Author: main-admin

ಉಪ್ಪಿನಂಗಡಿ; ಪೋಕ್ಸೋ ಪ್ರಕರಣದ ಆರೋಪಿ ಕಲ್ಲೇರಿ ನಿವಾಸಿ ಮೈಸೂರಿನಲ್ಲಿ ಅರೆಸ್ಟ್ ಉಪ್ಪಿನಂಗಡಿ; ಫೋಕ್ಸೋ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಲ್ಲೇರಿ ಜನತಾ ಕಾಲೋನಿ ನಿವಾಸಿ ಮುನಾಸಿರ್(21) ಎಂದು ಗುರುತಿಸಲಾಗಿದೆ. ಮುನಾಸಿರ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

Read More

ಮಂಗಳೂರು: ಮಂಗಳೂರಿನ ಉಚ್ಚಿಲ ಬಟ್ಟಪಾಡಿ ಬಳಿ ಅರಬ್ಬಿ ಸಮುದ್ರದಲ್ಲಿ ವಿದೇಶಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ತೈಲ ಸೋರಿಕೆ ಆತಂಕ ಎದುರಾಗಿದೆ. ಸಿರಿಯಾದ ಎಂಬಿ ಪ್ರಿನ್ಸೆಸ್ ಮಿರಲ್ ವ್ಯಾಪಾರಿ ಹಡಗು ಚೀನಾದಿಂದ ಲೆಬನಾನ್ ಗೆ ಸ್ಟೀಲ್ ಕಾಯಿಲ್ ಸಾಗಿಸುತ್ತಿತ್ತು. ಸುಮಾರು 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದಾಗಿ ಅರಬ್ಬಿ ಸಮುದ್ರದಲ್ಲಿ ಜೂನ್ 23ರಂದು ಮುಳುಗಿದೆ. ಇಂಡಿಯನ್ ಕೋಸ್ಟ್ ಗಾರ್ಡ್ ನಿಂದ 15 ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ. ಆದರೆ ಇದೀಗ ಹಡಗಿನಿಂದ ತೈಲ ಸೋರಿಕೆಯಾಗುವ ಆತಂಕ ಎದುರಾಗಿದೆ. ಇದರಿಂದ ಮತ್ಸ್ಯ ಸಂಕುಲ ನಾಶವಾಗುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೋಸ್ಟ್ ಗಾರ್ಡ್ ಕಟ್ಟೆಚ್ಚರ ಘೋಷಣೆ ಮಾಡಿದೆ. ಮತ್ತೊಂದೆಡೆ ತೈಲ ಸೋರಿಕೆಯಾದರೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸಭೆ ನಡೆಸಲಾಗುತ್ತಿದೆ.

Read More

ವಾರಣಾಸಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಗೆ ಪಕ್ಷಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಇದಾದ ಬಳಿಕ ವಾರಣಾಸಿಯ ಪೊಲೀಸ್ ಲೈನ್ ನಲ್ಲಿ ಸಿಎಂ ಯೋಗಿ ಇದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಲಾಗಿದೆ. ಹೆಲಿಕಾಪ್ಟರ್ ಪೊಲೀಸ್ ಲೈನ್‌ ನಿಂದ ಸುಲ್ತಾನ್‌ ಪುರಕ್ಕೆ ಟೇಕ್ ಆಫ್ ಆಗಿತ್ತು, ಆದರೆ ಪಕ್ಷಿ ಡಿಕ್ಕಿ ಹೊಡೆದ ನಂತರ, ಪೊಲೀಸ್ ಲೈನ್‌ ನಲ್ಲಿಯೇ ತುರ್ತು ಲ್ಯಾಂಡಿಂಗ್ ಮಾಡಲಾಯಿತು. ಹೆಲಿಕಾಪ್ಟರ್‌ ನ ತಾಂತ್ರಿಕ ಪರೀಕ್ಷೆ ನಡೆಸಲಾಗಿದೆ. ವಿಶೇಷ ವಿಮಾನ ಲಕ್ನೋದಿಂದ ವಾರಣಾಸಿಗೆ ತಲುಪಿದ ನಂತರ ಸಿಎಂ ಯೋಗಿ ಪ್ರಯಾಣ ಮುಂದುವರೆಸಿದ್ದಾರೆ. ಸಿಎಂ ಯೋಗಿ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಆದ ನಂತರ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

Read More

ಉಳ್ಳಾಲ: ಪ್ರವಾಸಕ್ಕೆಂದು ಬೆಂಗಳೂರಿನಿಂದ ಬಂದ ತಂಡಗಳೆರಡು ಕುಡಿದ ಅಮಲಿನಲ್ಲಿ ಪರಸ್ಪರ ಹೊಡೆದಾಡಿಕೊಂಡು ಸ್ಥಳೀಯ ಮನೆಗೆ ನುಗ್ಗಿ ತೊಂದರೆ ನೀಡಿದ ಘಟನೆ ಉಚ್ಚಿಲ ಬಟ್ಟಪ್ಪಾಡಿಯ ಖಾಸಗಿ ಗೆಸ್ಟ್‌ ಹೌಸ್‌ನಲ್ಲಿ ನಡೆದಿದೆ.ಗೆಸ್ಟ್‌ಹೌಸ್‌ನಲ್ಲಿ ತಡರಾತ್ರಿಯವರೆಗೂ ಪಾರ್ಟಿ ನಡೆಯುತ್ತಿತ್ತು. ಇದಕ್ಕಾಗಿ ಎರಡು ಬಸ್‌ಗಳಲ್ಲಿ ಬೆಂಗಳೂರಿನಿಂದ ಜನರು ಬಂದಿದ್ದರು. ಪಾರ್ಟಿ ನಡೆಸಿ ಕೊನೆಗೆ ಬಂದಿದ್ದ ಜನರು ಎರಡು ತಂಡಗಳಾಗಿ ಹೊಡೆದಾಡಿಕೊಂಡಿದ್ದಾರೆ. ಈ ಹೊಡೆದಾಟವು ಗೆಸ್ಟ್‌ಹೌಸ್‌ ಒಳಗಿನಿಂದ ಹೊರಭಾಗಕ್ಕೂ ಬಂದಿದ್ದು, ಈ ವೇಳೆ ಕುಡಿತದ ಅಮಲಿನಲ್ಲಿದ್ದವರು ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ಮನೆಯವರಿಗೆ ತೊಂದರೆ ನೀಡಿದ್ದಾರೆ.ಪಾರ್ಟಿ, ಕುಡಿತದ ಅಮಲಿನಲ್ಲಿದ್ದವರು ಮನೆಗೆ ನುಗ್ಗಿ ತೊಂದರೆ ನೀಡಿದ್ದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

Read More

ಕೋಲ್ಕತ: ಚಿಕಿತ್ಸೆಗೆ ಹೆದರಿ ಅವಿತು ಕೂತ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾನೆ. ನೆಲಕ್ಕೆ ಬೀಳುವ ಮೊದಲು ಕಟ್ಟಡದ ಗೋಡೆಯ ಅಂಚಿಗೆ ಎರಡು ಸಲ ತಾಗಿದ್ದರಿಂದ ಈತನ ತಲೆಬುರುಡೆ, ಪಕ್ಕೆಲುಬು ಮತ್ತು ಕೈಗಳಿಗೆ ಗಂಭಿರ ಗಾಯಗಳಾಗಿವೆ. ಪಶ್ಚಿಮಬಂಗಾಳದ ಕೋಲ್ಕತದ ಮುಲ್ಲಿಕ್​ಬಜಾರ್ ಎಂಬಲ್ಲಿನ ಖಾಸಗಿ ಮಾನಸಿಕ ಆಸ್ಪತ್ರೆಯೊಂದರಲ್ಲಿ ಈ ಅವಘಡ ಸಂಭವಿಸಿದೆ. ಸುಜಿತ್ ಅಧಿಕಾರಿ ಎಂಬಾತನೇ ಕೆಳಕ್ಕೆ ಬಿದ್ದ ರೋಗಿ. ಈತ ಚಿಕಿತ್ಸೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಶನಿವಾರ ಬೆಳಗ್ಗೆ ಏಳನೇ ಮಹಡಿಯಲ್ಲಿದ್ದ ವಾರ್ಡ್​ನ ಕಿಟಕಿಯಿಂದ ಹೊರಗೆ ಬಂದು ಅಂಚಿನಲ್ಲಿ ಸುಮಾರು ಎರಡು ಗಂಟೆ ಕೂತಿದ್ದ. ಹೈಡ್ರಾಲಿಕ್ ಏಣಿ ಬಿಟ್ಟು ಅದರಿಂದ ಇಳಿ ಎಂದರೂ ಇಳಿಯದ ಈತನನ್ನು ರಕ್ಷಿಸಲು ಆಸ್ಪತ್ರೆಯವರು ಹಾಗೂ ಇತರರು ಎಷ್ಟೇ ಮನವೊಲಿಸಲು ಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ಬಳಿಕ ರಕ್ಷಣಾ ತಂಡದವರು ಕೆಳಗ್ಗೆ ನೆಟ್ ಹಾಕಿ ಈತನನ್ನು ಬಚಾವ್ ಮಾಡಲು ಪ್ರಯತ್ನಿಸಿದ್ದರು. ಅಷ್ಟರಲ್ಲಿ ಆತ ಕೈಜಾರಿ ಕೆಳಕ್ಕೆ ಬಿದ್ದಿದ್ದು, ಬೀಳುವ ಎರಡು ಕಡೆ ಕಟ್ಟಡದ ಭಾಗ ತಾಗಿದ್ದು, ತಲೆಬುರುಡೆ ಪಕ್ಕೆಲುಬು, ಕೈಗಳು…

Read More

ಬ್ರಹ್ಮಾವರ: ಬ್ರಹ್ಮಾವರ ಠಾಣೆ ವ್ಯಾಪ್ತಿಯ ಮಾಬುಕಳ ಸೇತುವೆಯ ಸಮೀಪ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಕಾರು ಚಾಲಕ ಅತಿ ವೇಗದಿಂದ ಕುಂದಾಪುರದಿಂದ ಉಡುಪಿಯತ್ತ ಕಾರು ಚಲಾಯಿಸಿಕೊಂಡು ಬರುತ್ತಿದ್ದಾಗ ನಿಯಂತ್ರಣ ಸಿಗದೆ ರಸ್ತೆ ವಿಭಜಕ ದಾಟಿ ಕುಂದಾಪುರದತ್ತ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಕಾರು ಚಾಲಕನ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬ್ರಹ್ಮಾವರ ಠಾಣೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು: ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಮಂಜೂರು ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಮ್ಮಕ್ಕಗೆ ನಿವೇಶನ ಕ್ರಯಪತ್ರವನ್ನು ಹಂಚಿಕೆ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಾಲುಮರದ ತಿಮ್ಮಕ್ಕ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಂತರ ಸಿಎಂ ಸೂಚನೆ ಮೇರೆಗೆ ಬಿಡಿಎ ನಿವೇಶನ ಹಂಚಿಕೆ ಪತ್ರವನ್ನು ತಿಮ್ಮಕ್ಕನಿಗೆ ನೀಡಿತ್ತು.ಇಂದು ಬೆಳಗ್ಗೆ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಕರಾರು ಪತ್ರವನ್ನು ಸಿಎಂ ನೀಡಿದರು. ಇನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್‌ ನಲ್ಲಿ ನಿವೇಶನವನ್ನು ಗುರುತಿಸಿ ವಿತರಿಸಲಾಗುತ್ತಿದೆ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್‌ ಹೇಳಿದ್ದಾರೆ. ತಿಮ್ಮಕ್ಕನಿಗೆ 50#80 ಚದರ ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ ಎಂದರು.

Read More

ದಕ್ಷಿಣ ಕನ್ನಡದ ಸುಳ್ಯ ತಾಲೂಕು, ಕೊಡಗು ಜಿಲ್ಲೆಯ ಕೆಲವೆಡೆ ಶನಿವಾರ ಬೆಳಗ್ಗೆ ಭೂಕಂಪನ ಅನುಭವವಾಗಿದ್ದು, ಸ್ಥಳೀಯರಲ್ಲಿ ಮತ್ತೆ ಆತಂಕ ಹುಟ್ಟಸಿದೆ. ಬೆಳಗ್ಗೆ ಸುಮಾರು 9.10ಕ್ಕೆ ಭೂಕಂಪನದ ಅನುಭವವಾಗಿದ್ದು, ಕೆಲ ಕ್ಷಣ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಇದರಿಂದಾಗಿ ಮನೆಯಲ್ಲಿದ್ದ ವಸ್ತುಗಳು ಕಂಪಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ, ಕೊಡಗು ಗಡಿಗೆ ಹೊಂದಿಕೊಂಡಿರುವ ದ.ಕ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ ಭಾಗದಲ್ಲೂ ಕಂಪಿಸಿದೆ ಎಂದು ತಿಳಿದು ಬಂದಿದೆ.

Read More

ಮಂಗಳೂರು: ಮಾವಿನಕಾಯಿ ಕೊಯ್ಯಲೆಂದು ಮರ ಏರಿದ ಯುವಕನೋರ್ವ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿರುವ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.ಮಹಮ್ಮದ್ ಇಲಿಯಾಸ್ (21) ಮೃತ ಯುವಕನಾಗಿದ್ದಾನೆ . ಸಂಜೆ ವೇಳೆ ಮನೆ ಸಮೀಪದ ಕಾಂಪೌಂಡಿನಲ್ಲಿರುವ ಮಾವಿನಮರಕ್ಕೆ ಕಾಯಿ ಕೀಳಲೆಂದು ತೆರಳಿದ ಸಂದರ್ಭ ಘಟನೆ ನಡೆದಿದೆ.ಮಾವಿನ ಕಾಯಿ ಕೀಳಲು ಬಳಸುತ್ತಿದ್ದ ಕೋಲಿನ ಕಬ್ಬಿಣದ ಕೊಕ್ಕೆಗೆ ಮರದ ಕೊಂಬೆಗಳ ಮೂಲಕ ಹಾದು ಹೋಗಿದ್ದ  ವಿದ್ಯುತ್ ತಂತಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Read More

ಕಾಸರಗೋಡು : ಮನೆಯೊಂದಕ್ಕೆ ನುಗ್ಗಿ ಮನೆಯವರ ಪ್ರಜ್ಞೆ ತಪ್ಪಿಸಿ 30 ಪವನ್ ಚಿನ್ನಾಭರಣ ಹಾಗೂ ನಾಲ್ಕು ಲಕ್ಷ ರೂ. ಕಳವು ಗೈದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೂಚ ಕ್ಕಾಡ್ ನಲ್ಲಿ ನಡೆದಿದೆ. ಪೂಚಕ್ಕಾಡ್ ಮುನೀರ್ ಎಂಬವರ ಮನೆಯ ಮೇಲಂತಸ್ತಿನ ಕಿಟಿಕಿ ಸರಳು ಮುರಿದು ಕಳ್ಳರು ಒಳನುಗ್ಗಿದ್ದು, ಕಪಾಟಿನಲ್ಲಿ ಇರಿಸಲಾಗಿದ್ದ ಚಿನಾಭರಣ ಮತ್ತು ನಗದು ಕಳವು ಮಾಡಿದ್ದಾರೆ. ಮುನೀರ್ ಹಾಗೂ ಮನೆಯವರು ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ ತಡವಾಗಿ ಎಚ್ಚೆತ್ತಿದ್ದು, ಈ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಕಳ್ಳರು ಪ್ರಜ್ಞೆ ತಪ್ಪಿಸುವ ರಾಸಾಯನಿಕ ವಸ್ತು ಸಿಂಪಡಿಸಿರಬಹುದು ಎಂದು ಶಂಕಿಸಲಾಗಿದೆ. ಸಾಮಾನ್ಯ ವಾಗಿ ಮುನೀರ್ ಮುಂಜಾನೆ 4 ಗಂಟೆಗೆ ಏಳುತ್ತಿದ್ದು, ಇಂದು ಬೆಳಿಗ್ಗೆ ಎಂಟು ಗಂಟೆಗೆ ಎಚ್ಚರವಾಗಿದೆ. ಇದರಿಂದ ಪ್ರಜ್ಞೆ ತಪ್ಪಿಸುವ ರಾಸಾಯನಿಕ ಸ್ಪ್ರೇ ಮಾಡಿ ಕಳ್ಳರು ಕೃತ್ಯ ನಡೆಸಿರಬಹುದು ಎಂದು ಸಂಶಯಿಸಲಾಗಿದೆ. ಇನ್ನು ಬೇಕಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Read More