Facebook Twitter Instagram
    Sunday, March 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು : ಆಟೋ ವರ್ಕ್‌ಶಾಪ್ ನಿಂದ 93,540 ರೂ. ನಗದು ಕಳವು
    ಇತ್ತೀಚಿನ ಸುದ್ದಿ

    ಮಂಗಳೂರು : ಆಟೋ ವರ್ಕ್‌ಶಾಪ್ ನಿಂದ 93,540 ರೂ. ನಗದು ಕಳವು

    November 22, 2024
    Share

    ಮಂಗಳೂರು : ನಗರದ ಮರೋಳಿಯ ಕೆಂಬಾರ್‌ನ ಹೆದ್ದಾರಿ ಬದಿಯಲ್ಲಿ ಕಾಂಚನ ಟಿ.ವಿ.ಎಸ್. ಆಟೋ ರಿಕ್ಷಾ ವರ್ಕ್ ಶಾಪ್‌ನ ಲಾಕರ್ ನಲ್ಲಿದ್ದ 93,540 ರೂ. ಹಣವನ್ನು ಕಳ್ಳರು ಕಳವು ಮಾಡಿದ್ದಾರೆ. ಸಂಸ್ಥೆಯ ವರ್ಕ್ಸ್ ಮ್ಯಾನೇಜರ್ ನ. 19ರಂದು ವರ್ಕ್‌ ಶಾಪ್‌ನಲ್ಲಿ ಆ ದಿನ ಸಂಗ್ರಹವಾದ 93,540 ರೂ. ಹಣವನ್ನು ಆಟೋ ರಿಕ್ಷಾದ ಬಿಡಿಭಾಗಗಳನ್ನು ಇಡುವ ಕೋಣೆಯ ಟೇಬಲ್‌ನಲ್ಲಿರುವ ಮಿನಿ ಲಾಕರ್‌ನಲ್ಲಿ ಇಟ್ಟು ಡ್ರಾವರ್ ಲಾಕ್ ಮಾಡಿದ್ದಾರೆ. ನ. 20ರಂದು ಬೆಳಗ್ಗೆ 6.50ರ ವೇಳೆ ಸೆಕ್ಯೂರಿಟಿ ಗಾರ್ಡ್ ಮ್ಯಾನೇಜರ್ ಗೆ ಕರೆ ಮಾಡಿ ವರ್ಕ್ ಶಾಪ್‌ನಲ್ಲಿ ಕಳವಾಗಿರುವ ಬಗ್ಗೆ ತಿಳಿಸಿದ್ದಾರೆ. ಮ್ಯಾನೇಜರ್ ಕೂಡಲೇ ವರ್ಕ್ ಶಾಪ್‌ಗೆ ಬಂದು ನೋಡಿದಾಗ ಹಿಂಬಾಗಿಲನ್ನು ಯಾವುದೋ ಆಯುಧವನ್ನು ಬಳಸಿ ಜಖಂಗೊಳಿಸಿ ಕಳ್ಳರು ಒಳ ಪ್ರವೇಶಿಸಿರುವುದು ಕಂಡುಬಂದಿದೆ. ಅಲ್ಲಿಂದ ನೇರವಾಗಿ ಬಿಡಿ ಭಾಗಗಳ ಕೋಣೆಯ ಬಾಗಿಲನ್ನು ತೆರೆದು ಡಾವರ್‌ನ ಲಾಕರನ್ನು ಯಾವುದೋ ಆಯುಧವನ್ನು ಉಪಯೋಗಿಸಿ ಬಲವಂತದಿಂದ ತೆರೆದು ಅದರಲ್ಲಿದ್ದ ನಗದು 93,540 ರೂ. ಹಾಗೂ ಲಾಕರ್ ಅನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 171

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.