Author: main-admin

ಮಂಗಳೂರು: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿರುವ ಮಂಗಳೂರು ಇನ್ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರೇಡಾರ್ ಕಣ್ಗಾವಲಿಗೆ ಒಳಪಡಲಿದೆ. ನಗರದ ಆಯಕಟ್ಟಿನ ಪ್ರದೇಶಗಳ ಮೇಲೆ ರೇಡಾರ್ ಹದ್ದಿನ ಕಣ್ಣಿಟ್ಟಿದ್ದು ಸಂಚಾರ ನಿಯಂತ್ರಣ ವ್ಯವಸ್ಥೆಯು ಫುಲ್ ಅಪ್ಟೇಡ್ ಆಗಿದೆ. ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಮರಾ ಹಾಗೂ ರೇಡಾರ್ ವ್ಯವಸ್ಥೆ ಅಳವಡಿಸಲಾಗಿದೆ. ಟ್ರಾಫಿಕ್ ದಟ್ಟನೆ ಹೆಚ್ಚಾದಲ್ಲಿ ಸಿಗ್ನಲ್‌ನಲ್ಲಿ ಬದಲಾವಣೆ ಸೇರಿದಂತೆ ಮೊದಲಾದವನ್ನು ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಮಾಡಲಿದೆ. ಈಗಾಗಲೇ 75ಕ್ಕೂ ಹೆಚ್ಚು ಕ್ಯಾಮೆರಾ ಸ್ಮಾರ್ಟ್ ಸಿಟಿಯಿಂದ ಅಳವಡಿಸಲಾಗಿದ್ದು ಮುಂದೆ 250ಕ್ಕೂ ಹೆಚ್ಚು ಅತ್ಯಾಧುನಿಕ ಕ್ಯಾಮೆರಾ ಅಳವಡಿಸಬೇಕಾಗಿದೆ. ಒಟ್ಟಿನಲ್ಲಿ ಇನ್ಮುಂದೆ ಮಂಗಳೂರು ನಗರದಲ್ಲಿ ವಾಹನಸವಾರರು ಬೇಕಾಬಿಟ್ಟಿ ಸಂಚಾರ ಸುಲಭವಲ್ಲ ಎಂಬುದನ್ನು ಅರಿತು ತಮ್ಮ ಸುರಕ್ಷತೆಗೆ ಮಹತ್ವ ನೀಡಬೇಕಾದ ಅವಶ್ಯಕತೆ ಇದೆ ಎಂದು ತಿಳಿದವರು ಹೇಳುತ್ತಿದ್ದಾರೆ.

Read More

ಸುಳ್ಯ: ಮೈಮೇಲೆ ಮರಬಿದ್ದು ವೃದ್ಧೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಳಿಯಲ್ಲಿ ನಡೆದಿದೆ. ಬಸವನಮೂಲೆ ನಿವಾಸಿ ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ ಬಸವನಮೂಲೆ (65) ಮೃತ ದುರ್ದೈವಿ. ಮೀನಾಕ್ಷಿಯವರು ತಮ್ಮ ತೋಟದಲ್ಲಿ ಕಟ್ಟಿದ್ದ ಜಾನುವಾರು ಬಿಡಿಸಿ ತರಲು ಸಂಜೆ ತೆರಳಿದ್ದರು. ಈ ವೇಳೆ ಜೋರಾಗಿ ಗಾಳಿ‌ – ಮಳೆ ಬಂದಿದೆ. ಆಗ ಬೃಹತ್ ಗಾತ್ರದ ಮರವೊಂದು ಮೀನಾಕ್ಷಿಯವರ ಮೇಲೆಯೇ ಬಿದ್ದಿದೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Read More

ಮಂಗಳೂರು : ಕಾರಿನಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ನಿಷೇಧಿತ ಮಾದಕದ್ರವ್ಯ ಎಂಡಿಎಂಎಯನ್ನು ಸಾಗಾಟ ಮಾಡುತ್ತಿದ್ದವನನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಜೈ ಚರ್ಚ್ ಬಳಿಯ ಬಿಜೈ ನ್ಯೂರೋಡ್ ನಿವಾಸಿ ಮೊಹಮ್ಮದ್ ಅಮೀನ್ ರಾಫಿ(23), ಅಡ್ಡೂರು, ಬಂಡ್ಸಾಲೆ ಹೌಸ್ ನಿವಾಸಿ ಮೊಹಮ್ಮದ್ ಸಿನಾನ್ ಅಬ್ದುಲ್ಲಾ(23), ಬಂದರು, ಜೆ.ಎಂ.ಕ್ರಾಸ್ ರಸ್ತೆಯ ನಿವಾಸಿಮೊಹಮ್ಮದ್ ನೌಮಾನ್(22), ಉಳ್ಳಾಲದ ಬೋಳಿಯಾರ್ ನಿವಾಸಿ ಮೊಹಮ್ಮದ್ ಸಫೀಲ್(23) ಬಂಧಿತ ಆರೋಪಿಗಳು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ನಗರದ ಹೊರವಲಯದ ದೇರಳಕಟ್ಟೆಯಲ್ಲಿ ಎಂಡಿಎಂಎ ಮಾದಕದ್ರವ್ಯವನ್ನು ಸಾಗಾಟ ಮಾಡುತ್ತಿದ್ದ ಕಾರನ್ನು ಪತ್ತೆ ಹಚ್ಚಿದ್ದಾರೆ‌. ಈ ವೇಳೆ ಕಾರಿನಲ್ಲಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 270 ಗ್ರಾಂ ತೂಕದ 6,50,000 ರೂ‌ ಮೌಲ್ಯದ ಎಂಡಿಎಂಎ, 4 ಮೊಬೈಲ್ ಫೋನ್ ಗಳು, ಟೊಯೊಟಾ ಕೊರೊಲ್ಲಾ ಕಾರು, ಡಿಜಿಟಲ್ ತೂಕ ಮಾಪಕವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 14,85,500/- ಆಗಬಹುದು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ…

Read More

ಏನಿದು ಡ್ರೀಮ್ ಡೀಲ್ ಉಳಿತಾಯ ಯೋಜನೆ . !? ಇದರ ಪೂರ್ಣ ಮಾಹಿತಿ ಏನು!? ತಿಂಗಳಿಗೆ ಎಷ್ಟು ಹಣ ಕಟ್ಟಬೇಕು ಮತ್ತು ಎಷ್ಟು ತಿಂಗಳು ಕಟ್ಟಬೇಕು? ಕೊನೆಯವರೆಗೆ ಗೆಲ್ಲದವರಿಗೆ ಏನು ಬಹುಮಾನವಿದೆ!? ಇದರ ಸದಸ್ಯರಾಗುವುದು ಹೇಗೆ ಮತ್ತು ಯಾರಿಗೆಲ್ಲ ಸೇರಬಹುದು!? ಸರ್ಫ್ರೈಸ್ ಗಿಫ್ಟ್ ಏನಿದು!? ಈ ರೀತಿಯ ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಸಂಕ್ಷಿಪ್ತ ಉತ್ತರ👇🏻 ಏನಿದು ಡ್ರೀಮ್ ಡೀಲ್ !? ಡ್ರೀಮ್ ಡೀಲ್ ಅನ್ನುವುದು, ಬಡವರ ಕನಸಿಗೆ ಬೆಳಕಾಗುವ ಒಂದು ವಿಭಿನ್ನ ಯೋಜನೆ. ಮಂಗಳೂರು ಬೆಳ್ತಂಗಡಿ ಮಡಿಕೇರಿ ಮೈಸೂರ್ ಉತ್ತರಕನ್ನಡ ಚಿಕ್ಕಮಂಗಳೂರು ಉಡುಪಿ ಬೆಂಗಳೂರು ಭಾಗದಲ್ಲಿ ಪ್ರಪ್ರಥಮವಾಗಿ ಆರಂಭವಾಗಿರುವ, ಆರು ಮನೆಗಳು ಹಾಗು ಕಾರು, ಬೈಕು, ಆಕ್ಟಿವಾ, ಚಿನ್ನ, ಡೈಮಂಡ್, ನಗದು, ಟೂರ್ ಪ್ಯಾಕೇಜ್ ಹೀಗೆ ಲಕ್ಷಾಂತರ ಬಹುಮಾನಗಳ ಸುರಿಮಳೆಯೇ ಇರುವ ಒಂದು ವಿಭಿನ್ನ ಸ್ಕೀಮ್ ಯೋಜನೆಯ ಹೆಸರೇ ಡ್ರೀಮ್ ಡೀಲ್. ಈ ಯೋಜನೆಯ ಪೂರ್ಣ ಮಾಹಿತಿ.. ಇದೊಂದು ಸೇವಿಂಗ್ ಪ್ಲಾನ್. ಅಂದರೆ, ನಿಮ್ಮ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ…

Read More

ಪಡುಬಿದ್ರಿ: ಕಳೆದ ಮೂರು ದಿನಗಳ ಹಿಂದೆ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆ ಬಾಗಿಲಲ್ಲಿ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿ ಕೋಡಿ ಸಮುದ್ರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಶವವಾಗಿ ಪತ್ತೆಯಾದ ಯುವಕ ಬಜಪೆ ಅದ್ಯಪಾಡಿ ಹಳೆ ವಿಮಾನ ನಿಲ್ದಾಣ ಬಳಿ ನಿವಾಸಿ ಅಭಿಲಾಶ್ (24). ಈತ ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ತನ್ನ ಸುಮಾರು ಹತ್ತು ಮಂದಿ ಗೆಳೆಯರೊಂದಿಗೆ ಮುಲ್ಕಿಯ ಕೊಳಚಿ ಕಂಬಳ ಶಾಂಭವಿ ಹೊಳೆಗೆ ಮರುವಾಯಿ ಚಿಪ್ಪು ಹಾಗೂ ಏಡಿ ಹಿಡಿಯಲು ಬಂದಿದ್ದು, ಅಲ್ಲಿ ಹೊಳೆಯಲ್ಲಿ ನೀರಿನ ಇಳಿತ ಇದ್ದ ಕಾರಣ ಮುಂದೆ ಸುಮಾರು ಎರಡು ಕೀ.ಮಿ. ನಡೆದುಕೊಂಡು ಹೋಗಿ ಸಸಿಹಿತ್ಲು ಅಳಿವೆ ಬಳಿ ಸಮುದ್ರಕ್ಕಿಳಿದು ತೆರೆಯ ಅಬ್ಬರಕ್ಕೆ ಈತ ನೀರು ಪಾಲಾಗಿದ್ದ. ಬಹಳಷ್ಟು ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಹೆಜಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯ ಯುವಕರು ಶವವನ್ನು ದಡ ಸೇರಿಸಿದ್ದು, ಪಡುಬಿದ್ರಿ ಪೊಲೀಸರು…

Read More

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ಪುತ್ತೂರಿನ ನರಿಮೊಗರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಂಡಡ್ಕ ನಿವಾಸಿ ಮೋಕ್ಷಿತ್ ಗೌಡ (23) ಮೃತಪಟ್ಟ ಯುವಕ. ಮೋಕ್ಷಿತ್ ಗೌಡ ಪುರುಷರಕಟ್ಟೆಯಲ್ಲಿರುವ ಬಿಂದು ಫ್ಯಾಕ್ಟರಿಯಲ್ಲಿ ಸಿಫಾನ್ ಮೆಷಿನ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪುರುಷರಕಟ್ಟೆಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯವಿದ್ದರು‌. ಮೋಕ್ಷಿತ್ ಸರ್ವಿಸ್ ಗೆ ಇಟ್ಟಿದ್ದ ತನ್ನ ಬೈಕನ್ನು ವಾಪಾಸು ತರುತ್ತಿದ್ದ ವೇಳೆ ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆಯ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Read More

ನವದೆಹಲಿ: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗುವ ಸಾಧ್ಯತೆ ಇದೆ. ಸದ್ಯದಲ್ಲೇ ಮೊಬೈಲ್ ಟೆಲಿಕಾಂ ಕಂಪನಿಗಳು ಶುಲ್ಕವನ್ನು ಶೇ.25ರಷ್ಟು ಹೆಚ್ಚಿಸಲು ಯೋಜಿಸುತ್ತಿವೆ ಎಂದು ವರದಿಯಾಗಿದೆ.  ದೂರಸಂಪರ್ಕ ಕಂಪನಿಗಳು ಗ್ರಾಹಕರಿಗೆ 5ಜಿ ಸೇವೆಯನ್ನು ಒದಗಿಸಲು ಅಪಾರ ಹಣ ವಿನಿಯೋಗ ಮಾಡಿದೆ. ಹೀಗಾಗಿ ಇದರ ಲಾಭವನ್ನು ಪಡೆಯುವ ಸಲುವಾಗಿ ಮೊಬೈಲ್ ಸೇವೆಯ ಶುಲ್ಕವನ್ನು ಹೆಚ್ಚಿಸಲಾಗುತ್ತಿದೆ. ಇನ್ನು ಇದರೊಂದಿಗೆ ಹಂತ ಹಂತವಾಗಿ ಕಡಿಮೆ ಮೌಲ್ಯದ ಪ್ಯಾಕ್ ಗಳನ್ನು ರದ್ದು ಮಾಡಲಾಗುತ್ತದೆ ಎನ್ನಲಾಗಿದೆ. ನಗರ ಪ್ರದೇಶಗಳಲ್ಲಿ ವಾಸಿಸುವ ಗ್ರಾಹಕರ ವೆಚ್ಚವು 3.2 ಪ್ರತಿಶತದಿಂದ 3.5 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಇದೇ ವೇಳೆಯಲ್ಲಿ, ಹಳ್ಳಿಗಳಲ್ಲಿ ವಾಸಿಸುವ ಗ್ರಾಹಕರ ಟೆಲಿಕಾಂ ಮೇಲಿನ ವೆಚ್ಚವು 5.2 ಪ್ರತಿಶತದಿಂದ 5.9 ಪ್ರತಿಶತಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ.

Read More

ಬಂಟ್ವಾಳ: ಲಾರಿಯಡಿಗೆ ಬಿದ್ದು ಬೈಕ್ ಸವಾರನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಮಾರಿಪಳ್ಳದಲ್ಲಿ ಮಂಗಳವಾರ ಸಂಜೆ ನಡೆದಿದೆ. ಉತ್ತರ ಪ್ರದೇಶ ಮೂಲದ ಪ್ರಸ್ತುತ ಪ್ರಸ್ತುತ ಉಡುಪಿ ನಿವಾಸಿ ಸೋನು (19) ಮೃತ ಯುವಕ.ಘಟನೆಯಲ್ಲಿ ಸಹಸವಾರ ಪ್ರಸಾದ್ ಪೂಜಾರಿ ಕಾರ್ಕಳ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋನು ಹಾಗೂ ಪ್ರಸಾದ್ ಅವರು ನೆಲ್ಯಾಡಿಯಲ್ಲಿರುವ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಮಂಗಳೂರಿಗೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಜಂಕ್ಷನ್ ನಲ್ಲಿ ಹೆದ್ದಾರಿಯಲ್ಲಿ ಅಡ್ಡಲಾಗಿ ಇರಿಸಲಾದ ಬ್ಯಾರಿಕೇಡ್ ನ್ನು ಗಮನಿಸದ ಬೈಕ್ ಸವಾರ ಕಂಟೇನರ್ ಲಾರಿಯೊಂದನ್ನು ಓವರ್ ಟೇಕ್ ಮಾಡುವ ರಭಸಕ್ಕೆ ಬ್ಯಾರಿಕೇಡ್ ಗೆ ಡಿಕ್ಕಿಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರ ಹಾಗೂ ಸಹಸವಾರ ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಹಿಂಬದಿಯಲ್ಲಿ ಬರುತ್ತಿದ್ದ ಅದೇ ಕಂಟೇನರ್ ಲಾರಿಯ ಚಕ್ರದಡಿಗೆ ಸಿಲುಕಿಕೊಂಡಿದ್ದಾರೆ.ಇದರಲ್ಲಿ ಸೋನು ಸ್ಥಳದಲ್ಲಿಯೇ ಮೃತಪಟ್ಟರೆ,…

Read More

ಕಾಸರಗೋಡು : ಸುಮಾರು 4. 76 ಕೋಟಿ ರೂ . ಗಳ ಸಾಲ ತೆಗೆದು ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಪರಾರಿಯಾದ ಘಟನೆ ಕಾರಡ್ಕದಲ್ಲಿ ನಡೆದಿದೆ. ಕಾರಡ್ಕ ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಕೆ .ರತೀಶ್ ವಿರುದ್ಧ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದಸ್ಯರ ಗಮನಕ್ಕೆ ತರದೆ ಸಾಲ ತೆಗೆದು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ. ರತೀಶ್ ಸಂಸ್ಥೆಗೆ ಬಂದಿಲ್ಲ,ರಜೆ ಅರ್ಜಿ ಕೂಡ ನೀಡಿಲ್ಲ, ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ . ಇದರಿಂದ ಸಂಶಯಗೊಂಡು ಸಹಾಯಕ ನೋಂದಣಾಧಿಕಾರಿಯವರಲ್ಲಿ ತಪಾಸಣೆ ನಡೆಸಲು ಸೂಚಚಿಸಿದ್ದು , ಈ ವೇಳೆ ಭಾರೀ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ನಲ್ಲಿ ಹಲವಾರು ಮಂದಿಯ ಚಿನ್ನಾಭರಣವನ್ನು ಅಡವಿಟ್ಟ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೊಸೈಟಿ ಅಧ್ಯಕ್ಷ ಸೂಫಿ ನೀಡಿದ ದೂರಿನಂತೆ ಆದೂರು ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ

Read More

ಭಾರತದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿತರಾಗಿದ್ದ ಐವರು ಭಯೋತ್ಪಾದಕರಿಗೆ ದೆಹಲಿ ಎನ್​ಐಎ ಕೋರ್ಟ್ ಜೈಲುಶಿಕ್ಷೆ ವಿಧಿಸಿದೆ. ಇದೇ ವೇಳೆ ಬೆಂಗಳೂರಿನ ನೇತ್ರತಜ್ಞ, ಶಂಕಿತ ಉಗ್ರ ಡಾ. ಅಬ್ದುರ್ ರೆಹಮಾನ್ ಅಲಿಯಾಸ್ ಡಾ. ಬ್ರೇವ್ ವಿರುದ್ಧದ ಕೋರ್ಟ್ ವಿಚಾರಣೆ ಮುಂದುವರಿದಿದ್ದು, ಶಿಕ್ಷೆಗೆ ಒಳಗಾಗಿರುವ ಉಗ್ರರು ದೇಶದಲ್ಲಿ ಒಂದೇ ದಿನ 100 ಕಡೆ ಸುಧಾರಿತ (ಐಇಡಿ) ಬಾಂಬ್​ಗಳನ್ನು ಸ್ಪೋಟಿಸಲು ಸಂಚು ರೂಪಿಸಿದ್ದರೆಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಇದಲ್ಲದೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಕಾಯ್ದೆ ವಿರೋಧಿಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಯುವಕರಿಗೆ ಉತ್ತೇಜನ ಕೊಟ್ಟಿದ್ದ ವಿಚಾರವೂ ಎನ್​ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಖೊರಸನ್ ಪ್ರಾವಿನ್ಸ್ (ಐಎಸ್​ಕೆಪಿ) ಸಂಘಟನೆಯ ಸದಸ್ಯರಾಗಿದ್ದ ಉಗ್ರರು, ಐಸಿಸ್ ಸಿದ್ಧಾಂತ ಪ್ರಚಾರ ಮಾಡುವ ಮುಖೇನ ದೇಶದಲ್ಲಿ ಹಿಂಸಾಚಾರವೆಸಗಲು ಸಂಚು ರೂಪಿಸಿದ್ದರು. ದೆಹಲಿಯ ಜಹನ್​ಜೇಬ್ ಸಮಿ ವಾನಿ ಮತ್ತು ಈತನ ಪತ್ನಿ ಹೀನಾ ಬಷೀರ್ ಬೇಗ್, ಪುಣೆಯ…

Read More