ಮಂಗಳೂರು:ಲಾಭಾಂಶದಲ್ಲಿ ಅಧಿಕ ಪಾಲು ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 9.78 ಲಕ್ಷ ರೂ. ವಂಚಿಸಿರುವ ಘಟನೆಯ ಬಗ್ಗೆ ದೂರು ದಾಖಲಾಗಿದೆ. ವಾಟ್ಸ್‌ಆ್ಯಪ್ ಗೆ ಬಂದಿದ್ದ ವೆಬ್‌ಸೈಟ್ ಲಿಂಕ್‌ನಲ್ಲಿ ವರ್ಕ್ ಪ್ರಂ ಹೋಮ್ ಎಂಬ ಸಂದೇಶವಿತ್ತು. ಅದನ್ನು ಕ್ಲಿಕ್ ಮಾಡಿದಾಗ 10,000 ರೂ. ಹೂಡಿಕೆ ಮಾಡಿದರೆ 18,000 ರೂ. ದೊರೆಯುತ್ತದೆ ಎಂದು ತಿಳಿಸಲಾಗಿತ್ತು. ಅದನ್ನು ನಂಬಿದ ತಾನು 10,000 ರೂ. ವನ್ನು ಅಪರಿಚಿತರು ತಿಳಿಸಿದ ಖಾತೆಗೆ ಜಮೆ ಮಾಡಿದ್ದೆ. ಮರುದಿನ ವೆಬ್‌ಸೈಟ್ ಮೂಲಕ ತನ್ನನ್ನು ಸಂಪರ್ಕಿಸಿದ ಅಪರಿಚಿತ ವ್ಯಕ್ತಿಗಳು 40,000 ರೂ. ಹೂಡಿಕೆ ಮಾಡುವಂತೆ ತಿಳಿಸಿ ಟಾಸ್ಕ್ ಪೂರ್ತಿಗೊಳಿಸಲು ತಿಳಿಸಿದರು. ಅದರಂತೆ ತಾನು ಟಾಸ್ಕ್ ಪೂರ್ತಿಗೊಳಿಸಿದೆ ಮತ್ತೆ ಅಪರಿಚಿತರು ತಿಳಿಸಿದಂತೆ ತಾನು ಹಂತ ಹಂತವಾಗಿ 9.78 ಲಕ್ಷ ರೂ. ವರ್ಗಾವಣೆ ಮಾಡಿದ್ದರೂ ಬಳಿಕ ತನಗೆ ಹಣ ವಾಪಸ್ ನೀಡದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.