Author: main-admin

ಪುತ್ತೂರು: ಇಲ್ಲಿನ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನ ಸಾವಿನ ಹಿಂದೆ ಅನುಮಾನದ ಹುತ್ತ ಬೆಳೆದಿದೆ. ಕುತ್ತಿಗೆಗೆ ನಾಯಿ ಸಂಕೋಲೆ ಬಿಗಿದ ಪರಿಣಾಮದಿಂದಲೇ ಆಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಚೇತನ್ (33) ಮೃತಪಟ್ಟ ಯುವಕ. ಈ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೋಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚೇತನ್ ನೇಣು ಬಿಗಿದು ಮೃತಪಟ್ಟಿರುವ ಬಗ್ಗೆ ಆತನ ತಾಯಿ ಪೋಲೀಸ್ ದೂರು ದಾಖಲಿಸಿದ್ದರು‌. ಚೇತನ್ ಗುರುವಾರ ಮದ್ಯಪಾನ ಮಾಡಿ ಮನೆಗೆ ಬಂದಿದ್ದ. ಬಳಿಕ ತಾಯಿಯೊಂದಿಗೆ ಜಗಳವಾಡಿ ಮನೆಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದಾನೆ. ಇದನ್ನು ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ತಿಳಿಸಿದ್ದರು. ಅಲ್ಲಿಗೆ ಬಂದ ಚೇತನ್ ತಾಯಿ ಉಮಾವತಿಯವರು ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಹಾಕಿ ಮನೆಗೆ ಎಳೆದೊಯ್ದಿದ್ದರು. ಈ ವೇಳೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಚೇತನ್‌ನನ್ನು ಮನೆಗೆ ಎಳೆದೊಯ್ದಿದ್ದರು ಎನ್ನಲಾಗಿದೆ.…

Read More

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ತಂಡ ಮೂವರನ್ನು ಸಕಲೇಶಪುರ ತಾಲೂಕಿನ ಆನೆಮಹಲ್‌ನಲ್ಲಿ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಬಂಧಿತರನ್ನು ಸುಳ್ಯ ಮೂಲದ ಮುಸ್ತಫಾ ಪೈಚಾರ್, ಸೋಮವಾರಪೇಟೆ ಮೂಲದ ಇಲ್ಯಾಸ್ ಹಾಗೂ ಸಿರಾಜ್‌ ಎಂದು ಗುರುತಿಸಲಾಗಿದೆ. ಪ್ರವೀಣ್ ನೆಟ್ಟಾರು ಪ್ರಕರಣದ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿದ್ದ ಮುಸ್ತಫಾ ಪೈಚಾರ್ ಹಾಗೂ ಇಲ್ಯಾಸ್ ಆನೆಮಹಲ್‌ನ ಸಿರಾಜ್ ಬಳಿ ಕೆಲಸಕ್ಕೆ ಸೇರಿದ್ದರು ಎನ್ನಲಾಗಿದ್ದು, ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸಿರಾಜ್ ಅವರನ್ನೂ ಎನ್‌ಐಎ ತಂಡ ವಶಕ್ಕೆ ಪಡೆದಿದೆ ಎಂದು ತಿಳಿದು ಬಂದಿದೆ.

Read More

ಸುಳ್ಯ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ. ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ದೀಪಿಕಾ ಮೇ 7 ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಳು. ದೀಪಿಕಾ ನಾಪತ್ತೆಯಾದ ಬಗ್ಗೆ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೀಪಿಕಾ ಪುಸ್ತಕ ಮತ್ತು ಮೊಬೈಲ್ ಅನ್ನು ಕಾಲೇಜಿನಲ್ಲಿ ಬಿಟ್ಟು ನಾಪತ್ತೆಯಾಗಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರು ಯಾವುದೇ ಸುಳಿವು ದೊರಕಿರಲಿಲ್ಲ.ಮೇ 9ರಂದು ಪಾಂಡೇಶ್ವರ ಠಾಣೆಗೆ ವಿದ್ಯಾರ್ಥಿನಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿದ್ದು, ಆಕೆಯನ್ನು ಮಂಗಳೂರಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಎಂಎಸ್ಸಿ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿತ್ತು. ಅತಿಯಾದ ಒತ್ತಡದಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿ ತೆರಳಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.ದೀಪಿಕಾ ಪರೀಕ್ಷೆ ಮುಗಿಸಿದ ಆಕೆ ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ತೆರಳುವ ಬಸ್ಸನ್ನು…

Read More

ನವದೆಹಲಿ : ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಜನರಿಗೆ ಹವಾಮಾನ ಇಲಾಖೆ ಒಂದು ಗುಡ್ ನ್ಯೂಸ್ ಕೊಟ್ಟಿದ್ದು. ದೇಶದಲ್ಲಿ ಬಿಸಿಗಾಳಿ ಅಂತ್ಯಗೊಳ್ಳುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಸೋಮಾ ಸೇನ್‌ ತಿಳಿಸಿದ್ದಾರೆ. ಆದರೆ ಮೇ 10 ರಂದು ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ಮಾತ್ರ ಬಿಸಿಗಾಳಿ ಇರಲಿದೆ. ಹೀಗಾಗಿ ಅಲ್ಲಿ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬಂಗಾಳಕೊಲ್ಲಿಯಿಂದ ದೇಶದೊಳಗೆ ತೇವಾಂಶಭರಿತ ಗಾಳಿ ಬೀಸಲಿದ್ದು, ದೇಶದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬಿಸಿಗಾಳಿ ಇರುವ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಗುಡ್ಡಗಾಡು ಪ್ರದೇಶದಲ್ಲಿ 30 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಬಿಸಿಗಾಳಿ ಎನ್ನುವುದು ಗಾಳಿಯ ಉಷ್ಣತೆಯ ಸ್ಥಿತಿಯಾಗಿದ್ದು ಅದು ಉಂಟಾದಾಗ ಮಾನವನ ದೇಹಕ್ಕೆ ಮಾರಕವಾಗುತ್ತದೆ ಎಂದು ಐಎಂಡಿ ಹೇಳಿದೆ. ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಬಿಸಿಗಾಳಿ, ತಾಪಮಾನದ ಏರಿಕೆಯಿಂದಾಗಿ ಜನರು ತತ್ತರಿಸಿದ್ದರು.ಹಲವು ರಾಜ್ಯಗಳಲ್ಲಿ ಬರ ಜನರನ್ನು ಹೈರಾಣಗೊಳಿಸಿತ್ತು.

Read More

ಮಂಗಳೂರು: ರಿಕ್ಷಾ ಚಾಲಕನಿಗೆ ಮಾರಕಾಸ್ತ್ರದಿಂದ ಇರಿದಿರುವ ಘಟನೆ ಪಣಂಬೂರು ಬೀಚ್‌ ರಸ್ತೆಯಲ್ಲಿ ಗುರುವಾರ ನಡೆದಿದೆ. ಮಾರಕಾಸ್ತ್ರದಿಂದ ಇರಿತಕ್ಕೆ ಒಳಗಾದವರನ್ನು ಮಂಗಳೂರು ಬಂದರ್ ನಿವಾಸಿ ಅರಾಫತ್ (30) ಎಂದು ಗುರುತಿಸಲಾಗಿದೆ‌. ಅರಾಫತ್ ಮಂಗಳೂರು ನಗರ ವಲಯದ ರಿಕ್ಷಾ ಚಾಲಕರಾಗಿದ್ದು, ನಗರದಿಂದ ಪಣಂಬೂರಿಗೆ ಬಾಡಿಗೆ ಹೋಗಿ ಪ್ರಯಾಣಿಕರನ್ನು ಬಿಟ್ಟು ಪಣಂಬೂರು ಬೀಚ್ ಬಳಿಯ ಪಾರ್ಕ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅದೇ ರಿಕ್ಷಾ ಪಾರ್ಕ್‌ನಲ್ಲಿ ಬಾಡಿಗೆ ಮಾಡುತ್ತಿದ್ದ ನಾಲ್ವರು ರಿಕ್ಷಾ ಚಾಲಕರು “ಮ‌ಂಗಳೂರು ನಗರದ ರಿಕ್ಷಾ ಚಾಲಕರು ಇಲ್ಲಿ ಬಾಡಿಗೆ ಮಾಡಬಾರದೆಂದು ಆಕ್ಷೇಪಿಸಿ ಮಾರಕಾಸ್ತ್ರದಿಂದ ಇರಿದಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ‌.

Read More

ಕೇರಳ : ಲಂಡನ್ ನಲ್ಲಿ ನರ್ಸಿಂಗ್ ಕೆಲಸಕ್ಕೆ ಹೊರಡಲು ತಯಾರಾಗಿದ್ದ ಯುವತಿಯೊಬ್ಬಳು ಧಾರುಣವಾಗಿ ಸಾವನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಮೃತ ಯುವತಿಯನ್ನು ಸೂರ್ಯ ಸುರೇಂದ್ರನ್ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯವಾಗಿ ಮಲೆಯಾಳಂ ಭಾಷೆಯಲ್ಲಿ ಅರಳಿ ಹೂವು  ಕನ್ನಡದಲ್ಲಿ ಕಣಗಿಲೆ  ಎಂದು ಕರೆಯಲ್ಪಡುವ ಓಲಿಯಾಂಡರ್ ಪ್ಲವರ್ ನ್ನು ತಿಂದಿದ್ದು, ಇದರಿಂದಾಗಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ವೃತ್ತಿಯಲ್ಲಿ ನರ್ಸ ಆಗಿರುವ ಸೂರ್ಯ ಸುರೇಂದ್ರನ ಲಂಡನ್ ಗೆ ತೆರಳಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಸಂದರ್ಭ ಹಠಾತ್ ಕುಸಿದು ಬಿದ್ದಿದ್ದಾಳೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆತಂದರೂ ಆಕೆಯ ಜೀವ ಉಳಿಸಲಾಗಲಿಲ್ಲ. ಪ್ರಾಥಮಿಕ ಹಂತದಲ್ಲಿ ಆಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಆಕೆಗೆ ಚಿಕಿತ್ಸೆ ನೀಡುವ ಸಂದರ್ಭ ಆಸ್ಪತ್ರೆಯ ವೈದ್ಯರಿಗೆ ತಾನು ಪೋನ್ ನಲ್ಲಿ ಮಾತನಾಡುವ ವೇಳೆ ಅರಿವಿಲ್ಲದೆ ಅರಳಿ ಹೂ ಅನ್ನು ತಿಂದಿದ್ದೆನೆ ಎಂದಿದ್ದಾಳೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಹೋಗುವ ವೇಳೆ ನನಗೆ ನಿರಂತರ ವಾಂತಿಯಾಗಿದೆ ಎಂದು ಮಾಹಿತಿ ನೀಡಿದ್ದಾಳೆ ಎಂದು ವರದಿಯಾಗಿದೆ. ಅಲಪ್ಪುಳ ವೈದ್ಯಕೀಯ…

Read More

ಮಂಜೇಶ್ವರ: ಪಿಕಪ್ ವ್ಯಾನ್ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಉದ್ಯಾವರ ಹತ್ತನೇ ಮೈಲಿನಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಉದ್ಯಾವರ ದ ಹಮೀದ್ ( 54) ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದ ವೇಳೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ವಿದ್ಯಾರ್ಥಿಗಳು ಬಹು ದಿನಗಳಿಂದ ಕಾಯುತ್ತಿದ್ದ ಫಲಿತಾಂಶ ಪ್ರಕಟವಾಗಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಫಲಿತಾಂಶವನ್ನು ಪ್ರಕಟಿಸಿದೆ.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀಯವರು ಈ ಬಾರಿಯ ಎಸ್​ಎಸ್​ಎಲ್​ಸಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಇವರ ಜೊತೆಗೆ ನಿರ್ದೇಶಕ ಗೋಪಾಲಕೃಷ್ಣ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಿತೇಶ್ ಕುಮಾರ್ ಸಿಂಗ್ ಜೊತೆಯಾಗಿ ಪತ್ರಿಕಾಗೋಷ್ಠಿ ನಡೆಸಿ ರಿಸಲ್ಟ್​ ಅನೌನ್ಸ್​ ಮಾಡಿದ್ದಾರೆ.ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-1ನ್ನು ದಿನಾಂಕ 25.03.2024 ರಿಂದ 06.04.2024 ರವರೆಗೆ ಬರೆದಿದ್ದಾರೆ. 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ. ಹೊರಬಿದ್ದ ಫಲಿತಾಂಶದಂತೆ ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. ಫಲಿತಾಂಶವನ್ನು ನೋಡೋದು ಹೇಗೆ? sslc.karnataka.gov.in kseab.karnataka.gov.in ಮೇಲಿನ ವೆಬ್​ಸೈಟ್​ನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪರಿಶೀಲಿಸಬಹುದಾಗಿದೆ. ಇವು…

Read More

ಪುತ್ತೂರು ಸಮೀಪ ಕರೆಯೋಲೆ ಇಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಫೋಟೋ ಕ್ಲಿಕ್ಕಿಸಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದು, ಅಲ್ಲಿದ್ದವರಿಂದ ಧರ್ಮದೇಟು ತಿಂದ ಘಟನೆ ತಡವಾಗಿ ತಿಳಿದು ಬಂದಿದೆ. ಘಟನೆಯ ಬಗ್ಗೆ ಸಂತ್ರಸ್ತ ಮಹಿಳೆಯೊಬ್ಬರ ಫೇಸ್‌ಬುಕ್‌ ಪೋಸ್ಟ್‌ ವೈರಲ್‌ ಆಗಿದೆ ಎಂದು ತಿಳಿಯಲಾಗಿದೆ. ಪುತ್ತೂರು ಕಾವು ದೇವಸ್ಥಾನವೊಂದರ ಸಭಾಭವನದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಸಂಬಂಧವೇ ಇಲ್ಲದ ಅಪರಿಚಿತ ವ್ಯಕ್ತಿ ಗಳಿಬ್ಬರು ಬಂದು ಹುಡುಗಿಯರ ಫೋಟೋ ತೆಗೆಯುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರ ಮೊಬೈಲ್‌ ಕಸಿದುಕೊಂಡಿದ್ದಾರೆ. ಪರಿಶೀಲಿಸಿದಾಗ ಗ್ಯಾಲರಿಯಲ್ಲಿ ನೂರಾರು ಹುಡುಗಿಯರ ಪೋಟೋ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ನೆರೆದಿದ್ದವರು ವಿಚಾರಿಸಿದಾಗ ಸಂಪ್ರ ದಾಯಸ್ಥರೊಬ್ಬರ ಪುತ್ರ ಹೇಳಿದ್ದಕ್ಕಾಗಿ ಫೋಟೋ ಕ್ಲಿಕ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಏಟು ತಿಂದವರು ತಪ್ಪೊಪ್ಪಿಕೊಂಡು ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.

Read More

ಸುಳ್ಯ: ಕಾಲೇಜು ವಿದ್ಯಾರ್ಥಿಯೋರ್ವಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದ ಸಂಪಾಜೆ ಗ್ರಾಮದ ದೊಡ್ಡಡ್ಕ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಸುಳ್ಯ ಜ್ಯೂನಿಯರ್ ಕಾಲೇಜು ವಿದ್ಯಾರ್ಥಿನಿ, ಸಂಪಾಜೆ ಗ್ರಾಮದ ದೊಡ್ಡಡ್ಕ ಗೋಪಾಲ ಹಾಗೂ ಬಾಬಿ ದಂಪತಿಯ ಪುತ್ರಿ ರಶ್ಮಿತಾ ಅವರು ಮನೆಯಲ್ಲಿ ಮನೆಯವರು ಇಲ್ಲದ ಸಂದರ್ಭದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಶ್ಮಿತಾ ಅವರಿಗೆ 16 ವರ್ಷ ವಯಸ್ಸಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

Read More