ಬೆಳ್ತಂಗಡಿ: ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕ, ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಸರಕಾರದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ, ಕೆ. ವಸಂತ ಬಂಗೇರ (79ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಮೇ 8 ರಂದು ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕುವೆಟ್ಟು ಗ್ರಾಮದವರು. ಕೇದೆ ಸುಬ್ಬ ಪೂಜಾರಿ ಮತ್ತು ದೇವಕಿ ದಂಪತಿಯ ಪುತ್ರರಾಗಿರುವ ಬಂಗೇರರು 15 ಜನವರಿ 1946ರಂದು ಜನಿಸಿದ್ದರು. ವಸಂತ ಬಂಗೇರ ಅವರು ಬೆಳ್ತಂಗಡಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಎಸ್. ಎಸ್. ಎಲ್. ಸಿ. ಯನ್ನು ಮಾಡಿದರು. ಮುಲ್ಕಿ ಮತ್ತು ಉಜಿರೆಯ ಎಸ್. ಡಿ.ಎಂ. ಕಾಲೇಜುಗಳಲ್ಲಿ ವ್ಯಾಸಂಗವನ್ನು ಮಾಡಿ 1962 ರಲ್ಲಿ ಪಿ.ಯು.ಸಿ ವ್ಯಾಸಂಗ ಮಾಡಿದರು. 1972 ರಲ್ಲಿ ಕುವೆಟ್ಟು ಗ್ರಾಮ ಪಂಚಾಯತ್‌ನ ಚುನಾವಣೆಯಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿ ನಂತರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.1983 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾಯಿತರಾಗಿ ಪ್ರಥಮ ಬಾರಿಗೆ ವಿಧಾನ ಸಭೆಯನ್ನು ಪ್ರವೇಶಿಸಿದ್ದರು. 1985ರಲ್ಲಿ ಮತ್ತೆ ಭಾಜಪ ಬೆಂಬಲದಿಂದ ಸ್ಪರ್ಧಿಸಿ…
Author: main-admin
ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕರ ನಡುವೆ ಗಲಾಟೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ನಿಲ್ದಾಣದ ಹೊರಗೆ ನಡೆದ ಗಲಾಟೆಯಲ್ಲಿ ಮಹಿಳೆಯರು ಎಂಬುದನ್ನೂ ನೋಡದೆ ಅಸಭ್ಯವಾಗಿ ವರ್ತಿಸಿ ರಿಕ್ಷಾ ಚಾಲಕರು ಹೊಡೆದಾಟಕ್ಕಿಳಿದಿರುವುದು ಕಂಡು ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಚೆನ್ನೈನಿಂದ ದಂಪತಿಗಳು ಬಂದಿದ್ದು ಅವರನ್ನು ಕರೆದುಕೊಂಡು ಇಬ್ಬರು ಬೈಕ್ ನಲ್ಲಿ ಬಂದಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಗದಿತ ಸ್ಥಳದಲ್ಲಿ ಮಾಡಬೇಕಾಗಿರುವ ಹಿನ್ನಲೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಚಂದನ್ ಎನ್ನುವ ವ್ಯಕ್ತಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಅಲ್ಲೆ ಇದ್ದ ರಿಕ್ಷಾ ಚಾಲಕರು ಚಂದನ್ ಗೆ ಬೆಂಬಲವಾಗಿಲ ಬಂದು ಗಲಾಟೆ ಮಾಡಿದ್ದಾರೆ. ವಾಗ್ವಾದ ತಾರಕಕ್ಕೇರಿದ್ದು, ತಳ್ಳಾಟ ನೂಕಾಟ ನಡೆದಿದೆ. ಆಟೋ ಚಾಲಕರ ಗುರುತನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರ ಗುರುತನ್ನೂ ಪರಿಶೀಲಿಸಲಾಗುತ್ತಿದೆ.ಈ ವಿಷಯದಲ್ಲಿ ಲಭ್ಯವಿರುವ ಎಲ್ಲಾ…
ಮಂಗಳೂರು: ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ಮೇ 7 ರಂದು ನಡೆದಿದೆ. ಎಲಿಜಬೆತ್ ದೀಪಿಕಾ ಪೊನ್ನುರಾಜ್ ನಾಪತ್ತೆಯಾದ ಯುವತಿ. ಈಕೆಗೆ 21 ವರ್ಷ ವಯಸ್ಸಾಗಿದ್ದು, 5 ಅಡಿ 7 ಇಂಚು ಎತ್ತರವಿದ್ದಾರೆ. ಈಕೆ ಕಾಣೆಯಾಗುವಾಗ ಕಪ್ಪು ಪ್ಯಾಂಟ್, ನೀಲಿ ಮತ್ತು ಬಿಳಿ ಪಟ್ಟಿಗಳಿರುವ ಸಮವಸ್ತ್ರ ಧರಿಸಿದ್ದರು. ಜೊತೆಗೆ ನಾಪತ್ತೆಯಾದವರಿಗೆ ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಬರುತ್ತದೆ. ಇನ್ನು ಈಕೆ ಎಲ್ಲಿಯಾದರೂ ಕಂಡುಬಂದಲ್ಲಿ ತಕ್ಷಣ 9074649267 ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ
ಮಂಗಳೂರು: ಮೆಡಿಕಲ್ ಕಾಲೇಜಿನ ಲೇಡಿಸ್ ಟಾಯ್ಲೆಟ್ ಒಂದರಲ್ಲಿ ಮೊಬೈಲ್ ಇಟ್ಟು ರಹಸ್ಯವಾಗಿ ಚಿತ್ರೀಕರಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಗರ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಮಂಗಳೂರಿನ ಬಾವುಟಗುಡ್ಡೆಯಲ್ಲಿ ನಡೆದಿದೆ. ಮೇ 06ರಂದು ಮೆಡಿಕಲ್ ಕಾಲೇಜಿಗೆ ರೋಗಿಯಂತೆ ಬಂದಿದ್ದ ಅಪ್ರಾಪ್ತ ಯುವಕ ಲೇಡಿಸ್ ಟಾಯ್ಲೆಟ್ ಗೆ ಹೋಗಿ ಮೊಬೈಲ್ ಇಟ್ಟಿದ್ದ. ತದನಂತರ ಲೇಡಿಸ್ ಟಾಯ್ಲೆಟ್ ಒಳಗಿನಿಂದ ಮೊಬೈಲ್ ರಿಂಗ್ ಆದ ಸದ್ದು ಕೇಳಿಸಿದ್ದು ಪರಿಶೀಲನೆ ಮಾಡಿದಾಗ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಸಿಕ್ಕ ಬಳಿಕ ಕಾಲೇಜು ಸಿಬ್ಬಂದಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಾಲೇಜಿನ ಸಿಸಿಟಿವಿ ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮಂಗಳೂರು: ನಗರದ ಬಾವುಟಗುಡ್ಡ ಮುಲ್ಕಿ ಸುಂದರರಾಮ್ ಶೆಟ್ಟಿ ರಸ್ತೆಯ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಲೇಡೀಸ್ ಟಾಯ್ಲೆಟ್ ನಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಣ ಮಾಡಲಾಗಿದೆ ಎಂದು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಸೆಕ್ಯುರಿಟಿ ಫೀಲ್ಡ್ ಮ್ಯಾನೇಜರ್ ರಾಜು ಅವರಿಗೆ ಮೇ 06ರಂದು ಸಂಜೆ ಸುಮಾರು 3:30ರ ಸುಮಾರಿಗೆ ಒಂದನೇ ಮಹಡಿಯ ಮಹಿಳೆಯರ ಶೌಚಾಲಯದಲ್ಲಿ, ಮೊಬೈಲ್ ಫೋನ್ ರಿಂಗ್ ಆಗುತ್ತಿರುವ ಶಬ್ದ ಕೇಳುತ್ತಿದೆ ಆದರೆ ಯಾರೂ ಇಲ್ಲ ಎಂದು ಮಾಹಿತಿ ಲಭ್ಯವಾಗುತ್ತದೆ. ತಕ್ಷಣ ಅಲ್ಲಿಗೆ ಹೋಗಿ ಅವರು ಪರಿಶೀಲನೆ ನಡೆಸಿದಾಗ ಶೌಚಾಲಯದ ಒಳಗಡೆ ಮೇಲ್ಬಾಗದ ಕ್ಯಾಸ್ಟ್ ಪ್ಯಾನ್ ಬಳಿ ಮೊಬೈಲ್ ಫೋನ್ ಒಂದು ಪತ್ತೆಯಾಗಿದೆ. ಯಾರೋ ಮೊಬೈಲ್ ಫೋನ್ ಇಟ್ಟು ಮಹಿಳೆಯರು ಶೌಚ ಮಾಡುವ ದೃಶ್ಯವನ್ನು ಸರೆಹಿಡಿಯಲು ಇರಿಸಿದಂತೆ ಕಂಡು ಬರುತ್ತಿತ್ತು. ಈ ಬಗ್ಗೆ ಅವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಮೊಬೈಲ್ ಇರಿಸಿದ್ದು ಯಾರು ಎಂದು ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು: ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ನಿವೃತ್ತ ಉಪನ್ಯಾಸಕ ಹಿರಿಯ ಜಾನಪದ ವಿದ್ವಾಂಸ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಅವರು ನಿಧನರಾಗಿದ್ದಾರೆ ಸುಳ್ಯ ತಾಲೂಕಿನ ಪೆರುವಾಜೆಯಲ್ಲಿರುವ ತನ್ನ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಮಂಗಳವಾರ ಸಂಜೆ ವೇಳೆಗೆ ಏರುಪೇರು ಕಂಡು ಬಂದಿತ್ತು. ರಾತ್ರಿ ಅವರನ್ನು ನಗರದ ಆಸ್ಪತ್ರೆಗೆ ಕರೆ ತರುತ್ತಿದ್ದ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ. ಅವರಿಗೆ ಪತ್ನಿ ಸುಮಾ ಆರ್. ಆಚಾರ್, ಪುತ್ರಿಯರಾದ ಕಿರಣ ಪಿ.ಆರ್, ಸುಪ್ರಿಯ ಪಿ.ಆರ್, ಮಗ ಹರ್ಷವರ್ಧನ ಪಿ.ಆರ್ ಹಾಗೂ ಅಳಿಯ ಕೃಷ್ಣ ಎಂ.ವಿ, ಜಯಪಾಲ್ ಎಚ್.ಆರ್. ಸೊಸೆ ಸುಧಾ ಟಿ.ಜೆ ಹಾಗೂ ಮೊಮ್ಮಕ್ಕಳು ಸುಹೃತ್, ಸಹಜ, ನಿಸ್ವನ, ಅವಲೋಕಿತ, ನಲ್ಮೆ, ಆತ್ಮೀಯ ಇದ್ದಾರೆ.ಅವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಅವರ ಮನೆಯಾದ ಪುತ್ತೂರು ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಸ್ವಗೃಹದಲ್ಲಿ ನಡೆಯಲಿದೆ
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿರುವ ಲಾಡ್ಜ್ ಒಂದರಲ್ಲಿ ತಂಗಿದ್ದ ಅವಿವಾಹಿತ ಯುವಕನೋರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ (30) ನೇಣಿಗೆ ಶರಣಾದ ವ್ಯಕ್ತಿ. ಮೇ 5ರಂದು ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣ ಬಳಿಯ ಹೋಟೆಲ್ ನಲ್ಲಿ ಪ್ರಜ್ವಲ್ ರೂಂ ಬುಕ್ ಮಾಡಿಕೊಂಡಿದ್ದಾನೆ. ಮೇ 6ರಂದು ರಾತ್ರಿಯೂ ಅವರು ಅಲ್ಲಿ ಉಳಿದುಕೊಂಡಿದ್ದರು. ಆದರೆ ಮಂಗಳೂರು ಬೆಳಗ್ಗೆ ರೂಮ್ ಬಾಗಿಲು ತೆರೆದಿರಲಿಲ್ಲ. ಯಾವುದೇ ಸ್ಪಂದನೆ ಇಲ್ಲದ ಕಾರಣ ಪೊಲೀಸರನ್ನು ಕರೆದು ಬಾಗಿಲು ತೆರೆದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹದ ಪತ್ತೆಯಾಗಿದೆ. ಆನ್ಸೆನ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಪ್ರಜ್ವಲ್ ಹಣ ಸಾಲದ ವಿಚಾರದಲ್ಲಿ ಚಿಂತೆಗೀಡಾಗಿದ್ದಾರೆ. ಅಲ್ಲದೆ ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಚಿಂತೆಯಲ್ಲಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಆನಂತಪದ್ಮನಾಭ ಭೇಟಿ ನೀಡಿದ್ದಾರೆ.
ಕಾಸರಗೋಡು: ಅಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಕಾರಿನಲ್ಲಿದ್ದ ತೃಶ್ಯೂರು ಗುರುವಾಯೂರು ನಿವಾಸಿಗಳಾದ ಶ್ರೀನಾಥ್, ಶರತ್ ಮೆನೋನ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯೂ ಗಾಯಗೊಂಡಿದ್ದಾರೆ. ಕಾಸರಗೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಅಂಬ್ಯುಲೆನ್ಸ್ ಮತ್ತು ಕಾರಿನ ನಡುವೆ ಅಪಘಾತ ನಡೆದಿದೆ. ಇಬ್ಬರು ಸ್ಥಳದಲ್ಲೇ, ಇನ್ನೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಹಲವು ವಾಹನಗಳು ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿತು. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪಘಾತ ಸಂಭವಿಸಿದ ರಿಕ್ಷಾಕ್ಷೆ ತಾಗಿ ಜಖಂಗೊಂಡಿತು. ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಢಿಕ್ಕಿ ಹೊಡೆದಿವೆ. ಹೀಗೆ ಒಟ್ಟು 2 ರಿಕ್ಷಾಗಳು ಹಾಗೂ 3 ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲ ಕಾರುಗಳು ಜಖಂಗೊಂಡಿವೆ.
ಬೆಂಗಳೂರು : ಅಶ್ಲೀಲ ವಿಡಿಯೋ, ಫೋಟೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಳ್ಳುವುದು ಸಹ ಅಪರಾಧ. ಕಂಪ್ಯೂಟರ್, ಲ್ಯಾಪ್‍ಟಾಪ್, ಮೊಬೈಲ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದು ಪತ್ತೆಯಾದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್‍ಐಟಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸೋಮವಾರ ಪತ್ರಿಕಾ ಪ್ರಕಟನೆ ನೀಡಿರುವ ಎಸ್‍ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ಅಶ್ಲೀಲ ವಿಡಿಯೋ, ಫೋಟೊ ಹಾಗೂ ಧ್ವನಿವರ್ಧಕ ಹಂಚಿಕೊಳ್ಳುವುದಷ್ಟೇ ಅಲ್ಲದೇ ಇಟ್ಟುಕೊಳ್ಳುವುದು ಸಹ ಅಪರಾಧ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮ ಜರುಗಿಸಲು ಅವಕಾಶವಿದೆ ಎಂದಿದ್ದಾರೆ. ಅಶ್ಲೀಲ ವಿಡಿಯೋ ಹಾಗೂ ಫೋಟೊಗಳನ್ನು ಇಟ್ಟುಕೊಳ್ಳುವವರನ್ನು ಪತ್ತೆ ಮಾಡುವುದು ಸುಲಭ. ಯಾರಾದರೂ ಅಂತಹ ವಿಡಿಯೋ ಹಾಗೂ ಫೋಟೊಗಳನ್ನು ಇಟ್ಟುಕೊಂಡಿದ್ದರೆ ಅಳಿಸಿ(ಡಿಲೀಟ್) ಹಾಕುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.