ಬಾಗಲಕೋಟೆ : ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಪಿಯುಸಿ, ಪದವಿ ವಿದ್ಯಾರ್ಥಿಗ’ಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ .
4 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಹೇಳಿದರು. ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಇನ್ನು ಮುಂದೆ ಶುಲ್ಕವಿಲ್ಲದೇ ಪ್ರವೇಶ ಪಡೆಯಬಹುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದ್ದರು.
ಯಾವ ಮಕ್ಕಳು ಆರ್ಥಿಕ ಸ್ಥಿತಿಯಿಂದ ವಿದ್ಯಾಬ್ಯಾಸ ಸ್ಥಗಿತಗೊಳಿಸಬಾರದು ಎಂಬ ಹಿತದೃಷ್ಠಿಯಿಂದ ಈ ವರ್ಷದ ಬಜೆಟ್ನಲ್ಲಿ ಪಿಯುಸಿಯಿಂದ ಪದವಿವರೆಗೆ ಉಚಿತ ಶಿಕ್ಷಣ, ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ಪಾಸ್ ಸೌಲಭ್ಯ ಘೋಷಿಸಲಾಗಿದೆ. ದುಡಿಯುವ ವರ್ಗದಲ್ಲಿ, ಹೆಣ್ಣುಮಕ್ಕಳಲ್ಲಿ, ಯುವಕರಲ್ಲಿ ಶಕ್ತಿ ತುಂಬಿದಲ್ಲಿ ಅವರಲ್ಲಿರುವ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಇದು ಬದಲಾವಣೆ ತರುವಂತಹ ಕೆಲಸವಾಗಿದೆ ಎಂದರು.
ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿವಿಧ ನೀರಾವರಿ ಯೋಜನೆಗಳಿಗೆ 28 ಸಾವಿರ ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಭೂಮಿ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ದರ ನಿಗದಿ ಮಾಡಿ ಐತಿರ್ಪು ಹೊರಡಿಸಲಾಗಿದೆ. 10 ಸಾವಿರ ಸ್ತ್ರಿಶಕ್ತಿ ಸಂಘಗಳಿಗೆ 1 ಲಕ್ಷ ರೂ.ಗಳನ್ನು ನೀಡಿ 5 ಲಕ್ಷ ರೂ.ಗಳ ಯೋಜನೆ ರೂಪಿಸಿ ಉತ್ಪಾದನೆ ಮಾಡಿ ಮಾರುಕಟ್ಟೆ ಕಲ್ಪಿಸುವ ಮೂಲಕ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಅದೇ ರೀತಿ ಯುವಕರಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2 ಯುವಕ ಸಂಘಕ್ಕೆ 5 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಮಹಿಳೆ ಮತ್ತು ಯುವಕರು ರಾಜ್ಯದ ಎರಡು ಕನ್ಮಣಿಗಳಿದ್ದ ಹಾಗೆ ಎಂದರು