ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಭವ್ಯ ಕಾರ್ಯಕ್ರಮದಲ್ಲಿ ನೆರೆಯ ದೇಶಗಳ ನಾಯಕರು ಮತ್ತು ಗಣ್ಯರು ಸೇರಿದಂತೆ 9,000 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈ ನಡುವೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಎನ್ ಡಿಎ ನಾಯಕರಿಗೆ ತಮ್ಮ ನಿವಾಸದಲ್ಲಿ ಚಹಾ ಕೂಟ ಏರ್ಪಡಿಸಿದ್ದಾರೆ. ಈ ಚಹಾಕೂಟದಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತೀಶ್ ಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ. ಎನ್ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ರಚನೆಯಾಗಲಿರುವ ಮೋದಿ ಕ್ಯಾಬಿನೆಟ್ 3.0 ರಲ್ಲಿ, ತೆಲುಗು ದೇಶಂ ಪಕ್ಷದ ನಾಯಕರಿಗೆ ಎರಡು ಸ್ಥಾನಗಳು, ಎನ್ಸಿಪಿ (ಅಜಿತ್ ಪವಾರ್) ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ತಲಾ ಒಂದು ಸ್ಥಾನ ಸಿಗಲಿದೆ. ಇದಲ್ಲದೆ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರ ಹೆಸರುಗಳು ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನಕ್ಕೆ ದೃಢಪಟ್ಟಿವೆ. ಅವರು ತಮ್ಮ ಖಾತೆಗಳನ್ನು ಉಳಿಸಿಕೊಳ್ಳುವ…
Author: main-admin
ಉಳ್ಳಾಲ: ನೇಪಾಳ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯಲ್ಲಿ ಶನಿವಾರ ನಡೆದಿದೆ.ನೇಪಾಳ ಮೂಲದ ರಬೀನ ಬಿ.ಕೆ (16)ಮೃತ ಅಪ್ರಾಪ್ತೆ.ತೊಕ್ಕೊಟ್ಟು ವೃಂದಾವನ ಹೊಟೇಲಿನ ಪಕ್ಕದಲ್ಲಿ ಫಾಸ್ಟ್ ಫುಡ್ ಕಮ್ ಕ್ಯಾಂಟೀನ್ ನಡೆಸುತ್ತಿದ್ದ ನೇಪಾಳ ಮೂಲದ ರಾಮ್ ಶರಣ್ ಎಂಬವರು ತನ್ನ ಪತ್ನಿ ಮತ್ತು ನಾಲ್ಕು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬುಗುಡ್ಡೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ರಾಮ್ ಶರಣ್ ಅವರ ಎರಡನೇ ಮಗಳಾದ ರಬೀನ ನೇಪಾಳದಲ್ಲಿ ಎಂಟನೇ ತರಗತಿ ಓದುತ್ತಿದ್ದು, ಆಕೆಯನ್ನು ಮಂಗಳೂರಿನಲ್ಲೆ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆ ತಂದಿದ್ದರು. ಆದರೆ ರಬೀನ ತಾನು ನೇಪಾಳದಲ್ಲೇ ಓದು ಮುಂದುವರಿಸುವುದಾಗಿ ಹಠ ಹಿಡಿದಿದ್ದು ಈ ಬಗ್ಗೆ ಪೋಷಕರಲ್ಲಿ ಗಲಾಟೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ.ಶನಿವಾರ ಮದ್ಯಾಹ್ನ ರಬೀನಳ ತಾಯಿ ರಮೀಲ ಅವರು ಚಿಕ್ಕ ಮಕ್ಕಳನ್ನ ಶಾಲೆಯಿಂದ ಮನೆಗೆ ಕರಕೊಂಡು ಬರುವ ವೇಳೆ ರಬೀನ ಮನೆಯ ಶೌಚಾಲಯದ ಕಬ್ಬಿಣದ ಸಲಾಕೆಗೆ ಚೂಡಿದಾರದ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.…
ಮಂಗಳೂರು: ಕೆನಡಾದ ವೀಸಾ ಕೊಡಿಸುವುದಾಗಿ ನಂಬಿಸಿ 15 ಲಕ್ಷ ರೂ. ವಂಚಿಸಿರುವ ಬಗ್ಗೆ ಕಾವೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಕುವೈತ್ ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಡೊಮಿನಿಕ್ ಕಿಶೋರ್ ಡಿ’ಸೋಜಾ ಅವರಿಗೆ ಕೆನಡಾದ ವಿಸಾ ಕೊಡಿಸುವುದಾಗಿ ಅವರ ಸ್ನೇಹಿತ ರೋಶನ್ ನವೀನ್ ಕ್ರಾಸ್ಟೋ ಗೆ ಅವರಿಗೆ ಪರಿಚಯವಿರುವ ಜೇಮ್ಸ್ ಡಿ’ಸೋಜ ಹೇಳಿದ್ದರು. ಅದರಂತೆ ಡೊಮಿನಿಕ್ ಅವರಿಗೆ ಜೇಮ್ಸ್ ಡಿಸೋಜನನ್ನು ಪರಿಚಯಿಸಲಾಗಿತ್ತು. 30 ಲಕ್ಷ ರೂ. ಹಣ ನೀಡಿದರೆ ಡೊಮಿನಿಕ್ ಹಾಗೂ ಅವರ ಹೆಂಡತಿಗೆ ವೀಸಾ ಮಾಡಿಕೊಡುವುದಾಗಿ ಜೇಮ್ಸ್ ತಿಳಿಸಿದ್ದನು. ಅದರಲ್ಲಿ 15 ಲಕ್ಷ ರೂ. ಹಣವನ್ನು ವೀಸಾ ಮಾಡುವ ಮೊದಲು ಹಾಗೂ ಉಳಿದ 15 ಲಕ್ಷ ರೂ. ಹಣವನ್ನು ಕೆನಡಾ ದೇಶಕ್ಕೆ ಹೊದ ಬಳಿಕ ನೀಡಬೇಕೆಂದು ತಿಳಿಸಿದ್ದನು. ಅದರಂತೆ ಸುಮಾರು 9 ಕಂತುಗಳಲ್ಲಿ 15 ಲಕ್ಷ ರೂ. ಪಾವತಿಸಲಾಗಿತ್ತು. ಅದರಲ್ಲಿ 5 ಲಕ್ಷ ರೂ. ಹಣವನ್ನು ಅವರ ಸಂಬಂಧಿ ಅರುಣ್ ಡೆರಿಕ್ ಮೊಂತೇರೊರವರ ಬ್ಯಾಂಕ್ ಖಾತೆ ಮೂಲಕ ಜೇಮ್ಸ್ ತಿಳಿಸಿದ ಖಾತೆಗೆ…
ಮಂಗಳೂರು: ಪಾಕಿಸ್ಥಾನದೊಂದಿಗೆ ಹೊರ ದೇಶ ಗಳಲ್ಲೂ ಭಾರತ ಕ್ರಿಕೆಟ್ ಪಂದ್ಯವಾಡುವುದು ಸರಿಯಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ. ಜೂ. 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪಂದ್ಯಾವಳಿಯ ಭಾರತ-ಪಾಕ್ ಕಾದಾಟದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಪಾಕಿಸ್ಥಾನದವರು ಕ್ರಿಕೆಟ್ ಆಟವಾ ಡಲು ಬಂದ ವೇಳೆ ನಮ್ಮಲ್ಲಿ ಪಿಚ್ ಅಗೆದಿದ್ದಾರೆ. ಎಲ್ಲಿಯವರೆಗೆ ಅವರು ನಮಗೆ ತೊಂದರೆ ಕೊಡುತ್ತಾರೋ ಅಲ್ಲಿಯವರೆಗೆ ಅವರೊಂದಿಗೆ ಆಟವಾಡಬಾರದು ಎಂದರು. ಎರಡೂ ದೇಶಗಳ ನಡುವೆ ಸಂಚಾರ ಮಾಡುವುದನ್ನೂ ನಿಲ್ಲಿಸಲಾಗಿದೆ. ಅಲ್ಲದೆ ಅವರು ನಮ್ಮಲ್ಲಿಗೆ ಬಂದು ಆಡುವುದನ್ನೂ ನಿಲ್ಲಿಸಲಾಗಿದೆ. ಇಷ್ಟಾದ ಮೇಲೆ ಪಾಕಿಸ್ಥಾನದ ಆಟಗಾರರನ್ನು ದುಬಾೖ, ನ್ಯೂಯಾರ್ಕ್‌ಗೆ ಕರೆದೊಯ್ದು ಅಲ್ಲಿ ಅವ ರೊಂದಿಗೆ ಭಾರತದ ಆಟಗಾರರು ಆಡುವುದು ಯಾಕೆ? ಅವರೊಂದಿಗೆ ಆಡದಿದ್ದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ನಾನೂ ಕ್ರಿಕೆಟ್ ಅಭಿಮಾನಿ, ಆಟಗಾರನೂ ಹೌದು. ಏನೇ ನಾಳೆ ನಡೆಯುವ ಪಾಕ್ ಜತೆಗಿನ ಪಂದ್ಯದಲ್ಲಿ ಭಾರತದ ತಂಡ ಗೆಲುವು ಸಾಧಿಸುವುದು ಮಾತ್ರವಲ್ಲ, ಇಡೀ ದೇಶಕ್ಕೆ ಗೌರವದ ಗೆಲುವನ್ನು ತರಬೇಕು ಎಂದು ಹಾರೈಸುವುದಾಗಿಯೂ ತಿಳಿಸಿದರು.
ಮಂಗಳೂರು: ಖಾಸಗಿ ಬಸ್ ನಲ್ಲಿ ಯುವಕನೊಬ್ಬ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಕಾಮುಕನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ಬಲ್ಲಾಳ್ ಬಾಗ್ ಎಂಬಲ್ಲಿ ನಡೆದಿದೆ. ಯುವತಿ ನಾಗನೂರಿನಿಂದ ಬಸ್ ಹತ್ತಿ ಸ್ಟೇಟ್ ಬ್ಯಾಂಕ್ ಬಳಿ ಇಳಿದು ಬಳಿಕ ಮರೋಳಿ ಎಂಬ ಹೆಸರಿನ ಬಸ್ ನಲ್ಲಿ ಬಜಪೆ ಕಡೆ ತೆರಳುತ್ತಿದ್ದಳು. ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಯುವಕ, ಯುವತಿ ಕುಳಿತಿದ್ದ ಹಿಂಬದಿಯ ಸೀಟಿನಲ್ಲಿ ಕುಳಿತುಕೊಂಡಿದ್ದ. ಅಲ್ಲದೇ ಯುವತಿಯ ಸೊಂಟಕ್ಕೆ ಕೈ ಹಾಕಿ ಕಿರುಕುಳ ನೀಡುತ್ತಿದ್ದ. ಯುವತಿ ಈ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ತಕ್ಷಣ ಬಲ್ಲಾಳ್ ಬಾಗ್ ಎಂಬಲ್ಲಿ ಬಸ್ ತಡೆದ ಸಾರ್ವಜನಿಕರು ಹಾಗೂ ಯುವತಿ ಸಂಬಂಧಿಕರು ಯುವಕನನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ. ಬಳಿಕ ಧರ್ಮದೇಟು ನೀಡಿದ್ದಾರೆ. ಪಾಂಡವೇಶ್ವರ ಠಾಣೆ ಪೊಲೀಸರಿಗೆ ಯುವಕನನ್ನು ಒಪ್ಪಿಸಿದ್ದಾರೆ.
ಉಡುಪಿ: ಖಾದ್ಯ ತೈಲ ಸಾಗಿಸುತ್ತಿದ್ದ ಟ್ಯಾಂಕರ್ ರಸ್ತೆ ಬದಿಗೆ ಉರುಳಿಬಿದ್ದ ಘಟನೆ ನಗರದ ಸಂತೆಕಟ್ಟೆ ಬಳಿ ಸಂಭವಿಸಿದೆ. ಟ್ಯಾಂಕರ್ ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾಡುಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಜೂನ್ 08 ರಂದು ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಚ್ಚಿದ ಸರ್ವಿಸ್ ರಸ್ತೆಯನ್ನು ಮೀರಿದ್ದು, ಕೆಸರು ರಸ್ತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟ್ಯಾಂಕರ್ ಪಲ್ಟಿಯಾಗಿ ನಿರ್ಮಾಣ ಹಂತದಲ್ಲಿರುವ ಅಂಡರ್‌ಪಾಸ್ ನಿರ್ಮಾಣ ಪ್ರದೇಶಕ್ಕೆ ಬಿದ್ದಿದೆ.ಘಟನೆಯಲ್ಲಿ ಚಾಲಕ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ ಎನ್ನಲಾಗಿದೆ.
ಮಂಗಳೂರು: ನಗರದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚಿತ ಯುವಕನೋರ್ವ ಕಿರುಕುಳ ನೀಡಿರುವ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪೆನಿಯೊಂದರ ಪ್ರಾಡಕ್ಟ್ ಸೇಲ್ ಕೆಲಸ ಮಾಡಿಕೊಂಡಿರುವ ತಾನು ಶುಕ್ರವಾರ ಬೆಳಗ್ಗೆ ಕಚೇರಿಗೆ ಹೋಗಿ ಪ್ರಾಡಕ್ಟ್‌ಗಳನ್ನು ತೆಗೆದುಕೊಂಡೆ. ಅವುಗಳನ್ನು ಮಾರಾಟ ಮಾಡಲು ಬಜ್ಜೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಆವಾಗ ತನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು 27-28 ವರ್ಷ ವಯಸ್ಸಿನ ಯುವಕ ತನ್ನ ಹಿಂಬದಿಯ ಸೀಟಿನಲ್ಲಿ ಕುಳಿತು ಕಿರುಕುಳ ನೀಡಿದ್ದಾನೆ ಎಂದು 19 ವರ್ಷದ ಯುವತಿ ದೂರು ನೀಡಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಾಲಕಿಯರ ಹಾಸ್ಟೇಲ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಬಿ.ಹೆಚ್ ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದಾರೆ. ಹಾಸ್ಟೇಲ್ ನಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದರು. ಹಾಸ್ಟೇಲ್ ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ವಿದ್ಯಾರ್ಥಿನಿಯರು ಹಾಸ್ಟೇಲ್ ನಿಂದ ಹೊರಗೋಡಿಬಂದು ಜೀವ ಉಳಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕೇರಳದಲ್ಲಿ ಸಾರಿಗೆ ಬಸ್ ನಲ್ಲಿ ನಡೆದ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಂಡಕ್ಟರ್ ನ ಕ್ವಿಕ್ ರಿಯಾಕ್ಷನ್ ಗೆ ಯುವಕನ ಜೀವ ಉಳಿದಿದೆ.ವೀಡಿಯೋದಲ್ಲಿ ಕಾಣಿಸುವಂತೆ ಬಸ್ ಹಿಂಭಾಗಿನ ಸಮೀಪದ ಸೀಟಿಗೆ ಒತ್ತಿ ನಿಂತುಕೊಂಡು ಬಸ್ ಕಂಡಕ್ಟರ್ ಟಿಕೆಟ್ ನೀಡುತ್ತಿರುವ ವೇಳೆ ಬಸ್ ಸಡನ್ ಬ್ರೇಕ್ ಹಾಕಿದೆ. ಈ ವೇಳೆ ಬಾಗಿಲ ಬಳಿ ನಿಂತಿದ್ದ ಯುವಕನೋರ್ವ ಮುಗ್ಗರಿಸಿ ಇನ್ನೇನು ತೆರೆದಿದ್ದ ಬಾಗಿಲಿನಲ್ಲಿ ಕೆಳಗೆ ಬೀಳಬೇಕು ಅನ್ನುವಷ್ಟರಲ್ಲಿ ಕಂಡಕ್ಟರ್ ತನ್ನ ಒಂದೇ ಕೈನಿಂದ ಆತನನ್ನು ತಾನು ನಿಂತಲಿಂದ ಒಂದು ಚೂರು ಅತ್ತಿತ್ತ ಅಲುಗದಂತೆ ಹಿಡಿದು ಆತನ ಪ್ರಾಣ ಕಾಪಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಒಂದು ವೇಳೆ ಕಂಡಕ್ಟರ್ ಆತನ ಕೈ ಹಿಡಿಯದೇ ಹೋದರೆ ಆತ ತೆರೆದ ಬಾಗಿಲಿನ ಮೂಲಕ ಬಸ್ಸಿನಿಂದ ಕೆಳಗೆ ಬಿದ್ದು ಅವಾಂತರ ಸೃಷ್ಟಿಯಾಗುತ್ತಿದ್ದುದ್ದಂತು ಪಕ್ಕ. ಆದರೆ ಇಲ್ಲಿ ಕಂಡಕ್ಟರ್‌ನ ಸಮಯ ಪ್ರಜ್ಞೆಯಿಂದ ಯಾವುದೇ ಅನಾಹುತವಾಗದಂತೆ ಆತ ಪಾರಾಗಿದ್ದಾನೆ.
ಕಾಪು ಬೀಚ್‌ನಲ್ಲಿ ಯುವಕನೋರ್ವ ದ್ವಿಚಕ್ರ ವಾಹನ, ಮೊಬೈಲ್ ಜೊತೆಗೆ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದು, ನಿನ್ನೆಯಿಂದ ಅವನಿಗಾಗಿ ಬೀಚ್‌ನುದ್ದಕ್ಕೂ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ನಾಪತ್ತೆಯಾಗಿರುವ ಯುವಕನನ್ನು ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್ ಎಂಬವರ ಪುತ್ರ 20ರ ಹರೆಯದ ಕರಣ್ ಸಾಲ್ಯಾನ್ ಎಂದು ಗುರುತಿಸಲಾಗಿದೆ. ಗುರುವಾರ ರಾತ್ರಿಯಿಂದ ಕರಣ್ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಗ್ಗೆ ಹುಡುಕಿದಾಗ ಕಾಪು ಬೀಚ್‌ನಲ್ಲಿ ಅವನ ಮೊಬೈಲ್ ಮತ್ತು ಮೊಬೈಲ್, ಪರ್ಸ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕರಣ್ ಸಾಲ್ಯಾನ್ ರವರ ತಾಯಿ ತುಳಸಿ ಸಾಲ್ಯಾನ್ ನೀಡಿದ ದೂರಿನ ಪ್ರಕಾರ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.