ಉಡುಪಿ: ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19 ರಂದು ಮುಂಜಾನೆ ಸಂಭವಿಸಿದ ಗ್ಯಾಂಗ್ ವಾರ್ ಗೆ ಸಂಬಂಧಿಸಿದಂತೆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ಹೊರಡಿಸಿದೆ. ಕಾಪು ಕೊಂಬಗುಡ್ಡೆ ಮೂಲದ ಆಶಿಕ್, ತೋನ್ಸೆ ಹೂಡೆಯ ರಾಕೀಬ್ ಹಾಗೂ ಸಕ್ಲೈನ್, ಬ್ರಹ್ಮಾವರದ ಶರೀಫ್, ಕಾಪು ಮೂಲದ ಮಜೀದ್, ಅಲಾಝ್ ಪ್ರಕರಣದ ಬಂಧಿತ ಆರೋಪಿಗಳು. ಈ 6 ಮಂದಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗ್ಯಾಂಗ್‌ವಾರ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ಹಾಗೂ ವೀಡಿಯೋ ಆಧರಿಸಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಬಳಿಕ ಘಟನೆಗೆ ಸಂಬಂಧ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
Author: main-admin
ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ ನೂತನವಾಗಿ ನಿರ್ಮಾಣಗೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ಇರುವ ಹರೇಕಳ-ಅಡ್ಯಾರ್ ಅಣೆಕಟ್ಟು ಸೇತುವೆಯಲ್ಲಿ ಸಂಭವಿಸಿದ ಮೊದಲ ಅಪಘಾತ ಇದಾಗಿದೆ. ಪುತ್ತೂರು ಕಡೆಯಿಂದ ಅಡ್ಯಾರ್ ನತ್ತ ಬರುತ್ತಿದ್ದ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಆಲ್ಟೋ ಕಾರು ಹಾಗೂ ಎದುರಿನಿಂದ ಬಂದ ಇಕೋ ಸ್ಪೋಟ್ಸ್ ಕಾರುಗಳ ಮಧ್ಯೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮಹಿಳೆ, ಸಹಪ್ರಯಾಣಿಕೆ ಹಾಗೂ ಇನ್ನೊಂದು ಕಾರಿನಲ್ಲಿದ್ದ ಚಾಲಕ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಡ್ಯಾಂ ನಿಂದಾಗಿ ಸ್ಥಳೀಯರ ಜಾಗ ಮುಳುಗಡೆಯಾಗುವ ಭೀತಿಯಿದ್ದರೂ, ಸಂಬಂಧಪಟ್ಟ ಇಲಾಖೆ ಜಾಗಗಳನ್ನು ಒತ್ತುವರಿ ಮಾಡದೇ ಇದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲಿನಲ್ಲಿದೆ. ಹಾಗಾಗಿ ಸೇತುವೆ ನಿರ್ಮಾಣಗೊಂಡು ವರ್ಷ ಕಳೆದರೂ ಅಧಿಕೃತ ಉದ್ಘಾಟನೆ ಇಂದಿಗೂ ಆಗಿಲ್ಲ.
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ತಡೆರಹಿತ ಬಸ್ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದ್ದು ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಸ್ಕೂಟರ್ ಸವಾರನನ್ನು ಪಣಂಬೂರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಎಕೆಎಂಎಸ್ ಹೆಸರಿನ ತಡೆರಹಿತ ಬಸ್ ಜೋಕಟ್ಟೆ ಕ್ರಾಸ್ ತಲುಪುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಜಂಕ್ಷನ್ ಬಳಿ ನಿಲ್ಲಿಸಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬಸ್ ಡಿಕ್ಕಿಯಾದ ಒಂದು ಕಾರು ಮುಂದಕ್ಕೆ ಹೋಗಿ ಎದುರು ನಿಲ್ಲಿಸಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದ್ದು ಮತ್ತೆ ಮುಂದಕ್ಕೆ ಚಲಿಸಿ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಕೂಟರ್ ಸವಾರ ಸತೀಶ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು ಕೂಡಲೇ ಟ್ರಾಫಿಕ್ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಬಸ್ ಚಾಲಕ ಇರ್ಫಾನ್ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್…
ಮಂಗಳೂರು: ನಗರದ ಕಂಕನಾಡಿಯಲ್ಲಿ ರಸ್ತೆಯಲ್ಲಿಯೇ ನಮಾಜ್ ನಡೆದಿದೆ ಎನ್ನಲಾದ ವೀಡಿಯೊ ಒಂದು ವೈರಲ್ ಆಗಿದೆ. ಕಂಕನಾಡಿಯ ಮಸೀದಿಯ ಮುಂಭಾಗದ ರಸ್ತೆಯಲ್ಲಿ ಈ ನಮಾಜ್ ನಡೆದಿದ್ದು, 2-3 ದಿನಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಆದ್ದರಿಂದ ಶುಕ್ರವಾರ ಮಧ್ಯಾಹ್ನದ ವೇಳೆ ಈ ನಮಾಜ್ ನಡೆದಿರಬಹುದು. ಮಳೆ ಬಂದು ರಸ್ತೆಯಲ್ಲಿ ನೀರು ನಿಂತು ಹಸಿಹಸಿ ಇದ್ದರೂ, ಅಲ್ಲಿಯೇ ಮ್ಯಾಟ್ ಹಾಸಿ ನಮಾಜ್ ಮಾಡುತ್ತಿರುವುದು ಕಂಡು ಬಂದಿದೆ. ರಸ್ತೆಯಲ್ಲಿಯೇ ನಮಾಜ್ ನಡೆಯುತ್ತಿರುವುದರಿಂದ ವಾಹನಗಳು ಯೂಟರ್ನ್ ಹೊಡೆದು ಸಂಚಾರ ಮಾಡುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತಿದೆ. ನಮಾಜ್ ವಿಡಿಯೋ ಮಾಡಿ ಅಸಮಾಧಾನ ವ್ಯಕ್ತಪಡಿಸಿ ವೈರಲ್ ಮಾಡಲಾಗುತ್ತಿದೆ.
ಶಿಬಾಜೆ, : ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯ (83) ಕಾಡಿನಲ್ಲಿ ಪತ್ತೆಯಾಗಿದ್ದಾರೆ. ವಾಸು ಅವರು ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಸುಮಾರು ೩ ಕಿ.ಮೀ ದೂರದ ಅರಣ್ಯದಲ್ಲಿ ಮೇ.26 ರಂದು ಪತ್ತೆಯಾಗಿದ್ದಾರೆ ಕೂ ಎಂಬ ಶಬ್ದ ಕೇಳಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಪುನಃ ಹುಡುಕಾಟ ನಡೆಸಿದಾಗ ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಮದ್ಯಾಹ್ನ ಪತ್ತೆಯಾಗಿದ್ದಾರೆ.ಕೂ ಕೂ ಕೂಗಿನ ಶಬ್ದವನ್ನು ಸ್ಥಳೀಯರು ಗಮನಿಸಿ ಮೇ 26ರಂದು ಮುಂಜಾನೆಯಿಂದ ಹುಡುಕಾಟ ಆರಂಭಿಸಿದ್ದು ವಾಸು ರಾಣ್ಯರನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಾಸು ಅವರವರನ್ನು ತಪಾಸಣೆಗಾಗಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಲಾಯಿತು ಕಳೆದ ಮಂಗಳವಾರ ಕಟ್ಟಿ ಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದರು ಇದೀಗ ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ. ಆ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.ವಾಸು…
ವಿಟ್ಲ ಸಮೀಪ ಬೀಗ ಹಾಕಿದ ವಿದೇಶದಲ್ಲಿರುವವರ ಮನೆಗೆ ನುಗ್ಗಿ ರಾಡೋ ವಾಚ್ ಕದ್ದು, ಸಿಸಿ ಟಿವಿ, ಡಿ.ವಿ.ಆರ್ ಹೊತ್ತೊಯ್ದ ಘಟನೆ ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಸಂಭವಿಸಿದೆ. ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು 6 ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ರವಿವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಸಂಶಯಗೊಂಡಿದ್ದರು. ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಎ.ಸಿ.ಚಾಲು ಮಾಡಿಯೇ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಗಂಟೆಗಳ ಕಾಲ ಸಾಕಷ್ಟು ಜಾಲಾಡಿದ್ದಾರೆ. ಪೊಲೀಸರು ಕಳ್ಳತನ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ಸೈಬರ್ ವಂಚನೆ ತಡೆಯಲು ಯತ್ನಿಸಿದಷ್ಟು, ಸೈಬರ್ ಖದೀಮರು ಹೊಸ ವಿಧಾನದ ಮೂಲಕ ತಮ್ಮ ವಂಚನಾ ಕೃತ್ಯವನ್ನು ಮುಂದುವರಿಸುತ್ತಿದ್ದಾರೆ. ಇದೀಗ ವಂಚಕರು ”ರ್ಯಾಟ್” ಸಿಸ್ಟಮ್ ದುರ್ಬಳಕೆ ಮಾಡಿ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲು ಆರಂಭಿಸಿದ್ದಾರೆ. ಹೌದು… ರ್‍ಯಾಟ್ (ರಿಮೋಟ್ ಆ್ಯಕ್ಸೆಸ್ ಟೂಲ್ಸ್) ಬಳಸಿಕೊಂಡು ಎಪಿಕೆ ಫೈಲ್/ಆ್ಯಂಡ್ರಾಯ್ಡ್ ಆ್ಯಪ್ ಸಿದ್ದಪಡಿಸಿ ವಾಟ್ಸ್ಆ್ಯಪ್/ಟೆಕ್ಸ್ಟ್ ಮೆಸೇಜ್ ಮೂಲಕ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಎಪಿಕೆ ಫೈಲ್ ಅಥವಾ ಲಿಂಕ್‌ಅನ್ನು ಕಳುಹಿಸಿ ಕೊಡುತ್ತಾರೆ. ಅದನ್ನು ತೆರೆದರೆ ಮೊಬೈಲ್‌ಗೆ ಬರುವ ಎಲ್ಲ ಟೆಕ್ಸ್ಟ್ ಮೆಸೇಜ್‌ಗಳು ವಂಚಕರ ಮೊಬೈಲ್ ಫೋನ್‌ಗಳಿಗೆ ‘ಆಟೋಮ್ಯಾಟಿಕಲಿ ಮೆಸೇಜ್ ಫಾರ್ವರ್ಡಿಂಗ್’ ಆಗುತ್ತದೆ. ಆ ಮೂಲಕ ವಂಚಕರು ಸುಲಭವಾಗಿ ಒಟಿಪಿ ಪಡೆದುಕೊಂಡು ಇಂಟರ್‌ನೆಟ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಅಳವಡಿಸಿಕೊಂಡು ಕ್ಷಣ ಮಾತ್ರದಲ್ಲಿ ಅವರ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಆದ್ದರಿಂದ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ಬರುವ ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆ್ಯಪ್‌ಗಳ ಲಿಂಕ್ ಗಳನ್ನು ಯಾರೂ ಕ್ಲಿಕ್ ಮಾಡಬಾರದು.…
ಮಂಗಳೂರು: ಗಡಿ ಭಾಗದ ಕಾಸರಗೋಡು ಜಿಲ್ಲೆಯ ಕಣ್ಣೂರು ವಿಮಾನ ನಿಲ್ದಾಣದಿಂದ ಕಸ್ಟಮ್ಸ್ ಅಧಿಕಾರಿಗಳು 78 ಲಕ್ಷ ರೂ ಮೌಲ್ಯದ 1,078 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಕಾಸರಗೋಡು ನಿವಾಸಿ ಮೆಹರೂಫ್ ಮುಹಮ್ಮದ್‌ನನ್ನು ಬಂಧಿಸಿದ್ದಾರೆ. ಆತ ಅಬುಧಾಬಿಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದಿಳಿದಿದ್ದನು. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ
ಬೆಳ್ತಂಗಡಿ: ಸೇತುವೆಯ ತಡೆಗೋಡೆಗೆ ಸರ್ಕಾರಿ ಬಸ್ಸೊಂದು ಢಿಕ್ಕಿಯಾಗಿದ್ದು, ಸಂಭವನೀಯ ಭಾರೀ ಅನಾಹುತ ತಪ್ಪಿದ ಘಟನೆ ಬೆಳ್ತಂಗಡಿಯ ಕೊಯ್ಯರು ಬಳಿಯ ಕಾಂತಾಜೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಈ ಬಸ್ಸಿನಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಅನ್ನು ಚಲಾಯಿಸಿದ್ದರ ಪರಿಣಾಮ ಕಾಂತಾಜೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಬಸ್ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ.ಬಸ್ ಢಿಕ್ಕಿಯಾದ ರಭಸಕ್ಕೆ ತಡೆಗೋಡೆ ಮುರಿದಿದೆ. ಒಂದು ವೇಳೆ ಬಸ್ ಸೇತುವೆಯ ಕೆಳಗೆ ಬಿದ್ದಿದ್ದರೆ ಸುಮಾರು 20 ಅಡಿಯ ಪ್ರಪಾತಕ್ಕೆ ಬೀಳುತ್ತಿತ್ತು. ಹೀಗಾಗಿ ಸಂಭವಿಸಬಹುದಾದ ಭಾರೀ ಅನಾಹುತ ತಪ್ಪಿದಂತಾಗಿದೆ. ಇನ್ನು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟಾಯಂ(ಕೇರಳ): ಗೂಗಲ್ ಮ್ಯಾಪ್ ಹಾಕಿಕೊಂಡು ಪ್ರಯಾಣಿಸುತ್ತಿದ್ದ ಹೈದರಾಬಾದ್ ಮೂಲದ ಪ್ರವಾಸಿಗರಿದ್ದ ಕಾರು ದಕ್ಷಿಣ ಕೇರಳ ಜಿಲ್ಲೆಯ ಕುರುಪ್ಪಂಥಾರ ಸಮೀಪ ಹೊಳೆಗೆ ಬಿದ್ದಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಓರ್ವ ಮಹಿಳೆ ಸೇರಿದಂತೆ ನಾಲ್ವರು ಪ್ರವಾಸಿಗರು ಕಾರಿನಲ್ಲಿ ಅಲಪ್ಪುಳ ಕಡೆಗೆ ತೆರಳುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ರಸ್ತೆ ಮಾರ್ಗದಲ್ಲಿ ಹೊಳೆ ನೀರು ಉಕ್ಕಿ ಹರಿಯುತ್ತಿತ್ತು. ಪ್ರವಾಸಿಗರಿಗೆ ಈ ಪ್ರದೇಶದ ಪರಿಚಯವಿರಲಿಲ್ಲ. ಹೀಗಾಗಿ ಮ್ಯಾಪ್ ಬಳಸಿ ಸಂಚರಿಸುತ್ತಿದ್ದರು. ಈ ವೇಳೆ, ವೇಗವಾಗಿ ಚಲಿಸುತ್ತಿದ್ದ ಕಾರು ಹೊಳೆಗೆ ಬಿದ್ದಿದೆ. ವಿಷಯ ತಿಳಿದ ಪೊಲೀಸರು, ಸ್ಥಳೀಯ ನಿವಾಸಿಗಳು ಕಾರಿನಲ್ಲಿದ್ದ ನಾಲ್ವರನ್ನು ರಕ್ಷಿಸಿದ್ದಾರೆ. ಕಾರು ಸಂಪೂರ್ಣವಾಗಿ ಹೊಳೆ ನೀರಿನಲ್ಲಿ ಮುಳುಗಿದ್ದು, ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ ಎಂದು ಕಡುತುರುತಿ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದರು. ಕೇರಳದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರು ಯುವ ವೈದ್ಯರು ಇದೇ ರೀತಿಯ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆನ್‌ಲೈನ್ ಮ್ಯಾಪ್ ಸಹಾಯದಿಂದ ಪ್ರಯಾಣಿಸುತ್ತಿದ್ದಾಗ ಇವರಿದ್ದ ಕಾರು ನದಿಗೆ ಬಿದ್ದಿತ್ತು. ಈ ಘಟನೆಯ…