ಬಂಟ್ವಾಳ : ಬಸ್ ತಿರುಗಿಸುವ ವಿಚಾರದಲ್ಲಿ ಖಾಸಗಿ ಬಸ್‌ನ್ನು ತಡೆದ ತಂಡವೊಂದು ಡ್ರೈವರ್ ಹಾಗೂ ಕಂಡಕ್ಟರ್‌ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿರುವ ಘಟನೆ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ನಡೆದಿತ್ತು.

ಎ.21 ರಂದು ರಾತ್ರಿ 7.40 ರ ಸುಮಾರಿಗೆ ಬಸ್ ಪೊಳಲಿ-ಕೊಳತ್ತಮಜಲು ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಸ್ ತಿರುಗಿಸುವ ವಿಚಾರದಲ್ಲಿ ಆರೋಪಿಗಳಾದ ಉಮೇಶ ಶೆಟ್ಟಿ, ವಿಜಯ, ಕಿಶೋರ, ಪ್ರಶಾಂತ್ ಹಾಗೂ ಇತರರು ತಕರಾರು ತೆಗೆದಿದ್ದಾರೆ.
ಗಲಾಟೆ ಮಾಡಿ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಬಳಿಕ ಬಸ್ ಕಂಡಕ್ಟರ್ ಅಭಿಜಿತ್ ಶೆಟ್ಟಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.