Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಂಟ್ವಾಳ: ಮಹಿಳೆಯೋರ್ವರ ಬ್ಯಾಗ್ ನಿಂದ ನಗದು ಕಳವು; ಪ್ರಕರಣ ದಾಖಲು
    ಇತ್ತೀಚಿನ ಸುದ್ದಿ

    ಬಂಟ್ವಾಳ: ಮಹಿಳೆಯೋರ್ವರ ಬ್ಯಾಗ್ ನಿಂದ ನಗದು ಕಳವು; ಪ್ರಕರಣ ದಾಖಲು

    January 11, 2024
    Share

    ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಪಿಕ್ ಪಾಕೆಟ್ ನಡೆಯುತ್ತಿದ್ದು, ಮಹಿಳೆಯೋರ್ವರ ಬ್ಯಾಗ್ ನಿಂದ 4 ಸಾವಿರ ರೂ. ನಗದು ಕಳವು ಮಾಡಿದ ಘಟನೆ ಡಿ.೧೦ ರಂದು ನಡೆದಿದೆ.

    ಪ್ರೇಮ ಅವರು ಬೊಳಿಯಾರಿನಿಂದ ಧರ್ಮಸ್ಥಳ ಕಡೆಗೆ ಹೊರಟಿದ್ದರು. ಬೋಳಿಯಾರಿನಿಂದ ಬಿಸಿರೋಡಿಗೆ ಬಂದಿಳಿದು ಬಳಿಕ ಕೈಯಲ್ಲಿ ಮಗುವನ್ನು ಹಿಡಿದುಕೊಂಡುಧರ್ಮಸ್ಥಳ ಬಸ್ ಗೆ ಹತ್ತುವ ವೇಳೆ ಬ್ಯಾಗ್ ನಿಂದ ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಿ.ಸಿ.ಕ್ಯಾಮರಾ ಇಲ್ಲ:ಕಳೆದ ವಾರ ಈ ಬಗ್ಗೆ ವಿಸ್ತ್ರತವಾದ ವರದಿ ಮಾಡಲಾಗಿದೆಯಾದರೂ ಪೋಲಿಸ್ ಇಲಾಖೆ ಮಾತ್ರ ಯಾವುದೇ ಸ್ಪಂದನೆ ನೀಡಿಲ್ಲ, ಕಳ್ಳತನ, ಪಿಕ್ ಪಾಕೆಟ್ ನಿತ್ಯ ನಡೆಯುತ್ತಿದೆ.ಕಳ್ಳತನದ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸದೆ ದೂಳು ಹಿಡಿಯುವಾಗೆ ಮಾಡಿದ್ದು ಕಳ್ಳರಿಗೆ ಮತ್ತೆ ಮತ್ತೆ ಕಳವು ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಿದೆ.ಕಳ್ಳತನದ ಬಗ್ಗೆ ಮಾಹಿತಿ ಪಡೆಯಲು ಬಸ್ ನಿಲ್ದಾಣದಲ್ಲಿ ಪೋಲೀಸ್ ಇಲಾಖೆಯ ಸಿ.ಸಿ.ಕ್ಯಾಮರಾ ಇಲ್ಲವಂತೆ, ಈ ಬಗ್ಗೆ ಪೋಲೀಸರೇ ದೂರು ದಾರರಿಗೆ ಮಾಹಿತಿ ನೀಡಿದ್ದಾರೆ.ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿ ಪೋಲೀಸರು ತಮ್ಮ ಕೈ ತೊಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.ಕಳೆದ ವಾರ ಹತ್ತಾರು ಮೊಬೈಲ್ ಪೋನ್ ಹಾಗೂ ಪಿಕ್ ಪಾಕೆಟ್ ಗಳು ನಡೆದಿವೆಯಾದರೂ ಪೊಲೀಸ್ಇಲಾಖೆ ಮಾತ್ರ ಮೌನವಾಗಿದೆ.ಪೋಲಿಸ್ ಇಲಾಖೆಯಿಂದ ಮಾರುದ್ದ ದೂರವಿರುವ ಬಸ್ ನಿಲ್ದಾಣದಲ್ಲಿ ಟ್ರಾಫಿಕ್ ಪೊಲೀಸರು ಕಾರ್ಯ ನಿರ್ವಹಿಸುತ್ತಿರುವ ವೇಳೆ ಹಗಲು ಹೊತ್ತಿನಲ್ಲಿ ಪಿಕ್ ಪಾಕೆಟ್ ಗಳು ನಡೆಯುತ್ತಿರುವುದು ವಿಷಾಧನೀಯ ಎಂದು ಹೇಳಲಾಗುತ್ತಿದೆ.

    ಕೂಡಲೇ ಪೋಲೀಸ್ ಇಲಾಖೆ ಅಯಕಟ್ಟಿನ ಮತ್ತು ಜನಸಂದಣಿಯ ಕಡೆಗಳಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ ಕಳ್ಳತನ ಮಾಡುವ ಆರೋಪಿಗಳಿಗೆ ಕಾನೂನಡಿಯಲ್ಲಿ ಶಿಕ್ಷೆ ನೀಡಿದರೆ ಮುಂದಿನ ದಿನಗಳಲ್ಲಿ ಕಳವು ಪ್ರಕರಣಗಳು ಕಡಿಮೆಯಾಗಬಹುದು ಎಂದು ಸಾರ್ವಜನಿಕ ರು ಹೇಳುತ್ತಿದ್ದಾರೆ.

    Post Views: 180

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.