರ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೌದು ಭಾರತೀಯ ಚಲನಚಿತ್ರ ನಿರ್ಮಾಪಕಿ, ಕವಯಿತ್ರಿ ಮತ್ತು ನಟಿ ಲೀನಾ ಮಣಿಮೇಕಲೈ ಅವರು ಬಿಡುಗಡೆ ಮಾಡಿದ ಹೊಸ ಪೋಸ್ಟರ್ ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ ಲೀನಾ ಮಣಿಮೇಕಲೈ ಅವರು ತಮ್ಮ ಡಾಕ್ಯುಮೆಂಟರಿಯ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟರ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಟ್ವಿಟರ್ ನಲ್ಲಿ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ.ಇನ್ನು ಈ ಪೋಸ್ಟರ್ ನಲ್ಲಿ ಹಿಂದೂ ದೇವತೆ ಕಾಳಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಲೀನಾ ಅವರು ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾಳಿಯ ವೇಷದಲ್ಲಿರುವ ಕಲಾವಿದೆಯಾ ಒಂದು ಕೈಯಲ್ಲಿ ತ್ರಿಶೂಲ ಮತ್ತು ಒಂದು ಕೈಯಲ್ಲಿ LGBTQ ಸಮುದಾಯದ ಧ್ವಜವನ್ನು ಹಿಡಿದಿರೋದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ನಿರ್ಮಾಪಕಿ ಲೀನಾ…

Read More

ಮಂಗಳೂರು:ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಕೂಳೂರಿನ ನದಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಕಾವೂರಿನ ಚೇತನ್ ಕುಮಾರ್(28) ಎಂದು ಗುರುತಿಸಲಾಗಿದೆ. ಚೇತನ್ ಕುಮಾರ್ ಎರಡು ದಿನಗಳ ಹಿಂದೆ ನಾಪತ್ತೆಯಗಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಕೂಳೂರು ಸೇತುವೆಯಲ್ಲಿ ಶವವೊಂದು ಪತ್ತೆಯಾಗಿದ್ದು, ಶವವನ್ನು ನಾಪತ್ತೆಯಾಗಿದ್ದ ಚೇತನ್ ಎಂದು ಗುರುತಿಸಲಾಗಿದೆ.

Read More