Author: main-admin

ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಈಗಾಗಲೇ ನಿಗೂಢವಾಗಿ ಸಾವನಪ್ಪಿದ ವ್ಯಕ್ತಿಗಳ ಕುರಿತಂತೆ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣನವರ್ ದಾಖಲೆಗಳನ್ನು ಬಿಡುಗಡೆ ಮಾಡಿದ ಬಳಿಕ ಇದೀಗ ಧರ್ಮಸ್ಥಳ ಗ್ರಾಮ ಪಂಚಾಯತ್‌ ನಲ್ಲಿ ಎಸ್ ಐಟಿ ತನಿಖೆ ಪ್ರಾರಂಭಿಸಿದೆ. ಶುಕ್ರವಾರ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದ ಗಿರೀಶ್‌ ಮಟ್ಟೆಣ್ಣವರ್‌ ವಿಶೇಷ ತನಿಖಾ ತಂಡದ ಅಧಿಕಾರಿಗಳನ್ನು ಭೇಟಿ ನೀಡಿ ಧರ್ಮಸ್ಥಳ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿಗೂಢ ಸಾವನ್ನಪ್ಪಿದ ಶವಗಳ ವಿಲೇವಾರಿ ಕ್ರಮಬದ್ಧವಾಗಿ ಆಗಿಲ್ಲ ಎಂಬುದನ್ನು ದಾಖಲೆ ಸಹಿತ ದೂರು ನೀಡಿದ್ದರು. ಇದರ ಬೆನ್ನಲ್ಲೇ ಧರ್ಮಸ್ಥಳ ಗ್ರಾಮ ಪಂಚಾಯತ್‌ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ಕರೆಸಿಕೊಂಡು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ದೂರುದಾರ ನೀಡಿದ ದಾಖಲೆ ಮತ್ತು ಪಂಚಾಯಿತಿಯಲ್ಲಿರುವ ದಾಖಲೆಗಳನ್ನು ಪರಸ್ಪರ ತಾಳೆ ಮಾಡಿ ತನಿಖೆ ಆರಂಭಿಸಿದ್ದಾರೆ.

Read More

ಕಡಬ: ಫೇಸ್‌ಬುಕ್ ಖಾತೆಯಲ್ಲಿ ಪ್ರಚೋದನಾಕಾರಿ ಪೋಸ್ಟ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ.30ರಂದು ಕೆ, ಅಬ್ದುಲ್‌ ಹಕೀಂ ಕಡಬ ತಾಲೂಕು ಎಂಬವರು ಅವರ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯನ್ನು ಪರಿಶೀಲಿಸುತ್ತಿರುವಾಗ Ibrahim Mitthodi ExMuslim ಎಂಬ Facebook ಖಾತೆಯಲ್ಲಿ ಧರ್ಮ-ಧರ್ಮಗಳ ಮದ್ಯೆ ದ್ವೇಷ ಉಂಟು ಮಾಡುವಂತೆ ಮಾಡಿ ಸಮಾಜದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿರುವ ಪ್ರಚೋದನಾಕಾರಿ ಪೋಸ್ಟ್‌ ಮಾಡಿರುತ್ತಾರೆ. ಈ ಬಗ್ಗೆ ನೀಡಿದ ದೂರಿನಂತೆ ಕಡಬ ಪೊಲೀಸ್‌ ಠಾಣೆಯಲ್ಲಿ ಅ.ಕ್ರ: 59/2025 ಕಲಂ: 353 (2), 299 BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Read More

ಬೆಳ್ತಂಗಡಿ ತಾಲೂಕಿನ ಉಜಿರೆಯ ವಸತಿಗೃಹದಲ್ಲಿ 2014ರ ಮಾ.1ರಂದು ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಗೆ ನ್ಯಾಯಾಲಯವು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳಪ್ಪ ಎಂ. ಕಳ್ಕೊಳ್ಳಿ ಶಿಕ್ಷೆಗೊಳಗಾದ ಆರೋಪಿ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕೊಲೆ ಪ್ರಕರಣ ಸಂಬಂಧ ಠಾಣೆಯ ನಿರೀಕ್ಷಕ ಲಿಂಗಪ್ಪ ಪೂಜಾರಿ, ಬೆಳ್ತಂಗಡಿ ಸಿಜೆ ಮತ್ತು ಎಂಎಫ್‌ಸಿ ನ್ಯಾಯಾಲಯಕ್ಕೆ ದೋಷರೋಪಾಣಾ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿ ತನಿಖೆ ನಡೆಸಿದ ಆಗಿನ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾ‌ರ್ ಶಹಪು‌ರ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಆರೋಪಿ ಬಾಳಪ್ಪ ಎಂ. ಕಳ್ಕೊಳ್ಳಿ ಎಂಬಾತನಿಗೆ ಜೀವಾವಧಿ ಶಿಕ್ಷೆ ಮತ್ತು 15,000 ರೂ.…

Read More

ಬೆಂಗಳೂರು: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್ ಅಧಿಕಾರಿ ಡಾ.ಎಂ.ಎ ಸಲೀಂ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥರಾಗಿ ನೇಮಿಸುವ ರಾಜ್ಯ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಯುಪಿಎಸ್‌ಸಿಯಿಂದ ಆಯ್ಕೆ ಪಟ್ಟಿ ಬಂದ ಒಂದು ವಾರದೊಳಗೆ ನಿಯಮಿತ ಡಿಜಿಪಿಯನ್ನು ನೇಮಿಸಲಾಗುವುದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ಇದೀಗ ಹಿರಿಯ ಐಪಿಎಸ್ ಅಧಿಕಾರಿ ಎಂ ಸಲೀಂ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1993 ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಡಾ. ಸಲೀಂ ಅವರು ಅಲೋಕ್ ಮೋಹನ್ ನಿವೃತ್ತರಾದ ನಂತರ ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡರು. ಡಾ. ಸಲೀಂ ಪ್ರಸ್ತುತ ಸಿಐಡಿಯ ಡಿಜಿಪಿ ಆಗಿದ್ದಾರೆ. ಇದರ ಜೊತೆಗೆ ರಾಜ್ಯದ ಡಿಜಿಪಿ ಮತ್ತು ಐಜಿಪಿಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ಹೊಂದಿದ್ದಾರೆ. ಹೈಕೋರ್ಟ್ ಈ…

Read More

ಕಾಸರಗೋಡು: ನಿಯಂತ್ರಣ ತಪ್ಪಿ ಸ್ಕೂಟರ್‌‌ ರಾಷ್ಟ್ರೀಯ ಹೆದ್ದಾರಿ ಬದಿಯ ಡಿವೈಡರ್‌ಗೆ ಬಡಿದ ಪರಿಣಾಮ ವಿದ್ಯಾರ್ಥಿ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಮಾವಿನ ಕಟ್ಟೆ ಎಂಬಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಬಂದ್ಯೋಡು ಇಚ್ಲಂಗೋಡು ದಿನಾರ್ ನಗರದ ಯೂಸಫ್ (20) ಎಂದು ಗುರುತಿಸಲಾಗಿದೆ. ಯೂಸಫ್ ಶಿರಿಯ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾಗಿದ್ದನು. ಶಾಲೆಯಲ್ಲಿ ನಡೆದ ಓಣಂ ಕಾರ್ಯಕ್ರಮ ಮುಗಿಸಿ ಸಹಪಾಠಿಯನ್ನು ಮೊಗ್ರಾಲ್ ನ ಮನೆಗೆ ತಲುಪಿಸಿ ಮರಳುತ್ತಿದ್ದಾಗ ಕುಂಬಳೆ ಮಾವಿನ ಕಟ್ಟೆ ಬಳಿ ನಿಯಂತ್ರಣ ತಪ್ಪಿ ಸ್ಕೂಟರ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಗಂಭೀರ ಗಾಯಗೊಂಡ ಯೂಸಫ್ ನನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮೃತಪಟ್ಟಿದ್ದರು. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಅನನ್ಯ ಭಟ್ ನಬತ್ತೆ ಆಗಿರುವ ಕುರಿತು ದೂರು ನೀಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸತತ ನಾಲ್ಕು ದಿನಗಳಿಂದ ಸುಜಾತ ಭಟ್ ಅವರನ್ನು ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು ಎಸ್ಐಟಿ ವಿಚಾರಣೆಗೆ ಸುಜಾತ ಭಟ್ ತಬ್ಬಿಬಾಗಿದ್ದು ಸತ್ಯವನ್ನು ಬಾಯಿಬಿಟ್ಟಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಎಸ್ಐಟಿ ವಿಚಾರಣೆಗೆ ಒಳಪಟ್ಟಿದ ಸುಜಾತ ಭಟ್ ಅವರಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಅಧಿಕಾರಿಗಳು ವಿಚಾರಣೆಗೆ ಕರೆದಾಗ ಬರುವಂತೆ ಸೂಚನೆ ನೀಡಿ ಕಳುಹಿಸಿದ್ದಾರೆ ಹಾಗಾಗಿ ಸುಜಾತ ಭಟ್ ಈ ಒಂದು ಪ್ರಕರಣದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಮೊದಲಿಗೆ ಅನನ್ಯ ಭಟ್ ನನ್ನ ಮಗಳು ಎಂದು ಹೇಳಿ ದೂರು ನೀಡಿದ್ದರು. ಇದೇ ಪ್ರಕರಣದ ಕುರಿತು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಒಳಪಡಿಸಿದಾಗ ಸುಜಾತ ಭಟ್ ನನಗೇನು ತಪ್ಪಿಲ್ಲ ಕೆಲವರು ಹೇಳಿದಂತೆ ನಾನು ಕೇಳಿದ್ದೇನೆ ನನ್ನನ್ನು ಬಿಟ್ಟುಬಿಡಿ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣದಿಂದ ಸುಜಾತಾ ಭಟ್ ಅವರಿಗೆ ಬಿಗ್…

Read More

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ , ಡಾ. ಡಿ. ವೀರೇಂದ್ರ ಹೆಗ್ಗಡೆ ,ಡಿ. ಹರ್ಷೇಂದ್ರ ಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಯಾವುದೇ ಅವಹೇಳನಾಕಾರಿ ಮಾತುಗಳನ್ನು ಆಡದಂತೆ , ವರದಿ ಪ್ರಕಟಿಸದಂತೆ ಸಿಟಿ ಸಿವಿಲ್ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಜೊತೆಗೆ, ಆ ವಿಡಿಯೋಗಳನ್ನು ತಕ್ಷಣವೇ ಡಿಲೀಟ್ ಮಾಡಲು ಆದೇಶಿಸಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ವಿರುದ್ಧ ಪ್ರಕಟವಾದ ಮಾನಹಾನಿಕರ ವಿಡಿಯೋಗಳ ವಿಷಯದಲ್ಲಿ ಡಿ.ಹರ್ಷೇಂದ್ರ ಕುಮಾರ್ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು ಏಕಪಕ್ಷೀಯ ತಡೆಯಾಜ್ಞೆ ನೀಡಿತ್ತು. ಆದರೆ, ಥರ್ಡ್ ಐ ಯೂಟ್ಯೂಬ್ ಚಾನಲ್ ಇದನ್ನು “ಗ್ಯಾಗ್ ಆರ್ಡರ್” ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಿಟ್ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿತು. ಸುಪ್ರೀಂ ಕೋರ್ಟ್ ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳಿಸಲು ಸೂಚಿಸಿತು. ಕುಡ್ಲ ರಾಂ ಪೇಜ್ ಹೈಕೋರ್ಟ್‌ನಲ್ಲಿ ರಿಟ್ ಸಲ್ಲಿಸಿತು, ಇದನ್ನು ಪುರಸ್ಕರಿಸಿದ ಹೈಕೋರ್ಟ್ ಸಿಟಿ ಸಿವಿಲ್ ಕೋರ್ಟ್‌ನ ಏಕಪಕ್ಷೀಯ ಆದೇಶವನ್ನು ರದ್ದುಗೊಳಿಸಿ ಮರುತನಿಖೆಗೆ…

Read More

ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ವ್ಯಕ್ತಿಯೊಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.ದಿನಾಂಕ 29-08-2025 ಮೇರೆಗೆ ದೇರಳಕಟ್ಟೆ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯಿಂದ 53.29 ಗ್ರಾಂ, 2.33 ಗಾಂಜಾಹಾಗೂ 0.45 ಗ್ರಾಂ MDMA ಪಿಲ್ಸ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಮೌಲ್ಯ ಸುಮಾರು ರೂ. 10.85 ಲಕ್ಷ ಆಗಿದ್ದು, ಡಿಜಿಟಲ್ ತೂಕ ಮಾಪನ ಯಂತ್ರ, ಮೊಬೈಲ್ ಫೋನ್ ಸೇರಿದಂತೆ ಒಟ್ಟು ರೂ. 11.05 ಲಕ್ಷ ಮೌಲ್ಯದ ಸೊತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಬಂಧಿತನನ್ನು ಮೋಹಮ್ಮದ್ ಅರ್ಶದ್ ಖಾನ್ (29), ಮೂಲತಃ ಕೇರಳದ ಕೊಚ್ಚಿ, ಪ್ರಸ್ತುತ ದೇರಳಕಟ್ಟೆ ನಿವಾಸಿ ಎಂದು ಗುರುತಿಸಲಾಗಿದೆ.ಆರೋಪಿ ಬೆಂಗಳೂರಿನಿಂದ ಎಂಡಿಎಂಎ ಖರೀದಿಸಿ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಸುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅವರ ಪತ್ತೆ ಕಾರ್ಯ ಪೊಲೀಸರು ಮುಂದುವರೆಸಿದ್ದಾರೆ.ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ…

Read More

ಮಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಮಾಡಿಕೊಡುವುದಾಗಿ ಹೇಳಿ ಹಣ ಪಡೆದ ಬಳಿಕ ವೀಸಾ ನೀಡದೆ ವಂಚಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ತಾನು ವಿದೇಶದಲ್ಲಿ ಉದ್ಯೋಗ ಮಾಡುವ ಉದ್ದೇಶದಿಂದ ವಿದೇಶದಲ್ಲಿದ್ದ ಬೆಳ್ತಂಗಡಿಯ ಮುಹಮ್ಮದ್ ಅಝ್ಮಾನ್ ಬಳಿ 2025ರ ಜನವರಿಯಲ್ಲಿ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದೆ. 4.50 ಲಕ್ಷ ರೂ. ನೀಡಿದರೆ ವೀಸಾ ಮಾಡಿಕೊಡುವುದಾಗಿ ಆತ ತಿಳಿಸಿದ್ದು, ಹಾಗೇ ಮೇ 9ರಂದು ಆತ ತೌಸೀಫ್ ಎಂಬಾತನ ಜೊತೆಗೂಡಿ ಕಣ್ಣೂರಿನ ದಯಂಬುಗೆ ಬಂದಿದ್ದ. ನಂತರ ತನ್ನ ಹಾಗೂ ಅಣ್ಣ ಮುಹಮ್ಮದ್ ಅಝ್ಮೀನ್‌ರನ್ನು ಭೇಟಿ ಮಾಡಿ 2 ಲಕ್ಷ ರೂ. ನಗದು ಮತ್ತು ತನ್ನ ಅಣ್ಣ ಝುನ್‌ರೈನ್‌ರ ಹೆಸರಿನಲ್ಲಿ 1.90 ಲಕ್ಷ ರೂ.ವನ್ನು ಕರ್ಣಾಟಕ ಬ್ಯಾಂಕ್ ಖಾತೆಯ 2 ಚೆಕ್ ಮೂಲಕ ಹಾಗೂ ಮುಹಮ್ಮದ್ ತಾಸೀರ್‌ರಿಂದ 4 ಲಕ್ಷ ರೂ., ಮುಹಮ್ಮದ್ ಶಬೀಬ್‌ರಿಂದ 2 ಲಕ್ಷ ರೂ., ಮುಹಮ್ಮದ್ ಇಕ್ಬಾಲ್‌ರಿಂದ 3.30 ಲಕ್ಷ ರೂ, ಮುಹಮ್ಮದ್ ಅರ್ಷಾದ್‌ರಿಂದ 3.50, ಸಲ್ಮಾನ್…

Read More

ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಬಗ್ಗೆ ಅವಹೇಳನ ಮಾಡಿ ವಿಡಿಯೋ ವೈರಲ್ ಮಾಡಿದ ಪ್ರಕರಣ ಸಂಬಂಧ ವಿಚಾರಣೆಗಾಗಿ ಆ.29 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಜೀವ ಭಯ ಕಾಡುತ್ತಿದ್ದು, ಇದರಿಂದ ಪೊಲೀಸ್‌ ಭದ್ರತೆ ನೀಡಬೇಕಾಗಿ ವಿನಂತಿ ಮಾಡಿದ್ದ ಕಾರಣ ಇಬ್ಬರು ಪೊಲೀಸರ ಜೊತೆ 1:45 ಕ್ಕೆ ತಮ್ಮ ವಕೀಲರುಗಳೊಂದಿಗೆ ಜಗದೀಶ್ ಅವರು ಠಾಣೆಗೆ ಆಗಮಿಸಿದ್ದಾರೆ.

Read More