ಉಡುಪಿ: ಬಿಟ್ ಕಾಯಿನ್‌ನಲ್ಲಿ ಹೂಡಿದ ಲಕ್ಷಾಂತರ ರೂ. ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ರೇಯ ಆಚಾರ್ಯ ಎಂಬವರಿಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿಕೊಂಡ ತುಷಾರ್ ಕಪೂರ್ ಎಂಬಾತ ಬಿಟ್ ಕಾಯಿನ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭ ಬರುವ ಬಗ್ಗೆ ಆಸೆ ತೋರಿಸಿದ್ದ. ಅದಕ್ಕಾಗಿ ಆತ್ರೇಯ ಆಚಾರ್ಯಗೆ ವೆಬ್‌ಸೈಟ್‌ನಲ್ಲಿ ವ್ಯಾಲೆಟ್ ಓಪನ್ ಮಾಡಿ ಹಣ ಪಾವತಿಸುವಂತೆ ತಿಳಿಸಿದ್ದ. ಇದನ್ನು ನಂಬಿದ ಆತ್ರೇಯ ಆಚಾರ್ಯ, ಮಾರಚ್ 19ರಿಂದ ಎಪ್ರಿಲ್ 9ರ ಮಧ್ಯಾವಧಿಯಲ್ಲಿ ತುಷಾರ್ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಒಟ್ಟು 25,52,300ರೂ. ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ಬಳಿಕ ವ್ಯಾಲೇಟ್‌ನಲ್ಲಿದ್ದ ಬಿಟ್ ಕಾಯಿನ್‌ನ್ನು ತುಷಾರ್ ಎಪ್ರಿಲ್ 9ರಂದು ವರ್ಗಾವಣೆ ಮಾಡಿ, ಬಿಟ್ ಕಾಯಿನ್ ನೀಡದೆ, ಪಡೆದ ಹಣ ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.