ಪುತ್ತೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಮಾನಸಿಕ ಅಸ್ವಸ್ಥನೊಬ್ಬ ಯದ್ವಾತದ್ವ ಚಲಾಯಿಸಿದ ಘಟನೆ ಶನಿವಾರ ಸಂಜೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ನಡೆದಿದೆ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವ್ಯಕ್ತಿಯನ್ನು ಕೇರಳದ ಕೊಟ್ಟಾಯಂ ನಿವಾಸಿ ಅರುಣ್ ಎಂದು ಗುರುತಿಸಲಾಗಿದೆ. ಈತ ಕಾರನ್ನು ಯದ್ವಾತದ್ವಾ ಚಲಾಯಿಸಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಇನ್ನು ಆತನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Author: main-admin
ಉಪ್ಪಿನಂಗಡಿ: ಮನೆಗೆ ಬಂದ ಅಪರಿಚಿತರಿಬ್ಬರು ಕುಡಿಯಲು ನೀರು ಕೇಳಿ ಬಳಿಕ ಮನೆಯಲ್ಲಿದ್ದ ಮಹಿಳೆಗೆ ಚೂರಿಯನ್ನು ತೋರಿಸಿ ಬೆದರಿಸಿ ಚಿನ್ನ ದೋಚಿ ಪರಾರಿಯಾಗಿರುವ ಘಟನೆ ಮೇ.11ರಂದು ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಸುಹೈಬಾ ಎಂಬವರು ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಹೈಬಾ ಎಂಬವರ ಮನೆಯ ಅಂಗಳಕ್ಕೆ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಮಹಿಳೆ ಬಂದಿದ್ದು ಅಪರಿಚಿತರಿಬ್ಬರು ಸುಹೈಬಾರಲ್ಲಿ ಮಾತನಾಡಿ ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿ. ಕುಡಿಯಲು ನೀರು ಕೇಳಿದ್ದರು. ನೀರು ತರಲು ತೆರಳಿದಾಗ, ಅಪರಿಚಿತರು ಮನೆಯ ಒಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡ್ರೇಜ್ ಬಾಗಿಲು ತೆರೆದು ಹುಡುಕಾಡುತ್ತಿರುವುದನ್ನು ಕಂಡ ಸುಹ್ಮಬಾ ಬೊಬ್ಬೆ ಹಾಕಿ ತನ್ನ ಗಂಡನಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ್ದು, ಅಪರಿಚಿತ ವ್ಯಕ್ತಿಗಳು ಸುಹೈಬಾ ಅವರ ಕೈಯಲ್ಲಿದ್ದ ಮೊಬೈಲ್ ಫೋನನ್ನು ಎಳೆದು ಬಿಸಾಡಿ. ಹಲ್ಲೆ ನಡೆಸಿ. ಚೂರಿಯನ್ನು ತೋರಿಸಿ ಬೆದರಿಸಿ, ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು…
ಮಣಿಪಾಲ: ಹಾಸ್ಟೆಲ್‌ನಲ್ಲಿ ವಾಸವಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ಹಿತೇಂದ್ರ (26) ಅವರು ಜೀವನದಲ್ಲಿ ಜಿಗುಪ್ಪೆಯಿಂದ ತಾನು ವಾಸವಿದ್ದ ರೂಮ್ ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿಗೆ ಕರೆ ಮಾಡಿ ಕಾಲೇಜಿನಲ್ಲಿ ನಡೆದ ಪ್ರೆಸೆಂಟೇಶನ್ ಸರಿಯಾಗಿ ಮಾಡಿಲ್ಲವೆಂದು ಬೇಜಾರು ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಿಯಾಗಿ ಮಾಡುವುದಾಗಿ ತಿಳಿಸಿದ್ದ ಎಂದು ತಿಳಿದು ಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್‌ಗಳು (HSRP) ಅಳವಡಿಕೆಗೆ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಈಗಾಗಲೇ 3 ಬಾರಿ ಅವಧಿ ವಿಸ್ತರಣೆ ಮಾಡಿ ಮೇ 31ಕ್ಕೆ ಗಡುವು ವಿಸ್ತರಿಸಿದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯದಲ್ಲಿ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಗತ್ಯವಿದೆ ಎಂದು ಸಾರಿಗೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಎರಡು ಗಡುವಿನ ವಿಸ್ತರಣೆಗಳ ಹೊರತಾಗಿಯೂ, ರಾಜ್ಯದಲ್ಲಿ ಕೇವಲ 34 ಲಕ್ಷ ಎಚ್‌ಎಸ್‌ಆರ್ಪಿಗಳು ಮಾತ್ರ ನೋಂದಾಯಿಸಲ್ಪಟ್ಟಿವೆ. ಹೆಚ್ಚುವರಿ ಸಾರಿಗೆ ಆಯುಕ್ತ (ಜಾರಿ) ಸಿ.ಮಲ್ಲಿಕಾರ್ಜುನ ಮಾತನಾಡಿ, ಫೆಬ್ರವರಿಯಿಂದ ಸುಮಾರು 18 ಲಕ್ಷ ನೋಂದಣಿಗಳು ನಡೆದಿವೆ ಮತ್ತು ಹೆಚ್ಚಿನ ವಾಹನಗಳು ಇನ್ನೂ ಎಚ್‌ಎಸ್‌ಆರ್ಪಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ 2019 ರ ಏಪ್ರಿಲ್ 1ಕ್ಕಿಂತ ಹಿಂದೆ ನೋಂದಾಯಿಸಿದ ದ್ವಿಚಕ್ರ, ತ್ರಿಚಕ್ರ, ಲಘು ಮೋಟಾರು…
ಬಂಟ್ವಾಳ: ಖೋಟಾ ನೋಟು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಓರ್ವ ಮಹಿಳೆ ಹಾಗೂ ಇನ್ನೋರ್ವ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಿ ಸಿ ರೋಡಿನಲ್ಲಿ ಶುಕ್ರವಾರ ರಾತ್ರಿ ಬಂಧಿಸಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಾಸರಗೋಡು ತಾಲೂಕಿನ ಮೊಹಮ್ಮದ್ ಸಿ ಎ (61), ಉಬೈದಾ ಮಂಝಿಲ್ ನಿವಾಸಿ ಕಮರುನ್ನೀಸಾ (41) ಹಾಗೂ ಪರಾರಿಯಾದವನನ್ನು ಶರೀಫ್ ಎಂದು ಹೆಸರಿಸಲಾಗಿದೆ. ಶುಕ್ರವಾರ ರಾತ್ರಿ ಬಿ ಸಿ ರೋಡು ಸೋಮಯಾಜಿ ಆಸ್ಪತ್ರೆಯ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಕೆ ಎಲ್ 14 ಟಿ777 ನೋಂದಣಿ ಸಂಖ್ಯೆಯ ಕಾರನ್ನು ಬಂಟ್ವಾಳ ನಗರ ಠಾಣಾ ಪಿಎಸ್ಸೆ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಪರಿಶೀಲಿಸಲು ತೆರಳಿದಾಗ ಕಾರಿನ ಚಾಲಕ ಸೀಟಿನಲ್ಲಿದ್ದಾತ ಹಾಗೂ ಇನ್ನೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದಾರೆ. ಕಾರಿನಲ್ಲಿ ಮಹಿಳೆಯು ಪತ್ತೆಯಾಗಿರುತ್ತಾಳೆ. ಪರಾರಿಯಾಗುತ್ತಿದ್ದವರ ಪೈಕಿ ಮೊಹಮ್ಮದ್ ಸಿ ಎ ಹಾಗೂ ಕಮರುನ್ನಿಸಾ ಎಂಬವರನ್ನು ಪೊಲೀಸರು ಹಿಡಿದಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ…
ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ಹೋಟೆಲ್ ವೈಟರ್‌ನಿಂದ ಲಕ್ಷಾಂತರ ರೂ ಆನ್‌ಲೈನ್‌ನಲ್ಲಿ ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. ಹೆಜಮಾಡಿಯ ಕ್ರಿಸ್ಟನ್ ಡಿ’ಸೋಜಾ ವಂಚನೆಗೊಳಗಾದವರು. ಹೂಡೆಯ ಹೋಟೆಲ್‌ವೊಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿರುವ ಇವರಿಗೆ ಗ್ಲೋಬಲ್ ಕೆರಿಯರ್ ಸೊಲ್ಯೂಶನ್ ಎಂಬ ಕಂಪೆನಿಯ ಹೆಸರಿನಲ್ಲಿ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕರೆ ಬಂದಿತ್ತು. ಸುಮಿತ್ ಹಾಗೂ ಸುಭಾಸ್ ಚೌವ್ಹಾಣ್ ತಾವು ಮ್ಯಾನೇಜರ್‌ಗಳು ಎಂದು ಪರಿಚಯಿಸಿಕೊಂಡು ಹಣವನ್ನು ಕೇಳಿ ಗೂಗಲ್ ಪೇ ಮೂಲಕ ಒಟ್ಟು 4,42,645 ರೂ. ಪಡೆದು ಉದ್ಯೋಗವನ್ನೂ ಕೊಡಿಸದೆ ಹಣವನ್ನೂ ವಾಪಸ್ ನೀಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮುಂಗಾರು ಮಳೆ ಪ್ರಾರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಪ್ರತಿಸಲದಂತೆ ಈ ಬಾರಿಯೂ ಕೊಂಕಣ್ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದ್ದು, ಪ್ರಯಾಣಿಕರು ತಮ್ಮ ರೈಲುಗಳ ವೇಳಾಪಟ್ಟಿಯನ್ನು ನ್ಯಾಷನಲ್ ಟ್ರೇನ್ ಎನ್‌ಕ್ವಯರಿ ಸಿಸ್ಟಂ ವೆಬ್‌ಸೈಟ್ (https://enquiry.indianrail.gov.in/mntes) ಸಂದರ್ಶಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಬದಲಾದ ಸಮಯ ಜೂನ್ 10ರಿಂದ ಅಕ್ಟೋಬರ್ 31ರ ವರೆಗೆ ಚಾಲ್ತಿಯಲ್ಲಿ ಇರಲಿದೆ. ಸಮಯ ಬದಲಾದ ರೈಲುಗಳು: ಎರ್ನಾಕುಳಂ ಜಂಕ್ಷನ್–ಪುಣೆ ಜಂಕ್ಷನ್ (ರೈಲು ಸಂಖ್ಯೆ: 22149) ಮತ್ತು ಎರ್ನಾಕುಳಂ ಜಂಕ್ಷನ್–ಹಜರತ್ ನಿಜಾಮುದ್ದೀನ್ ಜಂಕ್ಷನ್ (ರೈಲು ಸಂಖ್ಯೆ:22655) ರೈಲುಗಳು ಮುಂಜಾನೆ 5.15ರ ಬದಲು ಮುಂಜಾನೆ 2.15ಕ್ಕೆ ಹೊರಡಲಿವೆ. ಮಡಗಾಂವ್ ಜಂಕ್ಷನ್–ಮಂಗಳೂರು ಸೆಂಟ್ರಲ್ (10107) ರೈಲು ಮುಂಜಾನೆ 4 ಗಂಟೆಯ ಬದಲು ಮುಂಜಾನೆ 4.40ಕ್ಕೆ ಹೊರಡಲಿದೆ. ಕೊಚ್ಚುವೇಲಿ–ಯೋಗ್ ನಗರಿ ಋಷಿಕೇಶ್ (22659), ಕೊಚ್ಚುವೇಲಿ–ಚಂಡೀಗಢ (12217), ಕೊಚ್ಚುವೇಲಿ–ಅಮೃತಸರ (12483) ರೈಲುಗಳು ಬೆಳಿಗ್ಗೆ 9.10ರ ಬದಲು ಮುಂಜಾನೆ 4.50ಕ್ಕೆ ಹೊರಡಲಿವೆ. ತಿರುನಲ್ವೇಲಿ ಜಂಕ್ಷನ್–ಜಾಮ್‌ನಗರ್ (19577) ಮತ್ತು ತಿರುನಲ್ವೇಲಿ ಜಂಕ್ಷನ್–ಗಾಂಧಿಧಾಮ್ (20923) ರೈಲುಗಳು…
ತಿರುವನಂತಪುರ : ಇತ್ತೀಚೆಗೆ ಕಣಗಿಲೆ ಹೂವನ್ನು ತಿಂದು ಯುವತಿಯೊಬ್ಬಳು ಸಾವನಪ್ಪಿದ ಬೆನ್ನಲ್ಲೇ ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿಯ ತನ್ನ ಅಧೀನದಲ್ಲಿರುವ ಎಲ್ಲಾ ದೇವಸ್ಥಾನಗಳಲ್ಲಿ ನೈವೇದ್ಯ ಮತ್ತು ಪ್ರಸಾದದಲ್ಲಿ ಕಣಗಿಲೆ ಹೂವು ಬಳಕೆ ಮಾಡಬಾರದು ಎಂದು ಆದೇಶಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಡಿಬಿ ಅಧ್ಯಕ್ಷ ಪ್ರಶಾಂತ್, ‘ಅಲಪ್ಪುಳ ದೇಗುಲದಲ್ಲಿ ಪ್ರಸಾದ ರೂಪದಲ್ಲಿ ನೀಡಿದ ಕಣಗಿಲೆ ಹೂ ಸೇವಿಸಿ ಮಹಿಳೆಯೊಬ್ಬರು ಮೃತ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಅದೇ ರೀತಿ ಪಟ್ಟಣಂತಿಟ್ಟದಲ್ಲೂ ಇದೇ ರೀತಿಯ ಘಟನೆಗಳು ನಡೆದಿವೆ. ಆದ್ದರಿಂದ ಕಣಗಿಲೆ ಹೂವನ್ನು ದೇಗುಲಗಳಲ್ಲಿ ಬಳಸಬಾರದು ಎಂದು ಟಿಡಿಬಿ ತೀರ್ಮಾನಿಸಿದೆ. ಇದರ ಬದಲಾಗಿ ಗುಲಾಬಿ, ತುಳಸಿ, ತೇಚಿ, ದಾಸವಾಳ, ಮಲ್ಲಿಗೆ ಹೂಗಳನ್ನು ಬಳಸಬಹುದು ಎಂದು ತಿಳಿಸಿದ್ದಾರೆ.
ಮಂಗಳೂರು: ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ಸಿಬ್ಬಂದಿಯೊಂದಿಗೆ ಅಶಿಸ್ತಿನಿಂದ ವರ್ತಿಸಿ, ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ ಪ್ರಯಾಣಿಕನನ್ನು ಮಂಗಳೂರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಬಜ್ಪೆ ಠಾಣಾ ಪೊಲೀಸ್ ವಶಕ್ಕೊಪ್ಪಿಸಿದ್ದಾರೆ. ಕೇರಳದ ಕಣ್ಣೂರು ನಿವಾಸಿ ಮುಹಮ್ಮದ್ ಬಿ.ಸಿ. ಅಶಿಸ್ತಿನಿಂದ ವರ್ತಿಸಿದ ವ್ಯಕ್ತಿ. ಮೇ 8ರಂದು ದುಬೈನಿಂದ ಮಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಮುಹಮ್ಮದ್ ಬಿ.ಸಿ. ಪ್ರಯಾಣಿಸುತ್ತಿದ್ದರು. ಈತ ಪ್ರಯಾಣದ ವೇಳೆ ವಿಮಾನದ ಸಿಬ್ಬಂದಿಯೊಂದಿಗೆ ಅಶಿಸ್ತಿನಿಂದ ವರ್ತಿಸಿ ಇತರ ಪ್ರಯಾಣಿಕರಿಗೆ ತೊಂದರೆ ನೀಡಿದ್ದ. ಆತನ ವರ್ತನೆ ಇತರ ಪ್ರಯಾಣಿಕರಿಗೆ ಅಪಾಯಕಾರಿ ಎಂಬಂತೆ ತೋರುತ್ತಿತ್ತು ಎನ್ನಲಾಗಿದೆ. ಅದರಂತೆ ವಿಮಾನ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪುತ್ತಿದ್ದಂತೆ ಆತನನ್ನು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನೊಂದಿಗೆ ಬಜ್ಪೆ ಠಾಣೆಗೆ ಹಸ್ತಾಂತರಿಸಿದ್ದಾರೆ. ಸದ್ಯ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು: ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಹಿರಿಯ ನಾಗರಿಕರೊಬ್ಬರಿಗೆ 1.60 ಕೋಟಿ ರೂ. ವಂಚಿಸಿದ ಘಟನೆ ನಡೆದಿರುವ ವರದಿಯಾಗಿದೆ. ಆನ್‌ಲೈನ್ ಮೂಲಕ ಹಣ ಕಳೆದುಕೊಂಡಿರುವ ವ್ಯಕ್ತಿ ಇದೀಗ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಣ ಕಳೆದುಕೊಂಡಿರುವ ವ್ಯಕ್ತಿಗೆ ಇತ್ತೀಚೆಗೆ ಪೊಲೀಸ್ ಅಧಿಕಾರಿ ಎಂದು ಕರೆ ಮಾಡಿ ನೀವು ಮುಂಬೈನಿಂದ ಥಾಯ್ಲೆಂಡ್‌ಗೆ ಕಳುಹಿಸಿದ ಪಾರ್ಸೆಲ್‌ನಲ್ಲಿ ನಿಷೇಧಿತ ವಸ್ತು ಇದೆ ಎಂಬ ಕಾರಣ ನೀಡಿ ಥಾಯ್ಲೆಂಡ್‌ನ ಕಸ್ಟಮ್ಸ್‌ನ ಅಧಿಕಾರಿಗಳು ತಡೆ ಹಿಡಿದಿದ್ದಾರೆ. ಈ ಪ್ರಕರಣವನ್ನು ಮುಂಬೈನ ಸೈಬರ್ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ ಎನ್ನಲಾಗಿದೆ. ಈ ಪಾರ್ಸೆಲ್ ವಿವಾದವನ್ನು ಬಗೆಹರಿಸಲು ತಾನು ಹೇಳಿದಷ್ಟು ಹಣವನ್ನು ಠೇವಣಿಯಾಗಿ ಇಡಬೇಕು. ಈ ಹಣವನ್ನು ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ವಾಪಸ್ ನೀಡಲಾಗುವುದು. ಹಣ ಪಾವತಿಸದಿದ್ದರೆ ವಿದೇಶದಲ್ಲಿ ಕಲಿಯುತ್ತಿರುವ ನಿಮ್ಮ ಮಗ ಮತ್ತು ಮಗಳನ್ನು ಬಂಧಿಸುವುದಾಗಿ ಆತ ತಮಗೆ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಂಚನೆಗೊಳಗಾದ ವ್ಯಕ್ತಿ ತಿಳಿಸಿದ್ದಾರೆ. ಮುಂಬೈನ ಪೊಲೀಸ್ ಅಧಿಕಾರಿಯೆಂದು ಪರಿಚಯಿಸಿಕೊಂಡ…